Bhishma Parva: Chapter 63

ಭೀಷ್ಮ ಪರ್ವ: ಭೀಷ್ಮವಧ ಪರ್ವ

೬೩

ದುರ್ಯೋಧನನ ಪ್ರಶ್ನೆಗೆ ಭೀಷ್ಮನು ಹಿಂದೆ ಮಾರ್ಕಂಡೇಯನು ಹೇಳಿದ್ದ ವಾಸುದೇವನ ಆಗಮ-ಪ್ರತಿಷ್ಠೆಗಳ ಕುರಿತು ಹೇಳಿದುದು (೧-೨೧).

06063001 ದುರ್ಯೋಧನ ಉವಾಚ|

06063001a ವಾಸುದೇವೋ ಮಹದ್ಭೂತಂ ಸರ್ವಲೋಕೇಷು ಕಥ್ಯತೇ|

06063001c ತಸ್ಯಾಗಮಂ ಪ್ರತಿಷ್ಠಾಂ ಚ ಜ್ಞಾತುಮಿಚ್ಛೇ ಪಿತಾಮಹ||

ದುರ್ಯೋಧನನು ಹೇಳಿದನು: “ವಾಸುದೇವನು ಮಹಾಭೂತನೆಂದು ಸರ್ವಲೋಕಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಪಿತಾಮಹ! ಅವನ ಆಗಮ ಮತ್ತು ಪ್ರತಿಷ್ಠೆಗಳನ್ನು ತಿಳಿಯಲು ಬಯಸುತ್ತೇನೆ.”

06063002 ಭೀಷ್ಮ ಉವಾಚ|

06063002a ವಾಸುದೇವೋ ಮಹದ್ಭೂತಂ ಸಂಭೂತಂ ಸಹ ದೈವತೈಃ|

06063002c ನ ಪರಂ ಪುಂಡರೀಕಾಕ್ಷಾದ್ದೃಶ್ಯತೇ ಭರತರ್ಷಭ|

06063002e ಮಾರ್ಕಂಡೇಯಶ್ಚ ಗೋವಿಂದಂ ಕಥಯತ್ಯದ್ಭುತಂ ಮಹತ್||

ಭೀಷ್ಮನು ಹೇಳಿದನು: “ಭರತರ್ಷಭ! ವಾಸುದೇವನು ದೇವತೆಗಳೊಂದಿಗೆ ಅವತರಿಸಿದ ಮಹಾಭೂತ. ಪುಂಡರೀಕಾಕ್ಷನಿಗಿಂತಲೂ ಹೆಚ್ಚಿನವನು ಯಾರೂ ಕಾಣುವುದಿಲ್ಲ. ಮಾರ್ಕಂಡೇಯನೂ ಕೂಡ ಗೋವಿಂದನ ಕುರಿತಾದ ಮಹಾ ಅದ್ಭುತವಾದುದನ್ನು ಹೇಳಿದ್ದಾನೆ.

06063003a ಸರ್ವಭೂತಾನಿ ಭೂತಾತ್ಮಾ ಮಹಾತ್ಮಾ ಪುರುಷೋತ್ತಮಃ|

06063003c ಆಪೋ ವಾಯುಶ್ಚ ತೇಜಶ್ಚ ತ್ರಯಮೇತದಕಲ್ಪಯತ್||

“ಭೂತಾತ್ಮ ಮಹಾತ್ಮ ಪುರುಷೋತ್ತಮನು ಸರ್ವಭೂತಗಳನ್ನೂ, ಆಪ-ವಾಯು-ತೇಜಸ್ಸುಗಳನ್ನೂ ಸೃಷ್ಟಿಸಿದನು.

06063004a ಸ ಸೃಷ್ಟ್ವಾ ಪೃಥಿವೀಂ ದೇವಃ ಸರ್ವಲೋಕೇಶ್ವರಃ ಪ್ರಭುಃ|

06063004c ಅಪ್ಸು ವೈ ಶಯನಂ ಚಕ್ರೇ ಮಹಾತ್ಮಾ ಪುರುಷೋತ್ತಮಃ|

06063004e ಸರ್ವತೋಯಮಯೋ ದೇವೋ ಯೋಗಾತ್ಸುಷ್ವಾಪ ತತ್ರ ಹ||

ಆ ದೇವ ಸರ್ವಲೋಕೇಶ್ವರ ಪ್ರಭುವು ಪೃಥ್ವಿಯನ್ನು ಸೃಷ್ಟಿಸಿ ನೀರಿನಲ್ಲಿ ಪವಡಿಸಿದನು. ಆ ಮಹಾತ್ಮ ಪುರುಷೋತ್ತಮನು ಸರ್ವತೋಮಯ ದೇವ ಯೋಗದಿಂದ ಅಲ್ಲಿಯೇ ನಿದ್ರಿತನಾದನು.

06063005a ಮುಖತಃ ಸೋಽಗ್ನಿಮಸೃಜತ್ಪ್ರಾಣಾದ್ವಾಯುಮಥಾಪಿ ಚ|

06063005c ಸರಸ್ವತೀಂ ಚ ವೇದಾಂಶ್ಚ ಮನಸಃ ಸಸೃಜೇಽಚ್ಯುತಃ||

ಅಚ್ಯುತನು ಮುಖದಿಂದ ಅಗ್ನಿಯನ್ನೂ, ಪ್ರಾಣದಿಂದ ವಾಯುವನ್ನೂ, ಮನಸ್ಸಿನಿಂದ ಸರಸ್ವತೀ ಮತ್ತು ವೇದಗಳನ್ನೂ ಸೃಷ್ಟಿಸಿದನು.

06063006a ಏಷ ಲೋಕಾನ್ಸಸರ್ಜಾದೌ ದೇವಾಂಶ್ಚರ್ಷಿಗಣೈಃ ಸಹ|

06063006c ನಿಧನಂ ಚೈವ ಮೃತ್ಯುಂ ಚ ಪ್ರಜಾನಾಂ ಪ್ರಭವೋಽವ್ಯಯಃ||

ಪ್ರಭು ಅವ್ಯಯನು ಆದಿಯಲ್ಲಿ ದೇವ-ಋಷಿಗಣಗಳೊಂದಿಗೆ ಈ ಲೋಕಗಳನ್ನೂ, ನಿಧನ, ಮೃತ್ಯುಗಳನ್ನೂ, ಪ್ರಜೆಗಳನ್ನೂ ಸೃಷ್ಟಿಸಿದನು.

06063007a ಏಷ ಧರ್ಮಶ್ಚ ಧರ್ಮಜ್ಞೋ ವರದಃ ಸರ್ವಕಾಮದಃ|

06063007c ಏಷ ಕರ್ತಾ ಚ ಕಾರ್ಯಂ ಚ ಪೂರ್ವದೇವಃ ಸ್ವಯಂಪ್ರಭುಃ||

ಇವನು ಧರ್ಮ, ಧರ್ಮಜ್ಞ, ವರದ, ಸರ್ವಕಾಮದ. ಇವನು ಕರ್ತನೂ ಕಾರ್ಯನೂ ಹೌದು. ಇವನು ಪೂರ್ವದೇವ. ಸ್ವಯಂ ಪ್ರಭು.

06063008a ಭೂತಂ ಭವ್ಯಂ ಭವಿಷ್ಯಚ್ಚ ಪೂರ್ವಮೇತದಕಲ್ಪಯತ್|

06063008c ಉಭೇ ಸಂಧ್ಯೇ ದಿಶಃ ಖಂ ಚ ನಿಯಮಂ ಚ ಜನಾರ್ದನಃ||

ಜನಾರ್ದನನು ಮೊದಲೇ ಭೂತ, ಭವ್ಯ ಮತ್ತು ಭವಿಷ್ಯಗಳನ್ನು, ಎರಡೂ ಸಂಧ್ಯೆಗಳನ್ನು, ದಿಕ್ಕು, ಆಕಾಶ ಮತ್ತು ನಿಯಮಗಳನ್ನು ಸೃಷ್ಟಿಸಿದನು.

06063009a ಋಷೀಂಶ್ಚೈವ ಹಿ ಗೋವಿಂದಸ್ತಪಶ್ಚೈವಾನು ಕಲ್ಪಯತ್|

06063009c ಸ್ರಷ್ಟಾರಂ ಜಗತಶ್ಚಾಪಿ ಮಹಾತ್ಮಾ ಪ್ರಭುರವ್ಯಯಃ||

ಜಗತ್ತುಗಳ ಸೃಷ್ಟಾರ ಮಹಾತ್ಮಾ ಪ್ರಭು ಅವ್ಯಯ ಗೋವಿಂದನು ಸಪ್ತ‌ಋಷಿಗಳನ್ನೂ ಸೃಷ್ಟಿಸಿದನು.

06063010a ಅಗ್ರಜಂ ಸರ್ವಭೂತಾನಾಂ ಸಂಕರ್ಷಣಮಕಲ್ಪಯತ್|

06063010c ಶೇಷಂ ಚಾಕಲ್ಪಯದ್ದೇವಮನಂತಮಿತಿ ಯಂ ವಿದುಃ||

ಸರ್ವಭೂತಗಳಿಗೂ ಅಗ್ರಜನಾದ ಸಂಕರ್ಷಣನನ್ನು ಸೃಷ್ಟಿಸಿದನು. ಶೇಷ, ದೇವ ಅನಂತನೆಂದು ತಿಳಿಯಲ್ಪಟ್ಟವನನ್ನೂ ಸೃಷ್ಟಿಸಿದನು.

06063011a ಯೋ ಧಾರಯತಿ ಭೂತಾನಿ ಧರಾಂ ಚೇಮಾಂ ಸಪರ್ವತಾಂ|

06063011c ಧ್ಯಾನಯೋಗೇನ ವಿಪ್ರಾಶ್ಚ ತಂ ವದಂತಿ ಮಹೌಜಸಂ||

ಆ ಮಹೌಜಸನು ಧ್ಯಾನಯೋಗದಿಂದ ಪರ್ವತಗಳೊಡನೆ ಈ ಧರೆಯನ್ನೂ ಅದರಲ್ಲಿರುವವುಗಳನ್ನೂ ಹೊರುತ್ತಾನೆಂದು ವಿಪ್ರರು ಹೇಳುತ್ತಾರೆ.

06063012a ಕರ್ಣಸ್ರೋತೋದ್ಭವಂ ಚಾಪಿ ಮಧುಂ ನಾಮ ಮಹಾಸುರಂ|

06063012c ತಮುಗ್ರಮುಗ್ರಕರ್ಮಾಣಮುಗ್ರಾಂ ಬುದ್ಧಿಂ ಸಮಾಸ್ಥಿತಂ|

06063012e ಬ್ರಹ್ಮಣೋಽಪಚಿತಿಂ ಕುರ್ವನ್ಜಘಾನ ಪುರುಷೋತ್ತಮಃ||

ಅವನ ಕಿವಿಯ ಮಲದಿಂದ ಮಧು ಎಂಬ ಹೆಸರಿನ ಮಹಾಸುರನು ಉದ್ಭವಿಸಿದನು. ಉಗ್ರಕರ್ಮಿಯೂ ಉಗ್ರ ಬುದ್ಧಿಯುಳ್ಳವನೂ ಆಗಿದ್ದ ಅವನನ್ನು ಉಗ್ರ ಪುರುಷೋತ್ತಮನು ಬ್ರಹ್ಮನನ್ನು ಸಂತೈಸಿ ಕೊಂದನು.

06063013a ತಸ್ಯ ತಾತ ವಧಾದೇವ ದೇವದಾನವಮಾನವಾಃ|

06063013c ಮಧುಸೂದನಮಿತ್ಯಾಹುರೃಷಯಶ್ಚ ಜನಾರ್ದನಂ|

ಮಗೂ! ಅವನ ವಧೆಯಿಂದಾಗಿ ಜನಾರ್ದನನನ್ನು ದೇವ-ದಾನವ-ಮಾನವರೂ, ಋಷಿಗಳೂ ಮಧುಸೂದನನೆಂದು ಕರೆಯುತ್ತಾರೆ.

06063013e ವರಾಹಶ್ಚೈವ ಸಿಂಹಶ್ಚ ತ್ರಿವಿಕ್ರಮಗತಿಃ ಪ್ರಭುಃ||

06063014a ಏಷ ಮಾತಾ ಪಿತಾ ಚೈವ ಸರ್ವೇಷಾಂ ಪ್ರಾಣಿನಾಂ ಹರಿಃ|

06063014c ಪರಂ ಹಿ ಪುಂಡರೀಕಾಕ್ಷಾನ್ನ ಭೂತಂ ನ ಭವಿಷ್ಯತಿ||

ಪ್ರಭುವು ವರಾಹ, ಸಿಂಹ ಮತ್ತು ತ್ರಿವಿಕ್ರಮ ಗತಿ. ಈ ಹರಿಯು ಸರ್ವ ಪ್ರಾಣಿಗಳ ಮಾತಾ ಪಿತನು. ಪುಂಡರೀಕಾಕ್ಷನಿಗಿಂತಲೂ ಹೆಚ್ಚಿನದು ಹಿಂದಿರಲಿಲ್ಲ. ಮುಂದೆ ಇರುವುದೂ ಇಲ್ಲ.

06063015a ಮುಖತೋಽಸೃಜದ್ಬ್ರಾಹ್ಮಣಾನ್ಬಾಹುಭ್ಯಾಂ ಕ್ಷತ್ರಿಯಾಂಸ್ತಥಾ|

06063015c ವೈಶ್ಯಾಂಶ್ಚಾಪ್ಯೂರುತೋ ರಾಜನ್ಶೂದ್ರಾನ್ಪದ್ಭ್ಯಾಂ ತಥೈವ ಚ|

ರಾಜನ್! ಮುಖದಿಂದ ಬ್ರಾಹ್ಮಣರನ್ನೂ, ಬಾಹುಗಳಿಂದ ಕ್ಷತ್ರಿಯರನ್ನೂ, ತೊಡೆಗಳಿಂದ ವೈಶ್ಯರನ್ನೂ, ಪಾದಗಳಿಂದ ಶೂದ್ರರನ್ನೂ ಸೃಷ್ಟಿಸಿದನು.

06063015e ತಪಸಾ ನಿಯತೋ ದೇವೋ ನಿಧಾನಂ ಸರ್ವದೇಹಿನಾಂ||

06063016a ಬ್ರಹ್ಮಭೂತಮಮಾವಾಸ್ಯಾಂ ಪೌರ್ಣಮಾಸ್ಯಾಂ ತಥೈವ ಚ|

06063016c ಯೋಗಭೂತಂ ಪರಿಚರನ್ಕೇಶವಂ ಮಹದಾಪ್ನುಯಾತ್||

ತಪಸ್ಸಿನಿಂದ ನಿಯತನಾಗಿ ಅಮವಾಸ್ಯೆ ಪೌರ್ಣಿಮೆಗಳಲ್ಲಿ ಸರ್ವದೇಹಿಗಳ ನಿಧಾನ, ಬ್ರಹ್ಮಭೂತ, ಯೋಗಭೂತ, ಕೇಶವನನ್ನು ಪರಿಚರಿಸಿ ಮಹತ್ತರ ಫಲವನ್ನು ಪಡೆಯಬಹುದು.

06063017a ಕೇಶವಃ ಪರಮಂ ತೇಜಃ ಸರ್ವಲೋಕಪಿತಾಮಹಃ|

06063017c ಏವಮಾಹುರ್ಹೃಷೀಕೇಶಂ ಮುನಯೋ ವೈ ನರಾಧಿಪ||

ನರಾಧಿಪ! ಕೇಶವನು ಪರಮ ತೇಜಸ್ವಿ. ಸರ್ವಲೋಕಪಿತಾಮಹ. ಮುನಿಗಳು ಇವನನ್ನು ಹೃಷೀಕೇಶ ಎಂದೂ ಕರೆಯುತ್ತಾರೆ.

06063018a ಏವಮೇನಂ ವಿಜಾನೀಹಿ ಆಚಾರ್ಯಂ ಪಿತರಂ ಗುರುಂ|

06063018c ಕೃಷ್ಣೋ ಯಸ್ಯ ಪ್ರಸೀದೇತ ಲೋಕಾಸ್ತೇನಾಕ್ಷಯಾ ಜಿತಾಃ||

ಇವನನ್ನೇ ಆಚಾರ್ಯ, ಗುರು, ತಂದೆಯೆಂದು ಭಾವಿಸು. ಕೃಷ್ಣನು ಯಾರಿಗೆ ಪ್ರಸನ್ನನಾಗುತ್ತಾನೋ ಅವನು ಅಕ್ಷಯ ಲೋಕಗಳನ್ನು ಗೆಲ್ಲಬಹುದು.

06063019a ಯಶ್ಚೈವೈನಂ ಭಯಸ್ಥಾನೇ ಕೇಶವಂ ಶರಣಂ ವ್ರಜೇತ್|

06063019c ಸದಾ ನರಃ ಪಠಂಶ್ಚೇದಂ ಸ್ವಸ್ತಿಮಾನ್ಸ ಸುಖೀ ಭವೇತ್||

ಭಯಸ್ಥಾನದಲ್ಲಿರುವವರು ಕೇಶವನಲ್ಲಿ ಶರಣು ಹೊಗಬೇಕು. ಇದನ್ನು ಸದಾ ಪಠಿಸುವ ನರನು ಸ್ವಸ್ತಿಮಾನನೂ ಸುಖಿಯೂ ಆಗುತ್ತಾನೆ.

06063020a ಯೇ ಚ ಕೃಷ್ಣಂ ಪ್ರಪದ್ಯಂತೇ ತೇ ನ ಮುಹ್ಯಂತಿ ಮಾನವಾಃ|

06063020c ಭಯೇ ಮಹತಿ ಯೇ ಮಗ್ನಾಃ ಪಾತಿ ನಿತ್ಯಂ ಜನಾರ್ದನಃ||

ಯಾರು ಕೃಷ್ಣನಿಗೆ ಮೊರೆಹೋಗುತ್ತಾರೋ ಆ ಮಾನವರು ಮೋಹಗೊಳ್ಳುವುದಿಲ್ಲ. ಮಹಾಭಯದಲ್ಲಿ ಮುಳುಗಿರುವವರನ್ನೂ ಜನಾರ್ದನನು ನಿತ್ಯವೂ ಉದ್ಧರಿಸುತ್ತಾನೆ.”

06063021a ಏತದ್ಯುಧಿಷ್ಠಿರೋ ಜ್ಞಾತ್ವಾ ಯಾಥಾತಥ್ಯೇನ ಭಾರತ|

06063021c ಸರ್ವಾತ್ಮನಾ ಮಹಾತ್ಮಾನಂ ಕೇಶವಂ ಜಗದೀಶ್ವರಂ|

06063021e ಪ್ರಪನ್ನಃ ಶರಣಂ ರಾಜನ್ಯೋಗಾನಾಮೀಶ್ವರಂ ಪ್ರಭುಂ||

ಭಾರತ! ರಾಜನ್! ಯುಧಿಷ್ಠಿರನು ಇದನ್ನು ಇದ್ದಹಾಗೆ ತಿಳಿದುಕೊಂಡೇ ಸರ್ವಾತ್ಮಭಾವದಿಂದ ಈ ಮಹಾತ್ಮ, ಕೇಶವ, ಜಗದೀಶ್ವರ, ಯೋಗಗಳ ಈಶ್ವರ ಪ್ರಭು ಶರಣನನ್ನು ಮೊರೆಹೊಕ್ಕಿದ್ದಾನೆ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ವಿಶ್ವೋಪಾಖ್ಯಾನೇ ತ್ರಿಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ವಿಶ್ವೋಪಾಖ್ಯಾನ ಎನ್ನುವ ಅರವತ್ಮೂರನೇ ಅಧ್ಯಾಯವು.

Image result for flowers against white background

Comments are closed.