ಶಾಂತಿ ಪರ್ವ: ರಾಜಧರ್ಮ ಪರ್ವ

೫೩

12053001 ವೈಶಂಪಾಯನ ಉವಾಚ

12053001a ತತಃ ಪ್ರವಿಶ್ಯ ಭವನಂ ಪ್ರಸುಪ್ತೋ ಮಧುಸೂದನಃ|

12053001c ಯಾಮಮಾತ್ರಾವಶೇಷಾಯಾಂ ಯಾಮಿನ್ಯಾಂ ಪ್ರತ್ಯಬುಧ್ಯತ||

ವೈಶಂಪಾಯನನು ಹೇಳಿದನು: “ಅನಂತರ ಮಧುಸೂದನನು ಭವನವನ್ನು ಪ್ರವೇಶಿಸಿ ಮಲಗಿದನು. ರಾತ್ರಿಯು ಕಳೆಯಲು ಇನ್ನೂ ಅರ್ಧ ಯಾಮವಿರುವಾಗಲೇ ಅವನು ಎದ್ದನು.

12053002a ಸ ಧ್ಯಾನಪಥಮಾಶ್ರಿತ್ಯ ಸರ್ವಜ್ಞಾನಾನಿ ಮಾಧವಃ|

12053002c ಅವಲೋಕ್ಯ ತತಃ ಪಶ್ಚಾದ್ದಧ್ಯೌ ಬ್ರಹ್ಮ ಸನಾತನಮ್||

ಮಾಧವನು ಧ್ಯಾನಮಾರ್ಗವನ್ನಾಶ್ರಯಿಸಿ ಸರ್ವಜ್ಞಾನಗಳನ್ನೂ ಕಂಡು ಅನಂತರ ಸನಾತನಬ್ರಹ್ಮನನ್ನು ಧ್ಯಾನಿಸಿದನು.

12053003a ತತಃ ಶ್ರುತಿಪುರಾಣಜ್ಞಾಃ ಶಿಕ್ಷಿತಾ ರಕ್ತಕಂಠಿನಃ|

12053003c ಅಸ್ತುವನ್ವಿಶ್ವಕರ್ಮಾಣಂ ವಾಸುದೇವಂ ಪ್ರಜಾಪತಿಮ್||

ಆಗ ಶ್ರುತಿಪುರಾಣಗಳನ್ನು ತಿಳಿದಿದ್ದ, ವಿದ್ಯಾವಂತ, ಸುಂದರ ಕಂಠವುಳ್ಳವರು ಆ ವಿಶ್ವಕರ್ಮಿ ಪ್ರಜಾಪತಿ ವಾಸುದೇವನನ್ನು ಸ್ತುತಿಸಿದರು.

12053004a ಪಠಂತಿ ಪಾಣಿಸ್ವನಿಕಾಸ್ತಥಾ ಗಾಯಂತಿ ಗಾಯನಾಃ|

12053004c ಶಂಖಾನಕಮೃದಂಗಾಂಶ್ಚ ಪ್ರವಾದ್ಯಂತ ಸಹಸ್ರಶಃ||

ಕೈಗಳಿಂದ ತಾಳಹಾಕುತ್ತಾ ಭಜನೆ ಮಾಡುತ್ತಿದ್ದರು. ಮಧುರ ಕಂಠದಲ್ಲಿ ಗಾಯನ ಹಾಡುತ್ತಿದ್ದರು. ಸಹಸ್ರಾರು ಶಂಖ-ಆನಕ-ಮೃದಂತಗಳನ್ನು ಮೊಳಗಿಸಿದರು.

12053005a ವೀಣಾಪಣವವೇಣೂನಾಂ ಸ್ವನಶ್ಚಾತಿಮನೋರಮಃ|

12053005c ಪ್ರಹಾಸ ಇವ ವಿಸ್ತೀರ್ಣಃ ಶುಶ್ರುವೇ ತಸ್ಯ ವೇಶ್ಮನಃ||

ಅತಿಮನೋರಮ ವೀಣೆ-ಪಣವ-ವೇಣುಗಳ ಧ್ವನಿಗಳು, ಅವನ ಭವನವೇ ಸಂತೋಷದಿಂದ ನಗುತ್ತಿದೆಯೋ ಎನ್ನುವಂತೆ ಬಹು ವಿಸ್ತೀರ್ಣದವರೆಗೆ ಕೇಳಿಬರುತ್ತಿತ್ತು.

12053006a ತಥಾ ಯುಧಿಷ್ಠಿರಸ್ಯಾಪಿ ರಾಜ್ಞೋ ಮಂಗಲಸಂಹಿತಾಃ|

12053006c ಉಚ್ಚೇರುರ್ಮಧುರಾ ವಾಚೋ ಗೀತವಾದಿತ್ರಸಂಹಿತಾಃ||

ಹಾಗೆಯೇ ರಾಜಾ ಯುಧಿಷ್ಠಿರನಲ್ಲಿಯೂ ಮಂಗಲಕರ ಮಧುರ ವಾಚನ-ಗೀತ-ವಾದ್ಯಗಳ ಮೇಳಗಳು ಕೇಳಿಬಂದವು.

12053007a ತತ ಉತ್ಥಾಯ ದಾಶಾರ್ಹಃ ಸ್ನಾತಃ ಪ್ರಾಂಜಲಿರಚ್ಯುತಃ|

12053007c ಜಪ್ತ್ವಾ ಗುಹ್ಯಂ ಮಹಾಬಾಹುರಗ್ನೀನಾಶ್ರಿತ್ಯ ತಸ್ಥಿವಾನ್||

ಬಳಿಕ ಮಹಾಬಾಹು ಅಚ್ಯುತ ದಾಶಾರ್ಹನು ಎದ್ದು, ಸ್ನಾನಮಾಡಿ, ಕೈಮುಗಿದು ರಹಸ್ಯವಾಗಿ ಜಪಿಸಿ, ಅಗ್ನಿಯನ್ನು ಪೂಜಿಸಿದನು.

12053008a ತತಃ ಸಹಸ್ರಂ ವಿಪ್ರಾಣಾಂ ಚತುರ್ವೇದವಿದಾಂ ತಥಾ|

12053008c ಗವಾಂ ಸಹಸ್ರೇಣೈಕೈಕಂ ವಾಚಯಾಮಾಸ ಮಾಧವಃ||

ಅನಂತರ ಮಾಧವನು ನಾಲ್ಕುವೇದಗಳ ವಿದ್ವಾಂಸರಾದ ಸಹಸ್ರ ವಿಪ್ರರಿಗೆ ಒಬ್ಬೊಬ್ಬರಿಗೂ ಒಂದೊಂದು ಸಾವಿರ ಗೋವುಗಳನ್ನು ದಾನಮಾಡಿ, ಸ್ವಸ್ತಿವಾಚನ ಮಾಡಿಸಿಕೊಂಡನು.

12053009a ಮಂಗಲಾಲಂಭನಂ ಕೃತ್ವಾ ಆತ್ಮಾನಮವಲೋಕ್ಯ ಚ|

12053009c ಆದರ್ಶೇ ವಿಮಲೇ ಕೃಷ್ಣಸ್ತತಃ ಸಾತ್ಯಕಿಮಬ್ರವೀತ್||

ಅನಂತರ ಕೃಷ್ಣನು ಮಂಗಲದ್ರವ್ಯಗಳನ್ನು ಸ್ಪರ್ಷಿಸಿ, ಶುಭ್ರ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡು, ಸಾತ್ಯಕಿಗೆ ಹೇಳಿದನು:

12053010a ಗಚ್ಚ ಶೈನೇಯ ಜಾನೀಹಿ ಗತ್ವಾ ರಾಜನಿವೇಶನಮ್|

12053010c ಅಪಿ ಸಜ್ಜೋ ಮಹಾತೇಜಾ ಭೀಷ್ಮಂ ದ್ರಷ್ಟುಂ ಯುಥಿಷ್ಠಿರಃ||

“ಶೈನೇಯ! ಹೋಗು! ರಾಜನಿವೇಶನಕ್ಕೆ ಹೋಗಿ ಮಹಾತೇಜಸ್ವಿ ಭೀಷ್ಮನನ್ನು ಕಾಣಲು ಯುಧಿಷ್ಠಿರನು ಸಿದ್ಧನಾಗಿದ್ದನೆಯೋ ಎಂದು ತಿಳಿ!”

12053011a ತತಃ ಕೃಷ್ಣಸ್ಯ ವಚನಾತ್ಸಾತ್ಯಕಿಸ್ತ್ವರಿತೋ ಯಯೌ|

12053011c ಉಪಗಮ್ಯ ಚ ರಾಜಾನಂ ಯುಧಿಷ್ಠಿರಮುವಾಚ ಹ||

ಕೃಷ್ಣನ ಆ ಮಾತಿನಂತೆ ಸಾತ್ಯಕಿಯು ಬೇಗನೇ ರಾಜ ಯುಧಿಷ್ಠಿರನಲ್ಲಿಗೆ ಹೋಗಿ ಹೇಳಿದನು:

12053012a ಯುಕ್ತೋ ರಥವರೋ ರಾಜನ್ವಾಸುದೇವಸ್ಯ ಧೀಮತಃ|

12053012c ಸಮೀಪಮಾಪಗೇಯಸ್ಯ ಪ್ರಯಾಸ್ಯತಿ ಜನಾರ್ದನಃ||

“ರಾಜನ್! ಧೀಮತ ವಾಸುದೇವನ ಶ್ರೇಷ್ಠ ರಥವು ಸಿದ್ಧವಾಗಿದೆ. ಜನಾರ್ದನನು ಆಪಗೇಯನ ಸಮೀಪಕ್ಕೆ ಹೋಗುತ್ತಿದ್ದಾನೆ.

12053013a ಭವತ್ಪ್ರತೀಕ್ಷಃ ಕೃಷ್ಣೋಽಸೌ ಧರ್ಮರಾಜ ಮಹಾದ್ಯುತೇ|

12053013c ಯದತ್ರಾನಂತರಂ ಕೃತ್ಯಂ ತದ್ಭವಾನ್ಕರ್ತುಮರ್ಹತಿ||

ಮಹಾದ್ಯುತೇ! ಧರ್ಮರಾಜ! ಕೃಷ್ಣನು ನಿನ್ನ ಪ್ರತೀಕ್ಷೆಯಲ್ಲಿಯೇ ಇದ್ದಾನೆ. ಇದರ ನಂತರ ಏನನ್ನು ಮಾಡಬೇಕಾಗಿದೆಯೋ ಅದನ್ನು ನೀನು ಮಾಡಬೇಕು!”

12053014 ಯುಧಿಷ್ಠಿರ ಉವಾಚ

12053014a ಯುಜ್ಯತಾಂ ಮೇ ರಥವರಃ ಫಲ್ಗುನಾಪ್ರತಿಮದ್ಯುತೇ|

12053014c ನ ಸೈನಿಕೈಶ್ಚ ಯಾತವ್ಯಂ ಯಾಸ್ಯಾಮೋ ವಯಮೇವ ಹಿ||

ಯುಧಿಷ್ಠಿರನು ಹೇಳಿದನು: “ಅಪ್ರತಿಮದ್ಯುತೇ! ಫಲ್ಗುನ! ನನ್ನ ಶ್ರೇಷ್ಠ ರಥವನ್ನು ಸಿದ್ಧಪಡಿಸು! ಸೈನಿಕರು ಯಾರೂ ಹೋಗುವುದಿಲ್ಲ. ನಾವು ಮಾತ್ರ ಅಲ್ಲಿಗೆ ಹೋಗೋಣ!

12053015a ನ ಚ ಪೀಡಯಿತವ್ಯೋ ಮೇ ಭೀಷ್ಮೋ ಧರ್ಮಭೃತಾಂ ವರಃ|

12053015c ಅತಃ ಪುರಃಸರಾಶ್ಚಾಪಿ ನಿವರ್ತಂತು ಧನಂಜಯ||

ಧರ್ಮಭೃತರಲ್ಲಿ ಶ್ರೇಷ್ಠ ಭೀಷ್ಮನನ್ನು ನಾವು ಪೀಡಿಸಬಾರದು. ಆದುದರಿಂದ ಧನಂಜಯ! ನಮ್ಮ ಹಿಂದೆ ಮತ್ತು ಮುಂದೆ ಸಾಗುವ ಸೇನೆಗಳು ಇಲ್ಲಿಯೇ ನಿಲ್ಲಲಿ!

12053016a ಅದ್ಯಪ್ರಭೃತಿ ಗಾಂಗೇಯಃ ಪರಂ ಗುಹ್ಯಂ ಪ್ರವಕ್ಷ್ಯತಿ|

12053016c ತತೋ ನೇಚ್ಚಾಮಿ ಕೌಂತೇಯ ಪೃಥಗ್ಜನಸಮಾಗಮಮ್||

ಇಂದಿನಿಂದ ಗಾಂಗೇಯನು ಪರಮ ಗುಹ್ಯ ಮಾತುಗಳನ್ನು ಹೇಳುತ್ತಾನೆ. ಕೌಂತೇಯ! ಆದುದರಿಂದ ಅಲ್ಲಿಗೆ ಸಾಮಾನ್ಯ ಜನರು ಬಂದು ಸೇರುವುದನ್ನು ನಾನು ಇಚ್ಛಿಸುವುದಿಲ್ಲ!””

12053017 ವೈಶಂಪಾಯನ ಉವಾಚ

12053017a ತದ್ವಾಕ್ಯಮಾಕರ್ಣ್ಯ ತಥಾ ಕುಂತೀಪುತ್ರೋ ಧನಂಜಯಃ|

12053017c ಯುಕ್ತಂ ರಥವರಂ ತಸ್ಮಾ ಆಚಚಕ್ಷೇ ನರರ್ಷಭ||

ವೈಶಂಪಾಯನನು ಹೇಳಿದನು: “ನರರ್ಷಭ! ಅವನ ಆ ಮಾತನ್ನು ಕೇಳಿ ಕುಂತೀಪುತ್ರ ಧನಂಜಯನು ಶ್ರೇಷ್ಠರಥವು ಸಿದ್ಧವಾಗಿದೆಯೆಂದು ತಿಳಿಸಿದನು.

12053018a ತತೋ ಯುಧಿಷ್ಠಿರೋ ರಾಜಾ ಯಮೌ ಭೀಮಾರ್ಜುನಾವಪಿ|

12053018c ಭೂತಾನೀವ ಸಮಸ್ತಾನಿ ಯಯುಃ ಕೃಷ್ಣನಿವೇಶನಮ್||

ಅನಂತರ ರಾಜಾ ಯುಧಿಷ್ಠಿರ, ಯಮಳರೀರ್ವರು ಮತ್ತು ಭೀಮಾರ್ಜುನರು ಐವರು ಪಂಚಭೂತಗಳೋಪಾದಿಯಲ್ಲಿ, ಒಂದಾಗಿ ಕೃಷ್ಣನ ಭವನಕ್ಕೆ ಆಗಮಿಸಿದರು.

12053019a ಆಗಚ್ಚತ್ಸ್ವಥ ಕೃಷ್ಣೋಽಪಿ ಪಾಂಡವೇಷು ಮಹಾತ್ಮಸು|

12053019c ಶೈನೇಯಸಹಿತೋ ಧೀಮಾನ್ರಥಮೇವಾನ್ವಪದ್ಯತ||

ಮಹಾತ್ಮ ಪಾಂಡವರು ಬಂದಕೂಡಲೇ ಧೀಮಾನ್ ಕೃಷ್ಣನೂ ಕೂಡ ಶೈನೇಯನೊಡನೆ ರಥವನ್ನೇರಿದನು.

12053020a ರಥಸ್ಥಾಃ ಸಂವಿದಂ ಕೃತ್ವಾ ಸುಖಾಂ ಪೃಷ್ಟ್ವಾ ಚ ಶರ್ವರೀಮ್|

12053020c ಮೇಘಘೋಷೈ ರಥವರೈಃ ಪ್ರಯಯುಸ್ತೇ ಮಹಾರಥಾಃ||

ರಥದಲ್ಲಿ ಕುಳಿತು, ರಾತ್ರಿಯು ಸುಖಕರವಾಗಿತ್ತೇ ಎಂದು ಮುಂತಾದ ಸಂವಾದಗಳನ್ನು ಗೈಯುತ್ತಾ, ಗುಡುಗಿನಂತೆ ಮೊಳಗುತ್ತಿದ್ದ ಶ್ರೇಷ್ಠರಥಗಳಲ್ಲಿ ಆ ಮಹಾರಥರು ಪ್ರಯಾಣಿಸಿದರು.

12053021a ಮೇಘಪುಷ್ಪಂ ಬಲಾಹಂ ಚ ಸೈನ್ಯಂ ಸುಗ್ರೀವಮೇವ ಚ|

12053021c ದಾರುಕಶ್ಚೋದಯಾಮಾಸ ವಾಸುದೇವಸ್ಯ ವಾಜಿನಃ||

ಮೇಘಪುಷ್ಪ, ಬಲಾಹಕ, ಸೈನ್ಯ ಮತ್ತು ಸುಗ್ರೀವರೆಂಬ ವಾಸುದೇವನ ಕುದುರೆಗಳನ್ನು ದಾರುಕನು ನಡೆಸಿದನು.

12053022a ತೇ ಹಯಾ ವಾಸುದೇವಸ್ಯ ದಾರುಕೇಣ ಪ್ರಚೋದಿತಾಃ|

12053022c ಗಾಂ ಖುರಾಗ್ರೈಸ್ತಥಾ ರಾಜಽಲ್ಲಿಖಂತಃ ಪ್ರಯಯುಸ್ತದಾ||

ರಾಜನ್! ದಾರುಕನಿಂದ ಪ್ರಚೋದಿತಗೊಂಡ ವಾಸುದೇವನ ಕುದುರೆಗಳು ಗೊರಸುಗಳ ಅಗ್ರಭಾಗದಿಂದ ಭೂಮಿಯನ್ನು ಗೀರುತ್ತಾ ಬಹಳ ಬೇಗ ಧಾವಿಸಿದವು.

12053023a ತೇ ಗ್ರಸಂತ ಇವಾಕಾಶಂ ವೇಗವಂತೋ ಮಹಾಬಲಾಃ|

12053023c ಕ್ಷೇತ್ರಂ ಧರ್ಮಸ್ಯ ಕೃತ್ಸ್ನಸ್ಯ ಕುರುಕ್ಷೇತ್ರಮವಾತರನ್||

ಆ ವೇಗವುಳ್ಳ ಮಹಾಬಲಶಾಲೀ ಕುದುರೆಗಳು ಆಕಾಶವನ್ನೇ ನುಂಗಿಹಾಕುವವೋ ಎನ್ನುವಂತೆ ಸಾಗಿ ಸಮಸ್ತ ಧರ್ಮಕ್ಕೂ ಕ್ಷೇತ್ರವಾದ ಕುರುಕ್ಷೇತ್ರಕ್ಕೆ ಬಂದು ತಲುಪಿದವು.

12053024a ತತೋ ಯಯುರ್ಯತ್ರ ಭೀಷ್ಮಃ ಶರತಲ್ಪಗತಃ ಪ್ರಭುಃ|

12053024c ಆಸ್ತೇ ಬ್ರಹ್ಮರ್ಷಿಭಿಃ ಸಾರ್ಧಂ ಬ್ರಹ್ಮಾ ದೇವಗಣೈರ್ಯಥಾ||

ಅನಂತರ ಅವರು ದೇವಗಣಗಳೊಂದಿಗೆ ಇದ್ದ ಬ್ರಹ್ಮನಂತೆ ಬ್ರಹ್ಮರ್ಷಿಗಳೊಂದಿಗೆ ಶರತಲ್ಪದಲ್ಲಿ ಮಲಗಿದ್ದ ಪ್ರಭು ಭೀಷ್ಮನಿದ್ದಲ್ಲಿಗೆ ಬಂದರು.

12053025a ತತೋಽವತೀರ್ಯ ಗೋವಿಂದೋ ರಥಾತ್ಸ ಚ ಯುಧಿಷ್ಠಿರಃ|

12053025c ಭೀಮೋ ಗಾಂಡೀವಧನ್ವಾ ಚ ಯಮೌ ಸಾತ್ಯಕಿರೇವ ಚ||

12053025e ಋಷೀನಭ್ಯರ್ಚಯಾಮಾಸುಃ ಕರಾನುದ್ಯಮ್ಯ ದಕ್ಷಿಣಾನ್||

ಆಗ ಗೋವಿಂದ, ಯುಧಿಷ್ಠಿರ, ಭೀಮ, ಗಾಂಡೀವಧನ್ವಿ, ಯಮಳರು ಮತ್ತು ಸಾತ್ಯಕಿಯರು ರಥದಿಂದಿಳಿದು ಬಲಗೈಗಳನ್ನೆತ್ತಿ ಅಲ್ಲಿದ್ದ ಋಷಿಗಳನ್ನು ಗೌರವಿಸಿದರು.

12053026a ಸ ತೈಃ ಪರಿವೃತೋ ರಾಜಾ ನಕ್ಷತ್ರೈರಿವ ಚಂದ್ರಮಾಃ|

12053026c ಅಭ್ಯಾಜಗಾಮ ಗಾಂಗೇಯಂ ಬ್ರಹ್ಮಾಣಮಿವ ವಾಸವಃ||

ನಕ್ಷತ್ರಗಳಿಂದ ಪರಿವೃತನಾದ ಚಂದ್ರನಂತೆ ಅವರಿಂದ ಪರಿವೃತನಾದ ರಾಜ ಯುಧಿಷ್ಠಿರನು ವಾಸವನು ಬ್ರಹ್ಮನ ಬಳಿಸಾರುವಂತೆ ಗಾಂಗೇಯನ ಬಳಿಸಾರಿದನು.

12053027a ಶರತಲ್ಪೇ ಶಯಾನಂ ತಮಾದಿತ್ಯಂ ಪತಿತಂ ಯಥಾ|

12053027c ದದರ್ಶ ಸ ಮಹಾಬಾಹುರ್ಭಯಾದಾಗತಸಾಧ್ವಸಃ||

ಕೆಳಗೆ ಬಿದ್ದಿದ್ದ ಆದಿತ್ಯನಂತೆ ಶರತಲ್ಪದಲ್ಲಿ ಮಲಗಿದ್ದ ಅವನನ್ನು ನೋಡಿ ಮಹಾಬಾಹು ಯುಧಿಷ್ಠಿರನು ಭಯದಿಂದ ಕೂಡಲೇ ಅವನನ್ನು ಎದುರಿಸಲಿಲ್ಲ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಭೀಷ್ಮಾಭಿಗಮನೇ ತ್ರಿಪಂಚಶತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಭೀಷ್ಮಾಭಿಗಮನ ಎನ್ನುವ ಐವತ್ಮೂರನೇ ಅಧ್ಯಾಯವು.

Comments are closed.