Shanti Parva: Chapter 301

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೦೧

ಅಧ್ಯಾತ್ಮ-ಅಧಿಭೂತ-ಅಧಿದೈವಗಳ[1] ವರ್ಣನೆ (1-14); ಸಾತ್ತ್ವಿಕ-ರಾಜಸ-ತಾಮಸ ಗುಣಗಳ ಸ್ವಭಾವಲಕ್ಷಣಗಳ ನಿರೂಪಣೆ (15-27).

12301001 ಯಾಜ್ಞವಲ್ಕ್ಯ ಉವಾಚ|

12301001a ಪಾದಾವಧ್ಯಾತ್ಮಮಿತ್ಯಾಹುರ್ಬ್ರಾಹ್ಮಣಾಸ್ತತ್ತ್ವದರ್ಶಿನಃ|

12301001c ಗಂತವ್ಯಮಧಿಭೂತಂ ಚ ವಿಷ್ಣುಸ್ತತ್ರಾಧಿದೈವತಮ್||

ಯಾಜ್ಞವಲ್ಕ್ಯನು ಹೇಳಿದನು: “ತತ್ತ್ವದರ್ಶಿ ಬ್ರಾಹ್ಮಣರು ಎರಡು ಕಾಲುಗಳನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಹೋಗಬೇಕಾದ ಸ್ಥಾನವು ಅಧಿಭೂತ. ವಿಷ್ಣುವು ಅದರ ಅಧಿದೈವತನು.

12301002a ಪಾಯುರಧ್ಯಾತ್ಮಮಿತ್ಯಾಹುರ್ಯಥಾತತ್ತ್ವಾರ್ಥದರ್ಶಿನಃ|

12301002c ವಿಸರ್ಗಮಧಿಭೂತಂ ಚ ಮಿತ್ರಸ್ತತ್ರಾಧಿದೈವತಮ್||

ತತ್ತ್ವಾರ್ಥದರ್ಶಿಗಳು ಗುದವನ್ನು ಅಧ್ಯಾತ್ಮವೆನ್ನುತ್ತಾರೆ. ಮಲತ್ಯಾಗವು ಅಧಿಭೂತ ಮತ್ತು ಮಿತ್ರವು ಅಧಿದೈವತವು.

12301003a ಉಪಸ್ಥೋಽಧ್ಯಾತ್ಮಮಿತ್ಯಾಹುರ್ಯಥಾಯೋಗನಿದರ್ಶನಮ್|

12301003c ಅಧಿಭೂತಂ ತಥಾನಂದೋ ದೈವತಂ ಚ ಪ್ರಜಾಪತಿಃ||

ಯೋಗನಿದರ್ಶವನ್ನು ತಿಳಿದವರು ಜನನೇಂದ್ರಿಯವು ಅಧ್ಯಾತ್ಮ. ಆನಂದವು ಅಧಿಭೂತ ಮತ್ತು ಪ್ರಜಾಪತಿಯು ಅಧಿದೈವತ ಎಂದು ಹೇಳುತ್ತಾರೆ.

12301004a ಹಸ್ತಾವಧ್ಯಾತ್ಮಮಿತ್ಯಾಹುರ್ಯಥಾಸಾಂಖ್ಯನಿದರ್ಶನಮ್|

12301004c ಕರ್ತವ್ಯಮಧಿಭೂತಂ ತು ಇಂದ್ರಸ್ತತ್ರಾಧಿದೈವತಮ್||

ಸಾಂಖ್ಯನಿದರ್ಶನದಂತೆ ಹಸ್ತಗಳು ಅಧ್ಯಾತ್ಮವು. ಕರ್ತವ್ಯವು ಅಧಿಭೂತ. ಇಂದ್ರನು ಅವುಗಳ ಅಧಿದೈವತ.

12301005a ವಾಗಧ್ಯಾತ್ಮಮಿತಿ ಪ್ರಾಹುರ್ಯಥಾಶ್ರುತಿನಿದರ್ಶನಮ್|

12301005c ವಕ್ತವ್ಯಮಧಿಭೂತಂ ತು ವಹ್ನಿಸ್ತತ್ರಾಧಿದೈವತಮ್||

ಶ್ರುತಿನಿದರ್ಶನವನ್ನು ತಿಳಿದವರು ಮಾತನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಹೇಳಬೇಕಾದುದನ್ನು ಅಧಿಭೂತವು. ಅಗ್ನಿಯು ಅಲ್ಲಿ ಅಧಿದೇವತೆಯು.

12301006a ಚಕ್ಷುರಧ್ಯಾತ್ಮಮಿತ್ಯಾಹುರ್ಯಥಾಶ್ರುತಿನಿದರ್ಶನಮ್|

12301006c ರೂಪಮತ್ರಾಧಿಭೂತಂ ತು ಸೂರ್ಯಸ್ತತ್ರಾಧಿದೈವತಮ್||

ಶ್ರುತಿನಿದರ್ಶನದಂತೆ ಕಣ್ಣುಗಳನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಅಲ್ಲಿ ರೂಪವು ಅಧಿಭೂತ ಮತ್ತು ಸೂರ್ಯನು ಅಧಿದೈವತ.

12301007a ಶ್ರೋತ್ರಮಧ್ಯಾತ್ಮಮಿತ್ಯಾಹುರ್ಯಥಾಶ್ರುತಿನಿದರ್ಶನಮ್|

12301007c ಶಬ್ದಸ್ತತ್ರಾಧಿಭೂತಂ ತು ದಿಶಸ್ತತ್ರಾಧಿದೈವತಮ್||

ಶ್ರುತಿನಿದರ್ಶನದಂತೆ ಕಿವಿಗಳು ಅಧ್ಯಾತ್ಮವೆಂದು ಹೇಳುತ್ತಾರೆ. ಅದರಲ್ಲಿ ಶಬ್ದವು ಅಧಿಭೂತ ಮತ್ತು ದಿಕ್ಕುಗಳು ಅಧಿದೇವತೆ.

12301008a ಜಿಹ್ವಾಮಧ್ಯಾತ್ಮಮಿತ್ಯಾಹುರ್ಯಥಾತತ್ತ್ವನಿದರ್ಶನಮ್|

12301008c ರಸ ಏವಾಧಿಭೂತಂ ತು ಆಪಸ್ತತ್ರಾಧಿದೈವತಮ್||

ತತ್ತ್ವನಿದರ್ಶನದಂತೆ ನಾಲಿಗೆಯನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ರಸವು ಇದರ ಅಧಿಭೂತ ಮತ್ತು ಆಪವು ಅಧಿದೇವತೆ.

12301009a ಘ್ರಾಣಮಧ್ಯಾತ್ಮಮಿತ್ಯಾಹುರ್ಯಥಾಶ್ರುತಿನಿದರ್ಶನಮ್|

12301009c ಗಂಧ ಏವಾಧಿಭೂತಂ ತು ಪೃಥಿವೀ ಚಾಧಿದೈವತಮ್||

ಶ್ರುತಿನಿದರ್ಶನದಂತೆ ಮೂಗನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಗಂಧವು ಇದರ ಅಧಿಭೂತ ಮತ್ತು ಪೃಥ್ವಿಯು ಅಧಿದೇವತೆ.

12301010a ತ್ವಗಧ್ಯಾತ್ಮಮಿತಿ ಪ್ರಾಹುಸ್ತತ್ತ್ವಬುದ್ಧಿವಿಶಾರದಾಃ|

12301010c ಸ್ಪರ್ಶ ಏವಾಧಿಭೂತಂ ತು ಪವನಶ್ಚಾಧಿದೈವತಮ್||

ತತ್ತ್ವಬುದ್ಧಿವಿಶಾರದರು ಚರ್ಮವನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಸ್ಪರ್ಶವು ಇದರ ಅಧಿಭೂತ ಮತ್ತು ವಾಯುವು ಅಧಿದೇವತೆ.

12301011a ಮನೋಽಧ್ಯಾತ್ಮಮಿತಿ ಪ್ರಾಹುರ್ಯಥಾಶ್ರುತಿನಿದರ್ಶನಮ್|

12301011c ಮಂತವ್ಯಮಧಿಭೂತಂ ತು ಚಂದ್ರಮಾಶ್ಚಾಧಿದೈವತಮ್||

ಶ್ರುತಿನಿದರ್ಶನದಂತೆ ಮನಸ್ಸನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಮನನಮಾಡಬೇಕಾದುದು ಅಧಿಭೂತ ಮತ್ತು ಚಂದ್ರನು ಅಧಿದೇವತೆ.

12301012a ಅಹಂಕಾರಿಕಮಧ್ಯಾತ್ಮಮಾಹುಸ್ತತ್ತ್ವನಿದರ್ಶನಮ್|

12301012c ಅಭಿಮಾನೋಽಧಿಭೂತಂ ತು ಭವಸ್ತತ್ರಾಧಿದೈವತಮ್||

ತತ್ತ್ವನಿದರ್ಶನದಂತೆ ಅಹಂಕಾರವನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಅಭಿಮಾನವು ಅಧಿಭೂತ ಮತ್ತು ಭವನು ಅಧಿದೇವತೆ.

12301013a ಬುದ್ಧಿರಧ್ಯಾತ್ಮಮಿತ್ಯಾಹುರ್ಯಥಾವೇದನಿದರ್ಶನಮ್|

12301013c ಬೋದ್ಧವ್ಯಮಧಿಭೂತಂ ತು ಕ್ಷೇತ್ರಜ್ಞೋಽತ್ರಾಧಿದೈವತಮ್||

ವೇದನಿದರ್ಶನದಂತೆ ಬುದ್ಧಿಯನ್ನು ಅಧ್ಯಾತ್ಮವೆನ್ನುತ್ತಾರೆ. ತಿಳಿದುಕೊಳ್ಳಬೇಕಾದುದು ಅಧಿಭೂತ. ಕ್ಷೇತ್ರಜ್ಞನು ಅದರ ಅಧಿದೇವತೆ.

12301014a ಏಷಾ ತೇ ವ್ಯಕ್ತತೋ ರಾಜನ್ವಿಭೂತಿರನುವರ್ಣಿತಾ|

12301014c ಆದೌ ಮಧ್ಯೇ ತಥಾ ಚಾಂತೇ ಯಥಾತತ್ತ್ವೇನ ತತ್ತ್ವವಿತ್||

ತತ್ತ್ವವಿದುವೇ! ರಾಜನ್! ಸೃಷ್ಟಿ, ಮಧ್ಯಕಾಲ ಮತ್ತು ಅಂತ್ಯಕಾಲಗಳಲ್ಲಿ ಯಥಾವತ್ತಾಗಿ ಪ್ರಕಾಶಿಸುವ ವ್ಯಕ್ತಿಗತ ವಿಭೂತಿಗಳನ್ನು ಹೇಳಿದ್ದೇನೆ.

12301015a ಪ್ರಕೃತಿರ್ಗುಣಾನ್ವಿಕುರುತೇ ಸ್ವಚ್ಚಂದೇನಾತ್ಮಕಾಮ್ಯಯಾ|

12301015c ಕ್ರೀಡಾರ್ಥಂ ತು ಮಹಾರಾಜ ಶತಶೋಽಥ ಸಹಸ್ರಶಃ||

ಮಹಾರಾಜ! ಪ್ರಕೃತಿಯು ಸ್ವಚ್ಛಂದದಿಂದ ಆಟವಾಡುವ ಸಲುವಾಗಿ ನೂರಾರು ಸಹಸ್ರಾರು ಗುಣಗಳನ್ನು ಉಂಟುಮಾಡುತ್ತದೆ.

12301016a ಯಥಾ ದೀಪಸಹಸ್ರಾಣಿ ದೀಪಾನ್ಮರ್ತ್ಯಾಃ ಪ್ರಕುರ್ವತೇ|

12301016c ಪ್ರಕೃತಿಸ್ತಥಾ ವಿಕುರುತೇ ಪುರುಷಸ್ಯ ಗುಣಾನ್ಬಹೂನ್||

ಮನುಷ್ಯನು ಹೇಗೆ ಒಂದು ದೀಪದಿಂದ ಸಾವಿರಾರು ದೀಪಗಳನ್ನು ಹಚ್ಚುವನೋ ಹಾಗೆ ಪ್ರಕೃತಿಯು ಪುರುಷನ ಸಲುವಾಗಿ ಒಂದು ಗುಣದಿಂದ ಅನೇಕ ಗುಣಗಳನ್ನು ಸೃಷ್ಟಿಸುತ್ತದೆ.

12301017a ಸತ್ತ್ವಮಾನಂದ ಉದ್ರೇಕಃ ಪ್ರೀತಿಃ ಪ್ರಾಕಾಶ್ಯಮೇವ ಚ|

12301017c ಸುಖಂ ಶುದ್ಧಿತ್ವಮಾರೋಗ್ಯಂ ಸಂತೋಷಃ ಶ್ರದ್ದಧಾನತಾ||

12301018a ಅಕಾರ್ಪಣ್ಯಮಸಂರಂಭಃ ಕ್ಷಮಾ ಧೃತಿರಹಿಂಸತಾ|

12301018c ಸಮತಾ ಸತ್ಯಮಾನೃಣ್ಯಂ ಮಾರ್ದವಂ ಹ್ರೀರಚಾಪಲಮ್||

12301019a ಶೌಚಮಾರ್ಜವಮಾಚಾರಮಲೌಲ್ಯಂ ಹೃದ್ಯಸಂಭ್ರಮಃ|

12301019c ಇಷ್ಟಾನಿಷ್ಟವಿಯೋಗಾನಾಂ ಕೃತಾನಾಮವಿಕತ್ಥನಮ್||

12301020a ದಾನೇನ ಚಾನುಗ್ರಹಣಮಸ್ಪೃಹಾರ್ಥೇ ಪರಾರ್ಥತಾ|

12301020c ಸರ್ವಭೂತದಯಾ ಚೈವ ಸತ್ತ್ವಸ್ಯೈತೇ ಗುಣಾಃ ಸ್ಮೃತಾಃ||

ಸತ್ತ್ವ, ಆನಂದ, ಉದ್ರೇಕ, ಪ್ರೀತಿ, ಪ್ರಕಾಶ, ಸುಖ, ಶುದ್ಧಿ, ಆರೋಗ್ಯ, ಸಂತೋಷ, ಶ್ರದ್ಧೆ, ದೀನತೆಯಿಲ್ಲದಿರುವುದು, ಕ್ರೋಧವಿಲ್ಲದಿರುವುದು, ಕ್ಷಮೆ, ಧೃತಿ, ಅಹಿಂಸತಾ, ಸಮತಾ, ಸತ್ಯ, ಯಾರಿಗೂ ಋಣಿಯಾಗದಿರುವಿಕೆ, ಮೃದುತ್ವ, ಲಜ್ಜೆ, ಅಚಪಲತೆ, ಶೌಚ, ಸರಳತೆ, ಸದಾಚಾರ, ಅಲೋಲುಪತೆ, ಇಷ್ಟ-ಅನಿಷ್ಟ-ವಿಯೋಗಗಳಲ್ಲಿ ಹೃದಯವು ಸಂಭ್ರಮಿಸದೇ ಇರುವುದು, ಮಾಡಿದುದನ್ನು ಕೊಚ್ಚಿಕೊಳ್ಳದೇ ಇರುವುದು, ದಾನದಿಂದ ಸರ್ವವನ್ನೂ ತ್ಯಾಗಮಾಡಿ ಆತ್ಮಾನುಸಂಧಾನಮಾಡುವುದು, ಇತರರ ವಸ್ತುವಿನಲ್ಲಿ ನಿಸ್ಪ್ರುಹತೆಯಿಂದಿರುವುದು, ಪರೋಪಕಾರಮಾಡುವುದು, ಸರ್ವಭೂತದಯೆ ಇವೆಲ್ಲವು ಸತ್ತ್ವಗುಣಗಳೆಂದು ಹೇಳಲ್ಪಟ್ಟಿವೆ.

12301021a ರಜೋಗುಣಾನಾಂ ಸಂಘಾತೋ ರೂಪಮೈಶ್ವರ್ಯವಿಗ್ರಹೇ|

12301021c ಅತ್ಯಾಶಿತ್ವಮಕಾರುಣ್ಯಂ ಸುಖದುಃಖೋಪಸೇವನಮ್||

12301022a ಪರಾಪವಾದೇಷು ರತಿರ್ವಿವಾದಾನಾಂ ಚ ಸೇವನಮ್|

12301022c ಅಹಂಕಾರಸ್ತ್ವಸತ್ಕಾರಶ್ಚಿಂತಾ ವೈರೋಪಸೇವನಮ್||

12301023a ಪರಿತಾಪೋಽಪಹರಣಂ ಹ್ರೀನಾಶೋಽನಾರ್ಜವಂ ತಥಾ|

12301023c ಭೇದಃ ಪರುಷತಾ ಚೈವ ಕಾಮಕ್ರೋಧೌ ಮದಸ್ತಥಾ|

12301023e ದರ್ಪೋ ದ್ವೇಷೋಽತಿವಾದಶ್ಚ ಏತೇ ಪ್ರೋಕ್ತಾ ರಜೋಗುಣಾಃ||

ರೂಪ, ಐಶ್ವರ್ಯ, ಕಲಹ, ತ್ಯಾಗದ ಅಭಾವ, ನಿಷ್ಕರುಣೆ, ಸುಖ-ದುಃಖಗಳ ಉಪಭೋಗ, ಪರನಿಂದೆಯಲ್ಲಿ ಆಸಕ್ತಿ, ವಾದ-ವಿವಾದಗಳಲ್ಲಿ ಅಭಿರುಚಿ, ಅಹಂಕಾರ, ಮಾನನೀಯರನ್ನು ಸತ್ಕರಿಸದಿರುವುದು, ಚಿಂತೆ, ವೈರಭಾವ, ಸಂತಾಪ, ಪರವಿತ್ತವನ್ನು ಅಪಹರಿಸುವುದು, ನಿರ್ಲಜ್ಜೆ, ಕುಟಿಲತೆ, ಬೇದಬುದ್ಧಿ, ಕ್ರೌರ್ಯ, ಕಾಮ, ಕ್ರೋಧ, ಮದ, ದರ್ಪ, ದ್ವೇಷ, ಹೆಚ್ಚುಮಾತು – ಇವೆಲ್ಲವೂ ರಜಸ್ಸಿನ ಗುಣಗಳೆಂದು ಹೇಳಲ್ಪಟ್ಟಿವೆ.

12301024a ತಾಮಸಾನಾಂ ತು ಸಂಘಾತಂ ಪ್ರವಕ್ಷ್ಯಾಮ್ಯುಪಧಾರ್ಯತಾಮ್|

12301024c ಮೋಹೋಽಪ್ರಕಾಶಸ್ತಾಮಿಸ್ರಮಂಧತಾಮಿಸ್ರಸಂಜ್ಞಿತಮ್||

12301025a ಮರಣಂ ಚಾಂಧತಾಮಿಸ್ರಂ ತಾಮಿಸ್ರಂ ಕ್ರೋಧ ಉಚ್ಯತೇ|

12301025c ತಮಸೋ ಲಕ್ಷಣಾನೀಹ ಭಕ್ಷಾಣಾಮಭಿರೋಚನಮ್||

12301026a ಭೋಜನಾನಾಮಪರ್ಯಾಪ್ತಿಸ್ತಥಾ ಪೇಯೇಷ್ವತೃಪ್ತತಾ|

12301026c ಗಂಧವಾಸೋ ವಿಹಾರೇಷು ಶಯನೇಷ್ವಾಸನೇಷು ಚ||

12301027a ದಿವಾಸ್ವಪ್ನೇ ವಿವಾದೇ ಚ ಪ್ರಮಾದೇಷು ಚ ವೈ ರತಿಃ|

12301027c ನೃತ್ಯವಾದಿತ್ರಗೀತಾನಾಮಜ್ಞಾನಾಚ್ಚ್ರದ್ದಧಾನತಾ|

12301027e ದ್ವೇಷೋ ಧರ್ಮವಿಶೇಷಾಣಾಮೇತೇ ವೈ ತಾಮಸಾ ಗುಣಾಃ||

ಮೋಹ, ಅಜ್ಞಾನ, ಕತ್ತಲೆ, ಕಗ್ಗತ್ತಲೆ – ಇವು ತಮೋಗುಣದ ಲಕ್ಷಣಗಳು. ಕ್ರೋಧವನ್ನು ಕತ್ತಲೆಯೆಂದು ಹೇಳುತ್ತಾರೆ. ಕಗ್ಗತ್ತಲೆಯು ಮರಣವೆಂದು ಹೇಳುತ್ತಾರೆ. ಯಾವಾಗಲೂ ತಿನ್ನುತ್ತಿರಬೇಕೆಂಬ ಆಸೆ, ಎಷ್ಟು ಊಟಮಾಡಿದರೂ ತೃಪ್ತಿಯಾಗದೇ ಇರುವುದು, ಎಷ್ಟು ಕುಡಿದರೂ ತೃಪ್ತಿಯಾಗದೇ ಇರುವುದು, ದುರ್ಗಂಧಯುಕ್ತ ಮಲಿನ ಬಟ್ಟೆಗಳನ್ನು ಧರಿಸುವುದು, ಅನುಚಿತ ವಿಹಾರ, ಮಲಗುವುದು, ಮತ್ತು ಯಾವಾಗಲೂ ಸುಮ್ಮನೇ ಕುಳಿತಿರುವುದರಲ್ಲಿ ಹೆಚ್ಚಿನ ಆಸಕ್ತಿ, ಹಗಲು ನಿದ್ದೆ, ವಾದ-ವಿವಾದ ಮತ್ತು ಪ್ರಮಾದಗಳಲ್ಲಿ ಪ್ರೀತಿ, ನೃತ್ಯ-ಗೀತ-ವಿವಿಧ ವಾದ್ಯಸಂಗೀತಗಳಲ್ಲಿ ಅತಿ ಶ್ರದ್ಧೆ, ಧರ್ಮಕಾರ್ಯಗಳ ಕುರಿತು ದ್ವೇಷ -ಇವುಗಳೆಲ್ಲವೂ ತಮಸ್ಸಿನ ಗುಣಗಳು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದೇ ಏಕಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದ ಎನ್ನುವ ಮುನ್ನೂರಾಒಂದನೇ ಅಧ್ಯಾಯವು.

Isolated Big Tree On White Background.Large Trees Database Botanical..  Stock Photo, Picture And Royalty Free Image. Image 108856074.

[1] ಇಲ್ಲಿ ಅಧ್ಯಾತ್ಮ ಎಂದರೆ ಶರೀರಕ್ಕೆ ಸಂಬಂಧಿಸಿದುದು. ಅಧಿಭೂತ ಎಂದರೆ ಮಹಾಭೂತಗಳಿಗೆ ಸಂಬಂಧಿಸಿದುದು ಮತ್ತು ಅಧಿದೈವತ ಎಂದರೆ ಅದಕ್ಕೆ ಅಧಿಕಾರಿ ದೇವತೆಗೆ ಸಂಬಂಧಿಸಿದುದು.

Comments are closed.