Ashvamedhika Parva: Chapter 96

ಅಶ್ವಮೇಧಿಕ ಪರ್ವ

೯೬

ಮುಂಗುಸಿಯ ರೂಪದಲ್ಲಿದ್ದವನು ಯಾರೆಂದು ಜನಮೇಜಯನು ಕೇಳಲು ವೈಶಂಪಾಯನನು ಕ್ರೋಧನಿಗೆ ಮುಂಗುಸಿಯಾಗೆಂಬ ಶಾಪವು ದೊರಕಿದ ಮತ್ತು ಧರ್ಮನನ್ನು ನಿಂದಿಸಿದಾಗ ಸ್ವರೂಪವನ್ನು ಪಡೆದುಕೊಳ್ಳುವನೆಂಬ ಆಶೀರ್ವಾದಗಳ ಕಥೆಯನ್ನು ಹೇಳಿದುದು (೧-೧೫).

14096001 ಜನಮೇಜಯ ಉವಾಚ

14096001a ಕೋಽಸೌ ನಕುಲರೂಪೇಣ ಶಿರಸಾ ಕಾಂಚನೇನ ವೈ|

14096001c ಪ್ರಾಹ ಮಾನುಷವದ್ವಾಚಮೇತತ್ಪೃಷ್ಟೋ ವದಸ್ವ ಮೇ||

ಜನಮೇಜಯನು ಹೇಳಿದನು: “ಮನುಷ್ಯನಂತೆ ಮಾತನಾಡಿದ ಕಾಂಚನ ಶಿರವುಳ್ಳ ಮುಂಗುಸಿಯ ರೂಪದಲ್ಲಿದ್ದ ಅವನು ಯಾರು? ಕೇಳುವ ನನಗೆ ಹೇಳು!”

14096002 ವೈಶಂಪಾಯನ ಉವಾಚ

14096002a ಏತತ್ಪೂರ್ವಂ ನ ಪೃಷ್ಟೋಽಹಂ ನ ಚಾಸ್ಮಾಭಿಃ ಪ್ರಭಾಷಿತಮ್|

14096002c ಶ್ರೂಯತಾಂ ನಕುಲೋ ಯೋಽಸೌ ಯಥಾ ವಾಗಸ್ಯ ಮಾನುಷೀ||

ವೈಶಂಪಾಯನನು ಹೇಳಿದನು: “ಮೊದಲು ನೀನು ನನಗೆ ಇದರ ಕುರಿತು ಕೇಳಲಿಲ್ಲ. ನಾನೂ ಕೂಡ ಅದರ ಕುರಿತು ಹೇಳಲಿಲ್ಲ. ಮನುಷ್ಯನಂತೆ ಮಾತನಾಡಿದ ಆ ಮುಂಗುಸಿಯು ಯಾರೆಂದು ಕೇಳು.

14096003a ಶ್ರಾದ್ಧಂ ಸಂಕಲ್ಪಯಾಮಾಸ ಜಮದಗ್ನಿಃ ಪುರಾ ಕಿಲ|

14096003c ಹೋಮಧೇನುಸ್ತಮಾಗಾಚ್ಚ ಸ್ವಯಂ ಚಾಪಿ ದುದೋಹ ತಾಮ್||

ಹಿಂದೊಮ್ಮೆ ಜಮದಗ್ನಿಯು ಶ್ರಾದ್ಧದ ಸಂಕಲ್ಪವನ್ನು ಮಾಡಿದನು. ಆಗ ಹೋಮಧೇನುವು ಅವನ ಬಳಿಬರಲು, ಸ್ವಯಂ ಅವನೇ ಅದರ ಹಾಲನ್ನು ಕರೆದನು.

14096004a ತತ್ಕ್ಷೀರಂ ಸ್ಥಾಪಯಾಮಾಸ ನವೇ ಭಾಂಡೇ ದೃಢೇ ಶುಚೌ|

14096004c ತಚ್ಚ ಕ್ರೋಧಃ ಸ್ವರೂಪೇಣ ಪಿಠರಂ ಪರ್ಯವರ್ತಯತ್||

ಆ ಹಾಲನ್ನು ದೃಢವಾದ ಶುಚಿಯಾದ ಹೊಸ ಪಾತ್ರೆಯಲ್ಲಿ ಇರಿಸಿದನು. ಆ ಪಾತ್ರೆಯಲ್ಲಿ ಕ್ರೋಧನು ಸ್ವರೂಪದಲ್ಲಿ ಪ್ರವೇಶಿಸಿದನು[1].

14096005a ಜಿಜ್ಞಾಸುಸ್ತಮೃಷಿಶ್ರೇಷ್ಠಂ ಕಿಂ ಕುರ್ಯಾದ್ವಿಪ್ರಿಯೇ ಕೃತೇ|

14096005c ಇತಿ ಸಂಚಿಂತ್ಯ ದುರ್ಮೇಧಾ ಧರ್ಷಯಾಮಾಸ ತತ್ಪಯಃ||

ಅಪ್ರಿಯ ಕಾರ್ಯವನ್ನು ಮಾಡಿದರೆ ಆ ಋಷಿಶ್ರೇಷ್ಠನು ಏನು ಮಾಡುತ್ತಾನೆಂದು ತಿಳಿಯಬೇಕು ಎಂದು ಆಲೋಚಿಸಿ ಕ್ರೋಧನು ಆ ಹಾಲನ್ನು ಕೆಡಿಸಿದನು.

14096006a ತಮಾಜ್ಞಾಯ ಮುನಿಃ ಕ್ರೋಧಂ ನೈವಾಸ್ಯ ಚುಕುಪೇ ತತಃ|

14096006c ಸ ತು ಕ್ರೋಧಸ್ತಮಾಹೇದಂ ಪ್ರಾಂಜಲಿರ್ಮೂರ್ತಿಮಾನ್ ಸ್ಥಿತಃ||

ಕ್ರೋಧನು ಹಾಲನ್ನು ಕೆಡಿಸಿದುದನ್ನು ತಿಳಿದ ಮುನಿಯು ಕ್ರೋಧವಶನಾಗಲು ಕ್ರೋಧನು ಮೂರ್ತಿಮತ್ತನಾಗಿ ಕೈಮುಗಿದು ನಿಂತು ಅವನಿಗೆ ಇದನ್ನು ಹೇಳಿದನು:

14096007a ಜಿತೋಽಸ್ಮೀತಿ ಭೃಗುಶ್ರೇಷ್ಠ ಭೃಗವೋ ಹ್ಯತಿರೋಷಣಾಃ|

14096007c ಲೋಕೇ ಮಿಥ್ಯಾಪ್ರವಾದೋಽಯಂ ಯತ್ತ್ವಯಾಸ್ಮಿ ಪರಾಜಿತಃ||

“ಭೃಗುಶ್ರೇಷ್ಠ! ನಾನು ನಿನಗೆ ಸೋತಿದ್ದೇನೆ! ಭೃಗುವಂಶದವರು ಅತಿ ಕುಪಿತರು ಎಂಬ ಮಿಥ್ಯ ಅಪರಾಧವು ಲೋಕದಲ್ಲಿತ್ತು. ಆದರೆ ನಾನು ನಿನ್ನಿಂದ ಪರಾಜಿತನಾಗಿದ್ದೇನೆ.

14096008a ಸೋಽಹಂ ತ್ವಯಿ ಸ್ಥಿತೋ ಹ್ಯದ್ಯ ಕ್ಷಮಾವತಿ ಮಹಾತ್ಮನಿ|

14096008c ಬಿಭೇಮಿ ತಪಸಃ ಸಾಧೋ ಪ್ರಸಾದಂ ಕುರು ಮೇ ವಿಭೋ||

ಮಹಾತ್ಮ! ನಿನ್ನ ಮುಂದೆ ನಿಂತಿರುವ ನನ್ನನ್ನು ಇಂದು ಕ್ಷಮಿಸಬೇಕು. ವಿಭೋ! ಸಾಧೋ! ನಿನ್ನ ಪತಸ್ಸಿಗೆ ನಾನು ಹೆದರಿದ್ದೇನೆ. ನನ್ನ ಮೇಲೆ ಕೃಪೆ ತೋರು!”

14096009 ಜಮದಗ್ನಿರುವಾಚ

14096009a ಸಾಕ್ಷಾದ್ದೃಷ್ಟೋಽಸಿ ಮೇ ಕ್ರೋಧ ಗಚ್ಚ ತ್ವಂ ವಿಗತಜ್ವರಃ|

14096009c ನ ಮಮಾಪಕೃತಂ ತೇಽದ್ಯ ನ ಮನ್ಯುರ್ವಿದ್ಯತೇ ಮಮ||

ಜಮದಗ್ನಿಯು ಹೇಳಿದನು: “ಕ್ರೋಧ! ನಿನ್ನನ್ನು ಸಾಕ್ಷಾತ್ ನೋಡಿದಂತಾಯಿತು. ನಿಶ್ಚಿಂತನಾಗಿ ನೀನು ಹೋಗು. ಇಂದು ನೀನು ನನಗೇನೂ ಅಪರಾಧವನ್ನೆಸಗಿಲ್ಲ. ನಿನ್ನ ಮೇಲೆ ನನ್ನ ಕೋಪವೂ ಇಲ್ಲ.

14096010a ಯಾನುದ್ದಿಶ್ಯ ತು ಸಂಕಲ್ಪಃ ಪಯಸೋಽಸ್ಯ ಕೃತೋ ಮಯಾ|

14096010c ಪಿತರಸ್ತೇ ಮಹಾಭಾಗಾಸ್ತೇಭ್ಯೋ ಬುಧ್ಯಸ್ವ ಗಮ್ಯತಾಮ್||

ಯಾರನ್ನು ಉದ್ದೇಶಿಸಿ ಸಂಕಲ್ಪಮಾಡಿ ಈ ಹಾಲನ್ನು ಇರಿಸಿದ್ದೆನೋ ಆ ಮಹಾಭಾಗ ಪಿತೃಗಳ ಬಳಿ ಹೋಗಿ ಅವರಿಗೆ ಇದನ್ನು ತಿಳಿಸು!”

14096011a ಇತ್ಯುಕ್ತೋ ಜಾತಸಂತ್ರಾಸಃ ಸ ತತ್ರಾಂತರಧೀಯತ|

14096011c ಪಿತೄಣಾಮಭಿಷಂಗಾತ್ತು ನಕುಲತ್ವಮುಪಾಗತಃ||

ಹೀಗೆ ಕೇಳಿದ ಭಯಪೀಡಿತ ಕ್ರೋಧನು ಅಲ್ಲಿಯೇ ಅಂತರ್ಧಾನನಾದನು. ಪಿತೃಗಳ ಶಾಪದಿಂದ ಅವನು ಮುಂಗುಸಿಯಾದನು.

14096012a ಸ ತಾನ್ಪ್ರಸಾದಯಾಮಾಸ ಶಾಪಸ್ಯಾಂತೋ ಭವೇದಿತಿ|

14096012c ತೈಶ್ಚಾಪ್ಯುಕ್ತೋ ಯದಾ ಧರ್ಮಂ ಕ್ಷೇಪ್ಸ್ಯಸೇ ಮೋಕ್ಷ್ಯಸೇ ತದಾ||

ಶಾಪದ ಅಂತ್ಯವಾಗಲೆಂದು ಅವನು ಅವರ ಕೃಪೆಯನ್ನು ಕೇಳಿದನು. “ಧರ್ಮನನ್ನು ನೀನು ನಿಂದಿಸಿದಾಗ ನಿನಗೆ ಶಾಪದ ವಿಮೋಚನೆಯಾಗುತ್ತದೆ” ಎಂದು ಅವರು ಅವನಿಗೆ ಹೇಳಿದರು.

14096013a ತೈಶ್ಚೋಕ್ತೋ ಯಜ್ಞಿಯಾನ್ದೇಶಾನ್ಧರ್ಮಾರಣ್ಯಾನಿ ಚೈವ ಹ|

14096013c ಜುಗುಪ್ಸನ್ಪರಿಧಾವನ್ಸ ಯಜ್ಞಂ ತಂ ಸಮುಪಾಸದತ್||

ಅವರು ಹೀಗೆ ಹೇಳಲು ಕ್ರೋಧನು ಜುಗುಪ್ಸೆತಾಳಿ ಯಜ್ಞಪ್ರದೇಶಗಳನ್ನೂ ಧರ್ಮಾರಣ್ಯಗಳನ್ನೂ ಸುತ್ತಾಡಿಕೊಂಡು ಯುಧಿಷ್ಠಿರನ ಯಜ್ಞಕ್ಕೆ ಬಂದು ತಲುಪಿದನು.

14096014a ಧರ್ಮಪುತ್ರಮಥಾಕ್ಷಿಪ್ಯ ಸಕ್ತುಪ್ರಸ್ಥೇನ ತೇನ ಸಃ|

14096014c ಮುಕ್ತಃ ಶಾಪಾತ್ತತಃ ಕ್ರೋಧೋ ಧರ್ಮೋ ಹ್ಯಾಸೀದ್ಯುಧಿಷ್ಠಿರಃ||

ಸೇರು ಹಿಟ್ಟಿನ ದಾನದ ಮಹಿಮೆಯನ್ನು ಹೇಳಿ ಧರ್ಮಪುತ್ರನ ಯಜ್ಞವನ್ನು ನಿಂದಿಸಿ, ಶಾಪದಿಂದ ಬಿಡುಗಡೆ ಹೊಂದಿ ಕ್ರೋಧ ಧರ್ಮನು ಯುಧಿಷ್ಠಿರನಲ್ಲಿಯೇ ಸೇರಿಹೋದನು.

14096015a ಏವಮೇತತ್ತದಾ ವೃತ್ತಂ ತಸ್ಯ ಯಜ್ಞೇ ಮಹಾತ್ಮನಃ|

14096015c ಪಶ್ಯತಾಂ ಚಾಪಿ ನಸ್ತತ್ರ ನಕುಲೋಽಂತರ್ಹಿತಸ್ತದಾ||

ಆ ಮಹಾತ್ಮನ ಯಜ್ಞದಲ್ಲಿ ಈ ವೃತ್ತಾಂತವು ನಡೆಯಿತು. ಎಲ್ಲರೂ ನೋಡುತ್ತಿದ್ದಂತೆಯೇ ಅಲ್ಲಿಯೇ ಆ ಮುಂಗುಸಿಯು ಅಂತರ್ಧಾನವಾಯಿತು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ನಕುಲೋಪಾಖ್ಯಾನೇ ಷಟ್ನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ನಕುಲೋಪಾಖ್ಯಾನ ಎನ್ನುವ ತೊಂಭತ್ತಾರನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಮೇಧಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಪರ್ವವು|

ಇತಿ ಶ್ರೀ ಮಹಾಭಾರತೇ ಅಶ್ವಮೇಧಿಕಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಅಶ್ವಮೇಧಿಕಪರ್ವವು||

ಇದೂವರೆಗಿನ ಒಟ್ಟು ಮಹಾಪರ್ವಗಳು – ೧೪/೧೮, ಉಪಪರ್ವಗಳು-೮೯/೧೦೦, ಅಧ್ಯಾಯಗಳು-೧೯೩೧/೧೯೯೫, ಶ್ಲೋಕಗಳು-೭೨೧೪೯/೭೩೭೮೪

[1] ಭಾರತದರ್ಶನದಲ್ಲಿ “ಆ ಪಾತ್ರೆಯಲ್ಲಿ ಧರ್ಮನು ಕ್ರೋಧದ ರೂಪದಿಂದ ಪ್ರವೇಶಿಸಿದನು” ಎಂದಿದೆ.

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Comments are closed.