Bhishma Parva: Chapter 31

ಭೀಷ್ಮ ಪರ್ವ:ಭಗವದ್ಗೀತಾ ಪರ್ವ

೩೧

ರಾಜವಿದ್ಯಾ ಯೋಗ

Related image06031001 ಶ್ರೀಭಗವಾನುವಾಚ|

06031001a ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ|

06031001c ಜ್ಞಾನಂ ವಿಜ್ಞಾನಸಹಿತಂ ಯಜ್ಜ್ಞಾತ್ವಾ ಮೋಕ್ಷ್ಯಸೇಽಶುಭಾತ್||

ಶ್ರೀಭಗವಾನನು ಹೇಳಿದನು: “ಅನಸೂಯನೇ! ನಿನಗೆ ಈ ವಿಜ್ಞಾನಸಹಿತ ಜ್ಞಾನವನ್ನು ಹೇಳುತ್ತೇನೆ. ಇದನ್ನು ತಿಳಿದು ನೀನು ಅಶುಭದಿಂದ ಮೋಕ್ಷಹೊಂದುವೆ.

06031002a ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಂ|

06031002c ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಂ||

ಈ ರಾಜವಿದ್ಯೆ ರಾಜಗುಹ್ಯವು ಉತ್ತಮ ಮತ್ತು ಪವಿತ್ರವಾದುದು. ಇದನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳಬಹುದು. ಧರ್ಮ್ಯವಾದುದು. ಮಾಡಲು ಸುಲಭವಾದುದು. ಅವ್ಯಯವಾದುದು.

06031003a ಅಶ್ರದ್ಧಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ|

06031003c ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ||

ಪರಂತಪ! ಈ ಧರ್ಮದಲ್ಲಿ ಶ್ರದ್ಧೆಯಿರದ ಪುರುಷರು ನನ್ನನ್ನು ಹೊಂದದೇ ಮೃತ್ಯು-ಸಂಸಾರಗಳ ವೃತ್ತದಲ್ಲಿ ಹಿಂದಿರುಗುತ್ತಾರೆ.

06031004a ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ|

06031004c ಮತ್ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ||

ಈ ಜಗತ್ತೆಲ್ಲವೂ ಅವ್ಯಕ್ತಮೂರ್ತಿಯಾದ ನನ್ನಿಂದ ವ್ಯಾಪ್ತಿಯಾಗಿರುವುದು. ಇರುವ ಎಲ್ಲವೂ ನನ್ನಲ್ಲಿವೆ. ನಾನು ಅವುಗಳಲಿಲ್ಲ.

06031005a ನ ಚ ಮತ್ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಂ|

06031005c ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನಃ||

ಮತ್ತು ಇರುವವುಗಳು ನನ್ನಲ್ಲಿರುವುದೂ ಇಲ್ಲ. ನನ್ನ ಈ ಐಶ್ವರ ಯೋಗವನ್ನು ನೋಡು! ಭೂತಭಾವನನಾದ ನನ್ನ ಆತ್ಮವು ಭೂತಭೃತ್ತೂ ಅಲ್ಲ. ಭೂತಸ್ಥನೂ ಅಲ್ಲ.

06031006a ಯಥಾಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್|

06031006c ತಥಾ ಸರ್ವಾಣಿ ಭೂತಾನಿ ಮತ್ಸ್ಥಾನೀತ್ಯುಪಧಾರಯ||

ಹೇಗೆ ಸರ್ವತ್ರಗತವಾದ ಮಹಾವಾಯುವು ನಿತ್ಯವೂ ಆಕಾಶದಲ್ಲಿರುವುದೋ ಹಾಗೆ ಸರ್ವ ಭೂತಗಳೂ ನನ್ನಲ್ಲಿರುವವೆಂದು ನಿಶ್ಚಯಿಸು.

06031007a ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಂ|

06031007c ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಂ||

ಕೌಂತೇಯ! ಕಲ್ಪವು ಕ್ಷಯವಾಗುವಾಗ ಸರ್ವ ಭೂತಗಳೂ ನನ್ನ ಪ್ರಕೃತಿಯನ್ನು ಸೇರುತ್ತವೆ. ಕಲ್ಪದ ಆದಿಯಲ್ಲಿ ಪುನಃ ಅವುಗಳನ್ನು ಸೃಷ್ಟಿಸುತ್ತೇನೆ.

06031008a ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ|

06031008c ಭೂತಗ್ರಾಮಂ ಇಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್||

ನನ್ನ ಪ್ರಕೃತಿಯನ್ನು ಇಟ್ಟುಕೊಂಡು ಮತ್ತೆ ಮತ್ತೆ ಪ್ರಕೃತಿಯ ವಶದಿಂದ ಪರವಶವಾಗಿರುವ ಈ ಭೂತಗ್ರಾಮಗಳೆಲ್ಲವನ್ನೂ ಮತ್ತೆ ಮತ್ತೆ ಸೃಷ್ಟಿ ಮಾಡುತ್ತಿರುತ್ತೇನೆ.

06031009a ನ ಚ ಮಾಂ ತಾನಿ ಕರ್ಮಾಣಿ ನಿಬಧ್ನಂತಿ ಧನಂಜಯ|

06031009c ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು||

ಆದರೆ ಧನಂಜಯ! ಆ ಕರ್ಮಗಳು ಉದಾಸೀನನಾಗಿರುವ, ಆ ಕರ್ಮಗಳಲ್ಲಿ ಅಸಕ್ತನಾಗಿರುವ ನನ್ನನ್ನು ಕಟ್ಟಿಹಾಕುವುದಿಲ್ಲ.

06031010a ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಂ|

06031010c ಹೇತುನಾನೇನ ಕೌಂತೇಯ ಜಗದ್ವಿಪರಿವರ್ತತೇ||

ಕೌಂತೇಯ! ನನ್ನ ಅಧ್ಯಕ್ಷತೆಯಲ್ಲಿ ಪ್ರಕೃತಿಯು ಸಚರಾಚರವೆಲ್ಲವನ್ನೂ ಹುಟ್ಟಿಸುತ್ತದೆ. ಇದೇ ಕಾರಣದಿಂದ ಜಗತ್ತು ಸುತ್ತುತ್ತಿರುವುದು.

06031011a ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಂ|

06031011c ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಂ||

ಭೂತಮಹೇಶ್ವರನಾದ ನನ್ನ ಪರಮ ಭಾವವನ್ನು ತಿಳಿಯದೇ ಮೂಢರು ಮನುಷ್ಯ ದೇಹವನ್ನು ಆಶ್ರಯಿಸಿದ ನನ್ನನ್ನು ತಿರಸ್ಕರಿಸುತ್ತಾರೆ.

06031012a ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ|

06031012c ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ||

ವ್ಯರ್ಥ ಆಶೆಗಳ, ವ್ಯರ್ಥ ಕರ್ಮಗಳ, ವ್ಯರ್ಥಜ್ಞಾನಗಳ ಅವರು ವಿಚೇತಸರಾಗಿ ರಾಕ್ಷಸೀ, ಅಸುರೀ, ಮೋಹಿನೀ ಪ್ರಕೃತಿಯನ್ನು ಆಶ್ರಯಿಸುತ್ತಾರೆ.       

06031013a ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ|

06031013c ಭಜಂತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಂ||

ಪಾರ್ಥ! ಆದರೆ ಮಹಾತ್ಮರು ದೈವೀ ಪ್ರಕೃತಿಯನ್ನು ಆಶ್ರಯಿಸಿ ನನ್ನನ್ನು ಭೂತಾದಿ, ಅವ್ಯಯನೆಂದು ಅರ್ಥಮಾಡಿಕೊಂಡು, ಅನನ್ಯ ಮನಸ್ಕರಾಗಿ ನನ್ನನ್ನೇ ಭಜಿಸುತ್ತಾರೆ.

06031014a ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ|

06031014c ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ||

ಸತತವೂ ನನ್ನ ಕೀರ್ತನೆ ಮಾಡುತ್ತಾ, ಪ್ರಯತ್ನ ಪಡುತ್ತಾ, ದೃಢವ್ರತರಾಗಿ ಭಕ್ತಿಯಿಂದ ನಮಸ್ಕರಿಸುತ್ತಾ ನಿತ್ಯಯುಕ್ತರಾಗಿ ಉಪಾಸಿಸುತ್ತಾರೆ.

06031015a ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ|

06031015c ಏಕತ್ವೇನ ಪೃಥಕ್ತ್ವೇನ ಬಹುಧಾ ವಿಶ್ವತೋಮುಖಂ||

ಕೆಲವರು ಜ್ಞಾನಯಜ್ಞದಿಂದ ಯಜಿಸಿ ನನ್ನನ್ನು ಏಕತ್ವದಿಂದ, ಪ್ರತ್ಯೇಕವಾಗಿ, ವಿಶ್ವತೋಮುಖನಾಗಿ ಬಹುವಿಧಗಳಲ್ಲಿ ಉಪಾಸಿಸುತ್ತಾರೆ.

06031016a ಅಹಂ ಕ್ರತುರಹಂ ಯಜ್ಞಃ ಸ್ವಧಾಹಮಹಮೌಷಧಂ|

06031016c ಮಂತ್ರೋಽಹಮಹಮೇವಾಜ್ಯಮಹಮಗ್ನಿರಹಂ ಹುತಂ||

ನಾನೇ ಕ್ರತು. ನಾನೇ ಯಜ್ಞ, ಸ್ವಧಾ, ನಾನೇ ಔಷಧ. ಮಂತ್ರವು ನಾನು, ನಾನೇ ಆಜ್ಯ, ನಾನೇ ಅಗ್ನಿ, ನಾನೇ ಹುತವು.

06031017a ಪಿತಾಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ|

06031017c ವೇದ್ಯಂ ಪವಿತ್ರಂ ಓಂಕಾರ ಋಕ್ಸಾಮ ಯಜುರೇವ ಚ||

ನಾನೇ ಈ ಜಗತ್ತಿನ ಪಿತಾಮಹ, ಮಾತಾ, ಧಾತಾ ಮತ್ತು ಪಿತಾಮಹ, ವೇದ್ಯ, ಪವಿತ್ರ, ಓಂಕಾರ, ಋಕ್-ಸಾಮ-ಯಜುರ್ವೇದಗಳು ಕೂಡ.

06031018a ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್|

06031018c ಪ್ರಭವಃ ಪ್ರಲಯಃ ಸ್ಥಾನಂ ನಿಧಾನಂ ಬೀಜಮವ್ಯಯಂ||

ನಾನೇ ಗತಿ, ಭರ್ತಾ, ಪ್ರಭು, ಸಾಕ್ಷೀ, ನಿವಾಸ, ಶರಣ, ಸುಹೃತ್, ಪ್ರಭವ, ಪ್ರಲಯ, ಸ್ಥಾನ, ನಿಧಾನ, ಬೀಜ, ಮತ್ತು ಅವ್ಯಯ.

06031019a ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ|

06031019c ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ||

ನಾನು ತಪಿಸುತ್ತೇನೆ. ನಾನು ಮಳೆಯನ್ನು ಹಿಂದೆ ತೆಗೆದುಕೊಳ್ಳುತ್ತೇನೆ ಮತ್ತು ಸುರಿಸುತ್ತೇನೆ ಕೂಡ. ನಾನು ಅಮೃತ ಮತ್ತು ಮೃತ್ಯುವೂ ಕೂಡ. ಅರ್ಜುನ! ಇರುವುದು ಮತ್ತು ಇಲ್ಲದಿರುವುದೂ ನಾನೇ.

06031020a ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾ

        ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ|

06031020c ತೇ ಪುಣ್ಯಮಾಸಾದ್ಯ ಸುರೇಂದ್ರಲೋಕಂ

        ಅಶ್ನಂತಿ ದಿವ್ಯಾನ್ದಿವಿ ದೇವಭೋಗಾನ್||

ತ್ರೈವಿದ್ಯರು (ಋಕ್, ಯಜುಸ್ಸು ಮತ್ತು ಸಾಮವೇದಗಳನ್ನು ತಿಳಿದಿರುವವರು) ಸೋಮವನ್ನು ಕುಡಿದವರಾಗಿ, ಪಾಪಗಳನ್ನು ಕಳೆದುಕೊಂಡವರಾಗಿ, ನನಗೆ ಯಜ್ಞ-ಇಷ್ಟಿಗಳ ಮೂಲಕ ಸ್ವರ್ಗವನ್ನು ಪ್ರಾರ್ಥಿಸುತ್ತಾರೆ. ಅವರು ಪುಣ್ಯವಾದ ಸುರೇಂದ್ರಲೋಕವನ್ನು ಸೇರಿ, ದಿವಿಯಲ್ಲಿಯ ದಿವ್ಯ ದೇವಭೋಗಗಳನ್ನು ಭೋಗಿಸುತ್ತಾರೆ.

06031021a ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ

        ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ|

06031021c ಏವಂ ತ್ರಯೀಧರ್ಮಮನುಪ್ರಪನ್ನಾ

        ಗತಾಗತಂ ಕಾಮಕಾಮಾ ಲಭಂತೇ||

ಅವರು ಆ ವಿಶಾಲ ಸ್ವರ್ಗಲೋಕವನ್ನು ಭೋಗಿಸಿ ಪುಣ್ಯವು ಕ್ಷೀಣವಾಗಲು ಮರ್ತ್ಯಲೋಕವನ್ನು ಪುನಃ ಪ್ರವೇಶಿಸುತ್ತಾರೆ. ಹೀಗೆ ತ್ರಯೀಧರ್ಮವನ್ನು ಅವಲಂಬಿಸಿದ ಕಾಮಕಾಮರು ಗತಾಗತವನ್ನು ಪಡೆಯುತ್ತಾರೆ.

06031022a ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ|

06031022c ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ||

ಯಾವ ಜನರು ಅನನ್ಯರಾಗಿ ನನ್ನನ್ನೇ ಚಿಂತಿಸಿ ಉಪಾಸನೆ ಮಾಡುತ್ತಾರೋ ಆ ನಿತ್ಯಾಭಿಯುಕ್ತರ ಯೋಗಕ್ಷೇಮವನ್ನು ನಾನು ವಹಿಸಿಕೊಳ್ಳುತ್ತೇನೆ.

06031023a ಯೇಽಪ್ಯನ್ಯದೇವತಾ ಭಕ್ತಾ ಯಜಂತೇ ಶ್ರದ್ಧಯಾನ್ವಿತಾಃ|

06031023c ತೇಽಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಂ||

ಕೌಂತೇಯ! ಶ್ರದ್ಧಾನ್ವಿತರಾಗಿ ಯಾವ ಭಕ್ತರು ಅನ್ಯ ದೇವತೆಗಳನ್ನು ಯಜಿಸುತ್ತಾರೋ ಅವರೂ ಕೂಡ ನನ್ನನ್ನೇ ಅವಿಧಿಪೂರ್ವಕವಾಗಿ ಪೂಜಿಸುತ್ತಿರುತ್ತಾರೆ.

06031024a ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ|

06031024c ನ ತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ||

ಸರ್ವ ಯಜ್ಞಗಳ ಭೋಕ್ತನೂ ಪ್ರಭುವೂ ನಾನೇ. ಆದರೆ ಅವರು ನನ್ನನ್ನು ತತ್ವದಿಂದ ತಿಳಿಯರು. ಆದ್ದರಿಂದ ಅವರು ಜಾರಿಬೀಳುವರು.

06031025a ಯಾಂತಿ ದೇವವ್ರತಾ ದೇವಾನ್ಪಿತೄನ್ಯಾಂತಿ ಪಿತೃವ್ರತಾಃ|

06031025c ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಽಪಿ ಮಾಂ||

ದೇವವ್ರತರಾದವರು ದೇವತೆಗಳನ್ನು ಸೇರುತ್ತಾರೆ. ಪಿತೃವ್ರತರಾದವರು ಪಿತೃಗಳನ್ನು ಸೇರುತ್ತಾರೆ. ಭೂತೇಜ್ಯರು ಭೂತಗಳನ್ನು ಸೇರುವರು. ನನ್ನನ್ನು ಯಾಜಿಸುವವರು ನನ್ನನ್ನು ಸೇರುತ್ತಾರೆ.

06031026a ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ|

06031026c ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ||

ಪತ್ರ, ಪುಷ್ಪ, ಫಲ, ನೀರನ್ನು ಯಾರು ನನಗೆ ಭಕ್ತಿಯಿಂದ ನೀಡುತ್ತಾರೋ ಆ ಪ್ರಯತಾತ್ಮರು ಭಕ್ತಿಪೂರ್ವಕವಾಗಿ ಕೊಟ್ಟಿದ್ದುದನ್ನೇ ನಾನು ಸ್ವೀಕರಿಸುತ್ತೇನೆ.

06031027a ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್|

06031027c ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಂ||

ಕೌಂತೇಯ! ನೀನು ಏನನ್ನು ಮಾಡುತ್ತೀಯೋ, ಏನನ್ನು ತಿನ್ನುತ್ತೀಯೋ, ಏನನ್ನು ಯಾಗಮಾಡುತ್ತೀಯೋ, ಏನನ್ನು ಕೊಡುತ್ತೀಯೋ, ಏನನ್ನು ತಪಿಸುತ್ತೀಯೋ ಅದನ್ನು ನನಗೆ ಅರ್ಪಣೆ ಮಾಡು.

06031028a ಶುಭಾಶುಭಫಲೈರೇವಂ ಮೋಕ್ಷ್ಯಸೇ ಕರ್ಮಬಂಧನೈಃ|

06031028c ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ||

ಈ ರೀತಿ ಶುಭಾಶುಭಫಲಗಳ ಕರ್ಮಬಂಧನಗಳಿಂದ ಮುಕ್ತನಾಗುತ್ತೀಯೆ. ಸಂನ್ಯಾಸಯೋಗಯುಕ್ತನಾಗಿ ವಿಮುಕ್ತನಾಗಿ ನನ್ನ ಬಳಿ ಬರುತ್ತೀಯೆ.

06031029a ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ|

06031029c ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಂ||

ನಾನು ಸರ್ವಭೂತಗಳಲ್ಲಿಯೂ ಸಮನಾಗಿರುವೆನು. ನಾನು ದ್ವೇಷಿಸುವವನು ಯಾರೂ ಇಲ್ಲ. ನನಗೆ ಪ್ರಿಯರಾದವರೂ ಯಾರೂ ಇಲ್ಲ. ಆದರೆ ಯಾರು ನನ್ನನ್ನು ಭಕ್ತಿಯಿಂದ ಭಜಿಸುವರೋ ಅವರು ನನ್ನಲ್ಲಿ ಮತ್ತು ನಾನು ಅವರಲ್ಲಿ ಇರುತ್ತೇವೆ.

06031030a ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್|

06031030c ಸಾಧುರೇವ ಸ ಮಂತವ್ಯಃ ಸಮ್ಯಗ್ವ್ಯವಸಿತೋ ಹಿ ಸಃ||

ತುಂಬಾ ದುರಾಚಾರಿಯಾಗಿದ್ದರೂ ಸದಾ ನನ್ನನ್ನೇ ಅನನ್ಯಭಾಜನಾಗಿ ಭಜಿಸಿದರೆ ಅವನನ್ನು ಸಾಧುವೆಂದೇ ತಿಳಿಯಬೇಕು. ಏಕೆಂದರೆ ಅವನು ಸರಿಯಾದ ವ್ಯವಸಾಯವುಳ್ಳವನಾಗಿರುತ್ತಾನೆ.

06031031a ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ|

06031031c ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ||

ಕ್ಷಿಪ್ರವಾಗಿ ಅವನು ಧರ್ಮಾತ್ಮನಾಗುತ್ತಾನೆ. ಶಾಶ್ವತವಾದ ಶಾಂತಿಯನ್ನು ಪಡೆಯುವನು. ಕೌಂತೇಯ! ನನ್ನ ಭಕ್ತನು ಪ್ರಣಾಶವಾಗುವುದಿಲ್ಲ ಎನ್ನುವುದನ್ನು ತಿಳಿದುಕೋ.

06031032a ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇಽಪಿ ಸ್ಯುಃ ಪಾಪಯೋನಯಃ|

06031032c ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಽಪಿ ಯಾಂತಿ ಪರಾಂ ಗತಿಂ||

ಪಾರ್ಥ! ಪಾಪಯೋನಿಗಳಾದ ಸ್ತ್ರೀಯರು, ವೈಶ್ಯೆಯರು, ಶೂದ್ರರೂ ಕೂಡ ನನ್ನನ್ನು ಸಮಾಶ್ರಯಿಸಿ ಪರಮ ಗತಿಯನ್ನು ಹೊಂದುತ್ತಾರೆ[1].

06031033a ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ|

06031033c ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವ ಮಾಂ||

ಇನ್ನು ಪುನಃ ಪುಣ್ಯ ಭಕ್ತರಾದ ಬ್ರಾಹ್ಮಣರು ಮತ್ತು ರಾಜರ್ಷಿಗಳೇನು? ಅನಿತ್ಯವೂ ಅಸುಖವೂ ಆದ ಈ ಲೋಕವನ್ನು ಪಡೆದಿರುವ ನನ್ನನ್ನೇ ಭಜಿಸು.

06031034a ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು|

06031034c ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ||

ನನ್ನಲ್ಲಿಯೇ ಮನಸ್ಸನ್ನಿಡು. ನನ್ನ ಭಕ್ತನಾಗು. ನನ್ನನ್ನು ಯಾಜಿಸು. ನನ್ನನ್ನು ಸಮಸ್ಕರಿಸು. ನನ್ನ ಪರಾಯಣನಾಗಿ ಯುಕ್ತನಾಗಿದ್ದರೆ ಆತ್ಮನಾಗಿರುವ ನನ್ನನ್ನೇ ಬಂದು ಸೇರುವೆ.”

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭಗವದ್ಗೀತಾಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ರಾಜವಿದ್ಯಯೋಗೋ ನಾಮ ನವಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭಗವದ್ಗೀತಾಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ರಾಜವಿದ್ಯಾಯೋಗವೆಂಬ ಒಂಭತ್ತನೇ ಅಧ್ಯಾಯವು.

ಭೀಷ್ಮಪರ್ವಣಿ ಏಕತ್ರಿಂಶೋಽಧ್ಯಾಯಃ||

ಭೀಷ್ಮಪರ್ವದಲ್ಲಿ ಮೂವತ್ತೊಂದನೇ ಅಧ್ಯಾಯವು.

Related image

[1] ಸ್ತ್ರೀಯರೂ, ಶೂದ್ರರೂ, ವೈಶ್ಯರೂ ಪಾಪಿಗಳೆಂದು ಅರ್ಥವಲ್ಲ. ಅವರು ಹಿಂದಿನ ಪಾಪಗಳ ದೆಸೆಯಿಂದ ಭಕ್ತಿಗೆ ಅಡ್ಡಿ ಬರಬಹುದಾದ ಜನ್ಮದಲ್ಲಿ ಹುಟ್ಟಿರುತ್ತಾರೆ. ಆದರೆ ಅವರಿಗೆ ಭಕ್ತಿಯಾಗಲೀ ಪರಮಗತಿಯಾಗಲೀ ಅಡ್ಡಿಯಿಲ್ಲ.

Comments are closed.