Mausala Parva: Chapter 7

ಮೌಸಲ ಪರ್ವ

ವಸುದೇವ ವಿಲಾಪ (೧-೨೨).

16007001 ವೈಶಂಪಾಯನ ಉವಾಚ|

16007001a ತಂ ಶಯಾನಂ ಮಹಾತ್ಮಾನಂ ವೀರಮಾನಕದುಂದುಭಿಮ್|

16007001c ಪುತ್ರಶೋಕಾಭಿಸಂತಪ್ತಂ ದದರ್ಶ ಕುರುಪುಂಗವಃ||

ವೈಶಂಪಾಯನನು ಹೇಳಿದನು: “ಕುರುಪುಂಗವನು ಪುತ್ರಶೋಕದಿಂದ ಸಂತಪ್ತನಾಗಿ ಮಲಗಿದ್ದ ಮಹಾತ್ಮ ವೀರ ಅನಕದುಂದುಭಿ ವಸುದೇವನನ್ನು ಕಂಡನು.

16007002a ತಸ್ಯಾಶ್ರುಪರಿಪೂರ್ಣಾಕ್ಷೋ ವ್ಯೂಢೋರಸ್ಕೋ ಮಹಾಭುಜಃ|

16007002c ಆರ್ತಸ್ಯಾರ್ತತರಃ ಪಾರ್ಥಃ ಪಾದೌ ಜಗ್ರಾಹ ಭಾರತ||

ಭಾರತ! ಕಣ್ಣುಗಳು ಕಣ್ಣೀರಿನಿಂದ ತುಂಬಿ ವಸುದೇವನಿಗಿಂತಲೂ ಹೆಚ್ಚು ಆರ್ತನಾಗಿದ್ದ ಆ ವಿಶಾಲ ಎದೆಯ ಮಹಾಭುಜ ಪಾರ್ಥನು ಆರ್ತನಾಗಿದ್ದ ವಸುದೇವನ ಪಾದಗಳನ್ನು ಹಿಡಿದು ನಮಸ್ಕರಿಸಿದನು.

16007003a ಸಮಾಲಿಂಗ್ಯಾರ್ಜುನಂ ವೃದ್ಧಃ ಸ ಭುಜಾಭ್ಯಾಂ ಮಹಾಭುಜಃ|

16007003c ರುದನ್ಪುತ್ರಾನ್ಸ್ಮರನ್ಸರ್ವಾನ್ವಿಲಲಾಪ ಸುವಿಹ್ವಲಃ|

16007003e ಭ್ರಾತೄನ್ಪುತ್ರಾಂಶ್ಚ ಪೌತ್ರಾಂಶ್ಚ ದೌಹಿತ್ರಾಂಶ್ಚ ಸಖೀನಪಿ||

ಆ ಮಹಾಭುಜ ವೃದ್ಧನು ಅರ್ಜುನನನ್ನು ಬಾಹುಗಳಿಂದ ಆಲಂಗಿಸಿದನು ಮತ್ತು ಪುತ್ರರು, ಸಹೋದರರು, ಮೊಮ್ಮಕ್ಕಳು, ಹೆಣ್ಣುಮಕ್ಕಳ ಮಕ್ಕಳು, ಮತ್ತು ಸಖರು ಎಲ್ಲರನ್ನೂ ನೆನಪಿಸಿಕೊಂಡು ತುಂಬಾ ವಿಹ್ವಲನಾಗಿ ವಿಲಪಿಸಿದನು.

16007004 ವಸುದೇವ ಉವಾಚ|

16007004a ಯೈರ್ಜಿತಾ ಭೂಮಿಪಾಲಾಶ್ಚ ದೈತ್ಯಾಶ್ಚ ಶತಶೋಽರ್ಜುನ|

16007004c ತಾನ್ದೃಷ್ಟ್ವಾ ನೇಹ ಪಶ್ಯಾಮಿ ಜೀವಾಮ್ಯರ್ಜುನ ದುರ್ಮರಃ||

ವಸುದೇವನು ಹೇಳಿದನು: “ಅರ್ಜುನ! ನೂರಾರು ಭೂಮಿಪಾಲರನ್ನೂ ದೈತ್ಯರನ್ನೂ ಯಾರು ಜಯಿಸಿದ್ದರೋ ಅವರನ್ನು ನೋಡದೇ ಇನ್ನೂ ಜೀವಿಸಿದ್ದೇನೆ! ಅರ್ಜುನ! ನನಗೆ ಮರಣವೇ ಇಲ್ಲವೆನಿಸುತ್ತದೆ!

16007005a ಯೌ ತಾವರ್ಜುನ ಶಿಷ್ಯೌ ತೇ ಪ್ರಿಯೌ ಬಹುಮತೌ ಸದಾ|

16007005c ತಯೋರಪನಯಾತ್ಪಾರ್ಥ ವೃಷ್ಣಯೋ ನಿಧನಂ ಗತಾಃ||

ಅರ್ಜುನ! ಪಾರ್ಥ! ನಿನ್ನ ಪ್ರಿಯಶಿಷ್ಯರಾಗಿದ್ದ, ನಿನ್ನ ಗೌರವಕ್ಕೆ ಪಾತ್ರರಾಗಿದ್ದ ಆ ಇಬ್ಬರ ದುರ್ವರ್ತನೆಯಿಂದಾಗಿ ವೃಷ್ಣಿಗಳು ನಿಧನರಾದರು!

16007006a ಯೌ ತೌ ವೃಷ್ಣಿಪ್ರವೀರಾಣಾಂ ದ್ವಾವೇವಾತಿರಥೌ ಮತೌ|

16007006c ಪ್ರದ್ಯುಮ್ನೋ ಯುಯುಧಾನಶ್ಚ ಕಥಯನ್ಕತ್ಥಸೇ ಚ ಯೌ||

16007007a ನಿತ್ಯಂ ತ್ವಂ ಕುರುಶಾರ್ದೂಲ ಕೃಷ್ಣಶ್ಚ ಮಮ ಪುತ್ರಕಃ|

16007007c ತಾವುಭೌ ವೃಷ್ಣಿನಾಶಸ್ಯ ಮುಖಮಾಸ್ತಾಂ ಧನಂಜಯ||

ಕುರುಶಾರ್ದೂಲ! ಧನಂಜಯ! ಅವರಿಬ್ಬರು ವೃಷ್ಣಿಪ್ರವೀರರನ್ನೂ ಅತಿರಥರೆಂದು ಮನ್ನಿಸುತ್ತಿದ್ದೆವು. ಅದರ ಕುರಿತು ಪ್ರದ್ಯುಮ್ನ, ಯುಯುಧಾನ, ನೀನು ಮತ್ತು ನನ್ನ ಪುತ್ರ ಕೃಷ್ಣರು ಯಾವಾಗಲೂ ಹೇಳಿಕೊಂಡು ಕೊಚ್ಚಿಕೊಳ್ಳುತ್ತಿದ್ದಿರಿ! ಅವರಿಬ್ಬರೂ ವೃಷ್ಣಿನಾಶದ ಮುಖಗಳಾದರು.

16007008a ನ ತು ಗರ್ಹಾಮಿ ಶೈನೇಯಂ ಹಾರ್ದಿಕ್ಯಂ ಚಾಹಮರ್ಜುನ|

16007008c ಅಕ್ರೂರಂ ರೌಕ್ಮಿಣೇಯಂ ಚ ಶಾಪೋ ಹ್ಯೇವಾತ್ರ ಕಾರಣಮ್||

ಅರ್ಜುನ! ನಾನು ಶೈನೇಯನನ್ನಾಗಲೀ, ಹಾರ್ದಿಕ್ಯನನ್ನಾಗಲೀ, ಅಕ್ರೂರನನ್ನಾಗಲೀ, ರೌಕ್ಮಿಣೇಯನನ್ನಾಗಲೀ ನಿಂದಿಸುವುದಿಲ್ಲ. ಇದಕ್ಕೆ ಆ ಶಾಪವೇ ಕಾರಣ!

16007009a ಕೇಶಿನಂ ಯಸ್ತು ಕಂಸಂ ಚ ವಿಕ್ರಮ್ಯ ಜಗತಃ ಪ್ರಭುಃ|

16007009c ವಿದೇಹಾವಕರೋತ್ಪಾರ್ಥ ಚೈದ್ಯಂ ಚ ಬಲಗರ್ವಿತಮ್||

16007010a ನೈಷಾದಿಮೇಕಲವ್ಯಂ ಚ ಚಕ್ರೇ ಕಾಲಿಂಗಮಾಗಧಾನ್|

16007010c ಗಾಂಧಾರಾನ್ಕಾಶಿರಾಜಂ ಚ ಮರುಭೂಮೌ ಚ ಪಾರ್ಥಿವಾನ್||

16007011a ಪ್ರಾಚ್ಯಾಂಶ್ಚ ದಾಕ್ಷಿಣಾತ್ಯಾಂಶ್ಚ ಪಾರ್ವತೀಯಾಂಸ್ತಥಾ ನೃಪಾನ್|

16007011c ಸೋಽಭ್ಯುಪೇಕ್ಷಿತವಾನೇತಮನಯಂ ಮಧುಸೂದನಃ||

ಪಾರ್ಥ! ಕೇಶಿನಿ ಮತ್ತು ಕಂಸರನ್ನು ಜಯಿಸಿದ, ಬಲಗರ್ವಿತ ಚೈದ್ಯನನ್ನು ಸಂಹರಿಸಿದ, ನೈಷಾದಿ ಏಕಲವ್ಯ, ಕಾಲಿಂಗ, ಮಾಗಧರು, ಗಾಂಧಾರರು, ಕಾಶಿರಾಜ ಮತ್ತು ಮರುಭೂಮಿಯ ಪಾರ್ಥಿವರನ್ನು, ಪೂರ್ವದಿಕ್ಕಿನ, ದಕ್ಷಿಣದಿಕ್ಕಿನ ಮತ್ತು ಪರ್ವತಗಳಲ್ಲಿನ ನೃಪರನ್ನು ಗೆದ್ದ ಆ ಜಗತ್ಪ್ರಭು ಮಧುಸೂದನನು ಯದುಗಳ ಈ ವಿನಾಶವನ್ನು ಉಪೇಕ್ಷಿಸಿದನು!

16007012a ತತಃ ಪುತ್ರಾಂಶ್ಚ ಪೌತ್ರಾಂಶ್ಚ ಭ್ರಾತೄನಥ ಸಖೀನಪಿ|

16007012c ಶಯಾನಾನ್ನಿಹತಾನ್ದೃಷ್ಟ್ವಾ ತತೋ ಮಾಮಬ್ರವೀದಿದಮ್||

ಪುತ್ರರು, ಪೌತ್ರರು, ಸಹೋದರರು ಮತ್ತು ಸಖರು ಹತರಾಗಿ ಮಲಗಿದುದನ್ನು ನೋಡಿ ಅವನು ನನಗೆ ಹೀಗೆ ಹೇಳಿದನು:

16007013a ಸಂಪ್ರಾಪ್ತೋಽದ್ಯಾಯಮಸ್ಯಾಂತಃ ಕುಲಸ್ಯ ಪುರುಷರ್ಷಭ|

16007013c ಆಗಮಿಷ್ಯತಿ ಬೀಭತ್ಸುರಿಮಾಂ ದ್ವಾರವತೀಂ ಪುರೀಮ್||

“ಪುರುಷರ್ಷಭ! ಇಂದು ಕುಲದ ಅಂತ್ಯವಾಯಿತು. ಬೀಭತ್ಸುವು ಈ ದ್ವಾರವತೀ ಪುರಕ್ಕೆ ಬರುತ್ತಾನೆ.

16007014a ಆಖ್ಯೇಯಂ ತಸ್ಯ ಯದ್ವೃತ್ತಂ ವೃಷ್ಣೀನಾಂ ವೈಶಸಂ ಮಹತ್|

16007014c ಸ ತು ಶ್ರುತ್ವಾ ಮಹಾತೇಜಾ ಯದೂನಾಮನಯಂ ಪ್ರಭೋ|

16007014e ಆಗಂತಾ ಕ್ಷಿಪ್ರಮೇವೇಹ ನ ಮೇಽತ್ರಾಸ್ತಿ ವಿಚಾರಣಾ||

ಅವನಿಗೆ ಇಲ್ಲಿ ನಡೆದ ವೃಷ್ಣಿಗಳ ಮಹಾವಿನಾಶದ ಕುರಿತು ಹೇಳು. ಪ್ರಭೋ! ಯದುಗಳ ಈ ವಿನಾಶದ ಕುರಿತು ಕೇಳಿದ ಕೂಡಲೇ ಬೇಗನೇ ಆ ಮಹಾತೇಜಸ್ವಿಯು ಬರುತ್ತಾನೆ. ಅದರ ಕುರಿತು ವಿಚಾರಿಸುವ ಅವಶ್ಯಕತೆಯಿಲ್ಲ.

16007015a ಯೋಽಹಂ ತಮರ್ಜುನಂ ವಿದ್ಧಿ ಯೋಽರ್ಜುನಃ ಸೋಽಹಮೇವ ತು|

16007015c ಯದ್ಬ್ರೂಯಾತ್ತತ್ತಥಾ ಕಾರ್ಯಮಿತಿ ಬುಧ್ಯಸ್ವ ಮಾಧವ||

ನಾನೇ ಅರ್ಜುನನೆಂದೂ ಅರ್ಜುನನು ನಾನೆಂದೂ ತಿಳಿದುಕೋ! ಮಾಧವ! ಅವನು ಏನು ಮಾಡಬೇಕೆಂದು ಹೇಳುತ್ತಾನೋ ಅದನ್ನೇ ನೀನು ಮಾಡಬೇಕು.

16007016a ಸ ಸ್ತ್ರೀಷು ಪ್ರಾಪ್ತಕಾಲಂ ವಃ ಪಾಂಡವೋ ಬಾಲಕೇಷು ಚ|

16007016c ಪ್ರತಿಪತ್ಸ್ಯತಿ ಬೀಭತ್ಸುರ್ಭವತಶ್ಚೌರ್ಧ್ವದೇಹಿಕಮ್||

ಪಾಂಡವನು ಸ್ತ್ರೀಯರನ್ನೂ ಬಾಲಕರನ್ನು ರಕ್ಷಿಸುತ್ತಾನೆ. ಕಾಲಬಂದಾಗ ಬೀಭತ್ಸುವು ನಿನ್ನ ಔರ್ಧ್ವದೇಹಿಕವನ್ನೂ ಮಾಡುತ್ತಾನೆ.

16007017a ಇಮಾಂ ಚ ನಗರೀಂ ಸದ್ಯಃ ಪ್ರತಿಯಾತೇ ಧನಂಜಯೇ|

16007017c ಪ್ರಾಕಾರಾಟ್ಟಾಲಕೋಪೇತಾಂ ಸಮುದ್ರಃ ಪ್ಲಾವಯಿಷ್ಯತಿ||

ಧನಂಜಯನು ಹೊರಟುಹೋದ ಕೂಡಲೇ ಈ ನಗರಿಯು, ಕೋಟೆ-ಕೊತ್ತಲಗಳೊಂದಿಗೆ ಸಮುದ್ರದಲ್ಲಿ ಮುಳುಗಿಹೋಗುತ್ತದೆ.

16007018a ಅಹಂ ಹಿ ದೇಶೇ ಕಸ್ಮಿಂಶ್ಚಿತ್ಪುಣ್ಯೇ ನಿಯಮಮಾಸ್ಥಿತಃ|

16007018c ಕಾಲಂ ಕರ್ತಾ ಸದ್ಯ ಏವ ರಾಮೇಣ ಸಹ ಧೀಮತಾ||

ನಾನಾದರೋ ಧೀಮಂತ ರಾಮನೊಂದಿಗೆ ಯಾವುದೋ ಪುಣ್ಯ ಪ್ರದೇಶದಲ್ಲಿ ನಿಯಮವನ್ನಾಚರಿಸಿ ಕಾಲವನ್ನು ಕಾಯುತ್ತೇನೆ.”

16007019a ಏವಮುಕ್ತ್ವಾ ಹೃಷೀಕೇಶೋ ಮಾಮಚಿಂತ್ಯಪರಾಕ್ರಮಃ|

16007019c ಹಿತ್ವಾ ಮಾಂ ಬಾಲಕೈಃ ಸಾರ್ಧಂ ದಿಶಂ ಕಾಮಪ್ಯಗಾತ್ಪ್ರಭುಃ||

ಹೀಗೆ ಹೇಳಿ ಅಚಿಂತ್ಯಪರಾಕ್ರಮಿ ಪ್ರಭುವು ಬಾಲಕರೊಂದಿಗೆ ನನ್ನನ್ನು ಬಿಟ್ಟು ಇಷ್ಟಬಂದಲ್ಲಿಗೆ ಹೊರಟುಹೋದನು.

16007020a ಸೋಽಹಂ ತೌ ಚ ಮಹಾತ್ಮಾನೌ ಚಿಂತಯನ್ಭ್ರಾತರೌ ತವ|

16007020c ಘೋರಂ ಜ್ಞಾತಿವಧಂ ಚೈವ ನ ಭುಂಜೇ ಶೋಕಕರ್ಶಿತಃ||

ನಾನು ಆ ನಿನ್ನ ಇಬ್ಬರು ಭ್ರಾತೃಗಳ ಮತ್ತು ಘೋರ ಕುಲವಧೆಯ ಕುರಿತು ಚಿಂತಿಸುತ್ತಾ ಶೋಕಕರ್ಶಿತನಾಗಿ ಆಹಾರವನ್ನು ತ್ಯಜಿಸಿದ್ದೇನೆ.

16007021a ನ ಚ ಭೋಕ್ಷ್ಯೇ ನ ಜೀವಿಷ್ಯೇ ದಿಷ್ಟ್ಯಾ ಪ್ರಾಪ್ತೋಽಸಿ ಪಾಂಡವ|

16007021c ಯದುಕ್ತಂ ಪಾರ್ಥ ಕೃಷ್ಣೇನ ತತ್ಸರ್ವಮಖಿಲಂ ಕುರು||

ಪಾಂಡವ! ನಾನು ಏನನ್ನೂ ತಿನ್ನುವುದಿಲ್ಲ. ಬದುಕಿಯೂ ಇರುವುದಿಲ್ಲ. ಒಳ್ಳೆಯದಾಯಿತು. ನೀನು ಇಲ್ಲಿಗೆ ಬಂದೆ. ಪಾರ್ಥ! ಕೃಷ್ಣನು ಏನೆಲ್ಲ ಹೇಳಿದ್ದನೋ ಅದನ್ನು ಸಂಪೂರ್ಣವಾಗಿ ಮಾಡು!

16007022a ಏತತ್ತೇ ಪಾರ್ಥ ರಾಜ್ಯಂ ಚ ಸ್ತ್ರಿಯೋ ರತ್ನಾನಿ ಚೈವ ಹ|

16007022c ಇಷ್ಟಾನ್ಪ್ರಾಣಾನಹಂ ಹೀಮಾಂಸ್ತ್ಯಕ್ಷ್ಯಾಮಿ ರಿಪುಸೂದನ||

ಪಾರ್ಥ! ರಿಪುಸೂದನ! ಈ ರಾಜ್ಯ, ಸ್ತ್ರೀಯರು, ಮತ್ತು ರತ್ನಗಳೆಲ್ಲವೂ ಈಗ ನಿನ್ನದೇ! ನಾನು ಈ ಇಷ್ಟ ಪ್ರಾಣಗಳನ್ನು ತ್ಯಜಿಸುತ್ತೇನೆ!””

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಅರ್ಜುನವಸುದೇವಸಂವಾದೇ ಸಪ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಅರ್ಜುನವಸುದೇವಸಂವಾದ ಎನ್ನುವ ಏಳನೇ ಅಧ್ಯಾಯವು.

Related image

Comments are closed.