Ashvamedhika Parva: Chapter 18

ಅಶ್ವಮೇಧಿಕ ಪರ್ವ

೧೮

ಕೃಷ್ಣನು ಅರ್ಜುನನಿಗೆ ಕಾಶ್ಯಪ-ಸಿದ್ಧಪುರುಷರ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೩೪).

14018001 ಬ್ರಾಹ್ಮಣ ಉವಾಚ

14018001a ಶುಭಾನಾಮಶುಭಾನಾಂ ಚ ನೇಹ ನಾಶೋಽಸ್ತಿ ಕರ್ಮಣಾಮ್|

14018001c ಪ್ರಾಪ್ಯ ಪ್ರಾಪ್ಯ ತು ಪಚ್ಯಂತೇ ಕ್ಷೇತ್ರಂ ಕ್ಷೇತ್ರಂ ತಥಾ ತಥಾ||

ಬ್ರಾಹ್ಮಣನು ಹೇಳಿದನು: “ಇಲ್ಲಿ ಕರ್ಮಗಳ ಶುಭ-ಅಶುಭ ಫಲಗಳು ನಾಶವಾಗುವುದಿಲ್ಲ. ಜೀವವು ಪಡೆಯುವ ಕ್ಷೇತ್ರ-ಕ್ಷೇತ್ರಗಳಲ್ಲಿಯೂ ಅವು ತಲುಪಿ ಜೀವವನ್ನು ಬೇಯಿಸುತ್ತವೆ.  

14018002a ಯಥಾ ಪ್ರಸೂಯಮಾನಸ್ತು ಫಲೀ ದದ್ಯಾತ್ಫಲಂ ಬಹು|

14018002c ತಥಾ ಸ್ಯಾದ್ವಿಪುಲಂ ಪುಣ್ಯಂ ಶುದ್ಧೇನ ಮನಸಾ ಕೃತಮ್||

ಹೇಗೆ ಬೀಜ ಹಾಕಿ ಹುಟ್ಟಿಸಿದ ಫಲನೀಡುವ ವೃಕ್ಷವು ಫಲಿಸುವ ಕಾಲಬಂದೊದಗಿದಾಗ ಅಪಾರ ಫಲಗಳನ್ನು ನೀಡುವುದೋ ಹಾಗೆ ಶುದ್ಧ ಮನಸ್ಸಿನಿಂದ ಮಾಡಿದ ಕರ್ಮಗಳು ವಿಪುಲವಾದ ಪುಣ್ಯ ಫಲಗಳನ್ನು ನೀಡುತ್ತವೆ.

14018003a ಪಾಪಂ ಚಾಪಿ ತಥೈವ ಸ್ಯಾತ್ಪಾಪೇನ ಮನಸಾ ಕೃತಮ್|

14018003c ಪುರೋಧಾಯ ಮನೋ ಹೀಹ ಕರ್ಮಣ್ಯಾತ್ಮಾ ಪ್ರವರ್ತತೇ||

ಹಾಗೆಯೇ ಪಾಪ ಮನಸ್ಸಿನಿಂದ ಮಾಡಿದ ಕರ್ಮಗಳು ಅಪಾರ ಪಾಪಫಲಗಳನ್ನು ನೀಡುತ್ತವೆ. ಜೀವಾತ್ಮನು ಮನಸ್ಸಿನಿಂದಲೇ ಇಂತಹ ಕರ್ಮಗಳನ್ನು ಮಾಡುತ್ತಿರುತ್ತಾನೆ.

14018004a ಯಥಾ ಕರ್ಮಸಮಾದಿಷ್ಟಂ ಕಾಮಮನ್ಯುಸಮಾವೃತಃ|

14018004c ನರೋ ಗರ್ಭಂ ಪ್ರವಿಶತಿ ತಚ್ಚಾಪಿ ಶೃಣು ಚೋತ್ತರಮ್||

ಕರ್ಮದ ಬಲೆಯಿಂದ ಬಂಧಿಸಲ್ಪಟ್ಟು ಕಾಮ-ಕ್ರೋಧಗಳಿಂದ ಸಮಾವೃತನಾದ ನರನು ಹೇಗೆ ಗರ್ಭವನ್ನು ಪ್ರವೇಶಿಸುವನು ಎನ್ನುವುದನ್ನು ಕೇಳು.

14018005a ಶುಕ್ರಂ ಶೋಣಿತಸಂಸೃಷ್ಟಂ ಸ್ತ್ರಿಯಾ ಗರ್ಭಾಶಯಂ ಗತಮ್|

14018005c ಕ್ಷೇತ್ರಂ ಕರ್ಮಜಮಾಪ್ನೋತಿ ಶುಭಂ ವಾ ಯದಿ ವಾಶುಭಮ್||

ವೀರ್ಯ-ರಕ್ತಗಳಿಂದ ಸೃಷ್ಟಿಸಲ್ಪಟ್ಟ ಜೀವಾತ್ಮನು ತನ್ನ ಕರ್ಮಗಳಿಗೆ ತಕ್ಕಂತಹ ಶುಭ ಅಥವಾ ಅಶುಭ ಕ್ಷೇತ್ರವನ್ನು ಪಡೆದು ಸ್ತ್ರೀಯ ಗರ್ಭಾಶಯವನ್ನು ಸೇರುತ್ತಾನೆ.

14018006a ಸೌಕ್ಷ್ಮ್ಯಾದವ್ಯಕ್ತಭಾವಾಚ್ಚ ನ ಸ ಕ್ವ ಚನ ಸಜ್ಜತೇ|

14018006c ಸಂಪ್ರಾಪ್ಯ ಬ್ರಹ್ಮಣಃ ಕಾಯಂ ತಸ್ಮಾತ್ತತ್ತದ್ಬ್ರಹ್ಮ ಶಾಶ್ವತಮ್|

ಜೀವನು ಸೂಕ್ಷ್ಮನೂ ಅವ್ಯಕ್ತನೂ ಆಗಿದ್ದರೂ ಪರಬ್ರಹ್ಮವಸ್ತುವಿನಲ್ಲಿ ಸೇರಿಕೊಂಡ ನಂತರ ಪುನಃ ಶರೀರಗಳಲ್ಲಿ ಸೇರಿಕೊಳ್ಳಲು ಆಸಕ್ತನಾಗಿರುವುದಿಲ್ಲ. ಈ ಕಾರಣದಿಂದಲೇ ಬ್ರಹ್ಮವು ಶಾಶ್ವತವಾದುದು.

14018006e ತದ್ಬೀಜಂ ಸರ್ವಭೂತಾನಾಂ ತೇನ ಜೀವಂತಿ ಜಂತವಃ||

14018007a ಸ ಜೀವಃ ಸರ್ವಗಾತ್ರಾಣಿ ಗರ್ಭಸ್ಯಾವಿಶ್ಯ ಭಾಗಶಃ|

14018007c ದಧಾತಿ ಚೇತಸಾ ಸದ್ಯಃ ಪ್ರಾಣಸ್ಥಾನೇಷ್ವವಸ್ಥಿತಃ|

14018007e ತತಃ ಸ್ಪಂದಯತೇಽಂಗಾನಿ ಸ ಗರ್ಭಶ್ಚೇತನಾನ್ವಿತಃ||

ಅದೇ ಸರ್ವಭೂತಗಳಿಗೂ ಬೀಜರೂಪವಾಗಿರುವುದು. ಅದರಿಂದಲೇ ಸರ್ವ ಜಂತುಗಳು ಜೀವಿಸಿರುತ್ತವೆ. ಆ ಜೀವನು ಗರ್ಭದ ಸರ್ವ ಅವಯವಗಳನ್ನೂ ಭಾಗಶಃ ಅವರಿಸಿ, ಪ್ರಾಣಸ್ಥಾನದಲ್ಲಿದ್ದುಕೊಂಡು ಚೇತಸ್ಸನ್ನು ತುಂಬಿಸುತ್ತಾನೆ. ಚೇತನಾಯುಕ್ತವಾದ ಗರ್ಭವು ನಂತರ ಎಲ್ಲ ಅವಯವಗಳನ್ನೂ ಸಂಚಾಲನಗೊಳಿಸುತ್ತದೆ.

14018008a ಯಥಾ ಹಿ ಲೋಹನಿಷ್ಯಂದೋ ನಿಷಿಕ್ತೋ ಬಿಂಬವಿಗ್ರಹಮ್|

14018008c ಉಪೈತಿ ತದ್ವಜ್ಜಾನೀಹಿ ಗರ್ಭೇ ಜೀವಪ್ರವೇಶನಮ್||

ಕಾಯಿಸಿದ ಲೋಹ ದ್ರವವು ಹೇಗೆ ಎರಕದ ಅಚ್ಚನ್ನು ಪ್ರವೇಶಿಸುವುದೋ ಹಾಗೆ ಜೀವವೂ ಕೂಡ ಗರ್ಭವನ್ನು ಪ್ರವೇಶಿಸಿ, ಅದರ ಆಕಾರವನ್ನೇ ಪಡೆಯುತ್ತದೆ.

14018009a ಲೋಹಪಿಂಡಂ ಯಥಾ ವಹ್ನಿಃ ಪ್ರವಿಶತ್ಯಭಿತಾಪಯನ್|

14018009c ತಥಾ ತ್ವಮಪಿ ಜಾನೀಹಿ ಗರ್ಭೇ ಜೀವೋಪಪಾದನಮ್||

ಅಗ್ನಿಯು ಹೇಗೆ ಲೋಹಪಿಂಡವನ್ನು ಸೇರಿ ಅದನ್ನು ಬಿಸಿಯಾಗಿಸುವನೋ ಅದೇರೀತಿಯಲ್ಲಿ ಜೀವವೂ ಗರ್ಭವನ್ನು ಸೇರಿ ಅದನ್ನು ಚೇತನಗೊಳಿಸುತ್ತದೆ.

14018010a ಯಥಾ ಚ ದೀಪಃ ಶರಣಂ ದೀಪ್ಯಮಾನಃ ಪ್ರಕಾಶಯೇತ್|

14018010c ಏವಮೇವ ಶರೀರಾಣಿ ಪ್ರಕಾಶಯತಿ ಚೇತನಾ||

ಹಚ್ಚಿಟ್ಟ ದೀಪವು ಮನೆಯನ್ನು ಹೇಗೆ ಬೆಳಗಿಸುತ್ತದೆಯೋ ಹಾಗೆ ಚೇತನವು ಶರೀರಗಳನ್ನು ಪ್ರಕಾಶಗೊಳಿಸುತ್ತದೆ.

14018011a ಯದ್ಯಚ್ಚ ಕುರುತೇ ಕರ್ಮ ಶುಭಂ ವಾ ಯದಿ ವಾಶುಭಮ್|

14018011c ಪೂರ್ವದೇಹಕೃತಂ ಸರ್ವಮವಶ್ಯಮುಪಭುಜ್ಯತೇ||

ಹಿಂದಿನ ದೇಹಗಳಲ್ಲಿರುವಾಗ ಮಾಡಿದ ಶುಭ ಅಥವಾ ಅಶುಭ ಕರ್ಮಗಳ ಫಲಗಳೆಲ್ಲವನ್ನೂ ಜೀವವು ಅವಶ್ಯವಾಗಿ ಅನುಭವಿಸಬೇಕಾಗುತ್ತದೆ.

14018012a ತತಸ್ತತ್ಕ್ಷೀಯತೇ ಚೈವ ಪುನಶ್ಚಾನ್ಯತ್ಪ್ರಚೀಯತೇ|

14018012c ಯಾವತ್ತನ್ಮೋಕ್ಷಯೋಗಸ್ಥಂ ಧರ್ಮಂ ನೈವಾವಬುಧ್ಯತೇ||

ಎಲ್ಲಿಯವರೆಗೆ ಮೋಕ್ಷಯೋಗದ ಧರ್ಮವನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ಕರ್ಮಫಲಗಳು ಕ್ಷೀಣವಾಗುತ್ತಿರುತ್ತವೆ ಮತ್ತು ಪುನಃ ಅನ್ಯ ಕರ್ಮಗಳು ಸೇರಿಕೊಳ್ಳುತ್ತಲೇ ಇರುತ್ತವೆ.

14018013a ತತ್ರ ಧರ್ಮಂ ಪ್ರವಕ್ಷ್ಯಾಮಿ ಸುಖೀ ಭವತಿ ಯೇನ ವೈ|

14018013c ಆವರ್ತಮಾನೋ ಜಾತೀಷು ತಥಾನ್ಯೋನ್ಯಾಸು ಸತ್ತಮ||

ಸತ್ತಮ! ಹೀಗೆ ಬೇರೆ ಬೇರೆ ಯೋನಿಗಳಲ್ಲಿ ಹುಟ್ಟುವ ಮನುಷ್ಯನು ಹೇಗೆ ಸುಖಿಯಾಗಿರಬಲ್ಲನು ಎಂಬ ಆ ಧರ್ಮದ ಕುರಿತು ಹೇಳುತ್ತೇನೆ.

14018014a ದಾನಂ ವ್ರತಂ ಬ್ರಹ್ಮಚರ್ಯಂ ಯಥೋಕ್ತವ್ರತಧಾರಣಮ್|

14018014c ದಮಃ ಪ್ರಶಾಂತತಾ ಚೈವ ಭೂತಾನಾಂ ಚಾನುಕಂಪನಮ್||

14018015a ಸಂಯಮಶ್ಚಾನೃಶಂಸ್ಯಂ ಚ ಪರಸ್ವಾದಾನವರ್ಜನಮ್|

14018015c ವ್ಯಲೀಕಾನಾಮಕರಣಂ ಭೂತಾನಾಂ ಯತ್ರ ಸಾ ಭುವಿ||

14018016a ಮಾತಾಪಿತ್ರೋಶ್ಚ ಶುಶ್ರೂಷಾ ದೇವತಾತಿಥಿಪೂಜನಮ್|

14018016c ಗುರುಪೂಜಾ ಘೃಣಾ ಶೌಚಂ ನಿತ್ಯಮಿಂದ್ರಿಯಸಂಯಮಃ||

14018017a ಪ್ರವರ್ತನಂ ಶುಭಾನಾಂ ಚ ತತ್ಸತಾಂ ವೃತ್ತಮುಚ್ಯತೇ|

14018017c ತತೋ ಧರ್ಮಃ ಪ್ರಭವತಿ ಯಃ ಪ್ರಜಾಃ ಪಾತಿ ಶಾಶ್ವತೀಃ||

ದಾನ, ವ್ರತ, ಬ್ರಹ್ಮಚರ್ಯ, ಯಥೋಕ್ತ ವ್ರತಧಾರಣ, ಇಂದ್ರಿಯ ನಿಗ್ರಹ, ಪ್ರಶಾಂತತೆ, ಸಮಸ್ತಪ್ರಾಣಿಗಳಲ್ಲಿ ಅನುಕಂಪ, ಸಂಯಮ, ಅಹಿಂಸೆ, ಇತರರಿಗೆ ಸೇರಿದ್ದುದನ್ನು ಅಪಹರಿಸದೇ ಇರುವುದು, ಭುವಿಯಲ್ಲಿರುವ ಎಲ್ಲ ಪ್ರಾಣಿಗಳಿಗೂ ಅಹಿತವನ್ನು ಬಯಸದೇ ಇರುವುದು, ಮಾತಾ-ಪಿತೃಗಳ ಶುಶ್ರೂಷೆ, ದೇವತೆಗಳ ಮತ್ತು ಅತಿಥಿಗಳ ಪೂಜನ, ಗುರುಪೂಜೆ, ದಯೆ, ಶುಚಿಯಾಗಿರುವುದು, ನಿತ್ಯವೂ ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡಿರುವುದು, ಇತರರನ್ನು ಶುಭಕರ್ಮಗಳಲ್ಲಿ ತೊಡಗಿಸುವುದು – ಇವು ಸತ್ಪುರುಷರ ಆಚಾರಗಳೆಂದು ಹೇಳುತ್ತಾರೆ. ಇವುಗಳ ಅನುಷ್ಠಾನದಿಂದ ಧರ್ಮವು ವೃದ್ಧಿಯಾಗುತ್ತದೆ. ಅದೇ ಪ್ರಜೆಗಳನ್ನು ಶಾಶ್ವತವಾಗಿ ರಕ್ಷಿಸುತ್ತದೆ.

14018018a ಏವಂ ಸತ್ಸು ಸದಾ ಪಶ್ಯೇತ್ತತ್ರ ಹ್ಯೇಷಾ ಧ್ರುವಾ ಸ್ಥಿತಿಃ|

14018018c ಆಚಾರೋ ಧರ್ಮಮಾಚಷ್ಟೇ ಯಸ್ಮಿನ್ಸಂತೋ ವ್ಯವಸ್ಥಿತಾಃ||

ಧ್ರುವಸ್ಥಿತಿಯಲ್ಲಿರುವ ಸತ್ಪುರುಷರಲ್ಲಿ ಸದಾ ಇವುಗಳನ್ನು ನಾವು ಕಾಣುತ್ತೇವೆ. ಈ ಆಚಾರಗಳು ಧರ್ಮವನ್ನು ತೋರಿಸಿಕೊಡುತ್ತವೆ. ಸಂತರು ಇವುಗಳ ಮೇಲೆಯೇ ವ್ಯವಸ್ಥಿತರಾಗಿರುತ್ತಾರೆ.

14018019a ತೇಷು ತದ್ಧರ್ಮನಿಕ್ಷಿಪ್ತಂ ಯಃ ಸ ಧರ್ಮಃ ಸನಾತನಃ|

14018019c ಯಸ್ತಂ ಸಮಭಿಪದ್ಯೇತ ನ ಸ ದುರ್ಗತಿಮಾಪ್ನುಯಾತ್||

ಅವರಲ್ಲಿ ಆ ಧರ್ಮವು ನೆಲೆಗೊಂಡಿದೆ. ಅದೇ ಸನಾತನ ಧರ್ಮ. ಅದನ್ನು ಅನುಸರಿಸುವವನು ಎಂದೂ ದುರ್ಗತಿಯನ್ನು ಹೊಂದುವುದಿಲ್ಲ.

14018020a ಅತೋ ನಿಯಮ್ಯತೇ ಲೋಕಃ ಪ್ರಮುಹ್ಯ ಧರ್ಮವರ್ತ್ಮಸು|

14018020c ಯಸ್ತು ಯೋಗೀ ಚ ಮುಕ್ತಶ್ಚ ಸ ಏತೇಭ್ಯೋ ವಿಶಿಷ್ಯತೇ||

ಧರ್ಮವರ್ತನೆಗಳಿಂದ ಜಾರಿಹೋಗುವ ಲೋಕವನ್ನು ಇದೇ ನಿಯಂತ್ರಿಸುತ್ತದೆ. ಯೋಗಿಯೂ ಮುಕ್ತನೂ ಆದವನು ಇವುಗಳೆರಡರಲ್ಲಿಯೂ ಶ್ರೇಷ್ಠನಾಗಿರುತ್ತಾನೆ.

14018021a ವರ್ತಮಾನಸ್ಯ ಧರ್ಮೇಣ ಪುರುಷಸ್ಯ ಯಥಾ ತಥಾ|

14018021c ಸಂಸಾರತಾರಣಂ ಹ್ಯಸ್ಯ ಕಾಲೇನ ಮಹತಾ ಭವೇತ್||

ಹೀಗೆ ಧರ್ಮದಲ್ಲಿ ನಡೆದುಕೊಳ್ಳುವ ಪುರುಷನು ಮಹಾಕಾಲದ ನಂತರ ಸಂಸಾರಸಾಗರವನ್ನು ದಾಟುತ್ತಾನೆ.

14018022a ಏವಂ ಪೂರ್ವಕೃತಂ ಕರ್ಮ ಸರ್ವೋ ಜಂತುರ್ನಿಷೇವತೇ|

14018022c ಸರ್ವಂ ತತ್ಕಾರಣಂ ಯೇನ ನಿಕೃತೋಽಯಮಿಹಾಗತಃ||

ಹೀಗೆ ಪೂರ್ವಕೃತ ಕರ್ಮಗಳೆಲ್ಲವನ್ನೂ ಜೀವವು ಅನುಭವಿಸುತ್ತದೆ. ಕರ್ಮಗಳಿಂದಲೇ ಜೀವವು ಇಲ್ಲಿ ವಿಕಾರವನ್ನು ಹೊಂದಿ ಜನ್ಮತಾಳುತ್ತದೆ.

14018023a ಶರೀರಗ್ರಹಣಂ ಚಾಸ್ಯ ಕೇನ ಪೂರ್ವಂ ಪ್ರಕಲ್ಪಿತಮ್|

14018023c ಇತ್ಯೇವಂ ಸಂಶಯೋ ಲೋಕೇ ತಚ್ಚ ವಕ್ಷ್ಯಾಮ್ಯತಃ ಪರಮ್||

ಜೀವದ ಶರೀರಗ್ರಹಣವನ್ನು ಮೊದಲು ಕಲ್ಪಿಸಿದವರು ಯಾರು ಎನ್ನುವ ಈ ಸಂಶಯವು ಲೋಕದಲ್ಲಿ ಇದ್ದೇ ಇದೆ. ಅದರ ಕುರಿತು ಈಗ ಹೇಳುತ್ತೇನೆ.

14018024a ಶರೀರಮಾತ್ಮನಃ ಕೃತ್ವಾ ಸರ್ವಭೂತಪಿತಾಮಹಃ|

14018024c ತ್ರೈಲೋಕ್ಯಮಸೃಜದ್ಬ್ರಹ್ಮಾ ಕೃತ್ಸ್ನಂ ಸ್ಥಾವರಜಂಗಮಮ್||

ಸರ್ವಭೂತಪಿತಾಮಹ ಬ್ರಹ್ಮನು ತನ್ನ ಆತ್ಮವನ್ನೇ ಶರೀರವನ್ನಾಗಿಸಿಕೊಂಡು ಸ್ಥಾವರಜಂಗಮಗಳಿಂದ ಕೂಡಿರುವ ಈ ಸಂಪೂರ್ಣ ತ್ರೈಲೋಕ್ಯಗಳನ್ನು ಸೃಷ್ಟಿಸಿದನು.

14018025a ತತಃ ಪ್ರಧಾನಮಸೃಜಚ್ಚೇತನಾ ಸಾ ಶರೀರಿಣಾಮ್|

14018025c ಯಯಾ ಸರ್ವಮಿದಂ ವ್ಯಾಪ್ತಂ ಯಾಂ ಲೋಕೇ ಪರಮಾಂ ವಿದುಃ||

ಅನಂತರ ಅವನು ಪ್ರಧಾನವನ್ನು ಸೃಷ್ಟಿಸಿದನು. ಅದೇ ಶರೀರಿಗಳ ಚೇತನವು. ಅದು ಸರ್ವಲೋಕಗಳಲ್ಲಿಯೂ ವ್ಯಾಪ್ತವಾಗಿದೆ. ಅದನ್ನೇ ಪರಾಪ್ರಕೃತಿ ಎಂದು ಹೇಳುತ್ತಾರೆ.

14018026a ಇಹ ತತ್ಕ್ಷರಮಿತ್ಯುಕ್ತಂ ಪರಂ ತ್ವಮೃತಮಕ್ಷರಮ್|

14018026c ತ್ರಯಾಣಾಂ ಮಿಥುನಂ ಸರ್ವಮೇಕೈಕಸ್ಯ ಪೃಥಕ್ ಪೃಥಕ್||

ಇಲ್ಲಿ ಪ್ರಕೃತಿಗೆ ಕ್ಷರವೆಂದೂ ಪರಾಪ್ರಕೃತಿಗೆ ಅಕ್ಷರವೆಂದೂ ಹೇಳುತ್ತಾರೆ. ಶುದ್ಧ ಬ್ರಹ್ಮತತ್ತ್ವ, ಕ್ಷರ ಮತ್ತು ಅಕ್ಷರ ಈ ಮೂರೂ ತತ್ತ್ವಗಳು ಎಲ್ಲವುಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಮಿಶ್ರಿತವಾಗಿರುತ್ತವೆ.

14018027a ಅಸೃಜತ್ಸರ್ವಭೂತಾನಿ ಪೂರ್ವಸೃಷ್ಟಃ ಪ್ರಜಾಪತಿಃ|

14018027c ಸ್ಥಾವರಾಣಿ ಚ ಭೂತಾನಿ ಇತ್ಯೇಷಾ ಪೌರ್ವಿಕೀ ಶ್ರುತಿಃ||

ಪ್ರಜಾಪತಿಯು ಮೊದಲು ಸ್ಥಾವರ-ಜಂಗಮಗಳಾದ ಸರ್ವಭೂತಗಳನ್ನೂ ಸೃಷ್ಟಿಸಿದನು ಎಂದು ಪುರಾತನ ಶ್ರುತಿಯು ಹೇಳುತ್ತದೆ.

14018028a ತಸ್ಯ ಕಾಲಪರೀಮಾಣಮಕರೋತ್ಸ ಪಿತಾಮಹಃ|

14018028c ಭೂತೇಷು ಪರಿವೃತ್ತಿಂ ಚ ಪುನರಾವೃತ್ತಿಮೇವ ಚ||

ಪಿತಾಮಹನು ಭೂತಗಳಲ್ಲಿರುವ ಜೀವಗಳ ಪುನರಾವೃತ್ತಿಗಳಿಗೆ ಕಾಲಪರಿಮಾಣಗಳನ್ನು ನಿಯಮಿಸಿದನು.

14018029a ಯಥಾತ್ರ ಕಶ್ಚಿನ್ಮೇಧಾವೀ ದೃಷ್ಟಾತ್ಮಾ ಪೂರ್ವಜನ್ಮನಿ|

14018029c ಯತ್ಪ್ರವಕ್ಷ್ಯಾಮಿ ತತ್ಸರ್ವಂ ಯಥಾವದುಪಪದ್ಯತೇ||

ಪೂರ್ವಜನ್ಮದಲ್ಲಿ ಆತ್ಮಸಾಕ್ಷಾತ್ಕಾರವನ್ನು ಮಾಡಿಕೊಂಡ ಓರ್ವ ಮೇದಾವಿಯು ಇವೆಲ್ಲದರ ಕುರಿತು ಹೇಳಿದುದನ್ನೇ ನಾನು ಹೇಳುತ್ತಿದ್ದೇನೆ.

14018030a ಸುಖದುಃಖೇ ಸದಾ ಸಮ್ಯಗನಿತ್ಯೇ ಯಃ ಪ್ರಪಶ್ಯತಿ|

14018030c ಕಾಯಂ ಚಾಮೇಧ್ಯಸಂಘಾತಂ ವಿನಾಶಂ ಕರ್ಮಸಂಹಿತಮ್||

14018031a ಯಚ್ಚ ಕಿಂ ಚಿತ್ಸುಖಂ ತಚ್ಚ ಸರ್ವಂ ದುಃಖಮಿತಿ ಸ್ಮರನ್|

14018031c ಸಂಸಾರಸಾಗರಂ ಘೋರಂ ತರಿಷ್ಯತಿ ಸುದುಸ್ತರಮ್||

ಸುಖ-ದುಃಖಗಳು ಸದಾ ಅನಿತ್ಯವೆಂದು ಯಾರು ಕಾಣುತ್ತಾನೋ, ಈ ಮೇದ್ಯಸಂಘಾತ ಮತ್ತು ಕರ್ಮಸಂಹಿತ ಶರೀರವು ವಿನಾಶಗೊಳ್ಳುವುದೆಂದು ಯಾರು ತಿಳಿದಿರುತ್ತಾನೋ, ಸುಖದಂತಿರುವ ಕಿಂಚಿತ್ತೆಲ್ಲವೂ ದುಃಖವೆಂದೇ ಯಾರು ನೆನಪಿಸಿಕೊಳ್ಳುತ್ತಿರುವನೋ ಅವನು ಈ ದುಸ್ತರ ಘೋರ ಸಂಸಾರ ಸಾಗರವನ್ನು ದಾಟುತ್ತಾನೆ.

14018032a ಜಾತೀಮರಣರೋಗೈಶ್ಚ ಸಮಾವಿಷ್ಟಃ ಪ್ರಧಾನವಿತ್|

14018032c ಚೇತನಾವತ್ಸು ಚೈತನ್ಯಂ ಸಮಂ ಭೂತೇಷು ಪಶ್ಯತಿ||

ಜನನ-ಮರಣ-ರೋಗಗಳಿಂದ ವ್ಯಾಪ್ತನಾದ ಪ್ರಧಾನತತ್ತ್ವವನ್ನು ತಿಳಿದುಕೊಂಡವನು ಚೇತನಗಳಿರುವ ಎಲ್ಲವುಗಳ ಚೇತನವು ಒಂದೇ ಎಂದು ಕಾಣುತ್ತಾನೆ.

14018033a ನಿರ್ವಿದ್ಯತೇ ತತಃ ಕೃತ್ಸ್ನಂ ಮಾರ್ಗಮಾಣಃ ಪರಂ ಪದಮ್|

14018033c ತಸ್ಯೋಪದೇಶಂ ವಕ್ಷ್ಯಾಮಿ ಯಾಥಾತಥ್ಯೇನ ಸತ್ತಮ||

ಸತ್ತಮ! ಹೀಗೆ ತಿಳಿದುಕೊಂಡು ಪರಮ ಪದವನ್ನು ನೀಡುವ ಎಲ್ಲ ಮಾರ್ಗಗಳನ್ನೂ ಅನುಸರಿಸುವವನ ಉಪದೇಶವನ್ನು ಅರ್ಥಗಳೊಂದಿಗೆ ಹೇಳುತ್ತೇನೆ.

14018034a ಶಾಶ್ವತಸ್ಯಾವ್ಯಯಸ್ಯಾಥ ಪದಸ್ಯ ಜ್ಞಾನಮುತ್ತಮಮ್|

14018034c ಪ್ರೋಚ್ಯಮಾನಂ ಮಯಾ ವಿಪ್ರ ನಿಬೋಧೇದಮಶೇಷತಃ||

ವಿಪ್ರ! ಶಾಶ್ವತವೂ ಅವ್ಯಯವೂ ಆದ ಆ ಪದವಿಯ ಉತ್ತಮ ಜ್ಞಾನದ ಕುರಿತು ಹೇಳುವ ನನ್ನನ್ನು ಸಂಪೂರ್ಣವಾಗಿ ಕೇಳು!””

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಅಷ್ಟಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾ ಎನ್ನುವ ಹದಿನೆಂಟನೇ ಅಧ್ಯಾಯವು.

Comments are closed.