ಶಾಂತಿ ಪರ್ವ: ರಾಜಧರ್ಮ ಪರ್ವ

೪೨

12042001 ವೈಶಂಪಾಯನ ಉವಾಚ

12042001a ತತೋ ಯುಧಿಷ್ಠಿರೋ ರಾಜಾ ಜ್ಞಾತೀನಾಂ ಯೇ ಹತಾ ಮೃಧೇ|

12042001c ಶ್ರಾದ್ಧಾನಿ ಕಾರಯಾಮಾಸ ತೇಷಾಂ ಪೃಥಗುದಾರಧೀಃ||

ವೈಶಂಪಾಯನನು ಹೇಳಿದನು: “ಅನಂತರ ಉದಾರಮತಿ ರಾಜಾ ಯುಧಿಷ್ಠಿರನು ಯುದ್ಧದಲ್ಲಿ ಹತರಾದ ಜ್ಞಾತಿ-ಬಾಂಧವರಿಗೆ ಪ್ರತ್ಯೇಕ-ಪ್ರತ್ಯೇಕವಾಗಿ ಶ್ರಾದ್ಧಗಳನ್ನು ಮಾಡಿಸಿದನು.

12042002a ಧೃತರಾಷ್ಟ್ರೋ ದದೌ ರಾಜಾ ಪುತ್ರಾಣಾಮೌರ್ಧ್ವದೇಹಿಕಮ್|

12042002c ಸರ್ವಕಾಮಗುಣೋಪೇತಮನ್ನಂ ಗಾಶ್ಚ ಧನಾನಿ ಚ||

12042002e ರತ್ನಾನಿ ಚ ವಿಚಿತ್ರಾಣಿ ಮಹಾರ್ಹಾಣಿ ಮಹಾಯಶಾಃ||

ಮಹಾಯಶಸ್ವೀ ರಾಜಾ ಧೃತರಾಷ್ಟ್ರನು ತನ್ನ ಮಕ್ಕಳ ದೇಹಾವಸಾನದ ನಂತರದ ಕರ್ಮಗಳನ್ನು ಮಾಡಿ ಸರ್ವಕಾಮಗುಣೋಪೇತ ಅನ್ನ, ಗೋವುಗಳು, ಧನ, ವಿಚಿತ್ರ ಬೆಲೆಬಾಳುವ ರತ್ನಗಳನ್ನಿತ್ತು ನೆರವೇರಿಸಿದನು.

12042003a ಯುಧಿಷ್ಠಿರಸ್ತು ಕರ್ಣಸ್ಯ ದ್ರೋಣಸ್ಯ ಚ ಮಹಾತ್ಮನಃ|

12042003c ಧೃಷ್ಟದ್ಯುಮ್ನಾಭಿಮನ್ಯುಭ್ಯಾಂ ಹೈಡಿಂಬಸ್ಯ ಚ ರಕ್ಷಸಃ||

12042004a ವಿರಾಟಪ್ರಭೃತೀನಾಂ ಚ ಸುಹೃದಾಮುಪಕಾರಿಣಾಮ್|

12042004c ದ್ರುಪದದ್ರೌಪದೇಯಾನಾಂ ದ್ರೌಪದ್ಯಾ ಸಹಿತೋ ದದೌ||

12042005a ಬ್ರಾಹ್ಮಣಾನಾಂ ಸಹಸ್ರಾಣಿ ಪೃಥಗೇಕೈಕಮುದ್ದಿಶನ್|

12042005c ಧನೈಶ್ಚ ವಸ್ತ್ರೈ ರತ್ನೈಶ್ಚ ಗೋಭಿಶ್ಚ ಸಮತರ್ಪಯತ್||

ಯುಧಿಷ್ಠಿರನು ದ್ರೌಪದೀ ಸಮೇತನಾಗಿ ಮಹಾತ್ಮ ದ್ರೋಣ, ಧೃಷ್ಟದ್ಯುಮ್ನ, ಅಭಿಮನ್ಯು, ರಾಕ್ಷಸ ಹೈಡಿಂಬಿ, ವಿರಾಟನೇ ಮೊದಲಾದ ಸುಹೃದಯ-ಉಪಕಾರಿಗಳ, ದ್ರುಪದ-ದ್ರೌಪದೇಯರು ಒಬ್ಬೊಬ್ಬರನ್ನೂ ಉದ್ದೇಶಿಸಿ ಸಹಸ್ರಾರು ಬ್ರಾಹ್ಮಣರಿಗೆ ಧನ-ವಸ್ತ್ರ-ರತ್ನ-ಗೋವುಗಳನ್ನಿತ್ತು ತರ್ಪಣಗಳನ್ನಿತ್ತನು.

12042006a ಯೇ ಚಾನ್ಯೇ ಪೃಥಿವೀಪಾಲಾ ಯೇಷಾಂ ನಾಸ್ತಿ ಸುಹೃಜ್ಜನಃ|

12042006c ಉದ್ದಿಶ್ಯೋದ್ದಿಶ್ಯ ತೇಷಾಂ ಚ ಚಕ್ರೇ ರಾಜೌರ್ಧ್ವದೈಹಿಕಮ್||

ಸುಹೃಜ್ಜನರು ಯಾರೂ ಇಲ್ಲದಿದ್ದ ಇನ್ನೂ ಅನ್ಯ ಪೃಥಿವೀಪಾಲರನ್ನು ಉದ್ದೇಶಿಸಿ ಅವರ ಔರ್ಧ್ವದೈಹಿಕ ಕರ್ಮಗಳನ್ನೂ ಮಾಡಿದನು. 

12042007a ಸಭಾಃ ಪ್ರಪಾಶ್ಚ ವಿವಿಧಾಸ್ತಡಾಗಾನಿ ಚ ಪಾಂಡವಃ|

12042007c ಸುಹೃದಾಂ ಕಾರಯಾಮಾಸ ಸರ್ವೇಷಾಮೌರ್ಧ್ವದೈಹಿಕಮ್||

ಆ ಪಾಂಡವನು ಸಭೆಗಳನ್ನೂ, ಅರವಟ್ಟಿಗೆಗಳನ್ನೂ, ವಿವಿಧ ತಟಾಕಗಳನ್ನೂ ನಿರ್ಮಿಸಿ ಸರ್ವ ಸುಹೃದಯರ ಶ್ರಾದ್ಧಕರ್ಮಗಳನ್ನು ನೆರವೇರಿಸಿದನು.

12042008a ಸ ತೇಷಾಮನೃಣೋ ಭೂತ್ವಾ ಗತ್ವಾ ಲೋಕೇಷ್ವವಾಚ್ಯತಾಮ್|

12042008c ಕೃತಕೃತ್ಯೋಽಭವದ್ರಾಜಾ ಪ್ರಜಾ ಧರ್ಮೇಣ ಪಾಲಯನ್||

ಅವರ ಋಣಗಳಿಂದ ಮುಕ್ತನಾಗಿ, ಯಾರ ಆಕ್ಷೇಪ-ನಿಂದನೆಗಳಿಗೂ ಒಳಗಾಗದೇ ಧರ್ಮದಿಂದ ಪ್ರಜೆಗಳನ್ನು ಪಾಲಿಸಿ ರಾಜನು ಕೃತಕೃತ್ಯನಾದನು.

12042009a ಧೃತರಾಷ್ಟ್ರಂ ಯಥಾಪೂರ್ವಂ ಗಾಂಧಾರೀಂ ವಿದುರಂ ತಥಾ|

12042009c ಸರ್ವಾಂಶ್ಚ ಕೌರವಾಮಾತ್ಯಾನ್ಭೃತ್ಯಾಂಶ್ಚ ಸಮಪೂಜಯತ್||

ಹಿಂದಿನಂತೆ ಧೃತರಾಷ್ಟ್ರ, ಗಾಂಧಾರೀ, ವಿದುರ, ಕೌರವರ ಸರ್ವ ಅಮಾತ್ಯರನ್ನೂ ಸೇವಕರನ್ನೂ ಸಮನಾಗಿ ಪೂಜಿಸಿದನು.

12042010a ಯಾಶ್ಚ ತತ್ರ ಸ್ತ್ರಿಯಃ ಕಾಶ್ಚಿದ್ಧತವೀರಾ ಹತಾತ್ಮಜಾಃ|

12042010c ಸರ್ವಾಸ್ತಾಃ ಕೌರವೋ ರಾಜಾ ಸಂಪೂಜ್ಯಾಪಾಲಯದ್ಘೃಣೀ||

ವೀರಪತಿಗಳನ್ನು ಮತ್ತು ಮಕ್ಕಳನ್ನು ಕಳೆದುಕೊಂಡಿದ್ದ ಸ್ತ್ರೀಯರೆಲ್ಲರನ್ನೂ ದಯಾಪರ ಕೌರವ ರಾಜನು ಗೌರವಿಸಿ ಪಾಲಿಸಿದನು.

12042011a ದೀನಾಂಧಕೃಪಣಾನಾಂ ಚ ಗೃಹಾಚ್ಚಾದನಭೋಜನೈಃ|

12042011c ಆನೃಶಂಸ್ಯಪರೋ ರಾಜಾ ಚಕಾರಾನುಗ್ರಹಂ ಪ್ರಭುಃ||

ರಾಜಾ ಪ್ರಭುವು ದೀನರನ್ನೂ, ಅಂಧ-ಕೃಪಣರನ್ನೂ ಮನೆ-ವಸ್ತ್ರ-ಬೋಜನಗಳಿಂದ ಕೃಪೆದೋರಿ ಅನುಗ್ರಹಿಸಿದನು.

12042012a ಸ ವಿಜಿತ್ಯ ಮಹೀಂ ಕೃತ್ಸ್ನಾಮಾನೃಣ್ಯಂ ಪ್ರಾಪ್ಯ ವೈರಿಷು|

12042012c ನಿಃಸಪತ್ನಃ ಸುಖೀ ರಾಜಾ ವಿಜಹಾರ ಯುಧಿಷ್ಠಿರಃ||

ಅಖಂಡ ಭೂಮಂಡಲವನ್ನೂ ಜಯಿಸಿ, ವೈರಿಗಳ ಋಣಗಳಿಂದಲೂ ಮುಕ್ತನಾಗಿ, ಶತ್ರುರಹಿತನಾದ ರಾಜಾ ಯುಧಿಷ್ಠಿರನು ಸುಖಿಯಾಗಿ ವಿಹರಿಸತೊಡಗಿದನು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಶ್ರಾದ್ಧಕ್ರಿಯಾಯಾಂ ದ್ವಿಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಶ್ರಾದ್ಧಕ್ರಿಯೆಗಳು ಎನ್ನುವ ನಲ್ವತ್ತೆರಡನೇ ಅಧ್ಯಾಯವು.

Comments are closed.