Harivamsha: Chapter 22

ಹರಿವಂಶ: ಹರಿವಂಶ ಪರ್ವ

೨೨

ಶುಚಿವಾಕನು ಸ್ವತಂತ್ರ ಮತ್ತು ಇತರ ಎರಡು ಪಕ್ಷಿಗಳಿಗೆ ಶಾಪವನ್ನಿತ್ತುದು ಮತ್ತು ಸುಮನನು ಪಕ್ಷಿಗಳಿಗೆ ಅನುಗ್ರಹಪೂರ್ವಕ ಶಾಪವಿಮುಕ್ತಿಯನ್ನು ಸೂಚಿಸಿದುದು (೧-೧೧).

ಮಾರ್ಕಂಡೇಯ ಉವಾಚ|  

ತತಸ್ತಂ ಚಕ್ರವಾಕೌ ದ್ವಾವೂಚತುಃ ಸಹಚಾರಿಣೌ |

ಆವಾಂ ತೇ ಸಚಿವೌ ಸ್ಯಾವಸ್ತವ ಪ್ರಿಯಹಿತೈಷಿಣೌ || ೧-೨೨-೧

ಮಾರ್ಕಂಡೇಯನು ಹೇಳಿದನು: “ಆಗ ಜೊತೆಯಲ್ಲಿ ಸಂಚರಿಸುತ್ತಿದ್ದ ಎರಡು ಚಕ್ರವಾಕಗಳು ಅವನಿಗೆ ಹೇಳಿದವು: “ನಾವು ನಿನ್ನ ಪ್ರಿಯ ಮತ್ತು ಹಿತೈಷೀ ಸಚಿವರಾಗುವೆವು!”

ತಥೇತ್ಯುಕ್ತ್ವಾ ಚ ತಸ್ಯಾಸೀತ್ತದಾ ಯೋಗಾತ್ಮಿಕಾ ಮತಿಃ |

ಏವಂ ತೇ ಸಮಯಂ ಚಕ್ರುಃ ಶುಚಿವಾಕ್ತಮುವಾಚ ಹ || ೧-೨೨-೨

ಹಾಗೆಯೇ ಆಗಲೆಂದು ಹೇಳಿ ಅವನು ಯೋಗಧರ್ಮದ ಕುರಿತು ವಿಚಾರಿಸತೊಡಗಿದನು. ಹೀಗೆ ಅವರು ಪರಸ್ಪರರಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲು ಶುಚಿವಾಕನು ಹೇಳಿದನು:

ಯಸ್ಮಾತ್ಕಾಮಪ್ರಧಾನಸ್ತ್ವಂ ಯೋಗಧರ್ಮಮಪಾಸ್ಯ ವೈ |

ಏವಂ ವರಂ ಪ್ರಾರ್ಥಯಸೇ ತಸ್ಮಾದ್ವಾಕ್ಯಂ ನಿಬೋಧ ಮೇ || ೧-೨೨-೩

ಕಾಮಪ್ರಧಾನವಾದ ಇದಕ್ಕೆ ನೀನು ಯೋಗಧರ್ಮವನ್ನು ಉಪಯೋಗಿಸಿ ಈ ವರವನ್ನು ಕೇಳಿಕೊಳ್ಳುತ್ತಿದ್ದೀಯೆ. ಆದುದರಿಂದ ನನ್ನ ಈ ಮಾತನ್ನು ಕೇಳು.

ರಾಜಾ ತ್ವಂ ಭವಿತಾ ತಾತ ಕಾಂಪಿಲ್ಯೇ ನಾತ್ರ ಸಂಶಯಃ |

ಭವಿಷ್ಯತಃ ಸಖಾಯೌ ಚ ದ್ವಾವಿಮೌ ಸಚಿವೌ ತವ || ೧-೨೨-೪

“ಅಯ್ಯಾ! ನೀನು ಕಾಂಪಿಲ್ಯ ನಗರದ ರಾಜನಾಗುವೆ. ಈ ಇಬ್ಬರು ಸಖರೂ ನಿನ್ನ ಸಚಿವರಾಗುತ್ತಾರೆ. ಇದರಲ್ಲಿ ಸಂಶಯವಿಲ್ಲ.”

ಶಪ್ತ್ವಾ ಚಾನಭಿಭಾಷ್ಯಾಂಸ್ತಾಂಚತ್ವಾರಶ್ಚಕ್ರುರಂಡಜಾಃ |

ತಾಂಸ್ತ್ರೀನಭೀಪ್ಸತೋ ರಾಜ್ಯಂ ವ್ಯಭಿಚಾರಪ್ರದರ್ಶಿತಾನ್ || ೧-೨೨-೫

ರಾಜ್ಯವನ್ನು ಬಯಸಿ ತಮ್ಮ ವ್ಯಭಿಚಾರವನ್ನು ಪ್ರದರ್ಶಿಸಿದ ಆ ಮೂರು ಪಕ್ಷಿಗಳನ್ನೂ ಶಪಿಸಿ ಉಳಿದ ನಾಲ್ಕು ಪಕ್ಷಿಗಳು ಅವುಗಳೊಂದಿಗೆ ಮಾತನಾಡುವುದನ್ನೂ ನಿಲ್ಲಿಸಿದವು.

ಶಪ್ತಾಃ ಖಗಾಸ್ತ್ರಯಸ್ತೇ ತು ಯೋಗಭ್ರಷ್ಟಾ ವಿಚೇತಸಃ |

ತಾನಯಾಚಂತ ಚತುರಸ್ತ್ರಯಸ್ತೇ ಸಹಚಾರಿಣಃ || ೧-೨೨-೬

ಶಪಿತರಾದ ಆ ಮೂರು ಪಕ್ಷಿಗಳಾದರೋ ಯೋಗಭ್ರಷ್ಠರಾಗಿ ವಿಚೇತಸಗೊಂಡವು. ಆ ಮೂರು ಪಕ್ಷಿಗಳೂ ಸಹಚಾರಿಗಳಾದ ನಾಲ್ಕು ಪಕ್ಷಿಗಳನ್ನು ಬೇಡಿಕೊಂಡವು.

ತೇಷಾಂ ಪ್ರಸಾದಂ ತೇ ಚಕ್ರುರಥೈತಾನ್ಸುಮನಾಬ್ರವೀತ್ |

ಸರ್ವೇಷಾಮೇವ ವಚನಾತ್ಪ್ರಸಾದಾನುಗತಂ ವಚಃ || ೧-೨೨-೭

ಅವರಮೇಲೆ ಪ್ರಸನ್ನರಾಗಿ ಎಲ್ಲರ ಸಮ್ಮತಿಯಂತೆ ಸುಮನನು ಈ ಅನುಗ್ರಹಪೂರ್ವಕ ಮಾತನ್ನು ಆಡಿದನು:

ಅಂತವಾನ್ಭವಿತಾ ಶಾಪೋ ಯುಷ್ಮಾಕಂ ನಾತ್ರ ಸಂಶಯಃ |

ಇತಶ್ಚ್ಯುತಾಶ್ಚ ಮಾನುಷ್ಯಂ ಪ್ರಾಪ್ಯ ಯೋಗಮವಾಪ್ಸ್ಯಥ || ೧-೨೨-೮

“ನಿಮ್ಮ ಈ ಶಾಪವು ಬೇಗನೇ ಅಂತ್ಯವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲಿಂದ ಯೋಗಭ್ರಷ್ಠರಾಗಿ ಮನುಷ್ಯಯೋನಿಯನ್ನು ಪಡೆದು ನಂತರ ಯೋಗಜ್ಞಾನವನ್ನು ಪಡೆದುಕೊಳ್ಳುವಿರಿ.

ಸರ್ವಸತ್ತ್ವರುತಜ್ಞಶ್ಚ ಸ್ವತಂತ್ರೋಽಯಂ ಭವಿಷ್ಯತಿ |

ಪಿತೃಪ್ರಸಾದೋ ಹ್ಯಸ್ಮಾಭಿರಸ್ಯ ಪ್ರಾಪ್ತಃ ಕೃತೇನ ವೈ || ೧-೨೨-೯

ಗಾಂ ಪ್ರೋಕ್ಷಯಿತ್ವಾ ಧರ್ಮೇಣ ಪಿತೄಭ್ಯ ಉಪಕಲ್ಪ್ಯತಾಮ್ |

ಅಸ್ಮಾಕಂ ಜ್ಞಾನಸಂಯೋಗಃ ಸರ್ವೇಷಾಂ ಯೋಗಸಾಧನಃ || ೧-೨೨-೧೦

ಈ ಸ್ವತಂತ್ರನು ಸರ್ವಜೀವಿಗಳ ಭಾಷೆಯನ್ನು ಅರ್ಥಮಾಡಿಕೊಳ್ಳುವವನಾಗುತ್ತಾನೆ. ಪೂರ್ವಜನ್ಮದಲ್ಲಿ ನಾವು ಇವನ ಮಾತಿನಂತೆ ಮಾಡಿದುದಕ್ಕಾಗಿ ನಮಗೆ ಪಿತೃಗಳ ಕೃಪೆಯು ದೊರಕಿತ್ತು. ಇವನು “ಗೋವಿಗೆ ಪ್ರೋಕ್ಷಣೆ ಮಾಡಿ ಪಿತೃಗಳಿಗೆ ಅರ್ಪಿಸೋಣ” ಎಂದು ಹೇಳಿದ್ದನು. ಅದರಂತೆ ಮಾಡಿದ್ದುದಕ್ಕಾಗಿಯೇ ನಮಗೆ ಎಲ್ಲರಿಗೂ ಯೋಗಸಾಧಕ ಜ್ಞಾನವು ಪ್ರಾಪ್ತವಾಗಿದೆ.

ಇಮಂ ಚ ವಾಕ್ಯಸಂದರ್ಭಶ್ಲೋಕಮೇಕಮುದಾಹೃತಮ್ |

ಪುರುಷಾಂತರಿತಂ ಶ್ರುತ್ವಾ ತತೋ ಯೋಗಮವಾಪ್ಸ್ಯಥ || ೧-೨೨-೧೧

ಆ ಮನುಷ್ಯಜನ್ಮದಲ್ಲಿ ನಿನಗೆ ಮುಂದೆ ಹೇಳುವ ಶ್ಲೋಕವನ್ನು ಸಂದರ್ಭರೂಪದಲ್ಲಿ ಯಾರಾದರೂ ಪುರುಷನು ಹೇಳಿದರೆ ಆಗ ನಿನಗೆ ಮೋಕ್ಷವನ್ನೀಯುವ ಈ ಯೋಗಧರ್ಮವು ಪುನಃ ಪ್ರಾಪ್ತವಾಗುತ್ತದೆ.””

 ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪಿತೃವಾಕ್ಯೇ ದ್ವಾವಿಂಶೋಽಧ್ಯಾಯಃ

Premium Vector | Watercolor painted beautiful blue bird on white background

Comments are closed.