Bhishma Parva: Chapter 32

ಭೀಷ್ಮ ಪರ್ವ:ಭಗವದ್ಗೀತಾ ಪರ್ವ

೩೨

ವಿಭೂತಿ ಯೋಗ

Related image06032001 ಶ್ರೀಭಗವಾನುವಾಚ|

06032001a ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ|

06032001c ಯತ್ತೇಽಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ||

ಶ್ರೀಭಗವಾನನು ಹೇಳಿದನು: “ಮಹಾಬಾಹೋ! ನನ್ನ ಪರಮ ವಚನವನ್ನು ಇನ್ನೂ ಕೇಳು. ನಿನ್ನ ಹಿತವನ್ನು ಬಯಸಿ, ನಿನಗೆ ಒಳ್ಳೆಯದಾಗಲು ಇದನ್ನು ಹೇಳುತ್ತಿದ್ದೇನೆ.

06032002a ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ|

06032002c ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ||

ನನ್ನ ಪ್ರಭವವನ್ನು ಸುರಗಣಗಳಾಗಲೀ ಮಹರ್ಷಿಗಳಾಗಲೀ ಅರಿಯರು. ಏಕೆಂದರೆ ದೇವತೆಗಳು ಮತ್ತು ಮಹರ್ಷಿಗಳು ಎಲ್ಲರಿಗೂ ನಾನೇ ಆದಿ.

06032003a ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಂ|

06032003c ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ||

ಯಾರು ನನ್ನನ್ನು ಅಜ, ಅನಾದಿ, ಮತ್ತು ಲೋಕಮಹೇಶ್ವರನೆಂದು ತಿಳಿದುಕೊಳ್ಳುತ್ತಾರೋ ಅವರು ಮರ್ತ್ಯರಲ್ಲಿ ಅಸಮ್ಮೂಢರಾಗಿ ಸರ್ವಪಾಪಗಳಿಂದ ವಿಮುಕ್ತರಾಗುತ್ತಾರೆ.

06032004a ಬುದ್ಧಿರ್ಜ್ಞಾನಮಸಮ್ಮೋಹಃ ಕ್ಷಮಾ ಸತ್ಯಂ ದಮಃ ಶಮಃ|

06032004c ಸುಖಂ ದುಃಖಂ ಭವೋಽಭಾವೋ ಭಯಂ ಚಾಭಯಮೇವ ಚ||

06032005a ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋಽಯಶಃ|

06032005c ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ವಿಧಾಃ||

ಬುದ್ಧಿ, ಜ್ಞಾನ, ಅಸಮ್ಮೋಹ, ಕ್ಷಮೆ, ಸತ್ಯ, ದಮ, ಶಮ, ಸುಖ, ದುಃಖ, ಭವ, ಅಭಾವ, ಭಯ, ಅಭಯ, ಅಹಿಂಸಾ, ಸಮತಾ, ತುಷ್ಟಿ, ತಪಸ್ಸು, ದಾನ, ಯಶಸ್ಸು, ಅಯಶಸ್ಸು, ಆಗುವವು, ಆಗುತ್ತಿರುವವು, ಮತ್ತು ಆಗಿಹೋಗಿರುವವು, ಇವೆಲ್ಲವೂ ನನ್ನಿಂದಲೇ ಆಗುವವು.

06032006a ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ|

06032006c ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ||

ಹಿಂದಿನ ಏಳು ಮಹರ್ಷಿಗಳೂ, ನಾಲ್ಕು ಮನುಗಳೂ ನನ್ನ  ಭಾವದಿಂದ ಮಾನಸರಾಗಿ ಹುಟ್ಟಿದರು. ಲೋಕಗಳಲ್ಲಿರುವ ಈ ಪ್ರಜೆಗಳು ಅವರದ್ದು.

06032007a ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ|

06032007c ಸೋಽವಿಕಂಪೇನ ಯೋಗೇನ ಯುಜ್ಯತೇ ನಾತ್ರ ಸಂಶಯಃ||

ನನ್ನ ಈ ವಿಭೂತಿಯೋಗವನ್ನು ಯಾರು ತತ್ತ್ವತವಾಗಿ ತಿಳಿದುಕೊಳ್ಳುತ್ತಾನೋ ಅವನು ಅವಿಕಂಪ ಯೋಗದಿಂದ ಯುಕ್ತನಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

06032008a ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ|

06032008c ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾಃ||

ನಾನು ಎಲ್ಲದರ ಪ್ರಭು. ನನ್ನಿಂದ ಎಲ್ಲವೂ ನಡೆಯುತ್ತದೆ. ಹೀಗೆಂದು ತಿಳಿದು ಭಾವಸಮನ್ವಿತರಾದ ಬುಧರು ನನ್ನನ್ನು ಭಜಿಸುತ್ತಾರೆ.

06032009a ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತಃ ಪರಸ್ಪರಂ|

06032009c ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ||

ನನ್ನಲ್ಲೇ ಚಿತ್ತವನ್ನಿರಿಸಿ, ನನ್ನಲ್ಲಿಯೇ ಪ್ರಾಣವನ್ನು ಇಟ್ಟು, ಪರಸ್ಪರರಿಗೆ ಬೋಧಿಸುತ್ತಾ, ನಿತ್ಯವೂ ನನ್ನ ಕುರಿತು ಮಾತನಾಡುತ್ತಾ ತೃಪ್ತರಾಗಿ ರಮಿಸುತ್ತಾರೆ.

06032010a ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಂ|

06032010c ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ||

ಸತತಯುಕ್ತರಾಗಿ ಪ್ರೀತಿಪೂರ್ವಕವಾಗಿ ಭಜಿಸುವ ಅವರಿಗೆ ನಾನು ಈ ಬುದ್ಧಿಯೋಗವನ್ನು ಕೊಡುತ್ತೇನೆ. ಅದರಿಂದ ಅವರು ನನ್ನನ್ನೇ ಸೇರುವರು.

06032011a ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ|

06032011c ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ||

ಅವರ ಮೇಲಿನ ಅನುಕಂಪದಿಂದಾಗಿ ನಾನು ಅಜ್ಞಾನದಿಂದ ಹುಟ್ಟಿರುವ ಕತ್ತಲೆಯನ್ನು ಬೆಳಗುತ್ತಿರುವ ಜ್ಞಾನದೀಪದಿಂದ ಆತ್ಮಭಾವದಲ್ಲಿದ್ದುಕೊಂಡು ನಾಶಗೊಳಿಸುತ್ತೇನೆ.”

06032012 ಅರ್ಜುನ ಉವಾಚ|

06032012a ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್|

06032012c ಪುರುಷಂ ಶಾಶ್ವತಂ ದಿವ್ಯಮಾದಿದೇವಮಜಂ ವಿಭುಂ||

06032013a ಆಹುಸ್ತ್ವಾಂ ಋಷಯಃ ಸರ್ವೇ ದೇವರ್ಷಿರ್ನಾರದಸ್ತಥಾ|

06032013c ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ||

ಅರ್ಜುನನು ಹೇಳಿದನು: “ನೀನು ಪರಬ್ರಹ್ಮ, ಪರಂಧಾಮ, ಪರಮ ಪವಿತ್ರ, ಪುರುಷ, ಶಾಶ್ವತ, ದಿವ್ಯ, ಆದಿದೇವ, ಅಜ, ವಿಭು ಎಂದು ಎಲ್ಲ ಋಷಿಗಳೂ, ದೇವರ್ಷಿ ನಾರದನೂ, ಅಸಿತ ದೇವಲನೂ, ವ್ಯಾಸನೂ ಹೇಳುತ್ತಾರೆ. ಅದನ್ನೇ ಸ್ವತಃ ನೀನೂ ಕೂಡ ನನಗೆ ಹೇಳುತ್ತಿದ್ದೀಯೆ.

06032014a ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ|

06032014c ನ ಹಿ ತೇ ಭಗವನ್ವ್ಯಕ್ತಿಂ ವಿದುರ್ದೇವಾ ನ ದಾನವಾಃ||

ಕೇಶವ! ನೀನು ಹೇಳುತ್ತಿರುವುದೆಲ್ಲವನ್ನೂ ನಾನು ನಿಜವೆಂದೇ ತಿಳಿಯುತ್ತೇನೆ. ಭಗವನ್! ನಿನ್ನ ವ್ಯಕ್ತಿತ್ವವನ್ನು ದೇವ-ದಾನವರೂ ತಿಳಿಯಲಾರರು.

06032015a ಸ್ವಯಮೇವಾತ್ಮನಾತ್ಮಾನಂ ವೇತ್ಥ ತ್ವಂ ಪುರುಷೋತ್ತಮ|

06032015c ಭೂತಭಾವನ ಭೂತೇಶ ದೇವದೇವ ಜಗತ್ಪತೇ||

ಪುರುಷೋತ್ತಮ! ಭೂತಭಾವನ! ಭೂತೇಶ! ದೇವದೇವ! ಜಗತ್ಪತೇ! ಸ್ವಯಂ ನೀನೇ ನಿನ್ನಿಂದಲೇ ನಿನ್ನನ್ನು ತಿಳಿದುಕೊಂಡಿದ್ದೀಯೆ.

06032016a ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ|

06032016c ಯಾಭಿರ್ವಿಭೂತಿಭಿರ್ಲೋಕಾನಿಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ||

ನಿನ್ನ ದಿವ್ಯ ವಿಭೂತಿಗಳನ್ನು ಒಂದನ್ನೂ ಬಿಡದೇ ಹೇಳಬೇಕು. ಯಾವ ವಿಭೂತಿಗಳಿಂದ ನೀನು ಈ ಲೋಕಗಳನ್ನು ವ್ಯಾಪಿಸಿರುವೆಯೋ ಅವುಗಳನ್ನು ಹೇಳು.

06032017a ಕಥಂ ವಿದ್ಯಾಮಹಂ ಯೋಗಿಂಸ್ತ್ವಾಂ ಸದಾ ಪರಿಚಿಂತಯನ್|

06032017c ಕೇಷು ಕೇಷು ಚ ಭಾವೇಷು ಚಿಂತ್ಯೋಽಸಿ ಭಗವನ್ಮಯಾ||

ಯೋಗಿ! ಸದಾ ನಿನ್ನನ್ನೇ ಚಿಂತಿಸುತ್ತಾ ನಾನು ಹೇಗೆ ನಿನ್ನನ್ನು ತಿಳಿಯಬಲ್ಲೆ? ಭಗವನ್! ಯಾವ ಯಾವ ಭಾವಗಳಿಂದ ನಿನ್ನನ್ನು ನಾನು ಚಿಂತಿಸಬೇಕು?

06032018a ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ದನ|

06032018c ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇಽಮೃತಂ||

ಜನಾರ್ದನ! ನಿನ್ನ ಯೋಗವನ್ನೂ ವಿಭೂತಿಯನ್ನು ಇನ್ನೂ ವಿಸ್ತಾರವಾಗಿ ಹೇಳು. ಈ ಅಮೃತವನ್ನು ಕೇಳಿದಷ್ಟೂ ನನಗೆ ತೃಪ್ತಿಯಾಗುತ್ತಿಲ್ಲ.”

06032019 ಶ್ರೀಭಗವಾನುವಾಚ|

06032019a ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ|

06032019c ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ||

ಶ್ರೀ ಭಗವಾನನು ಹೇಳಿದನು: “ಕುರುಶ್ರೇಷ್ಠ! ಇಗೋ ನನ್ನ ದಿವ್ಯವಾದ ಪ್ರಧಾನ ವಿಭೂತಿಗಳನ್ನು ಹೇಳುತ್ತೇನೆ. ನನ್ನ ವಿಸ್ತಾರಕ್ಕೆ ಅಂತ್ಯವೆನ್ನುವುದೇ ಇಲ್ಲ.

06032020a ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ|

06032020c ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ||

ಗುಡಾಕೇಶ! ನಾನು ಸರ್ವಭೂತಗಳಲ್ಲಿ ನೆಲೆಸಿರುವ ಆತ್ಮ. ನಾನು ಭೂತಗಳ ಆದಿ, ಮಧ್ಯ ಮತ್ತು ಅಂತವೂ ಕೂಡ.

06032021a ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್|

06032021c ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ||

ಆದಿತ್ಯರಲ್ಲಿ ನಾನು ವಿಷ್ಣು. ಜ್ಯೋತಿಷಗಳಲ್ಲಿ ಅಂಶುಮಾನ್ ರವಿ. ಮರೀಚಿಗಳಲ್ಲಿ ಮರುತ. ನಕ್ಷತ್ರಗಳಲ್ಲಿ ನಾನು ಶಶಿ.

06032022a ವೇದಾನಾಂ ಸಾಮವೇದೋಽಸ್ಮಿ ದೇವಾನಾಮಸ್ಮಿ ವಾಸವಃ|

06032022c ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ||

ವೇದಗಳಲ್ಲಿ ಸಾಮವೇದನಾಗಿರುವೆ. ದೇವತೆಗಳಲ್ಲಿ ವಾಸವನಾಗಿರುವೆ. ಇಂದ್ರಿಯಗಳಲ್ಲಿ ಮನಸ್ಸಾಗಿರುವೆ. ಭೂತಗಳಲ್ಲಿ ಚೇತನನಾಗಿರುವೆ.

06032023a ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಂ|

06032023c ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಂ||

ರುದ್ರರಲ್ಲಿ ಶಂಕರನಾಗಿರುವೆ ಮತ್ತು ಧನವಂತರಲ್ಲಿ ಯಕ್ಷರಕ್ಷಕನಾಗಿರುವೆ. ವಸುಗಳಲ್ಲಿ ಪಾವಕನಾಗಿರುವೆ ಮತ್ತು ಶಿಖರಗಳಲ್ಲಿ ನಾನು ಮೇರು.

06032024a ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಂ|

06032024c ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ||

ಪಾರ್ಥ! ರಾಜಪುರೋಹಿತರಲ್ಲಿ ನಾನು ಮುಖ್ಯನಾದ ಬೃಹಸ್ಪತಿಯೆಂದು ತಿಳಿ. ಸೇನಾನಿಗಳಲ್ಲಿ ನಾನು ಸ್ಕಂದ. ಸರಸಗಳಲ್ಲಿ ಸಾಗರನಾಗಿರುವೆ.

06032025a ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಂ|

06032025c ಯಜ್ಞಾನಾಂ ಜಪಯಜ್ಞೋಽಸ್ಮಿ ಸ್ಥಾವರಾಣಾಂ ಹಿಮಾಲಯಃ||

ಮಹರ್ಷಿಗಳಲ್ಲಿ ನಾನು ಭೃಗು. ಮಾತಿನಲ್ಲಿ ನಾನು ಏಕಾಕ್ಷರ. ಯಜ್ಞಗಳಲ್ಲಿ ಜಪಯಜ್ಞನಾಗಿರುವೆ. ಸ್ಥಾವರಗಳಲ್ಲಿ ಹಿಮಾಲಯ.

06032026a ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದ|

06032026c ಗಂಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ||

ವೃಕ್ಷಗಳೆಲ್ಲವುಗಳಲ್ಲಿ ನಾನು ಅಶ್ವತ್ಥ, ದೇವರ್ಷಿಗಳಲ್ಲಿ ನಾರದ, ಗಂಧರ್ವರಲ್ಲಿ ಚಿತ್ರರಥ ಮತ್ತು ಸಿದ್ಧರಲ್ಲಿ ಕಪಿಲ ಮುನಿ.

06032027a ಉಚ್ಛೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಂ|

06032027c ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಂ||

ಅಶ್ವಗಳಲ್ಲಿ ನಾನು ಅಮೃತೋದ್ಭವ ಉಚ್ಛೈಶ್ರವಸ್ಸೆಂದು ತಿಳಿ. ಗಜೇಂದ್ರಗಳಲ್ಲಿ ಐರಾವತ ಮತ್ತು ನರರಲ್ಲಿ ನರಾಧಿಪ.

06032028a ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್|

06032028c ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ||

ಆಯುಧಗಳಲ್ಲಿ ನಾನು ವಜ್ರ. ಧೇನುಗಳಲ್ಲಿ ಕಾಮಧೇನು. ಪ್ರಜನ ಕಂದರ್ಪನೂ ಆಗಿರುವೆ. ಸರ್ಪಗಳಲ್ಲಿ ವಾಸುಕಿ.

06032029a ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಂ|

06032029c ಪಿತೄಣಾಮರ್ಯಮಾ ಚಾಸ್ಮಿ ಯಮಃ ಸಮ್ಯಮತಾಮಹಂ||

ನಾಗಗಳಲ್ಲಿ ಅನಂತನಾಗಿರುವೆ. ಯಾದಸರಲ್ಲಿ ನಾನು ವರುಣ. ಪಿತೃಗಳಲ್ಲಿ ಆರ್ಯಮ ಮತ್ತು ಸಂಯಮತರಲ್ಲಿ ನಾನು ಯಮ.

06032030a ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಂ|

06032030c ಮೃಗಾಣಾಂ ಚ ಮೃಗೇಂದ್ರೋಽಹಂ ವೈನತೇಯಶ್ಚ ಪಕ್ಷಿಣಾಂ||

ದೈತ್ಯರಲ್ಲಿ ಪ್ರಹ್ಲಾದನಾಗಿರುವೆ. ಎಣಿಸುವವರಲ್ಲಿ ನಾನು ಕಾಲ. ಮೃಗಗಳಲ್ಲಿ ಮೃಗೇಂದ್ರನು ನಾನು ಮತ್ತು ಪಕ್ಷಿಗಳಲ್ಲಿ ವೈನತೇಯ.

06032031a ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಂ|

06032031c ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ||

ಪವತಾಮರಲ್ಲಿ ಪವನನಾಗಿರುವೆ. ಶಸ್ತ್ರಭೃತರಲ್ಲಿ ರಾಮನು ನಾನು. ಝುಷಗಳಲ್ಲಿ ಮಕರನಾಗಿರುವೆ. ಹರಿಯುವುಗಳಲ್ಲಿ ಜಾಹ್ನವಿಯಾಗಿರುವೆ.

06032032a ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ|

06032032c ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಂ||

ಅರ್ಜುನ! ಸರ್ಗಗಳಿಗೆ ಆದಿ, ಮಧ್ಯ ಮತ್ತು ಅಂತ್ಯವೂ ನಾನೇ. ವಿದ್ಯೆಗಳಲ್ಲಿ ಆಧ್ಯಾತ್ಮವಿದ್ಯೆಯು ನಾನು. ಪ್ರವದತರಲ್ಲಿ ವಾದವು ನಾನು.

06032033a ಅಕ್ಷರಾಣಾಮಕಾರೋಽಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ|

06032033c ಅಹಮೇವಾಕ್ಷಯಃ ಕಾಲೋ ಧಾತಾಹಂ ವಿಶ್ವತೋಮುಖಃ||

ಅಕ್ಷರಗಳಲ್ಲಿ ಅಕಾರನಾಗಿದ್ದೇನೆ. ಸಾಮಾಸಿಕದಲ್ಲಿ ದ್ವಂದ್ವವೂ ಆಗಿದ್ದೇನೆ. ನಾನೇ ಅಕ್ಷಯವಾದ ಕಾಲ. ವಿಶ್ವತೋಮುಖ ಧಾತನು ನಾನು.

06032034a ಮೃತ್ಯುಃ ಸರ್ವಹರಶ್ಚಾಹಂ ಉದ್ಭವಶ್ಚ ಭವಿಷ್ಯತಾಂ|

06032034c ಕೀರ್ತಿಃ ಶ್ರೀರ್ವಾಕ್ಚ ನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ||

ಸರ್ವಹರರಲ್ಲಿ ನಾನು ಮೃತ್ಯು. ಮುಂದೆ‌ ಆಗುವವುಗಳಿಗೆ ಉದ್ಭವವು ನಾನು. ನಾರಿಯರ ಕೀರ್ತಿ, ಶ್ರೀ, ವಾಕ್ಕು, ಸ್ಮೃತಿ, ಮೇಧಾ, ಧೃತಿ ಮತ್ತು ಕ್ಷಮೆಯು ನಾನು.

06032035a ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಚಂದಸಾಮಹಂ|

06032035c ಮಾಸಾನಾಂ ಮಾರ್ಗಶೀರ್ಷೋಽಹಂ ಋತೂನಾಂ ಕುಸುಮಾಕರಃ||

ಹಾಗೆಯೇ ಸಾಮಗಳಲ್ಲಿ ಬೃಹತ್ಸಾಮವು. ಛಂಧಸ್ಸುಗಳಲ್ಲಿ ಗಾಯತ್ರಿಯು ನಾನು. ಮಾಸಗಳಲ್ಲಿ ನಾನು ಮಾರ್ಗಶೀರ್ಷ. ಋತುಗಳಲ್ಲಿ ಕುಸುಮಾಕರನು.

06032036a ದ್ಯೂತಂ ಚಲಯತಾಮಸ್ಮಿ ತೇಜಸ್ತೇಜಸ್ವಿನಾಮಹಂ|

06032036c ಜಯೋಽಸ್ಮಿ ವ್ಯವಸಾಯೋಽಸ್ಮಿ ಸತ್ತ್ವಂ ಸತ್ತ್ವವತಾಮಹಂ||

ಛಲವನ್ನುಂಟುಮಾಡುವವುಗಳಲ್ಲಿ ದ್ಯೂತವು ನಾನು. ತೇಜಸ್ವಿಗಳಲ್ಲಿರುವ ತೇಜಸ್ಸು ನಾನು. ವ್ಯವಸಾಯಗಳಲ್ಲಿ ಜಯನಾಗಿರುವೆನು ಮತ್ತು ಸತ್ತ್ವವತರಲ್ಲಿರುವ ಸತ್ತ್ವವು ನಾನೇ.

06032037a ವೃಷ್ಣೀನಾಂ ವಾಸುದೇವೋಽಸ್ಮಿ ಪಾಂಡವಾನಾಂ ಧನಂಜಯಃ|

06032037c ಮುನೀನಾಮಪ್ಯಹಂ ವ್ಯಾಸಃ ಕವೀನಾಂ ಉಶನಾ ಕವಿಃ||

ವೃಷ್ಣಿಗಳಲ್ಲಿ ವಾಸುದೇವನಾಗಿರುವೆ. ಪಾಂಡವರಲ್ಲಿ ಧನಂಜಯ. ಮುನಿಗಳಲ್ಲಿ ನಾನು ವ್ಯಾಸ, ಮತ್ತು ಕವಿಗಳಲ್ಲಿ ಉಶನಾ ಕವಿ.

06032038a ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಂ|

06032038c ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಂ||

ದಮನ ಮಾಡುವವರಲ್ಲಿ ದಂಡನಾಗಿರುವೆನು. ಜಿಗೀಷುಗಳಲ್ಲಿ (ಗೆಲ್ಲಬೇಕೆಂದಿರುವವರಲ್ಲಿ) ನೀತಿಯಾಗಿರುವೆನು. ಗುಹ್ಯರಲ್ಲಿ ಮೌನವಾಗಿರುವೆನು. ಜ್ಞಾನಿಗಳಲ್ಲಿರುವ ಜ್ಞಾನವೇ ನಾನು.

06032039a ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ|

06032039c ನ ತದಸ್ತಿ ವಿನಾ ಯತ್ಸ್ಯಾನ್ಮಯಾ ಭೂತಂ ಚರಾಚರಂ||

ಅರ್ಜುನ! ಸರ್ವಭೂತಗಳಿಗೂ ಬೀಜವು ಯಾವುದೋ ಅದು ನಾನು. ನಾನಿಲ್ಲದೇ ಇರುವ ಭೂತ ಚರಾಚರಗಳ್ಯಾವುವೂ ಇಲ್ಲ.

06032040a ನಾಂತೋಽಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ|

06032040c ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ||

ಪರಂತಪ! ನನ್ನ ದಿವ್ಯ ವಿಭೂತಿಗಳಿಗೆ ಅಂತವಿಲ್ಲ. ಆದರೆ ಈ ವಿಭೂತಿಯನ್ನು ವಿಸ್ತಾರವಾಗಿ ಒಂದು ಉದ್ದೇಶದಿಂದ ನಾನು ಹೇಳುತ್ತಿದ್ದೇನೆ.

06032041a ಯದ್ಯದ್ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ|

06032041c ತತ್ತದೇವಾವಗಚ್ಛ ತ್ವಂ ಮಮ ತೇಜೋಂಶಸಂಭವಂ||

ಯಾವ ಯಾವ ಸತ್ತ್ವವು ವಿಭೂತಿಯುತವಾದುದೋ, ಶ್ರೀಯುಕ್ತವೋ, ಊರ್ಜಿತವಾದುದೋ ಅದನ್ನೇ ನೀನು ನನ್ನ ತೇಜೋಂಶದಿಂದ ಸಂಭವಿಸಿದುದೆಂದು ತಿಳಿದುಕೋ.

06032042a ಅಥ ವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ|

06032042c ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್||

ಅರ್ಜುನ! ಇಷ್ಟೊಂದು ಬಹಳವಾಗಿ ತಿಳಿದುಕೊಳ್ಳುವುದರಲ್ಲಿ ಏನಿದೆ? ಈ ಜಗತ್ತೆಲ್ಲವನ್ನೂ ನಾನು ನನ್ನ ಒಂದೇ ಒಂದು ಅಂಶದಿಂದ ಹಿಡಿದಿಟ್ಟುಕೊಂಡಿದ್ದೇನೆ.”

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭಗವದ್ಗೀತಾಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ವಿಭೂತಿಯೋಗೋ ನಾಮ ದಶಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭಗವದ್ಗೀತಾಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ವಿಭೂತಿಯೋಗವೆಂಬ ಹತ್ತನೇ ಅಧ್ಯಾಯವು.

ಭೀಷ್ಮಪರ್ವಣಿ ದ್ವಾತ್ರಿಂಶೋಽಧ್ಯಾಯಃ||

ಭೀಷ್ಮಪರ್ವದಲ್ಲಿ ಮೂವತ್ತೆರಡನೇ ಅಧ್ಯಾಯವು.

Image result for indian motifs

Comments are closed.