Ashvamedhika Parva: Chapter 40

ಅಶ್ವಮೇಧಿಕ ಪರ್ವ

೪೦

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೯).

14040001 ಬ್ರಹ್ಮೋವಾಚ

14040001a ಅವ್ಯಕ್ತಾತ್ಪೂರ್ವಮುತ್ಪನ್ನೋ ಮಹಾನಾತ್ಮಾ ಮಹಾಮತಿಃ|

14040001c ಆದಿರ್ಗುಣಾನಾಂ ಸರ್ವೇಷಾಂ ಪ್ರಥಮಃ ಸರ್ಗ ಉಚ್ಯತೇ||

ಬ್ರಹ್ಮನು ಹೇಳಿದನು: “ಅವ್ಯಕ್ತ ಪ್ರಕೃತಿಯು ಹುಟ್ಟುವುದರ ಮೊದಲು ಮಹಾ ಆತ್ಮ, ಮಾಹಾ ಮತಿ, ಎಲ್ಲ ಗುಣಗಳ ಆದಿಯಾದ ಮಹತ್ ಹುಟ್ಟಿತೆಂದು ಹೇಳುತ್ತಾರೆ.

14040002a ಮಹಾನಾತ್ಮಾ ಮತಿರ್ವಿಷ್ಣುರ್ವಿಶ್ವಃ ಶಂಭುಶ್ಚ ವೀರ್ಯವಾನ್|

14040002c ಬುದ್ಧಿಃ ಪ್ರಜ್ಞೋಪಲಬ್ಧಿಶ್ಚ ತಥಾ ಖ್ಯಾತಿರ್ಧೃತಿಃ ಸ್ಮೃತಿಃ||

14040003a ಪರ್ಯಾಯವಾಚಕೈಃ ಶಬ್ದೈರ್ಮಹಾನಾತ್ಮಾ ವಿಭಾವ್ಯತೇ|

14040003c ತಂ ಜಾನನ್ಬ್ರಾಹ್ಮಣೋ ವಿದ್ವಾನ್ನ ಪ್ರಮೋಹಂ ನಿಗಚ್ಚತಿ||

ಈ ಮಹಾನ್ ಆತ್ಮವನ್ನು ಮಹಾನ್, ಆತ್ಮ, ಮತಿ, ವಿಷ್ಣು, ವಿಶ್ವ, ಶಂಭು, ವೀರ್ಯವಾನ್, ಬುದ್ಧಿ, ಪ್ರಜ್ಞಾ, ಉಪಲಬ್ಧಿ, ಖ್ಯಾತಿ, ಧೃತಿ, ಸ್ಮೃತಿ – ಮೊದಲಾದ ಪರ್ಯಾಯಶಬ್ಧಗಳಿಂದ ಭಾವಿಸುತ್ತಾರೆ. ಈ ತತ್ತ್ವವನ್ನು ತಿಳಿದ ವಿದ್ವಾನ್ ಬ್ರಾಹ್ಮಣನು ಮೋಹವಶನಾಗುವುದಿಲ್ಲ.

14040004a ಸರ್ವತಃಪಾಣಿಪಾದಶ್ಚ ಸರ್ವತೋಕ್ಷಿಶಿರೋಮುಖಃ|

14040004c ಸರ್ವತಃಶ್ರುತಿಮಾಽಲ್ಲೋಕೇ ಸರ್ವಂ ವ್ಯಾಪ್ಯ ಸ ತಿಷ್ಠತಿ||

ಆ ಪರಮಾತ್ಮನು ಸರ್ವತಃ ಕೈ-ಕಾಲುಗಳನ್ನೂ, ಸರ್ವತಃ ಕಣ್ಣು-ಶಿರಸ್ಸು-ಮುಖವುಳ್ಳವನೂ, ಸರ್ವತಃ ಕಿವಿಗಳುಳ್ಳವನೂ ಆಗಿ, ಲೋಕದ ಸರ್ವವನ್ನೂ ವ್ಯಾಪಿಸಿಕೊಂಡಿರುವನು.

14040005a ಮಹಾಪ್ರಭಾರ್ಚಿಃ ಪುರುಷಃ ಸರ್ವಸ್ಯ ಹೃದಿ ನಿಶ್ರಿತಃ|

14040005c ಅಣಿಮಾ ಲಘಿಮಾ ಪ್ರಾಪ್ತಿರೀಶಾನೋ ಜ್ಯೋತಿರವ್ಯಯಃ||

ಮಹಾಪ್ರಭೆಯ ಪ್ರಕಾಶವುಳ್ಳ ಆ ಪುರುಷನು ಸರ್ವರ ಹೃದಯದಲ್ಲಿ ವಿರಾಜಮಾನನಾಗಿರುವನು. ಅಣಿಮ-ಲಘಿಮ-ಪ್ರಾಪ್ತಿ ಮೊದಲಾದ ಅಷ್ಟ ಸಿದ್ಧಿಗಳು ಅವನ ಸ್ವರೂಪಗಳು. ಅವನು ಎಲ್ಲವುಗಳ ಸ್ವಾಮಿಯೂ, ಅವ್ಯಯನೂ, ಜ್ಯೋತಿಯೂ ಆಗಿರುವನು.

14040006a ತತ್ರ ಬುದ್ಧಿಮತಾಂ ಲೋಕಾಃ ಸಂನ್ಯಾಸನಿರತಾಶ್ಚ ಯೇ|

14040006c ಧ್ಯಾನಿನೋ ನಿತ್ಯಯೋಗಾಶ್ಚ ಸತ್ಯಸಂಧಾ ಜಿತೇಂದ್ರಿಯಾಃ||

14040007a ಜ್ಞಾನವಂತಶ್ಚ ಯೇ ಕೇ ಚಿದಲುಬ್ಧಾ ಜಿತಮನ್ಯವಃ|

14040007c ಪ್ರಸನ್ನಮನಸೋ ಧೀರಾ ನಿರ್ಮಮಾ ನಿರಹಂಕೃತಾಃ|

14040007e ವಿಮುಕ್ತಾಃ ಸರ್ವ ಏವೈತೇ ಮಹತ್ತ್ವಮುಪಯಾಂತಿ ವೈ||

ಲೋಕದಲ್ಲಿ ಬುದ್ಧಿವಂತರು, ಸಂನ್ಯಾಸನಿರತರು, ಧ್ಯಾನಿಗಳು, ನಿತ್ಯಯೋಗಿಗಳು, ಸತ್ಯಸಂಧರು, ಜಿತೇಂದ್ರಿಯರು, ಜ್ಞಾನವಂತರು, ಅಲುಬ್ಧರು, ಕೋಪವನ್ನು ಗೆದ್ದವರು, ಪ್ರಸನ್ನಮನಸರು, ಧೀರರು, ನನ್ನದಲ್ಲವೆನ್ನುವವರು, ನಿರಹಂಕಾರರು – ಇವರೆಲ್ಲರೂ ವಿಮುಕ್ತರಾಗಿ ಇದೇ ಮಹತ್ತನ್ನು ಸೇರುತ್ತಾರೆ.

14040008a ಆತ್ಮನೋ ಮಹತೋ ವೇದ ಯಃ ಪುಣ್ಯಾಂ ಗತಿಮುತ್ತಮಾಮ್|

14040008c ಸ ಧೀರಃ ಸರ್ವಲೋಕೇಷು ನ ಮೋಹಮಧಿಗಚ್ಚತಿ|

14040008e ವಿಷ್ಣುರೇವಾದಿಸರ್ಗೇಷು ಸ್ವಯಂಭೂರ್ಭವತಿ ಪ್ರಭುಃ||

ಆತ್ಮದ ಮಹತ್ತನ್ನು ತಿಳಿದವರು ಉತ್ತಮ ಪುಣ್ಯಗತಿಯನ್ನು ಹೊಂದುತ್ತಾರೆ.  ಆ ಧೀರನು ಸರ್ವಲೋಕಗಳಲ್ಲಿಯೂ ಮೋಹಕ್ಕೊಳಗಾಗುವುದಿಲ್ಲ. ಸೃಷ್ಟಿಯ ಆದಿಯಲ್ಲಿ ಪ್ರಭು ವಿಷ್ಣುವೇ ಸ್ವಯಂಭುವಾಗುತ್ತಾನೆ.     

14040009a ಏವಂ ಹಿ ಯೋ ವೇದ ಗುಹಾಶಯಂ ಪ್ರಭುಂ

ನರಃ ಪುರಾಣಂ ಪುರುಷಂ ವಿಶ್ವರೂಪಮ್|

14040009c ಹಿರಣ್ಮಯಂ ಬುದ್ಧಿಮತಾಂ ಪರಾಂ ಗತಿಂ

ಸ ಬುದ್ಧಿಮಾನ್ಬುದ್ಧಿಮತೀತ್ಯ ತಿಷ್ಠತಿ||

ಹೀಗೆ ಗುಹಾಶಯ ಪ್ರಭು ಪುರಾಣ ಪುರುಷ ವಿಶ್ವರೂಪ ಹಿರಣ್ಮಯ ಬುದ್ಧಿಯುಳ್ಳವರ ಪರಮ ಗತಿಯನ್ನು ತಿಳಿದ ಬುದ್ಧಿವಂತನು ಬುದ್ಧಿಯ ಎಲ್ಲೆಯನ್ನು ಮೀರಿ ನಿಲ್ಲುತ್ತಾನೆ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತನೇ ಅಧ್ಯಾಯವು.

Comments are closed.