Harivamsha: Chapter 19

ಹರಿವಂಶ: ಹರಿವಂಶ ಪರ್ವ

೧೯

ಪಿತೃಕಲ್ಪಃ  - ೩

19019001 ಮಾರ್ಕಂಡೇಯ ಉವಾಚ|

19019001a ಆಸನ್ಪೂರ್ವಯುಗೇ ತಾತ ಭರದ್ವಾಜಾತ್ಮಜಾ ದ್ವಿಜಾಃ |

19019001c ಯೋಗಧರ್ಮಮನುಪ್ರಾಪ್ಯ ಭ್ರಷ್ಟಾ ದುಶ್ಚರಿತೇನ ವೈ ||

ಮಾರ್ಕಂಡೇಯನು ಹೇಳಿದನು[1]: “ತಾತ! ಪೂರ್ವಯುಗದಲ್ಲಿ ಭರದ್ವಾಜನ ದ್ವಿಜ ಪುತ್ರರು ಯೋಗಧರ್ಮವನ್ನು ಪಡೆದಿದ್ದರೂ ದುಶ್ಚರಿತದ ಕಾರಣದಿಂದ ಸ್ವರ್ಗಭ್ರಷ್ಟರಾದರು.

19019002a ಅಪಭ್ರಂಶಮನುಪ್ರಾಪ್ತಾ ಯೋಗಧರ್ಮಾಪಚಾರಿಣಃ |

19019002c ಮಹತಃ ಸರಸಃ ಪಾರೇ ಮಾನಸಸ್ಯ ವಿಸಂಜ್ಞಿತಾಃ ||

ಯೋಗಧರ್ಮವನ್ನು ಉಲ್ಲಂಘಿಸಿದ ಅವರು ಅಪಭ್ರಂಶಸ್ಥಿತಿಯನ್ನು ಪಡೆದು ಮಹಾ ಮಾನಸಸರೋವರದ ತೀರದಲ್ಲಿ ವಿಸಂಜ್ಞಿತರಾಗಿ ಬಿದ್ದರು.

19019003a ತಮೇವಾರ್ಥಮನುಧ್ಯಾತೋ ನಷ್ಟಮಪ್ಸ್ವಿವ ಮೋಹಿತಾಃ |

19019003c ಅಪ್ರಾಪ್ಯ ಯೋಗಂ ತೇ ಸರ್ವೇ ಸಂಯುಕ್ತಾಃ ಕಾಲಧರ್ಮಣಾ||

ಆ ಸರೋವರದ ನೀರಿನಲ್ಲಿ ಮುಳುಗುತ್ತಲೇ ಅವರು ಎಲ್ಲರೂ ಯೋಗವನ್ನು ಕಳೆದುಕೊಂಡು ಮೋಹಿತರಾಗಿ ಮನುಷ್ಯರೂಪವನ್ನು ತಳೆದು ಕಾಲಧರ್ಮದಂತೆ ಮರಣಹೊಂದಿದರು.

19019004a ತತಸ್ತೇ ಯೋಗವಿಭ್ರಷ್ಟಾ ದೇವೇಷು ಸುಚಿರೋಷಿತಾಃ |

19019004c ಜಾತಾಃ ಕೌಶಿಕದಾಯಾದಾಃ ಕುರುಕ್ಷೇತ್ರೇ ನರರ್ಷಭಾಃ ||

ದೇವತೆಗಳೊಂದಿಗೆ ದೀರ್ಘಕಾಲ ವಾಸಿಸುತ್ತಿದ್ದ ಆ ನರರ್ಷಭರು ಯೋಗವಿಭ್ರಷ್ಟರಾಗಿ ಕುರುಕ್ಷೇತ್ರದಲ್ಲಿ ಕೌಶಿಕನ ಮಕ್ಕಳಾಗಿ ಹುಟ್ಟುತ್ತಾರೆ.

19019005a ಹಿಂಸಯಾ ವಿಹರಿಷ್ಯಂತೋ ಧರ್ಮಂ ಪಿತೃಕೃತೇನ ವೈ |

19019005c ತತಸ್ತೇ ಪುನರಾಜಾತಿಂ ಭ್ರಷ್ಟಾಃ ಪ್ರಾಪ್ಸ್ಯಂತಿ ಕುತ್ಸಿತಾಮ್ ||

ಪಿತೃಗಳ ಶ್ರಾದ್ಧಧರ್ಮವನ್ನು ನಡೆಸಲು ಹಿಂಸಾಕಾರ್ಯಗಳನ್ನು ಮಾಡುವ ಅವರು ಪುನಃ ಭ್ರಷ್ಟರಾಗಿ ಅವರು ಕುತ್ಸಿತ ಯೋನಿಯಲ್ಲಿ ಜನ್ಮವನ್ನು ತಾಳುತ್ತಾರೆ.

19019006a ತೇಷಾಂ ಪಿತೃಪ್ರಸಾದೇನ ಪೂರ್ವಜಾತಿಕೃತೇನ ವೈ |

19019006c ಸ್ಮೃತಿರುತ್ಪತ್ಸ್ಯತೇ ಪ್ರಾಪ್ಯ ತಾಂ ತಾಂ ಜಾತಿಂ  ಜುಗುಪ್ಸಿತಾಮ್||

ಆದರೆ ಹಿಂದಿನ ಜನ್ಮದಲ್ಲಿ ಮಾಡಿದ ಪಿತೃಗಳ ಪ್ರಸಾದದಿಂದ ಅವರು ಯಾವ ಯಾವ ಜುಗುಪ್ಸಿತ ಜನ್ಮಗಳನ್ನು ಪಡೆದರೂ ಅವರಿಗೆ ಪೂರ್ವಜನ್ಮದ ಸ್ಮೃತಿಯಿರುತ್ತದೆ.

19019007a ತೇ ಧರ್ಮಚಾರಿಣೋ ನಿತ್ಯಂ ಭವಿಷ್ಯಂತಿ ಸಮಾಹಿತಾಃ |

19019007c ಬ್ರಾಹ್ಮಣ್ಯಂ ಪ್ರತಿಲಪ್ಸ್ಯಂತಿ ತತೋ ಭೂಯಃ ಸ್ವಕರ್ಮಣಾ||

ಅವರು ನಿತ್ಯವೂ ಸಮಾಹಿತರಾಗಿದ್ದುಕೊಂಡು ಧರ್ಮಚಾರಿಗಳಾಗಿರುತ್ತಾರೆ. ಅನಂತರ ಸ್ವಕರ್ಮಗಳಿಂದ ಪುನಃ ಬ್ರಾಹ್ಮಣತ್ವವನ್ನು ಪಡೆಯುತ್ತಾರೆ.

19019008a ತತಶ್ಚ ಯೋಗಂ ಪ್ರಾಪ್ಸ್ಯಂತಿ ಪೂರ್ವಜಾತಿಕೃತಂ ಪುನಃ |

19019008c ಭೂಯಃ ಸಿದ್ಧಿಮನುಪ್ರಾಪ್ತಾಃ ಸ್ಥಾನಂ ಪ್ರಾಪ್ಸ್ಯಂತಿ ಶಾಶ್ವತಮ್||

ಹಿಂದಿನ ಜನ್ಮದಲ್ಲಿ ಪಡೆದುಕೊಂಡಿದ್ದ ಯೋಗವನ್ನು ಪುನಃ ಪಡೆದುಕೊಳ್ಳುತ್ತಾರೆ ಮತ್ತು ಸಿದ್ಧಿಯನ್ನು ಪಡೆದುಕೊಂಡು ಮತ್ತೊಮ್ಮೆ ಶಾಶ್ವತ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.

19019009a ಏವಂ ಧರ್ಮೇ ಚ ತೇ ಬುದ್ಧಿರ್ಭವಿಷ್ಯತಿ ಪುನಃ ಪುನಃ |

19019009c ಯೋಗಧರ್ಮೇ ಚ ನಿತರಾಂ ಪ್ರಾಪ್ಸ್ಯಸೇ ಬುದ್ಧಿಮುತ್ತಮಾಮ್||

ಹೀಗೆ ನಿನ್ನ ಬುದ್ಧಿಯೂ ಪುನಃ ಪುನಃ ಧರ್ಮನಿರತವಾಗಿರುತ್ತದೆ. ಮತ್ತು ಯೋಗಧರ್ಮದ ಕುರಿತಾದ ಉತ್ತಮ ಬುದ್ಧಿಯು ಪ್ರಾಪ್ತವಾಗುತ್ತದೆ.

19019010a ಯೋಗೋ ಹಿ ದುರ್ಲಭೋ ನಿತ್ಯಮಲ್ಪಪ್ರಜ್ಞೈಃ ಕದಾಚನ |

19019010c ಲಬ್ಧ್ವಾಪಿ ನಾಶಯಂತ್ಯೇನಂ ವ್ಯಸನೈಃ ಕಟುತಾಮಿತಾಃ |

19019010e ಅಧರ್ಮೇಷ್ವೇವ ವರ್ತಂತೇ ಪ್ರಾರ್ದಯಂತೇ ಗುರೂನಪಿ ||

ಅಲ್ಪಪ್ರಜ್ಞರಿಗೆ ಯೋಗವು ನಿತ್ಯವೂ ದುರ್ಲಭವಾದುದು. ಯಾವಾಗಲಾದರೊಮ್ಮೆ ಅವರಿಗೆ ಅದು ದೊರಕಿದರೂ ವ್ಯಸನಗಳಿಂದ ಕ್ರೂರರಾಗಿ ಅದನ್ನು ನಾಶಗೊಳಿಸಿಕೊಳ್ಳುತ್ತಾರೆ. ಅಧರ್ಮದಲ್ಲಿ ನಡೆದುಕೊಳ್ಳುತ್ತಾರೆ ಮತ್ತು ತಮ್ಮ ಗುರುಗಳನ್ನೂ ಕಷ್ಟಕ್ಕೀಡುಮಾಡುತ್ತಾರೆ.

19019011a ಯಾಚಂತೇ ನ ತ್ವಯಾಚ್ಯಾನಿ ರಕ್ಷಂತಿ ಶರಣಾಗತಾನ್ |

19019011c ನಾವಜಾನಂತಿ ಕೃಪಣಾನ್ಮಾದ್ಯಂತೇ ನ ಧನೋಷ್ಮಣಾ ||

19019012a ಯುಕ್ತಾಹಾರವಿಹಾರಾಶ್ಚ ಯುಕ್ತಚೇಷ್ಟಾಃ ಸ್ವಕರ್ಮಸು |

19019012c ಧ್ಯಾನಾಧ್ಯಯನಯುಕ್ತಾಶ್ಚ ನ ನಷ್ಟಾನುಗವೇಷಿಣಃ ||

19019013a ನೋಪಭೋಗರತಾ ನಿತ್ಯಂ ನ ಮಾಂಸಮಧುಭಕ್ಷಣಾಃ |

19019013c ನ ಚ ಕಾಮಪರಾ ನಿತ್ಯಂ ನ ವಿಪ್ರಾಸೇವಿನಸ್ತಥಾ ||

19019014a ನಾನಾರ್ಯಸಂಕಥಾಸಕ್ತಾ ನಾಲಸ್ಯೋಪಹತಾಸ್ತಥಾ |

19019014c ನಾತ್ಯಂತಮಾನಸಂಸಕ್ತಾ ಗೋಷ್ಠೀಷು ನಿರತಾಸ್ತಥಾ ||

19019015a ಪ್ರಾಪ್ನುವಂತಿ ನರಾ ಯೋಗಂ ಯೋಗೋ ವೈ ದುರ್ಲಭೋ ಭುವಿ |

19019015c ಪ್ರಶಾಂತಾಶ್ಚ ಜಿತಕ್ರೋಧಾ ಮಾನಾಹಂಕಾರವರ್ಜಿತಾಃ ||

ಕೇಳಬಾರದವರಿಂದ ದಾನವನ್ನು ಕೇಳದ, ಶರಣಾಗತರನ್ನು ರಕ್ಷಿಸುವ, ದೀನರನ್ನು ಅವಹೇಳನ ಮಾಡದ, ಸಂಪತ್ತಿನ ಬಿಸಿಯಿಂದ ಮದೋನ್ಮತ್ತರಾಗದ, ಆಹಾರ-ವಿಹಾರಗಳು ಯುಕ್ತವಾಗಿರುವ, ಸ್ವಕರ್ಮಗಳಲ್ಲಿ ಯುಕ್ತರೀತಿಯಲ್ಲಿ ತೊಡಗಿರುವ, ಯುಕ್ತವಾಗಿ ಧ್ಯಾನ-ಅಧ್ಯಯನಗಳಲ್ಲಿ ತೊಡಗಿರುವ, ನಷ್ಟವಾಗಿರುವುದರ ಹಿಂದೆ ಹೋಗದ, ನಿತ್ಯವೂ ಭೋಗರತನಾಗಿರದ, ಮಾಂಸ-ಮದ್ಯಗಳನ್ನು ಸೇವಿಸದ, ಕಾಮಪರರಾಗಿರದ, ನಿತ್ಯವೂ ವಿಪ್ರರ ಸೇವೆಮಾಡುವ, ಅನಾರ್ಯರ ಮಾತುಗಳಲ್ಲಿ ಆಸಕ್ತಿಯಿರದ, ಆಲಸ್ಯವು ಕಾಡದಿರುವ, ಅತ್ಯಂತ ಅಭಿಮಾನವನ್ನಿಟ್ಟುಕೊಂಡಿರದ, ಚಿಂತನ-ಗೋಷ್ಟಿಗಳಲ್ಲಿ ನಿರತನಾಗಿರುವ, ಪ್ರಶಾಂತ, ಜಿತಕ್ರೋಧೀ, ಮಾನ-ಅಹಂಕಾರ ವರ್ಜಿತ ನರನು ಯೋಗವನ್ನು ಹೊಂದುತ್ತಾನೆ. ಏಕೆಂದರೆ ಭುವಿಯಲ್ಲಿ ಯೋಗವು ದುರ್ಲಭವು.

19019016a ಕಲ್ಯಾಣಭಾಜನಂ ಯೇ ತು ತೇ ಭವಂತಿ ಯತವ್ರತಾಃ |

19019016c ಏವಂ ವಿಧಾಸ್ತು ತೇ ತಾತ ಬ್ರಾಹ್ಮಣಾ ಹ್ಯಭವಂಸ್ತದಾ ||

ತಾತ! ಇಂತಹ ಯತವ್ರತರೇ ಕಲ್ಯಾಣಕ್ಕೆ ಪಾತ್ರರಾಗುತ್ತಾರೆ. ಈ ವಿಧದಲ್ಲಿಯೇ ಆ ಭಾರದ್ವಾಜ ಪುತ್ರರು ಬ್ರಾಹ್ಮಣರಾಗಿ ಹುಟ್ಟಿದರು.

19019017a ಸ್ಮರಂತಿ ಹ್ಯಾತ್ಮನೋ ದೋಷಂ ಪ್ರಮಾದಕೃತಮೇವ ತು |

19019017c ಧ್ಯಾನಾಧ್ಯಯನಯುಕ್ತಾಶ್ಚ ಶಾಂತೇ ವರ್ತ್ಮನಿ ಸಂಸ್ಥಿತಾಃ ||

ಅವರು ಪ್ರಮಾದದಿಂದ ತಾವು ಮಾಡಿದ ದೋಷವನ್ನು ಸ್ಮರಿಸಿಕೊಳ್ಳುತ್ತಿರುತ್ತಾರೆ. ಧ್ಯಾನ-ಅಧ್ಯಯನಗಳಲ್ಲಿ ನಿರತರಾಗಿ ಅವರು ಶಾಂತರಾಗಿರುತ್ತಾರೆ.

19019018a ಯೋಗಧರ್ಮಾದ್ಧಿ ಧರ್ಮಜ್ಞ ನ ಧರ್ಮೋಽಸ್ತಿ ವಿಶೇಷವಾನ್|

19019018c ವರಿಷ್ಠಃ ಸರ್ವಧರ್ಮಾಣಾಂ ತಮೇವಾಚರ ಭಾರ್ಗವ ||

ಭಾರ್ಗವ! ಧರ್ಮಜ್ಞ! ಯೋಗಧರ್ಮಕ್ಕಿಂತಲೂ ಶ್ರೇಷ್ಠವಾದ ಧರ್ಮವಿಲ್ಲ ಎಂದು ತಿಳಿದುಕೋ. ಅದು ಸರ್ವಧರ್ಮಗಳಲ್ಲಿ ವರಿಷ್ಠವಾದುದು. ಅದನ್ನೇ ನೀನು ಆಚರಿಸು!

19019019a ಕಾಲಸ್ಯ ಪರಿಣಾಮೇನ ಲಘ್ವಾಹಾರೋ ಜಿತೇಂದ್ರಿಯಃ |

19019019c ತತ್ಪರಃ ಪ್ರಯತಃ ಶ್ರಾದ್ಧೀ ಯೋಗಧರ್ಮಮವಾಪ್ಸ್ಯಸಿ ||

ಶ್ರದ್ಧೆಯಿಂದ ಜಿತೇಂದ್ರಿಯನೂ ಲಘು-ಆಹಾರಿಯೂ ಆಗಿ ಪ್ರಯತ್ನದಲ್ಲಿ ತತ್ಪರನಾಗಿದ್ದರೆ ಕಾಲದ ಪರಿಣಾಮವಾಗಿ ನೀನು ಯೋಗಧರ್ಮವನ್ನು ಪಡೆದುಕೊಳ್ಳುತ್ತೀಯೆ.”

19019020a ಇತ್ಯುಕ್ತ್ವಾ ಭಗವಾಂದೇವಸ್ತತ್ರೈವಾಂತರಧೀಯತ |

19019020c ಅಷ್ಟಾದಶೈವ ವರ್ಷಾಣಿ ತ್ವೇಕಾಹಮಿವ ಮೇಽಭವತ್ ||

ಇದನ್ನು ಹೇಳಿ ಆ ಭಗವಾನನು ಅಲ್ಲಿಯೇ ಅಂತರ್ಧಾನನಾದನು. ಆ ಹದಿನೆಂಟು ವರ್ಷಗಳು ನನಗೆ ಒಂದೇ ದಿನವೆನಿಸಿತು!

19019021a ಉಪಾಸತಸ್ತಂ ದೇವೇಶಂ ವರ್ಷಾಣ್ಯಷ್ಟಾದಶೈವ ಮೇ |

19019021c ಪ್ರಸಾದಾತ್ತಸ್ಯ ದೇವಸ್ಯ ನ ಗ್ಲಾನಿರಭವತ್ತದಾ ||

ಆ ದೇವೇಶನನ್ನು ಹದಿನೆಂಟು ವರ್ಷಗಳ ಕಾಲ ಉಪಾಸನೆಗೈಯುತ್ತಿದ್ದರೂ ಆ ದೇವನ ಪ್ರಸಾದದಿಂದ ನನಗೆ ಆಯಾಸವೆಂಬುದೇ ಆಗಲಿಲ್ಲ.

19019022a ನ ಕ್ಷುತ್ಪಿಪಾಸೇ ಕಾಲಂ ವಾ ಜಾನಾಮಿ ಸ್ಮ ತದಾನಘ |

19019022c ಪಶ್ಚಾಚ್ಛಿಷ್ಯಸಕಾಶಾತ್ತು ಕಾಲಃ ಸಂವಿದಿತೋ ಮಯಾ ||

ಅನಘ! ನನಗೆ ಹಸಿವೆ, ಬಾಯಾರಿಕೆ, ಸಮಯ ಯಾವುದೂ ತಿಳಿಯಲಿಲ್ಲ. ನಂತರ ಶಿಷ್ಯರ ಮೂಲಕ ನನಗೆ ಕಳೆದುಹೋದ ಸಮಯದ ಕುರಿತು ತಿಳಿಯಿತು.”

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಪಿತೃಕಲ್ಪೇ ಏಕೋನವಿಂಶೋಽಧ್ಯಾಯಃ|

Image result for flowers against white background

[1] ಸನತ್ಕುಮಾರನು ಅಂತರ್ಧಾನನಾಗುವ ಪೂರ್ವದಲ್ಲಿ ತನಗೆ ಹೇಳಿದ ಈ ವಿಷಯವನ್ನು ಮಾರ್ಕಂಡೇಯನು ಭೀಷ್ಮನಿಗೆ ಹೇಳುತ್ತಾನೆ.

Comments are closed.