Bhishma Parva: Chapter 28

ಭೀಷ್ಮ ಪರ್ವ:ಭಗವದ್ಗೀತಾ ಪರ್ವ

೨೮

ಅಭ್ಯಾಸ ಯೋಗ

Related image06028001 ಶ್ರೀಭಗವಾನುವಾಚ|

06028001a ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ|

06028001c ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ||

ಶ್ರೀಭಗವಾನನು ಹೇಳಿದನು: “ಕರ್ಮಫಲವನ್ನು ಅನಾಶ್ರಯಿಸಿ ಕಾರ್ಯ ಕರ್ಮಗಳನ್ನು ಮಾಡುವವನೇ ಸಂನ್ಯಾಸೀ ಮತ್ತು ಯೋಗೀ. ಅಗ್ನಿಕಾರ್ಯಗಳನ್ನು ಮಾಡದಿರುವವನಾಗಲೀ, ಕ್ರಿಯೆಗಳನ್ನು ಮಾಡದಿರುವವನಾಗಲೀ ಅಲ್ಲ.

06028002a ಯಂ ಸಂನ್ಯಾಸಮಿತಿ ಪ್ರಾಹುರ್ಯೋಗಂ ತಂ ವಿದ್ಧಿ ಪಾಂಡವ|

06028002c ನ ಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ||

ಪಾಂಡವ! ಯಾವುದನ್ನು ಸಂನ್ಯಾಸವೆಂದು ಹೇಳುತ್ತಾರೋ ಅದೇ ಯೋಗವೆಂದು ತಿಳಿ. ಏಕೆಂದರೆ ಸಂಕಲ್ಪವನ್ನು (ಕರ್ಮಫಲವನ್ನು) ಸಂನ್ಯಾಸಮಾಡದವನು ಎಂದೂ ಯೋಗಿಯಾಗುವುದಿಲ್ಲ.

06028003a ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ|

06028003c ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ||

ಕರ್ಮಯೋಗವನ್ನು ಏರಲು ಬಯಸುವ ಮುನಿಗೆ ಕರ್ಮವೇ ಕಾರಣ-ಸಾಧನವಾಗುತ್ತದೆ. ಆದರೆ ಯೋಗಾರೂಢನಾದವನಿಗೆ ಶಮೆಯೇ ಕಾರಣ-ಸಾಧನವೆಂದು ಹೇಳುತ್ತಾರೆ[1].

06028004a ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ|

06028004c ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ||

ಯಾವಾಗ ಇಂದ್ರಿಯಾರ್ಥಗಳಲ್ಲಿ ಮತ್ತು ಕರ್ಮಫಲಗಳಲ್ಲಿ ಆಸಕ್ತಿಯನ್ನು ಇಟ್ಟುಕೊಂಡಿರುವುದಿಲ್ಲವೋ, ಯಾವಾಗ ಸರ್ವ ಸಂಕಲ್ಪಗಳ ಸಂನ್ಯಾಸವನ್ನು ಮಾಡುತ್ತೇವೆಯೋ ಆಗ ಯೋಗಾರೂಢನಾಗಿದ್ದಾನೆ ಎಂದು ಹೇಳುತ್ತಾರೆ.

06028005a ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್|

06028005c ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ||

ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು. ತನ್ನನ್ನು ತಾನೇ ಕೆಳಗೆ ತಳ್ಳಿಕೊಳ್ಳಬಾರದು. ಏಕೆಂದರೆ ತನಗೆ ತಾನೇ ಬಂಧು. ತನಗೆ ತಾನೇ ಶತ್ರುವೂ ಕೂಡ.

06028006a ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈವಾತ್ಮನಾ ಜಿತಃ|

06028006c ಅನಾತ್ಮನಸ್ತು ಶತ್ರುತ್ವೇ ವರ್ತೇತಾತ್ಮೈವ ಶತ್ರುವತ್||

ಯಾರು ತನ್ನನ್ನು ತಾನೇ ಜಯಿಸಿಕೊಂಡಿರುವನೋ (ನಿಯಂತ್ರಣದಲ್ಲಿಟ್ಟುಕೊಂಡಿರುವನೋ) ಅವನಿಗೆ ಅವನೇ ಬಂಧು. ಆದರೆ ಅನಾತ್ಮನಾದವನು (ತನ್ನನ್ನು ನಿಯಂತ್ರಣದಲ್ಲಿಟ್ಟುಕೊಳ್ಳದವನು) ತನ್ನ ಮೇಲೆ ತಾನೇ ಅಪಕಾರವನ್ನೆಸಗಿ ತನಗೆ ತಾನೇ ಶತ್ರುವಾಗಿ ನಡೆದುಕೊಳ್ಳುತ್ತಾನೆ.

06028007a ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ|

06028007c ಶೀತೋಷ್ಣಸುಖದುಃಖೇಷು ತಥಾ ಮಾನಾವಮಾನಯೋಃ||

06028008a ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋ ವಿಜಿತೇಂದ್ರಿಯಃ|

06028008c ಯುಕ್ತ ಇತ್ಯುಚ್ಯತೇ ಯೋಗೀ ಸಮಲೋಷ್ಟಾಶ್ಮಕಾಂಚನಃ||

ಜಿತಾತ್ಮನಾಗಿ ಪ್ರಶಾಂತನಾಗಿರುವವನಲ್ಲಿ ಪರಮಾತ್ಮನು ಸಮಾಹಿತನಾಗಿರುತ್ತಾನೆ. ಬಿಸಿಲು-ಛಳಿಗಳಲ್ಲಿ, ಸುಖ-ದುಃಖಗಳಲ್ಲಿ ಮತ್ತು ಮಾನ-ಅಪಮಾನಗಳಲ್ಲಿ ಜ್ಞಾನ-ವಿಜ್ಞಾನ ತೃಪ್ತಾಪ್ತನಾಗಿ, ಕೂಟಸ್ಥನಾಗಿ ವಿಜಿತೇಂದ್ರಿಯನಾಗಿ, ಯುಕ್ತನಾಗಿ, ಮಣ್ಣಿನ ಹೆಂಟೆ, ಕಲ್ಲು ಮತ್ತು ಕಾಂಚನಗಳನ್ನು ಸಮನಾಗಿ ಕಾಣುವವನನ್ನು ಯೋಗೀ ಎಂದು ಕರೆಯುತ್ತಾರೆ.

06028009a ಸುಹೃನ್ಮಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂಧುಷು|

06028009c ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಿಷ್ಯತೇ||

ಸುಹೃದಯರು, ಮಿತ್ರರು, ಉದಾಸೀನರಾಗಿದ್ದವರು, ಮಧ್ಯಸ್ಥರು, ದ್ವೇಷಿಗಳು ಮತ್ತು ಬಂಧುಗಳಲ್ಲಿ, ಮತ್ತು ಸಾಧು-ಪಾಪಿಗಳಲ್ಲಿ ಸಮಬುದ್ಧಿಯಾಗಿರುವವನು ಹೆಚ್ಚಿನವನು.

06028010a ಯೋಗೀ ಯುಂಜೀತ ಸತತಮಾತ್ಮಾನಂ ರಹಸಿ ಸ್ಥಿತಃ|

06028010c ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ||

ಯೋಗಿಯಾದವನು ಸತತವೂ ರಹಸ್ಯದಲ್ಲಿದ್ದುಕೊಂಡು ಆತ್ಮವನ್ನು ಯೋಗದಲ್ಲಿ - ಏಕಾಕಿಯಾಗಿ, ಚಿತ್ತ-ಆತ್ಮಗಳನ್ನು ನಿಯಂತ್ರಿಸಿಕೊಂಡು, ಆಸೆಗಳಿಲ್ಲದೇ, ಅಪರಿಗ್ರಹ (ಏನನ್ನೂ ಹಿಡಿದುಕೊಳ್ಳದೇ, ಏನಕ್ಕೂ ಅಂಟಿಕೊಳ್ಳದೇ) - ಇರಿಸಿಕೊಂಡಿರುತ್ತಾನೆ.

06028011a ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ|

06028011c ನಾತ್ಯುಚ್ಛ್ರಿತಂ ನಾತಿನೀಚಂ ಚೈಲಾಜಿನಕುಶೋತ್ತರಂ||

06028012a ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಃ|

06028012c ಉಪವಿಶ್ಯಾಸನೇ ಯುಂಜ್ಯಾದ್ಯೋಗಮಾತ್ಮವಿಶುದ್ಧಯೇ||

ಶುಚಿಯಾದ ಜಾಗದಲ್ಲಿ, ಅತಿ ಎತ್ತರವೂ ಅತಿ ಕೆಳಗೂ ಇರದ ಬಟ್ಟೆ, ಚರ್ಮ, ಕುಶ ಇವುಗಳನ್ನು ಒಂದರ ಮೇಲೆ ಒಂದನ್ನು ಹಾಸಿರುವ ಸ್ಥಿರವಾದ ಆಸನವನ್ನು ತನಗಾಗಿ ಹಾಕಿಕೊಂಡು, ಆ ಆಸನದಲ್ಲಿ ಕುಳಿತುಕೊಂಡು ಮನಸ್ಸನ್ನು ಏಕಾಗ್ರವಾಗಿಸಿಕೊಂಡು, ಚಿತ್ತ-ಇಂದ್ರಿಯಕ್ರಿಯೆಗಳನ್ನು ನಿಯಂತ್ರಿಸಿಕೊಂಡು ಆತ್ಮ ವಿಶುದ್ಧಿಗಾಗಿ ಯೋಗವನ್ನು ಮಾಡಬೇಕು.

06028013a ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ|

06028013c ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್||

06028014a ಪ್ರಶಾಂತಾತ್ಮಾ ವಿಗತಭೀರ್ಬ್ರಹ್ಮಚಾರಿವ್ರತೇ ಸ್ಥಿತಃ|

06028014c ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ||

ಕಾಯ (ಹೊಕ್ಕಳ ಮೇಲಿನ ದೇಹ), ತಲೆ ಮತ್ತು ಕುತ್ತಿಗೆಯನ್ನು ನೇರವಾಗಿಟ್ಟುಕೊಂಡು, ಅಲುಗಾಡದೇ ಸ್ಥಿರವಾಗಿರಿಸಿಕೊಂಡು, ಅಲ್ಲಿ-ಇಲ್ಲಿ ನೋಡದೇ ಮೂಗಿನ ತುದಿಯನ್ನೇ ನೋಡುತ್ತಾ, ಪ್ರಶಾಂತಾತ್ಮನಾಗಿ, ಭಯವಿಲ್ಲದವನಾಗಿ, ಬ್ರಹ್ಮಚರ್ಯವ್ರತದಲ್ಲಿದ್ದುಕೊಂಡು, ಮನಸ್ಸನ್ನು ಸಂಯಮದಲ್ಲಿಟ್ಟುಕೊಂಡು, ನನ್ನ ಮೇಲೆಯೇ ಚಿತ್ತವನ್ನಿರಿಸಿಕೊಂಡು, ನನ್ನದೇ ಪರನಾಗಿದ್ದುಕೊಂಡು ಯುಕ್ತನಾಗಿರಬೇಕು.

06028015a ಯುಂಜನ್ನೇವಂ ಸದಾತ್ಮಾನಂ ಯೋಗೀ ನಿಯತಮಾನಸಃ|

06028015c ಶಾಂತಿಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ||

ಹೀಗೆ ನಿಯತಮಾನಸನಾಗಿ ಯಾವಾಗಲೂ ಆತ್ಮನನ್ನು ಯೋಗದಲ್ಲಿ ತೊಡಗಿಸಿಕೊಂಡಿರುವವನು ಪರಮ ನಿರ್ವಾಣವಾದ ನನ್ನ ಶಾಂತಿ ಸ್ಥಾನವನ್ನು ಪಡೆಯುತ್ತಾನೆ.

06028016a ನಾತ್ಯಶ್ನತಸ್ತು ಯೋಗೋಽಸ್ತಿ ನ ಚೈಕಾಂತಮನಶ್ನತಃ|

06028016c ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ||

ಅರ್ಜುನ! ಅತಿಯಾಗಿ ಊಟಮಾಡುವವನಿಗೆ ಯೋಗವಿಲ್ಲ. ನಿಯಮಪೂರ್ವಕವಾಗಿ ಊಟಮಾಡದೇ ಇರುವವನಿಗೂ ಇಲ್ಲ. ಅತಿಯಾಗಿ ನಿದ್ದೆ ಮಾಡುವವನಿಗೂ ಯೋಗವಿಲ್ಲ. ನಿದ್ದೆಯಿಲ್ಲದೇ ಜಾಗ್ರತನಾಗಿರುವವನಿಗೂ ಇಲ್ಲ.

06028017a ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು|

06028017c ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ||

ನಿಯತ ಪ್ರಮಾಣದಲ್ಲಿ ಆಹಾರ-ವಿಹಾರಗಳಲ್ಲಿ ತೊಡಗಿರುವ, ಎಷ್ಟು ಬೇಕೋ ಅಷ್ಟು ಕರ್ಮಗಳಲ್ಲಿ ನಿರತನಾಗಿರುವ, ನಿಯತ ಕಾಲಗಳಲ್ಲಿ ನಿದ್ದೆಮಾಡುವ ಮತ್ತು ಎಚ್ಚರದಿಂದಿರುವನಿಗೆ ದುಃಖವನ್ನು ಕಳೆಯಬಲ್ಲ ಯೋಗವು ಸಿದ್ಧಿಸುತ್ತದೆ.

06028018a ಯದಾ ವಿನಿಯತಂ ಚಿತ್ತಮಾತ್ಮನ್ಯೇವಾವತಿಷ್ಠತೇ|

06028018c ನಿಃಸ್ಪೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ||

ನಿಯಂತ್ರಣಕ್ಕೊಳಗಾದ ಚಿತ್ತವು ಆತ್ಮನಲ್ಲಿಯೇ ನೆಲೆಗೊಂಡಿರುವಾಗ ಮತ್ತು ಎಲ್ಲ ಕಾಮಗಳ ತೃಷ್ಣೆಯನ್ನೂ ಕಳೆದುಕೊಂಡಾಗ ಯೋಗದಲ್ಲಿದ್ದಾನೆ ಎಂದು ಹೇಳುತ್ತಾರೆ.

06028019a ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಸ್ಮೃತಾ|

06028019c ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ||

ಯತಚಿತ್ತನಾದ ಯೋಗಿಯನ್ನು, ಆತ್ಮವನ್ನು ಯುಂಜಿಸಿದ ಯೋಗಿಯನ್ನು ಗಾಳಿಯಿಲ್ಲದಿರುವ ಸ್ಥಳದಲ್ಲಿ ಅಲುಗಾಡದೇ ಇರುವ ದೀಪಕ್ಕೆ ಹೋಲಿಸುತ್ತಾರೆ.

06028020a ಯತ್ರೋಪರಮತೇ ಚಿತ್ತಂ ನಿರುದ್ಧಂ ಯೋಗಸೇವಯಾ|

06028020c ಯತ್ರ ಚೈವಾತ್ಮನಾತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ||

06028021a ಸುಖಮಾತ್ಯಂತಿಕಂ ಯತ್ತದ್ಬುದ್ಧಿಗ್ರಾಹ್ಯಮತೀಂದ್ರಿಯಂ|

06028021c ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ತ್ವತಃ||

06028022a ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ|

06028022c ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾಪಿ ವಿಚಾಲ್ಯತೇ||

06028023a ತಂ ವಿದ್ಯಾದ್ದುಃಖಸಂಯೋಗವಿಯೋಗಂ ಯೋಗಸಂಜ್ಞಿತಂ|

06028023c ಸ ನಿಶ್ಚಯೇನ ಯೋಕ್ತವ್ಯೋ ಯೋಗೋಽನಿರ್ವಿಣ್ಣಚೇತಸಾ||

ಯಾವಾಗ ಚಿತ್ತವು ಯೋಗಸೇವನೆಯಿಂದ ಯಾವಕಡೆಯೂ ಹರಿದಾಡದಂತೆ ತಡೆಗಟ್ಟಲ್ಪಟ್ಟು ಸುಮ್ಮನಾಗಿರುವುದೋ, ಯಾವಾಗ ಆತ್ಮವು ಅತ್ಮನನ್ನು ಕಂಡುಕೊಂಡು ಆತ್ಮನಲ್ಲಿ ತೃಪ್ತವಾಗಿರುವುದೋ, ಅನಂತವೂ ಅತೀಂದ್ರಿಯವೂ ಆದ ಸುಖವನ್ನು ಬದ್ಧಿಯು ಯಾವಾಗ ಗ್ರಹಿಸಿಕೊಂಡು, ಇದನ್ನು ತತ್ವತಃ ಅರಿತುಕೊಂಡು, ಅಲುಗಾಡದೇ ಅದರಲ್ಲಿಯೇ ಇದ್ದಾಗ, ಯಾವ ಲಾಭವನ್ನು ಪಡೆದು ಅದಕ್ಕಿಂತಲೂ ಅಧಿಕವಾದ ಲಾಭವು ಇನ್ನೊಂದಿಲ್ಲ ಎಂದು ತಿಳಿದು, ಯಾವುದರಲ್ಲಿದ್ದುಕೊಂಡು ಅತಿ ದೊಡ್ಡ ದುಃಖಬಂದೊದಗಿದಾಗ ಕೂಡ ವಿಚಲಿತನಾಗುವುದಿಲ್ಲವೋ, ಆ ದುಃಖ ಸಂಯೋಗವಿಯೋಗ ವಿದ್ಯೆಯನ್ನು ಯೋಗವೆಂದು ತಿಳಿಯಬೇಕು. ಆ ಅನಿರ್ವಿಣ್ಣಚೇತಸನು ನಿಶ್ಚಯವಾಗಿಯೂ ಯೋಗದಲ್ಲಿ ಯುಕ್ತನಾಗಿರುತ್ತಾನೆ.

06028024a ಸಂಕಲ್ಪಪ್ರಭವಾನ್ಕಾಮಾಂಸ್ತ್ಯಕ್ತ್ವಾ ಸರ್ವಾನಶೇಷತಃ|

06028024c ಮನಸೈವೇಂದ್ರಿಯಗ್ರಾಮಂ ವಿನಿಯಮ್ಯ ಸಮಂತತಃ||

06028025a ಶನೈಃ ಶನೈರುಪರಮೇದ್ಬುದ್ಧ್ಯಾ ಧೃತಿಗೃಹೀತಯಾ|

06028025c ಆತ್ಮಸಂಸ್ಥಂ ಮನಃ ಕೃತ್ವಾ ನ ಕಿಂ ಚಿದಪಿ ಚಿಂತಯೇತ್||

ಸಂಕಲ್ಪಪ್ರಭವಗಳಾದ ಸರ್ವ ಕಾಮಗಳನ್ನೂ ಅಶೇಷವಾಗಿ ತ್ಯಜಿಸಿ, ಮನಸ್ಸಿನ ಮೂಲಕ ಇಂದ್ರಿಯಗ್ರಾಮವನ್ನು ಎಲ್ಲಕಡೆಯಿಂದಲೂ ನಿಯಂತ್ರಿಸಿಕೊಂಡು, ಮೆಲ್ಲ ಮೆಲ್ಲನೆ ಧೃತಿಯಿಂದ ಹಿಡಿದು ಬುದ್ಧಿಯನ್ನು ಹಿಂತೆಗೆದುಕೊಂಡು, ಮನಸ್ಸನ್ನು ಆತ್ಮನಲ್ಲಿ ನೆಲೆಗೊಳಿಸಿ ಏನನ್ನೂ ಕೂಡ ಯೋಚಿಸದೇ ಇರಬೇಕು.

06028026a ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಂ|

06028026c ತತಸ್ತತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್||

ಚಂಚಲವೂ ಅಸ್ಥಿರವೂ ಆದ ಮನಸ್ಸು ಯಾವ ಯಾವುದರ ಕಡೆ ಹರಿಯತ್ತದೆಯೋ ಅವುಗಳಿಂದ ಅದನ್ನು ಹಿಡಿದು ತಂದು ಆತ್ಮದ ವಶದಲ್ಲಿಯೇ ಇಡಬೇಕು.

06028027a ಪ್ರಶಾಂತಮನಸಂ ಹ್ಯೇನಂ ಯೋಗಿನಂ ಸುಖಮುತ್ತಮಂ|

06028027c ಉಪೈತಿ ಶಾಂತರಜಸಂ ಬ್ರಹ್ಮಭೂತಮಕಲ್ಮಷಂ||

ಈ ಪ್ರಶಾಂತಮನಸ ಯೋಗಿಯನ್ನು ರಜೋಗುಣವನ್ನು ಶಾಂತಗೊಳಿಸುವ, ಬ್ರಹ್ಮಭೂತವಾದ, ಅಕಲ್ಮಷವಾದ ಉತ್ತಮ ಸುಖವು ಬಳಿಸಾರುತ್ತದೆ.

06028028a ಯುಂಜನ್ನೇವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃ|

06028028c ಸುಖೇನ ಬ್ರಹ್ಮಸಂಸ್ಪರ್ಶಮತ್ಯಂತಂ ಸುಖಮಶ್ನುತೇ||

ಹೀಗೆ ಸದಾ ತನ್ನನ್ನು ಯೋಗದಲ್ಲಿ ತೊಡಗಿಸಿಕೊಂಡಿರುವ ಯೋಗಿಯು ಕಲ್ಮಷಗಳನ್ನು ಕಳೆದುಕೊಂಡು ಸುಲಭವಾಗಿ ಬ್ರಹ್ಮಸಂಸ್ಪರ್ಶದಿಂದ ಉಂಟಾಗುವ ಅಂತ್ಯವನ್ನೂ ಮೀರಿದ ಸುಖವನ್ನು ಪಡೆಯುತ್ತಾನೆ.

06028029a ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ|

06028029c ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ||

ತನ್ನನ್ನು ಇರುವ ಎಲ್ಲವುಗಳಲ್ಲಿ ಇರಿಸಿಕೊಂಡು, ಇರುವ ಎಲ್ಲವುಗಳನ್ನು ತನ್ನಲ್ಲಿ ಇರಿಸಿಕೊಂಡು ತನ್ನನ್ನು ಯೋಗದಲ್ಲಿ ತೊಡಗಿಸಿಕೊಂಡಿರುವವನು ಎಲ್ಲವುಗಳಲ್ಲಿ ಒಂದನ್ನೇ ಕಾಣುತ್ತಾನೆ.

06028030a ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ|

06028030c ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ||

ಯಾರು ಎಲ್ಲದರಲ್ಲಿ ನನ್ನನ್ನು ಕಾಣುವನೋ ಮತ್ತು ಎಲ್ಲವನ್ನೂ ನನ್ನಲ್ಲಿ ಕಾಣುವನೋ ಅವನನ್ನು ನಾನು ಕಾಣದೇ ಇರುವುದಿಲ್ಲ ಮತ್ತು ಅವನೂ ನನ್ನನ್ನು ಕಾಣದೇ ಇರುವುದಿಲ್ಲ.

06028031a ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ|

06028031c ಸರ್ವಥಾ ವರ್ತಮಾನೋಽಪಿ ಸ ಯೋಗೀ ಮಯಿ ವರ್ತತೇ||

ಏಕತ್ವದಲ್ಲಿದ್ದುಕೊಂಡು ಯಾರು ಸರ್ವಭೂತಗಳಲ್ಲಿಯೂ ಇರುವ ನನ್ನನ್ನು ಭಜಿಸುತ್ತಾನೋ ಆ ಯೋಗಿಯು ಹೇಗೇ ಇದ್ದರೂ ನನ್ನಲ್ಲಿ ಇರುತ್ತಾನೆ.

06028032a ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋಽರ್ಜುನ|

06028032c ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ||

ಅರ್ಜುನ! ಯಾರು ಸುಖವನ್ನಾಗಲೀ ದುಃಖವನ್ನಾಗಲೀ ತನ್ನಲ್ಲಿರುವಂತೆಯೇ ಎಲ್ಲದರಲ್ಲಿಯೂ ಒಂದೇ ಎಂದು ಕಾಣುತ್ತಾನೋ ಅವನೇ ಪರಮ ಯೋಗಿಯೆಂದೆನಿಸಿಕೊಳ್ಳುತ್ತಾನೆ.”

06028033 ಅರ್ಜುನ ಉವಾಚ|

06028033a ಯೋಽಯಂ ಯೋಗಸ್ತ್ವಯಾ ಪ್ರೋಕ್ತಃ ಸಾಮ್ಯೇನ ಮಧುಸೂದನ|

06028033c ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ಸ್ಥಿತಿಂ ಸ್ಥಿರಾಂ||

ಅರ್ಜುನನು ಹೇಳಿದನು: “ಮಧುಸೂದನ! ಸಮತ್ವದ ಯೋಗವೆಂದು ನೀನು ಏನನ್ನು ಹೇಳಿದೆಯೋ, ಚಂಚಲವಾಗಿರುವುದರಿಂದ ಅದು ಸ್ಥಿರ ಸ್ಥಿತಿಯನ್ನು ಪಡೆಯುವುದನ್ನು ನಾನು ಕಾಣೆ.

06028034a ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ದೃಢಂ|

06028034c ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಂ||

ಕೃಷ್ಣ! ಏಕೆಂದರೆ ಮನಸ್ಸು ಚಂಚಲವಾದುದು. ಶರೀರವನ್ನು ಕಡೆಯುವಂಥಹುದು. ಬಲಶಾಲಿಯು. ದೃಢವಾದುದು. ವಾಯುವನ್ನು ಹಿಡಿದಿಟ್ಟುಕೊಳ್ಳುವುದು ಎಷ್ಟು ಕಷ್ಟವೋ ಹಾಗೆ ಮನಸ್ಸನ್ನೂ ಹಿಡಿದಿಟ್ಟುಕೊಳ್ಳುವುದು ತುಂಬಾ ದುಷ್ಕರವೆಂದು ನನಗನ್ನಿಸುತ್ತದೆ.”

06028035 ಶ್ರೀಭಗವಾನುವಾಚ|

06028035a ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಂ|

06028035c ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ||

ಶ್ರೀ ಭಗವಾನನು ಹೇಳಿದನು: “ಮಹಾಬಾಹೋ! ಚಂಚಲವಾಗಿರುವ ಮನಸ್ಸನ್ನು ನಿಗ್ರಹಿಸುವುದು ಕಷ್ಟ ಎನ್ನುವುದರಲ್ಲಿ ಸಂಶಯವಿಲ್ಲ. ಕೌಂತೇಯ! ಆದರೆ ಅಭ್ಯಾಸದಿಂದ ಮತ್ತು ವೈರಾಗ್ಯದಿಂದ ಇದು ಹಿಡಿತಕ್ಕೆ ಸಿಗುತ್ತದೆ.

06028036a ಅಸಮ್ಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ|

06028036c ವಶ್ಯಾತ್ಮನಾ ತು ಯತತಾ ಶಕ್ಯೋಽವಾಪ್ತುಮುಪಾಯತಃ||

ತನ್ನನ್ನು ಸಂಯಮದಲ್ಲಿಟ್ಟುಕೊಂಡಿಲ್ಲದೇ ಇರುವವನಿಗೆ ಯೋಗವನ್ನು ಹೊಂದುವುದು ಬಹು ಕಷ್ಟವೆಂದು ನನ್ನ ಅಭಿಪ್ರಾಯ. ಆದರೆ ತನ್ನನ್ನು ವಶದಲ್ಲಿಟ್ಟುಕೊಂಡಿರುವವನು ಉಪಾಯವನ್ನುಪಯೋಗಿಸಿ ಪ್ರಯತ್ನಿಸುವುದರಿಂದ ಅದನ್ನು ಹೊಂದಲು ಶಕ್ಯನಾಗುತ್ತಾನೆ.”

06028037 ಅರ್ಜುನ ಉವಾಚ|

06028037a ಅಯತಿಃ ಶ್ರದ್ಧಯೋಪೇತೋ ಯೋಗಾಚ್ಚಲಿತಮಾನಸಃ|

06028037c ಅಪ್ರಾಪ್ಯ ಯೋಗಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ||

ಅರ್ಜುನನು ಹೇಳಿದನು: “ಕೃಷ್ಣ! ಯತಿಯಾಗಿಲ್ಲದಿರುವವನು ಆದರೆ ಶ್ರದ್ಧೆಯಿರುವವನು ಪ್ರಯತ್ನಪಟ್ಟರೂ ಮನಸ್ಸನ್ನು ಯೋಗದಿಂದ ಹಿಡಿದು ಯೋಗ ಸಂಸಿದ್ಧಿಯನ್ನು ಪಡೆಯಲಿಕ್ಕಾಗದವನು ಯಾವ ಗತಿಯನ್ನು ಹೊಂದುತ್ತಾನೆ?

06028038a ಕಚ್ಚಿನ್ನೋಭಯವಿಭ್ರಷ್ಟಶ್ಚಿನ್ನಾಭ್ರಮಿವ ನಶ್ಯತಿ|

06028038c ಅಪ್ರತಿಷ್ಠೋ ಮಹಾಬಾಹೋ ವಿಮೂಢೋ ಬ್ರಹ್ಮಣಃ ಪಥಿ||

ಮಹಾಬಾಹೋ! ಅಂಥವನು ಎರಡನ್ನೂ ಕಳೆದುಕೊಂಡು ಚೂರಾದ ಮೋಡದಂತೆ ದಿಕ್ಕು ತೋಚದೇ ಅಪ್ರತಿಷ್ಠನಾಗಿ ಬ್ರಹ್ಮನ ಪಥದಲ್ಲಿ ವಿಮೂಢನಾಗಿ ಕೆಟ್ಟುಹೋಗುವುದಿಲ್ಲ ತಾನೇ?

06028039a ಏತನ್ಮೇ ಸಂಶಯಂ ಕೃಷ್ಣ ಚೇತ್ತುಮರ್ಹಸ್ಯಶೇಷತಃ|

06028039c ತ್ವದನ್ಯಃ ಸಂಶಯಸ್ಯಾಸ್ಯ ಚೇತ್ತಾ ನ ಹ್ಯುಪಪದ್ಯತೇ||

ಕೃಷ್ಣ! ನನ್ನ ಈ ಸಂಶಯವನ್ನು ಅಶೇಷವಾಗಿ ತುಂಡರಿಸಬೇಕು. ಏಕೆಂದರೆ ನಿನ್ನನ್ನು ಬಿಟ್ಟು ಬೇರೆ ಯಾರೂ ಈ ಸಂಶಯವನ್ನು ಕತ್ತರಿಸಲಾರರು.”

06028040 ಶ್ರೀಭಗವಾನುವಾಚ|

06028040a ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ|

06028040c ನ ಹಿ ಕಲ್ಯಾಣಕೃತ್ಕಶ್ಚಿದ್ದುರ್ಗತಿಂ ತಾತ ಗಚ್ಛತಿ||

ಶ್ರೀಭಗವಾನನು ಹೇಳಿದನು: “ಪಾರ್ಥ! ಅವನಿಗೆ ಇಲ್ಲಿಯಾಗಲೀ ಅನಂತರದಲ್ಲಿಯಾಗಲೀ ವಿನಾಶವೆನ್ನುವುದಿಲ್ಲ. ಅಯ್ಯಾ! ಕಲ್ಯಾಣಕರ್ಮಗಳನ್ನು ಮಾಡಿದವನು ಎಂದೂ ದುರ್ಗತಿಯನ್ನು ಹೊಂದಲಾರನು.

06028041a ಪ್ರಾಪ್ಯ ಪುಣ್ಯಕೃತಾಽಲ್ಲೋಕಾನುಷಿತ್ವಾ ಶಾಶ್ವತೀಃ ಸಮಾಃ|

06028041c ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋಽಭಿಜಾಯತೇ||

ಯೋಗಭ್ರಷ್ಟನಾದವನು ಪುಣ್ಯಕೃತರ ಲೋಕಗಳನ್ನು ಪಡೆದು ಶಾಶ್ವತ ವರ್ಷಗಳು ಅಲ್ಲಿಯೇ ವಾಸವಾಗಿದ್ದು ಶುಚಿಗಳ ಮತ್ತು ಶ್ರೀಮಂತರ ಕುಲದಲ್ಲಿ ಜನಿಸುವನು.

06028042a ಅಥ ವಾ ಯೋಗಿನಾಮೇವ ಕುಲೇ ಭವತಿ ಧೀಮತಾಂ|

06028042c ಏತದ್ಧಿ ದುರ್ಲಭತರಂ ಲೋಕೇ ಜನ್ಮ ಯದೀದೃಶಂ||

ಅಥವಾ ಧೀಮಂತ ಯೋಗಿಗಳ ಕುಲದಲ್ಲಿಯೇ ಹುಟ್ಟುವನು. ಲೋಕದಲ್ಲಿ ಇದರ ಅಥವಾ ಈ ತರಹದ ಜನ್ಮವು ತುಂಬಾ ದುರ್ಲಭವಾದುದು.

06028043a ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೇಹಿಕಂ|

06028043c ಯತತೇ ಚ ತತೋ ಭೂಯಃ ಸಂಸಿದ್ಧೌ ಕುರುನಂದನ||

ಕುರುನಂದನ! ಅಲ್ಲಿ ಅವನಿಗೆ ಹಿಂದಿನ ದೇಹದಲ್ಲಿದ್ದ ಬುದ್ಧಿ ಸಂಯೋಗವು ದೊರೆಯುತ್ತದೆ. ಆಗ ಪುನಃ ಅವನು ಸಂಸಿದ್ಧಿಗಾಗಿ ಪ್ರಯತ್ನಿಸುತ್ತಾನೆ.

06028044a ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋಽಪಿ ಸಃ|

06028044c ಜಿಜ್ಞಾಸುರಪಿ ಯೋಗಸ್ಯ ಶಬ್ಧಬ್ರಹ್ಮಾತಿವರ್ತತೇ||

ಪೂರ್ವಾಭ್ಯಾಸದಿಂದಲೇ ಅವನು ಅವಶನಾಗಿ ಎಳೆಯಲ್ಪಟ್ಟು ಯೋಗದ ಕುರಿತು ಜಿಜ್ಞಾಸೆಮಾಡಿದರೂ ವೇದಗಳನ್ನೂ ಮೀರಿ ನಡೆದುಕೊಳ್ಳುತ್ತಾನೆ[2].

06028045a ಪ್ರಯತ್ನಾದ್ಯತಮಾನಸ್ತು ಯೋಗೀ ಸಂಶುದ್ಧಕಿಲ್ಬಿಷಃ|

06028045c ಅನೇಕಜನ್ಮಸಂಸಿದ್ಧಸ್ತತೋ ಯಾತಿ ಪರಾಂ ಗತಿಂ||

ಹೀಗೆ ಪ್ರಯತ್ನದಿಂದ ಅಭ್ಯಾಸಮಾಡುವ ಯೋಗಿಯು ಕಿಲ್ಬಿಷಗಳಿಂದ ಸಂಶುದ್ಧನಾಗಿ, ಅನೇಕ ಜನ್ಮಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ಸಂಸ್ಕಾರಸಮೂಹವನ್ನು ಕೂಡಿಹಾಕಿಕೊಂಡು ಅನಂತರ ಪರಮ ಗತಿಯನ್ನು ಸೇರುತ್ತಾನೆ[3].

06028046a ತಪಸ್ವಿಭ್ಯೋಽಧಿಕೋ ಯೋಗೀ ಜ್ಞಾನಿಭ್ಯೋಽಪಿ ಮತೋಽಧಿಕಃ|

06028046c ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ಯೋಗೀ ಭವಾರ್ಜುನ||

ತಪಸ್ವಿಗಳಿಗೂ ಅಧಿಕನು ಯೋಗಿ. ಅವನು ಜ್ಞಾನಿಗಳಿಗೂ ಅಧಿಕನೆಂದು ನನ್ನ ಮತ. ಯೋಗಿಯು ಕರ್ಮಿಗಳಿಗಿಂತಲೂ ಅಧಿಕ. ಆದುದರಿಂದ ಅರ್ಜುನ! ಯೋಗಿಯಾಗು!

06028047a ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ|

06028047c ಶ್ರದ್ಧಾವಾನ್ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ||

ಎಲ್ಲ ಯೋಗಿಗಳಲ್ಲಿಯೂ ಕೂಡ, ಯಾರು ಅಂತರಾತ್ಮದಿಂದ ನನ್ನ ಕಡೆ ಬರುತ್ತಾನೋ, ಯಾರು ನನ್ನನ್ನು ಶ್ರದ್ಧೆಯಿಂದ ಭಜಿಸುತ್ತಾನೋ ಅವನೇ ಯುಕ್ತತಮನೆಂದು ನನ್ನ ಮತ.”

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭಗವದ್ಗೀತಾಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಆತ್ಮಸಂಯಮಯೋಗೋ ನಾಮ ಷಷ್ಠೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭಗವದ್ಗೀತಾಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಆತ್ಮಸಂಯಮಯೋಗವೆಂಬ ಆರನೇ ಅಧ್ಯಾಯವು.

ಭೀಷ್ಮಪರ್ವಣಿ ಅಷ್ಟಾವಿಂಶೋಽಧ್ಯಾಯಃ||

ಭೀಷ್ಮಪರ್ವದಲ್ಲಿ ಇಪ್ಪತ್ತೆಂಟನೇ ಅಧ್ಯಾಯವು.

Related image

[1] ಆರುರುಕ್ಷೋಃ ಆರೋಢುಮಿಚ್ಛತಃ ಅನಾರೂಢಸ್ಯ ಧ್ಯಾನಯೋಗೇ ಅವಸ್ಥಾತುಂ ಅಶಕ್ತಸೈವ ಇತ್ಯರ್ಥಃ| ಕಸ್ಯ ಆರುರುಕ್ಷೋಃ? ಮುನೇಃ ಕರ್ಮಫಲಸಂನ್ಯಾಸಿನಃ ಇತ್ಯರ್ಥಃ| ಕಿಂ ಆರುರುಕ್ಷೋಃ? ಯೋಗಂ| ಕರ್ಮ ಕಾರಣ ಸಾಧನಮುಚ್ಯತೇ| ಯೋಗರೂಢಸ್ಯ ಪುನಃ ತಸೈವ ಶಮಃ ಉಪಶಮಃ ಸರ್ವಕರ್ಮಭ್ಯಃ ನಿವೃತ್ತಿಃ ಕಾರಣಂ ಯೋಗಾರೂಢತ್ವಸ್ಯ ಸಾಧನಮುಚ್ಯತೇ ಇತ್ಯರ್ಥಃ| ಯಾವತ್ ಯಾವತ್ ಕರ್ಮಭ್ಯಃ ಉಪರಮತೇ ತಾವತ್ ತಾವತ್ ನಿರಾಯಾಸಸ್ಯ ಜಿತೇಂದ್ರಿಯಸ್ಯ ಚಿತ್ತಂ ಸಮಾಧೀಯತೇ| ತಥಾ ಸತಿ ಸ ಝಟತಿ ಯೋಗಾರೂಢೋ ಭವತಿ| ತಥಾ ಚ ಉಕ್ತಂ ವ್ಯಾಸೇನ ‘ನೈತಾದೃಶಂ ಬ್ರಾಹ್ಮಣಸ್ಯಾಸ್ತಿ ವಿತ್ತಂ ಯಥೈಕತಾ ಸಮತಾ ಸತ್ಯತಾ ಚ| ಶೀಲಂ ಸ್ಥಿತಿರ್ದಂಡನಿಧಾನಮಾರ್ಜವಂ ತತಸ್ತತಶ್ಚೋಪರಮಃ ಕ್ರಿಯಾಭ್ಯಃ||’ (ಮೋಕ್ಷಧರ್ಮ, ೧೨೫-೩೨) ಇತಿ||

[2] ಯಃ ಪೂರ್ವಜನ್ಮನಿ ಕೃತಃ ಅಭ್ಯಾಸಃ ಸ ಪೂರ್ವಾಭ್ಯಾಸಃ| ತೇನೈವ ಬಲವತಾ ಹ್ರಿಯತೇ ಸಂಸಿದ್ಧೌ ಹಿ ಯಸ್ಮಾತ್ ಅವಶೋಽಪಿ ಸ ಯೋಗಭ್ರಷ್ಟಃ| ನ ಕೃತಂ ಚೇತ್ ಯೋಗಾಭ್ಯಾಸಜಾತ್ ಸಂಸ್ಕಾರಾತ್ ಬಲವತ್ತವರಂ ಅಧರ್ಮಲಕ್ಷಣಂ ಕರ್ಮ ತದಾ ಯಾಗಾಭ್ಯಾಸಜನಿತೇನ ಸಂಸ್ಕಾರೇಣ ಹ್ರಿಯತೇ| ಅಧರ್ಮಶ್ಚೇತ್ ಬಲವತ್ತರಃ ಕೃತಃ ತೇನ ಯೋಗಜೋಽಪಿ ಸಂಸ್ಕಾರಃ ಅಭಿಭೂಯತೇ ಏವ| ತತ್ಕ್ಷಯೇ ತು ಯೋಗಜಃ ಸಂಸ್ಕಾರಃ ಸ್ವಯಮೇವ ಕಾರ್ಯಮಾರಂಭತೇ| ನ ದೀರ್ಘಕಾಲಸ್ಥಸ್ಯಾಪಿ ವಿನಾಶಃ ತಸ್ಯಾಸ್ತಿ ಇತ್ಯರ್ಥಃ| ಅತಃ ಜಿಜ್ಞಾಸುರಪಿ ಯೋಗಸ್ಯ ಸ್ವರೂಪಂ ಜ್ಞಾತುಮಿಚ್ಛನ್ನಪಿ ಯೋಗಮಾರ್ಗೇ ಪ್ರವೃತ್ತಃ ಸಂನ್ಯಾಸೀ ಯೋಗಭ್ರಷ್ಟಃ ಸಾಮರ್ಥ್ಯಾತ್, ಸೋಽಪಿ ಶಬ್ದಬ್ರಹ್ಮ ವೇದೋಕ್ತಕರ್ಮಾನುಷ್ಠಾನಫಲಂ ಅತಿವರ್ತತೇ ಅತಿಕ್ರಾಮತಿ ಅಪಾಕರಿಷ್ಯತಿ| ಕಿಮುತ ಬುದ್ಧ್ವಾ ಯೋ ಯೋಗಂ ತನ್ನಿಷ್ಠಃ ಅಭ್ಯಾಸಂ ಕುರ್ಯಾತ್||

[3] ಪ್ರಯತ್ನಾತ್ ಯತಮಾನಃ ತು ಅಧಿಕಂ ಯತಮಾನಃ ಇತ್ಯರ್ಥಃ| ತತ್ರ ಯೋಗೀ ವಿದ್ವಾನ್ ಸಂಶುದ್ಧಕಿಲ್ಬಿಷಃ ಸಂಶುದ್ಧ ಪಾಪಃ| ಅನೇಕಜನ್ಮಸಂಸಿದ್ಧಃ ಅನೇಕೇಷು ಜನ್ಮಸು ಕಿಂಚಿತ್ ಕಿಂಚಿತ್ ಸಂಸ್ಕಾರಜಾತಂ ಉಪಚಿತ್ಯ ತೇನ ಉಪಚಿತೇನ ಅನೇಕ ಜನ್ಮಕೃತೇನ ಸಂಸಿದ್ಧಃ ಅನೇಕ ಜನ್ಮಸಂಸಿದ್ಧಃ| ತತಃ ಲಬ್ದಸಮ್ಯಗ್ದರ್ಶನಂ ಸನ್ ಯಾತಿ ಪರಾಂ ಪ್ರಕೃಷ್ಟಾಂ ಗತಿಂ||

Comments are closed.