Shanti Parva: Chapter 127

ಶಾಂತಿ ಪರ್ವ: ರಾಜಧರ್ಮ ಪರ್ವ

೧೨೭

ಯಮ-ಗೌತಮ ಸಂವಾದ

12127001 ಯುಧಿಷ್ಠಿರ ಉವಾಚ|

12127001a ನಾಮೃತಸ್ಯೇವ ಪರ್ಯಾಪ್ತಿರ್ಮಮಾಸ್ತಿ ಬ್ರುವತಿ ತ್ವಯಿ|

12127001c ತಸ್ಮಾತ್ಕಥಯ ಭೂಯಸ್ತ್ವಂ ಧರ್ಮಮೇವ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಭಾರತ! ಅಮೃತದಂತೆ ನೀನು ಹೇಳುತ್ತಿರುವುದನ್ನು ಕೇಳುವುದರಲ್ಲಿ ನನಗೆ ಇನ್ನೂ ತೃಪ್ತಿಯೇ ಆದಂತಿಲ್ಲ. ಆದುದರಿಂದ ಪಿತಾಮಹ! ಧರ್ಮದ ಕುರಿತು ಇನ್ನೂ ಹೇಳು!”

12127002 ಭೀಷ್ಮ ಉವಾಚ|

12127002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12127002c ಗೌತಮಸ್ಯ ಚ ಸಂವಾದಂ ಯಮಸ್ಯ ಚ ಮಹಾತ್ಮನಃ||

ಭೀಷ್ಮನು ಹೇಳಿದನು: “ಇದರ ಕುರಿತಾಗಿ ಗೌತಮ ಮತ್ತು ಮಹಾತ್ಮ ಯಮನ ಸಂವಾದ ರೂಪದ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.

12127003a ಪಾರಿಯಾತ್ರಗಿರಿಂ ಪ್ರಾಪ್ಯ ಗೌತಮಸ್ಯಾಶ್ರಮೋ ಮಹಾನ್|

12127003c ಉವಾಸ ಗೌತಮೋ ಯತ್ರ ಕಾಲಂ ತದಪಿ ಮೇ ಶೃಣು||

ಪಾರಿಯಾತ್ರಗಿರಿಯಲ್ಲಿ ಗೌತಮನು ಮಹಾನ್ ಆಶ್ರಮವನ್ನು ಪಡೆದು ಅಲ್ಲಿ ಎಷ್ಟು ಕಾಲ ಗೌತಮನು ವಾಸಿಸಿದನು ಎನ್ನುವುದನ್ನು ಕೇಳು!

12127004a ಷಷ್ಟಿಂ ವರ್ಷಸಹಸ್ರಾಣಿ ಸೋಽತಪ್ಯದ್ಗೌತಮಸ್ತಪಃ|

12127004c ತಮುಗ್ರತಪಸಂ ಯುಕ್ತಂ ತಪಸಾ ಭಾವಿತಂ ಮುನಿಮ್||

12127005a ಉಪಯಾತೋ ನರವ್ಯಾಘ್ರ ಲೋಕಪಾಲೋ ಯಮಸ್ತದಾ|

12127005c ತಮಪಶ್ಯತ್ಸುತಪಸಮೃಷಿಂ ವೈ ಗೌತಮಂ ಮುನಿಮ್||

ನರವ್ಯಾಘ್ರ! ಗೌತಮನು ಅಲ್ಲಿ ಅರವತ್ತು ಸಾವಿರ ವರ್ಷಗಳು ತಪಸ್ಸನ್ನು ಆಚರಿಸಿದನು. ಹಾಗೆ ಅವನು ಉಗ್ರ ತಪಸ್ಸಿನಲ್ಲಿ ನಿರತನಾಗಿರಲು ಆ ತಾಪಸಿ ಭಾವಿತ ಮುನಿಯನ್ನು ಲೋಕಪಾಲ ಯಮನು ನೋಡಿದನು. ಅವನು ಮಹಾತಪಸ್ವಿ ಋಷಿ ಮುನಿ ಗೌತಮನಿಗೆ ಕಾಣಿಸಿಕೊಂಡನು.

12127006a ಸ ತಂ ವಿದಿತ್ವಾ ಬ್ರಹ್ಮರ್ಷಿರ್ಯಮಮಾಗತಮೋಜಸಾ|

12127006c ಪ್ರಾಂಜಲಿಃ ಪ್ರಯತೋ ಭೂತ್ವಾ ಉಪಸೃಪ್ತಸ್ತಪೋಧನಃ||

ತನ್ನ ತೇಜಸ್ಸಿನಿಂದಲೇ ಯಮನು ಬಂದಿದ್ದಾನೆ ಎಂದು ತಿಳಿದ ಆ ತಪೋಧನ ಬ್ರಹ್ಮರ್ಷಿಯು ಕೈಮುಗಿದು ತಲೆಬಾಗಿ ಅವನ ಬಳಿಸಾರಿದನು.

12127007a ತಂ ಧರ್ಮರಾಜೋ ದೃಷ್ಟ್ವೈವ ನಮಸ್ಕೃತ್ಯ ನರರ್ಷಭಮ್|

12127007c ನ್ಯಮಂತ್ರಯತ ಧರ್ಮೇಣ ಕ್ರಿಯತಾಂ ಕಿಮಿತಿ ಬ್ರುವನ್||

ನರರ್ಷಭನನ್ನು ಕಂಡಕೂಡಲೇ ಧರ್ಮರಾಜನು ನಮಸ್ಕರಿಸಿ “ನಾನು ಏನು ಮಾಡಲಿ?” ಎಂದು ಪ್ರಶ್ನಿಸಿ, ಧರ್ಮದ ಕುರಿತಾದ ಪ್ರಶ್ನೆಗಳನ್ನು ಕೇಳಲು ಸಮ್ಮತಿಸಿದನು.

12127008 ಗೌತಮ ಉವಾಚ|

12127008a ಮಾತಾಪಿತೃಭ್ಯಾಮಾನೃಣ್ಯಂ ಕಿಂ ಕೃತ್ವಾ ಸಮವಾಪ್ನುಯಾತ್|

12127008c ಕಥಂ ಚ ಲೋಕಾನಶ್ನಾತಿ ಪುರುಷೋ ದುರ್ಲಭಾನ್ ಶುಭಾನ್||

ಗೌತಮನು ಹೇಳಿದನು: “ಏನನ್ನು ಮಾಡುವುದರಿಂದ ಮಾತಾ-ಪಿತೃಗಳ ಋಣವನ್ನು ತೀರಿಸಬಹುದು? ಪುರುಷನು ಹೇಗೆ ದುರ್ಲಭವಾದ ಶುಭ ಲೋಕಗಳನ್ನು ಪಡೆಯಬಹುದು?”

12127009 ಯಮ ಉವಾಚ|

12127009a ತಪಃಶೌಚವತಾ ನಿತ್ಯಂ ಸತ್ಯಧರ್ಮರತೇನ ಚ|

12127009c ಮಾತಾಪಿತ್ರೋರಹರಹಃ ಪೂಜನಂ ಕಾರ್ಯಮಂಜಸಾ||

ಯಮನು ಹೇಳಿದನು: “ನಿತ್ಯವೂ ತಪಸ್ಸು, ಶೌಚ, ಸತ್ಯ-ಧರ್ಮರತನಾಗಿರಬೇಕು. ಇವುಗಳ ಜೊತೆಗೆ ನಿತ್ಯವೂ ಮಾತಾ-ಪಿತೃಗಳ ಶುಶ್ರೂಷೆಯನ್ನು ಮಾಡುತ್ತಿರಬೇಕು.

12127010a ಅಶ್ವಮೇಧೈಶ್ಚ ಯಷ್ಟವ್ಯಂ ಬಹುಭಿಃ ಸ್ವಾಪ್ತದಕ್ಷಿಣೈಃ|

12127010c ತೇನ ಲೋಕಾನುಪಾಶ್ನಾತಿ ಪುರುಷೋಽದ್ಭುತದರ್ಶನಾನ್||

ಪರ್ಯಾಪ್ತ ದಕ್ಷಿಣೆಗಳಿಂದ ಕೂಡಿದ ಅನೇಕ ಅಶ್ವಮೇಧಗಳಿಂದ ದೇವತೆಗಳನ್ನು ಸಂತುಷ್ಟಗೊಳಿಸುವುದರಿಂದ ಪುರುಷನು ಅದ್ಭುತವಾಗಿ ಕಾಣುವ ಲೋಕಗಳನ್ನು ಪಡೆಯುತ್ತಾನೆ.””

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಯಮಗೌತಮಸಂವಾದೇ ಸಪ್ತವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಯಮಗೌತಮಸಂವಾದ ಎನ್ನುವ ನೂರಾಇಪ್ಪತ್ತೇಳನೇ ಅಧ್ಯಾಯವು.

White Oleander Flowers Close Up Isolated On White Background Art Print by  taiche | Society6

Comments are closed.