ಶಾಂತಿ ಪರ್ವ: ರಾಜಧರ್ಮ ಪರ್ವ

೩೩

12033001 ಯುಧಿಷ್ಠಿರ ಉವಾಚ

12033001a ಹತಾಃ ಪುತ್ರಾಶ್ಚ ಪೌತ್ರಾಶ್ಚ ಭ್ರಾತರಃ ಪಿತರಸ್ತಥಾ|

12033001c ಶ್ವಶುರಾ ಗುರವಶ್ಚೈವ ಮಾತುಲಾಃ ಸಪಿತಾಮಹಾಃ||

12033002a ಕ್ಷತ್ರಿಯಾಶ್ಚ ಮಹಾತ್ಮಾನಃ ಸಂಬಂಧಿಸುಹೃದಸ್ತಥಾ|

12033002c ವಯಸ್ಯಾ ಜ್ಞಾತಯಶ್ಚೈವ ಭ್ರಾತರಶ್ಚ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಪುತ್ರ-ಪೌತ್ರರು, ಸಹೋದರರು, ತಂದೆಯರು, ಮಾವಂದಿರು, ಗುರುಗಳು, ಸೋದರಮಾವಂದಿರು, ಪಿತಾಮಹರು, ಹಾಗೆಯೇ ಮಹಾತ್ಮ ಕ್ಷತ್ರಿಯ ಸಂಬಂಧಿಗಳು, ಸಮಾನ ವಯಸ್ಕರು, ಬಾಂಧವರು ಮತ್ತು ಭ್ರಾತರರು ಹತರಾದರು!

12033003a ಬಹವಶ್ಚ ಮನುಷ್ಯೇಂದ್ರಾ ನಾನಾದೇಶಸಮಾಗತಾಃ|

12033003c ಘಾತಿತಾ ರಾಜ್ಯಲುಬ್ಧೇನ ಮಯೈಕೇನ ಪಿತಾಮಹ||

ಪಿತಾಮಹ! ನಾನಾ ದೇಶಗಳಿಂದ ಬಂದು ಸೇರಿದ್ದ ಅನೇಕ ಮನುಷ್ಯೇಂದ್ರರೂ ಕೂಡ ನನ್ನ ಒಬ್ಬನ ರಾಜ್ಯಲೋಭದಿಂದಾಗಿ ಹತರಾದರು!

12033004a ತಾಂಸ್ತಾದೃಶಾನಹಂ ಹತ್ವಾ ಧರ್ಮನಿತ್ಯಾನ್ಮಹೀಕ್ಷಿತಃ|

12033004c ಅಸಕೃತ್ಸೋಮಪಾನ್ವೀರಾನ್ಕಿಂ ಪ್ರಾಪ್ಸ್ಯಾಮಿ ತಪೋಧನ||

ತಪೋಧನ! ಅಂಥಹ ಧರ್ಮನಿತ್ಯ ರಾಜರನ್ನು, ಸೋಮವನ್ನು ಕುಡಿದಿದ್ದ ವೀರರನ್ನು ಸಂಹರಿಸಿದ ನಾನು ಎಂಥಹ ಫಲವನ್ನು ಅನುಭವಿಸಿಯೇನು?

12033005a ದಃಶ್ಯಾಮನಿಶಮದ್ಯಾಹಂ ಚಿಂತಯಾನಃ ಪುನಃ ಪುನಃ|

12033005c ಹೀನಾಂ ಪಾರ್ಥಿವಸಿಂಹೈಸ್ತೈಃ ಶ್ರೀಮದ್ಭಿಃ ಪೃಥಿವೀಮಿಮಾಮ್||

ಶ್ರೀಮಂತರಾಗಿದ್ದ ಪಾರ್ಥಿವಸಿಂಹರಿಂದ ಹೀನಗೊಂಡಿರುವ ಈ ಪೃಥ್ವಿಯ ಕುರಿತು ಪುನಃ ಪುನಃ ಚಿಂತಿಸುತ್ತಾ ಸಂಕಟದಿಂದ ಬೆಂದುಹೋಗಿದ್ದೇನೆ.

12033006a ದೃಷ್ಟ್ವಾ ಜ್ಞಾತಿವಧಂ ಘೋರಂ ಹತಾಂಶ್ಚ ಶತಶಃ ಪರಾನ್|

12033006c ಕೋಟಿಶಶ್ಚ ನರಾನನ್ಯಾನ್ಪರಿತಪ್ಯೇ ಪಿತಾಮಹ||

ಪಿತಾಮಹ! ಘೋರವಾದ ಕುಲವಧೆಯನ್ನೂ, ನೂರಾರು ಶತ್ರುಗಳು ಮತ್ತು ಕೋಟಿ-ಕೋಟಿ ಅನ್ಯರು ಹತರಾದುದನ್ನು ನೋಡಿ ಪರಿತಪಿಸುತ್ತಿದ್ದೇನೆ.

12033007a ಕಾ ನು ತಾಸಾಂ ವರಸ್ತ್ರೀಣಾಮವಸ್ಥಾದ್ಯ ಭವಿಷ್ಯತಿ|

12033007c ವಿಹೀನಾನಾಂ ಸ್ವತನಯೈಃ ಪತಿಭಿರ್ಭ್ರಾತೃಭಿಸ್ತಥಾ||

ತಮ್ಮ ಪುತ್ರರು ಮತ್ತು ಪತಿಯಂದಿರಿಂದ ವಿಹೀನರಾದ ಈ ವರಸ್ತ್ರೀಯರ ಅವಸ್ಥೆಯು ಏನಾಗುವುದು?

12033008a ಅಸ್ಮಾನಂತಕರಾನ್ಘೋರಾನ್ಪಾಂಡವಾನ್ವೃಷ್ಣಿಸಂಹಿತಾನ್|

12033008c ಆಕ್ರೋಶಂತ್ಯಃ ಕೃಶಾ ದೀನಾ ನಿಪತಂತ್ಯಶ್ಚ ಭೂತಲೇ||

ಅವರ ಘೋರ ಅಂತ್ಯಕ್ಕೆ ಕಾರಣರಾದ ನಮ್ಮನ್ನು - ಪಾಂಡವರು ಮತ್ತು ವೃಷ್ಣಿಗಳನ್ನು - ಒಟ್ಟಿಗೇ ಸೇರಿಸಿ ಶಪಿಸುತ್ತಾ ಅವರು ಕೃಶ-ದೀನರಾಗಿ ಭೂಮಿಯ ಮೇಲೆ ಬೀಳುತ್ತಿದ್ದಾರೆ.

12033009a ಅಪಶ್ಯಂತ್ಯಃ ಪಿತೃನ್ ಭ್ರಾತೃನ್ಪತೀನ್ಪುತ್ರಾಂಶ್ಚ ಯೋಷಿತಃ|

12033009c ತ್ಯಕ್ತ್ವಾ ಪ್ರಾಣಾನ್ಪ್ರಿಯಾನ್ಸರ್ವಾ ಗಮಿಷ್ಯಂತಿ ಯಮಕ್ಷಯಮ್||

12033010a ವತ್ಸಲತ್ವಾದ್ದ್ವಿಜಶ್ರೇಷ್ಠ ತತ್ರ ಮೇ ನಾಸ್ತಿ ಸಂಶಯಃ|

12033010c ವ್ಯಕ್ತಂ ಸೌಕ್ಷ್ಮ್ಯಾಚ್ಚ ಧರ್ಮಸ್ಯ ಪ್ರಾಪ್ಸ್ಯಾಮಃ ಸ್ತ್ರೀವಧಂ ವಯಮ್||

ದ್ವಿಜಶ್ರೇಷ್ಠ! ತಂದೆಯರು, ಸಹೋದರರು, ಪತಿಗಳು, ಮತ್ತು ಪುತ್ರರನ್ನು ಕಾಣದೇ ಈ ಎಲ್ಲ ಸ್ತ್ರೀಯರೂ ಅವರ ಮೇಲಿನ ವಾತ್ಸಲ್ಯದಿಂದ ತಮ್ಮ ಪ್ರಿಯ ಪ್ರಾಣಗಳನ್ನೇ ತೊರೆದು ಯಮಕ್ಷಯಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ! ಧರ್ಮದ ಸೂಕ್ಷ್ಮತೆಯನ್ನು ನೋಡಿದರೆ ಈ ಸ್ತ್ರೀವಧೆಯ ಪಾಪವನ್ನೂ ನಾವು ಪಡೆಯುತ್ತೇವೆ ಎನ್ನುವುದು ವ್ಯಕ್ತವಾಗುತ್ತಿದೆ.

12033011a ತೇ ವಯಂ ಸುಹೃದೋ ಹತ್ವಾ ಕೃತ್ವಾ ಪಾಪಮನಂತಕಮ್|

12033011c ನರಕೇ ನಿಪತಿಷ್ಯಾಮೋ ಹ್ಯಧಃಶಿರಸ ಏವ ಚ||

ಸುಹೃದಯರ ಈ ವಧೆಯನ್ನು ಮಾಡಿ ನಾವು ಕೊನೆಯಿಲ್ಲದ ಪಾಪವನ್ನು ಮಾಡಿದ್ದೇವೆ. ಇದಕ್ಕಾಗಿ ನಾವು ನರಕದಲ್ಲಿ ತಲೆಕೆಳಗಾಗಿ ಬಿದ್ದಿರುತ್ತೇವೆ!

12033012a ಶರೀರಾಣಿ ವಿಮೋಕ್ಷ್ಯಾಮಸ್ತಪಸೋಗ್ರೇಣ ಸತ್ತಮ|

12033012c ಆಶ್ರಮಾಂಶ್ಚ ವಿಶೇಷಾಂಸ್ತ್ವಂ ಮಮಾಚಕ್ಷ್ವ ಪಿತಾಮಹ||

ಪಿತಾಮಹ! ಸತ್ತಮ! ಆದುದರಿಂದ ಉಗ್ರ ತಪಸ್ಸಿನಿಂದ ಈ ಶರೀರಗಳನ್ನು ತೊರೆಯುತ್ತೇವೆ. ಈ ಆಶ್ರಮಗಳ ವಿಶೇಷಗುಣಗಳನ್ನು ತಿಳಿಸು!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಪ್ರಾಯಶ್ಚಿತ್ತೀಯೋಪಾಖ್ಯಾನೇ ತ್ರಯೋತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಪ್ರಾಯಶ್ಚಿತ್ತೀಯೋಪಾಖ್ಯಾನ ಎನ್ನುವ ಮೂವತ್ಮೂರನೇ ಅಧ್ಯಾಯವು.

Comments are closed.