Ashvamedhika Parva: Chapter 10

ಅಶ್ವಮೇಧಿಕ ಪರ್ವ

೧೦

ವ್ಯಾಸನು ಸಂವರ್ತ-ಮರುತ್ತರ ಕಥೆಯನ್ನು ಪೂರೈಸಿದುದು (೧-೩೬).

14010001 ಇಂದ್ರ ಉವಾಚ

14010001a ಏವಮೇತದ್ಬ್ರಹ್ಮಬಲಂ ಗರೀಯೋ

ನ ಬ್ರಹ್ಮತಃ ಕಿಂ ಚಿದನ್ಯದ್ಗರೀಯಃ|

14010001c ಆವಿಕ್ಷಿತಸ್ಯ ತು ಬಲಂ ನ ಮೃಷ್ಯೇ

ವಜ್ರಮಸ್ಮೈ ಪ್ರಹರಿಷ್ಯಾಮಿ ಘೋರಮ್||

ಇಂದ್ರನು ಹೇಳಿದನು: “ಬ್ರಹ್ಮಬಲವೇ ಹೆಚ್ಚಿನದೆಂದು ನೀನು ಹೇಳಿದುದು ಸರಿ. ಬ್ರಾಹ್ಮಣತ್ವಕ್ಕಿಂತ ಬೇರೆ ಹೆಚ್ಚಿನದಿಲ್ಲ. ಆದರೆ ಆವಿಕ್ಷಿತನ ಬಲವನ್ನು ನಾನು ಸಹಿಸಿಕೊಳ್ಳಲಾರೆನು. ಆದುದರಿಂದ ಅವನ ಮೇಲೆ ಈ ಘೋರ ವಜ್ರವನ್ನು ಪ್ರಹರಿಸುತ್ತೇನೆ.

14010002a ಧೃತರಾಷ್ಟ್ರ ಪ್ರಹಿತೋ ಗಚ್ಚ ಮರುತ್ತಂ

ಸಂವರ್ತೇನ ಸಹಿತಂ ತಂ ವದಸ್ವ|

14010002c ಬೃಹಸ್ಪತಿಂ ತ್ವಮುಪಶಿಕ್ಷಸ್ವ ರಾಜನ್

ವಜ್ರಂ ವಾ ತೇ ಪ್ರಹರಿಷ್ಯಾಮಿ ಘೋರಮ್||

ಧೃತರಾಷ್ಟ್ರ! ಮರುತ್ತನ ಬಳಿ ಹೋಗಿ ಸಂವರ್ತನೊಡನಿರುವ ಅವನಿಗೆ ಈ ಸಂದೇಶವನ್ನು ಹೇಳು: “ರಾಜನ್! ನೀನು ಬೃಹಸ್ಪತಿಯನ್ನು ಪುರೋಹಿತನನ್ನಾಗಿ ಮಾಡಿಕೋ. ಅಥವಾ ನಿನ್ನನ್ನು ಈ ಘೋರ ವಜ್ರದಿಂದ ಪ್ರಹರಿಸುತ್ತೇನೆ!””

14010003 ವ್ಯಾಸ ಉವಾಚ

14010003a ತತೋ ಗತ್ವಾ ಧೃತರಾಷ್ಟ್ರೋ ನರೇಂದ್ರಂ

ಪ್ರೋವಾಚೇದಂ ವಚನಂ ವಾಸವಸ್ಯ|

14010003c ಗಂಧರ್ವಂ ಮಾಂ ಧೃತರಾಷ್ಟ್ರಂ ನಿಬೋಧ

ತ್ವಾಮಾಗತಂ ವಕ್ತುಕಾಮಂ ನರೇಂದ್ರ||

ವ್ಯಾಸನು ಹೇಳಿದನು: “ಆಗ ಧೃತರಾಷ್ಟ್ರನು ನರೇಂದ್ರನಲ್ಲಿಗೆ ಹೋಗಿ ವಾಸವನ ಈ ಮಾತನ್ನು ಹೇಳಿದನು: “ನಾನು ಗಂಧರ್ವ ಧೃತರಾಷ್ಟ್ರನೆಂದು ತಿಳಿ. ನರೇಂದ್ರ! ನಿನಗೆ ಸಂದೇಶವೊಂದನ್ನು ಹೇಳಲು ಬಂದಿದ್ದೇನೆ.

14010004a ಐಂದ್ರಂ ವಾಕ್ಯಂ ಶೃಣು ಮೇ ರಾಜಸಿಂಹ

ಯತ್ಪ್ರಾಹ ಲೋಕಾಧಿಪತಿರ್ಮಹಾತ್ಮಾ|

14010004c ಬೃಹಸ್ಪತಿಂ ಯಾಜಕಂ ತ್ವಂ ವೃಣೀಷ್ವ

ವಜ್ರಂ ವಾ ತೇ ಪ್ರಹರಿಷ್ಯಾಮಿ ಘೋರಮ್||

14010004E ವಚಶ್ಚೇದೇತನ್ನ ಕರಿಷ್ಯಸೇ ಮೇ

ಪ್ರಾಹೈತದೇತಾವದಚಿಂತ್ಯಕರ್ಮಾ||

ರಾಜಸಿಂಹ! ಲೋಕಾಧಿಪತಿ ಮಹಾತ್ಮ ಇಂದ್ರನು ಹೇಳಿ ಕಳುಹಿಸಿದ ಈ ಮಾತನ್ನು ಕೇಳು! ಬೃಹಸ್ಪತಿಯನ್ನು ನೀನು ಯಾಜಕನನ್ನಾಗಿ ಆರಿಸಿಕೋ. ಅಥವಾ ನಿನ್ನನ್ನು ಘೋರ ವಜ್ರದಿಂದ ಪ್ರಹರಿಸುತ್ತೇನೆ! ಅಚಿಂತ್ಯಕರ್ಮಿ ಇಂದ್ರನು ನನಗೆ ಈ ಮಾತನ್ನು ಹೇಳಿ ಕಳುಹಿಸಿದ್ದಾನೆ!”

14010005 ಮರುತ್ತ ಉವಾಚ

14010005a ತ್ವಂ ಚೈವೈತದ್ವೇತ್ಥ ಪುರಂದರಶ್ಚ

ವಿಶ್ವೇದೇವಾ ವಸವಶ್ಚಾಶ್ವಿನೌ ಚ|

14010005c ಮಿತ್ರದ್ರೋಹೇ ನಿಷ್ಕೃತಿರ್ವೈ ಯಥೈವ

ನಾಸ್ತೀತಿ ಲೋಕೇಷು ಸದೈವ ವಾದಃ||

ಮರುತ್ತನು ಹೇಳಿದನು: “ಮಿತ್ರದ್ರೋಹಕ್ಕಿಂತ ಹೆಚ್ಚಿನ ಪಾಪಕೃತ್ಯವು ಲೋಕದಲ್ಲಿ ಇಲ್ಲವೆಂದು ಸದೈವ ಹೇಳುತ್ತಾರೆ. ಇದನ್ನು ನೀನೂ, ಪುರಂದರನೂ, ವಿಶ್ವೇದೇವತೆಗಳೂ, ವಸುಗಳೂ ಮತ್ತು ಅಶ್ವಿನಿಯರೂ ತಿಳಿದಿದ್ದೀರಿ.

14010006a ಬೃಹಸ್ಪತಿರ್ಯಾಜಯಿತಾ ಮಹೇಂದ್ರಂ

ದೇವಶ್ರೇಷ್ಠಂ ವಜ್ರಭೃತಾಂ ವರಿಷ್ಠಮ್|

14010006c ಸಂವರ್ತೋ ಮಾಂ ಯಾಜಯಿತಾದ್ಯ ರಾಜನ್

ನ ತೇ ವಾಕ್ಯಂ ತಸ್ಯ ವಾ ರೋಚಯಾಮಿ||

ದೇವಶ್ರೇಷ್ಠ ವಜ್ರಭೃತರಲ್ಲಿ ವರಿಷ್ಠ ಮಹೇಂದ್ರನಿಗೆ ಬೃಹಸ್ಪತಿಯು ಯಾಜಕನು. ರಾಜನಾದ ನನಗೆ ಇಂದು ಸಂವರ್ತನು ಯಾಜಿಸುತ್ತಾನೆ. ನಿನ್ನ ಅಥವಾ ಅವನ ಮಾತು ನನಗೆ ಹಿಡಿಸುತ್ತಿಲ್ಲ!”

14010007 ಗಂಧರ್ವ ಉವಾಚ

14010007a ಘೋರೋ ನಾದಃ ಶ್ರೂಯತೇ ವಾಸವಸ್ಯ

ನಭಸ್ತಲೇ ಗರ್ಜತೋ ರಾಜಸಿಂಹ|

14010007c ವ್ಯಕ್ತಂ ವಜ್ರಂ ಮೋಕ್ಷ್ಯತೇ ತೇ ಮಹೇಂದ್ರಃ

ಕ್ಷೇಮಂ ರಾಜಂಶ್ಚಿಂತ್ಯತಾಮೇಷ ಕಾಲ||

ಗಂಧರ್ವನು ಹೇಳಿದನು: “ರಾಜಸಿಂಹ! ನಭಸ್ತಲದಲ್ಲಿ ಗರ್ಜಿಸುತ್ತಿರುವ ವಾಸವನ ಘೋರ ನಾದವು ಕೇಳಿಬರುತ್ತಿದೆ. ರಾಜನ್! ಮಹೇಂದ್ರನು ನಿನ್ನ ಮೇಲೆ ವಜ್ರವನ್ನು ಪ್ರಯೋಗಿಸುವನೆಂದು ವ್ಯಕ್ತವಾಗುತ್ತಿದೆ. ಇದು ನಿನ್ನ ಕ್ಷೇಮದ ಕುರಿತು ಚಿಂತಿಸಬೇಕಾದ ಕಾಲವಾಗಿದೆ.””

14010008 ವ್ಯಾಸ ಉವಾಚ

14010008a ಇತ್ಯೇವಮುಕ್ತೋ ಧೃತರಾಷ್ಟ್ರೇಣ ರಾಜಾ

ಶ್ರುತ್ವಾ ನಾದಂ ನದತೋ ವಾಸವಸ್ಯ|

14010008c ತಪೋನಿತ್ಯಂ ಧರ್ಮವಿದಾಂ ವರಿಷ್ಠಂ

ಸಂವರ್ತಂ ತಂ ಜ್ಞಾಪಯಾಮಾಸ ಕಾರ್ಯಮ್||

ವ್ಯಾಸನು ಹೇಳಿದನು: “ಧೃತರಾಷ್ಟ್ರನು ಹೀಗೆ ಹೇಳಲು ರಾಜನು ಕೂಗುತ್ತಿರುವ ವಾಸವನ ಕೂಗನ್ನು ಕೇಳಿ ತಪೋನಿತ್ಯನೂ, ಧರ್ವವಿದರಲ್ಲಿ ಶ್ರೇಷ್ಠನೂ ಆದ ಸಂವರ್ತನಿಗೆ ಮಾಡಬೇಕಾದ ಕಾರ್ಯದ ಕುರಿತು ಜ್ಞಾಪಕವನ್ನಿತ್ತನು.

14010009 ಮರುತ್ತ ಉವಾಚ

14010009a ಇಮಮಶ್ಮಾನಂ ಪ್ಲವಮಾನಮಾರಾದ್

ಅಧ್ವಾ ದೂರಂ ತೇನ ನ ದೃಶ್ಯತೇಽದ್ಯ|

14010009c ಪ್ರಪದ್ಯೇಽಹಂ ಶರ್ಮ ವಿಪ್ರೇಂದ್ರ ತ್ವತ್ತಃ

ಪ್ರಯಚ್ಚ ತಸ್ಮಾದಭಯಂ ವಿಪ್ರಮುಖ್ಯ||

ಮರುತ್ತನು ಹೇಳಿದನು: “ದೂರದಿಂದ ತೇಲಿಕೊಂಡು ಬರುತ್ತಿರುವ ಇಂದ್ರನು ನಮಗೆ ಈಗ ಕಾಣುತ್ತಿಲ್ಲ. ವಿಪ್ರೇಂದ್ರ! ನಿನಗೆ ಶರಣು ಬಂದಿದ್ದೇನೆ. ವಿಪ್ರಮುಖ್ಯ! ಅದರಿಂದ ಅಭಯವನ್ನು ಪ್ರದಾನಿಸು!

14010010a ಅಯಮಾಯಾತಿ ವೈ ವಜ್ರೀ ದಿಶೋ ವಿದ್ಯೋತಯನ್ದಶ|

14010010c ಅಮಾನುಷೇಣ ಘೋರೇಣ ಸದಸ್ಯಾಸ್ತ್ರಾಸಿತಾ ಹಿ ನಃ||

ಇಗೋ! ವಜ್ರಿಯು ದಶ ದಿಕ್ಕುಗಳನ್ನೂ ಬೆಳಗಿಸುತ್ತಾ ಬರುತ್ತಿದ್ದಾನೆ. ಅವನ ಅಮಾನುಷ ಘೋರ ವಜ್ರದಿಂದ ಸದಸ್ಯರೆಲ್ಲರೂ ಭಯದಿಂದ ನಡುಗುತ್ತಿದ್ದಾರೆ!”

14010011 ಸಂವರ್ತ ಉವಾಚ

14010011a ಭಯಂ ಶಕ್ರಾದ್ವ್ಯೇತು ತೇ ರಾಜಸಿಂಹ

ಪ್ರಣೋತ್ಸ್ಯೇಽಹಂ ಭಯಮೇತತ್ಸುಘೋರಮ್|

14010011c ಸಂಸ್ತಂಭಿನ್ಯಾ ವಿದ್ಯಯಾ ಕ್ಷಿಪ್ರಮೇವ

ಮಾ ಭೈಸ್ತ್ವಮಸ್ಮಾದ್ಭವ ಚಾಪಿ ಪ್ರತೀತಃ||

ಸಂವರ್ತನು ಹೇಳಿದನು: “ರಾಜಸಿಂಹ! ಶಕ್ರನಿಂದ ನಿನಗುಂಟಾಗಿರುವ ಭಯವು ದೂರವಾಗಲಿ. ಸ್ತಂಭನ ವಿದ್ಯೆಯಿಂದ ಬೇಗನೇ ಈ ಘೋರ ಭಯವನ್ನು ದೂರಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವನ್ನಿಡು. ಇಂದ್ರನಿಂದ ಪರಾಭವದ ಭಯವು ನಿನಗಿರದಿರಲಿ!

14010012a ಅಹಂ ಸಂಸ್ತಂಭಯಿಷ್ಯಾಮಿ ಮಾ ಭೈಸ್ತ್ವಂ ಶಕ್ರತೋ ನೃಪ|

14010012c ಸರ್ವೇಷಾಮೇವ ದೇವಾನಾಂ ಕ್ಷಪಿತಾನ್ಯಾಯುಧಾನಿ ಮೇ||

ನೃಪ! ನಾನು ಶಕ್ರನನ್ನು ಸ್ತಂಭಗೊಳಿಸುತ್ತೇನೆ. ಅವನಿಗೆ ಹೆದರಬೇಡ! ದೇವತೆಗಳೆಲ್ಲರ ಆಯುಧಗಳನ್ನೂ ನಾನು ಕ್ಷೀಣಗೊಳಿಸುತ್ತೇನೆ!

14010013a ದಿಶೋ ವಜ್ರಂ ವ್ರಜತಾಂ ವಾಯುರೇತು

ವರ್ಷಂ ಭೂತ್ವಾ ನಿಪತತು ಕಾನನೇಷು|

14010013c ಆಪಃ ಪ್ಲವಂತ್ವಂತರಿಕ್ಷೇ ವೃಥಾ ಚ

ಸೌದಾಮಿನೀ ದೃಶ್ಯತಾಂ ಮಾ ಬಿಭಸ್ತ್ವಮ್||

ವಜ್ರವು ಎಲ್ಲ ದಿಕ್ಕುಗಳಿಗೂ ಹೋಗಲಿ. ಗಾಳಿಯು ಬೀಸಲಿ. ಇಂದ್ರನು ಮಳೆಯಾಗಿ ಕಾನನಗಳಲ್ಲಿ ಬೀಳಲಿ. ಅಂತರಿಕ್ಷದಲ್ಲಿ ವೃಥಾ ನೀರು ತುಂಬಿಕೊಳ್ಳಲಿ. ಮಿಂಚುಗಳೂ ಕಾಣಿಸಿಕೊಳ್ಳಲಿ. ನೀನು ಹೆದರಬೇಡ!

14010014a ಅಥೋ ವಹ್ನಿಸ್ತ್ರಾತು ವಾ ಸರ್ವತಸ್ತೇ

ಕಾಮಂ ವರ್ಷಂ ವರ್ಷತು ವಾಸವೋ ವಾ|

14010014c ವಜ್ರಂ ತಥಾ ಸ್ಥಾಪಯತಾಂ ಚ ವಾಯುರ್

ಮಹಾಘೋರಂ ಪ್ಲವಮಾನಂ ಜಲೌಘೈಃ||

ನಿನ್ನನ್ನು ಎಲ್ಲಕಡೆಗಳಿಂದಲೂ ರಕ್ಷಿಸಲಿ. ಅಥವಾ ವಾಸವನು ಬೇಕಾದಷ್ಟು ಮಳೆ ಸುರಿಸಲಿ. ವಾಯುವಿನ ಜೊತೆಗೆ ಮೋಡಗಳಲ್ಲಿ ತೇಲಿಹೋಗುತ್ತಿರುವ ಮಹಾಘೋರ ವಜ್ರವು ಅಲ್ಲಿಯೇ ನಿಂತುಕೊಳ್ಳಲಿ!”

14010015 ಮರುತ್ತ ಉವಾಚ

14010015a ಘೋರಃ ಶಬ್ದಃ ಶ್ರೂಯತೇ ವೈ ಮಹಾಸ್ವನೋ

ವಜ್ರಸ್ಯೈಷ ಸಹಿತೋ ಮಾರುತೇನ|

14010015c ಆತ್ಮಾ ಹಿ ಮೇ ಪ್ರವ್ಯಥತೇ ಮುಹುರ್ಮುಹುರ್

ನ ಮೇ ಸ್ವಾಸ್ಥ್ಯಂ ಜಾಯತೇ ಚಾದ್ಯ ವಿಪ್ರ||

ಮರುತ್ತನು ಹೇಳಿದನು: “ಭಿರುಗಾಳಿಯೊಂದಿಗೆ ವಜ್ರದ ಘೋರ ಮಹಾಸ್ವನವು ಕೇಳಿಬರುತ್ತಿದೆ. ವಿಪ್ರ! ನನ್ನ ಆತ್ಮವು ಪುನಃ ಪುನಃ ವ್ಯಥಿತಗೊಳ್ಳುತ್ತಿದೆ. ಸ್ವಾಸ್ತ್ಯವೇ ಇಲ್ಲದಂತಾಗಿದೆ!”

14010016 ಸಂವರ್ತ ಉವಾಚ

14010016a ವಜ್ರಾದುಗ್ರಾದ್ವ್ಯೇತು ಭಯಂ ತವಾದ್ಯ

ವಾತೋ ಭೂತ್ವಾ ಹನ್ಮಿ ನರೇಂದ್ರ ವಜ್ರಮ್|

14010016c ಭಯಂ ತ್ಯಕ್ತ್ವಾ ವರಮನ್ಯಂ ವೃಣೀಷ್ವ

ಕಂ ತೇ ಕಾಮಂ ತಪಸಾ ಸಾಧಯಾಮಿ||

ಸಂವರ್ತನು ಹೇಳಿದನು: “ನರೇಂದ್ರ! ಉಗ್ರ ವಜ್ರದಿಂದ ಇಂದು ನಿನಗುಂಟಾದ ಭಯವನ್ನು ತೆಗೆದುಹಾಕು! ನಾನು ಗಾಳಿಯಾಗಿ ಆ ವಜ್ರವನ್ನು ನಾಶಗೊಳಿಸುತ್ತೇನೆ. ಭಯವನ್ನು ತೊರೆದು ಅನ್ಯ ವರವನ್ನು ಕೇಳು. ನಿನ್ನ ಯಾವುದೇ ಕಾಮನೆಯನ್ನೂ ತಪಸ್ಸಿನಿಂದ ಸಾಧಿಸುತ್ತೇನೆ!”

14010017 ಮರುತ್ತ ಉವಾಚ

14010017a ಇಂದ್ರಃ ಸಾಕ್ಷಾತ್ಸಹಸಾಭ್ಯೇತು ವಿಪ್ರ

ಹವಿರ್ಯಜ್ಞೇ ಪ್ರತಿಗೃಹ್ಣಾತು ಚೈವ|

14010017c ಸ್ವಂ ಸ್ವಂ ಧಿಷ್ಣ್ಯಂ ಚೈವ ಜುಷಂತು ದೇವಾಃ

ಸುತಂ ಸೋಮಂ ಪ್ರತಿಗೃಹ್ಣಂತು ಚೈವ||

ಮರುತ್ತನು ಹೇಳಿದನು: “ವಿಪ್ರ! ಸಾಕ್ಷಾತ್ ಇಂದ್ರನು ಕೂಡಲೇ ಇಲ್ಲಿಗೆ ಬಂದು ಯಜ್ಞದ ಹವಿಸ್ಸನ್ನು ಸ್ವೀಕರಿಸಲಿ. ದೇವತೆಗಳು ಅವರವರ ಸ್ಥಾನಗಳಲ್ಲಿ ಕುಳಿತುಕೊಳ್ಳಲಿ ಮತ್ತು ನೀಡುವ ಸೋಮರಸವನ್ನು ಸ್ವೀಕರಿಸಲಿ!”

14010018 ಸಂವರ್ತ ಉವಾಚ

14010018a ಅಯಮಿಂದ್ರೋ ಹರಿಭಿರಾಯಾತಿ ರಾಜನ್

ದೇವೈಃ ಸರ್ವೈಃ ಸಹಿತಃ ಸೋಮಪೀಥೀ|

14010018c ಮಂತ್ರಾಹೂತೋ ಯಜ್ಞಮಿಮಂ ಮಯಾದ್ಯ

ಪಶ್ಯಸ್ವೈನಂ ಮಂತ್ರವಿಸ್ರಸ್ತಕಾಯಮ್||

ಸಂವರ್ತನು ಹೇಳಿದನು: “ರಾಜನ್! ಇಗೋ ಕುದುರೆಗಳಿಂದ ಯುಕ್ತವಾದ ರಥದಲ್ಲಿ ಸರ್ವದೇವತೆಗಳೊಡಗೂಡಿಕೊಂಡು ಸೋಮಪೀಥೀ ಇಂದ್ರನು ಬರುತ್ತಿದ್ದಾನೆ! ನನ್ನ ಮಂತ್ರಗಳಿಂದ ಕರೆಯಲ್ಪಟ್ಟ ಅವನು ಇಗೋ ಯಜ್ಞದ ಸಮೀಪದಲ್ಲಿಯೇ ಇದ್ದಾನೆ. ಮಂತ್ರದಿಂದ ವಿಸ್ತಾರಗೊಂಡ ಅವನ ಶರೀರವನ್ನು ನೋಡು!””

14010019 ವ್ಯಾಸ ಉವಾಚ

14010019a ತತೋ ದೇವೈಃ ಸಹಿತೋ ದೇವರಾಜೋ

ರಥೇ ಯುಕ್ತ್ವಾ ತಾನ್ ಹರೀನ್ವಾಜಿಮುಖ್ಯಾನ್|

14010019c ಆಯಾದ್ಯಜ್ಞಮಧಿ ರಾಜ್ಞಃ ಪಿಪಾಸುರ್

ಆವಿಕ್ಷಿತಸ್ಯಾಪ್ರಮೇಯಸ್ಯ ಸೋಮಮ್||

ವ್ಯಾಸನು ಹೇಳಿದನು: “ಆಗ ದೇವತೆಗಳ ಸಹಿತ ದೇವರಾಜನು, ವಾಜಿಮುಖ್ಯ ಹರ್ಯಶ್ವಗಳನ್ನು ಕಟ್ಟಿದ ರಥದಲ್ಲಿ, ಅಪ್ರಮೇಯ ಆವಿಕ್ಷಿತನ ಯಜ್ಞಕ್ಕೆ ರಾಜನಿತ್ತ ಸೋಮವನ್ನು ಕುಡಿಯಲು ಆಗಮಿಸಿದನು.

14010020a ತಮಾಯಾಂತಂ ಸಹಿತಂ ದೇವಸಂಘೈಃ

ಪ್ರತ್ಯುದ್ಯಯೌ ಸಪುರೋಧಾ ಮರುತ್ತಃ|

14010020c ಚಕ್ರೇ ಪೂಜಾಂ ದೇವರಾಜಾಯ ಚಾಗ್ರ್ಯಾಂ

ಯಥಾಶಾಸ್ತ್ರಂ ವಿಧಿವತ್ಪ್ರೀಯಮಾಣಃ||

ದೇವಸಂಘಗಳ ಸಹಿತ ಅಲ್ಲಿಗೈತಂದ ದೇವರಾಜನಿಗೆ ಮರುತ್ತನು ಪುರೋಹಿತನೊಡಗೂಡಿ ಮುಂದೆ ಹೋಗಿ ಯಥಾಶಾಸ್ತ್ರವಾಗಿ ವಿಧಿವತ್ತಾಗಿ ಪ್ರೀತಿಯಿಂದ ಪೂಜೆಗೈದನು.

14010021 ಸಂವರ್ತ ಉವಾಚ

14010021a ಸ್ವಾಗತಂ ತೇ ಪುರುಹೂತೇಹ ವಿದ್ವನ್

ಯಜ್ಞೋಽದ್ಯಾಯಂ ಸಂನಿಹಿತೇ ತ್ವಯೀಂದ್ರ|

14010021c ಶೋಶುಭ್ಯತೇ ಬಲವೃತ್ರಘ್ನ ಭೂಯಃ

ಪಿಬಸ್ವ ಸೋಮಂ ಸುತಮುದ್ಯತಂ ಮಯಾ||

ಸಂವರ್ತನು ಹೇಳಿದನು: “ಪುರುಹೂತ! ವಿದ್ವನ್! ನಿನಗೆ ಸ್ವಾಗತವು! ಇಂದ್ರ! ನಿನ್ನ ಆಗಮನದಿಂದ ಈ ಯಜ್ಞವು ಇಂದು ಶೋಭಿಸುತ್ತಿದೆ. ಬಲವೃತ್ರಘ್ನ! ನನ್ನಿಂದ ತಯಾರಿಸಲ್ಪಟ್ಟ ಈ ಸೋಮವನ್ನು ಕುಡಿ!”

14010022 ಮರುತ್ತ ಉವಾಚ

14010022a ಶಿವೇನ ಮಾಂ ಪಶ್ಯ ನಮಶ್ಚ ತೇಽಸ್ತು

ಪ್ರಾಪ್ತೋ ಯಜ್ಞಃ ಸಫಲಂ ಜೀವಿತಂ ಮೇ|

14010022c ಅಯಂ ಯಜ್ಞಂ ಕುರುತೇ ಮೇ ಸುರೇಂದ್ರ

ಬೃಹಸ್ಪತೇರವರೋ ಜನ್ಮನಾ ಯಃ||

ಮರುತ್ತನು ಹೇಳಿದನು: “ನಿನಗೆ ನಮಸ್ಕಾರ! ನನ್ನನ್ನು ಮಂಗಳಕರ ದೃಷ್ಟಿಯಿಂದ ನೋಡು! ನನ್ನ ಯಜ್ಞವೂ ಜೀವಿತವೂ ಸಫಲಗೊಂಡವು. ಸುರೇಂದ್ರ! ಈ ಯಜ್ಞವನ್ನು ಬೃಹಸ್ಪತಿಯ ತಮ್ಮನು ಮಾಡಿಸುತ್ತಿದ್ದಾನೆ.”

14010023 ಇಂದ್ರ ಉವಾಚ

14010023a ಜಾನಾಮಿ ತೇ ಗುರುಮೇನಂ ತಪೋಧನಂ

ಬೃಹಸ್ಪತೇರನುಜಂ ತಿಗ್ಮತೇಜಸಮ್|

14010023c ಯಸ್ಯಾಹ್ವಾನಾದಾಗತೋಽಹಂ ನರೇಂದ್ರ

ಪ್ರೀತಿರ್ಮೇಽದ್ಯ ತ್ವಯಿ ಮನುಃ ಪ್ರನಷ್ಟಃ||

ಇಂದ್ರನು ಹೇಳಿದನು: “ನಿನ್ನ ಈ ಗುರು, ಬೃಹಸ್ಪತಿಯ ತಮ್ಮ, ತಿಗ್ಮತೇಜಸ್ವಿ. ತಪೋಧನನನ್ನು ನಾನು ತಿಳಿದಿದ್ದೇನೆ. ನರೇಂದ್ರ! ಅವನ ಆಹ್ವಾನದಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ಇಂದು ನಿನ್ನ ಮೇಲೆ ಪ್ರೀತಿಯುಂಟಾಗಿದೆ ಮತ್ತು ಕೋಪವು ಕಳೆದುಹೋಗಿದೆ.”

14010024 ಸಂವರ್ತ ಉವಾಚ

14010024a ಯದಿ ಪ್ರೀತಸ್ತ್ವಮಸಿ ವೈ ದೇವರಾಜ

ತಸ್ಮಾತ್ಸ್ವಯಂ ಶಾಧಿ ಯಜ್ಞೇ ವಿಧಾನಮ್|

14010024c ಸ್ವಯಂ ಸರ್ವಾನ್ಕುರು ಮಾರ್ಗಾನ್ಸುರೇಂದ್ರ

ಜಾನಾತ್ವಯಂ ಸರ್ವಲೋಕಶ್ಚ ದೇವ||

ಸಂವರ್ತನು ಹೇಳಿದನು: “ದೇವರಾಜ! ಒಂದುವೇಳೆ ನೀನು ಪ್ರೀತನಾಗಿದ್ದರೆ ಯಜ್ಞದ ವಿಧಾನಗಳನ್ನು ಸ್ವಯಂ ನೀನೇ ಶಾಸನಮಾಡು. ಸುರೇಂದ್ರ! ಎಲ್ಲರ ಹವಿರ್ಭಾಗಳನ್ನೂ ಸ್ವಯಂ ನೀನೇ ಮಾಡಿ ತೋರಿಸು. ದೇವ! ಸರ್ವಲೋಕಗಳೂ ನಿನ್ನನ್ನು ತಿಳಿಯುವಂತಾಗಲಿ!””

14010025 ವ್ಯಾಸ ಉವಾಚ

14010025a ಏವಮುಕ್ತಸ್ತ್ವಾಂಗಿರಸೇನ ಶಕ್ರಃ

ಸಮಾದಿದೇಶ ಸ್ವಯಮೇವ ದೇವಾನ್|

14010025c ಸಭಾಃ ಕ್ರಿಯಂತಾಮಾವಸಥಾಶ್ಚ ಮುಖ್ಯಾಃ

ಸಹಸ್ರಶಶ್ಚಿತ್ರಭೌಮಾಃ ಸಮೃದ್ಧಾಃ||

ವ್ಯಾಸನು ಹೇಳಿದನು: “ಆಂಗಿರಸನು ಹೀಗೆ ಹೇಳಲು ಶಕ್ರನು ಸ್ವಯಂ ತಾನೇ ದೇವತೆಗಳಿಗೆ ಆದೇಶವನ್ನಿತ್ತನು: “ಚಿತ್ರ-ವಿಚಿತ್ರವಾಗಿರುವ ಸಕಲ ಸಾಮಗ್ರಿಗಳಿಂದಲೂ ಸಮೃದ್ಧವಾಗಿರುವ ಸಾವಿರಾರು ಭುವನಗಳನ್ನು ನಿರ್ಮಿಸಿರಿ!

14010026a ಕ್ಳ್ಪ್ತಸ್ಥೂಣಾಃ ಕುರುತಾರೋಹಣಾನಿ

ಗಂಧರ್ವಾಣಾಮಪ್ಸರಸಾಂ ಚ ಶೀಘ್ರಮ್|

14010026c ಯೇಷು ನೃತ್ಯೇರನ್ನಪ್ಸರಸಃ ಸಹಸ್ರಶಃ

ಸ್ವರ್ಗೋದ್ದೇಶಃ ಕ್ರಿಯತಾಂ ಯಜ್ಞವಾಟಃ||

ಶೀಘ್ರವಾಗಿ ಗಂಧರ್ವ-ಅಪ್ಸರೆಯರಿಗೆ ರಂಗಮಂಟಪವನ್ನು ನಿರ್ಮಿಸಿರಿ. ಅದಕ್ಕೆ ದಪ್ಪ ದಪ್ಪ ಕಂಬಗಳಿರಬೇಕು ಮತ್ತು ಏರಲು ಮೆಟ್ಟಿಲುಗಳಿರಬೇಕು. ಅದರಲ್ಲಿ ಸಹಸ್ರಾರು ಅಪ್ಸರೆಯರು ನರ್ತಿಸುತ್ತಿರಬೇಕು. ಯಜ್ಞವಾಟಿಕೆಯನ್ನು ಸ್ವರ್ಗದಂತೆಯೇ ಮಾಡಿ!”

14010027a ಇತ್ಯುಕ್ತಾಸ್ತೇ ಚಕ್ರುರಾಶು ಪ್ರತೀತಾ

ದಿವೌಕಸಃ ಶಕ್ರವಾಕ್ಯಾನ್ನರೇಂದ್ರ|

14010027c ತತೋ ವಾಕ್ಯಂ ಪ್ರಾಹ ರಾಜಾನಮಿಂದ್ರಃ

ಪ್ರೀತೋ ರಾಜನ್ಪೂಜಯಾನೋ ಮರುತ್ತಮ್||

ನರೇಂದ್ರ! ಹೀಗೆ ಹೇಳಲು ದಿವೌಕಸರು ಶಕ್ರನ ಮಾತಿನಂತೆಯೇ ಎಲ್ಲವನ್ನೂ ಮಾಡಿದರು. ರಾಜನ್! ಆಗ ಇಂದ್ರನು ಸಂಪ್ರೀತನಾಗಿ ರಾಜ ಮರುತ್ತನನ್ನು ಗೌರವಿಸುತ್ತಾ ಹೀಗೆ ಹೇಳಿದನು:

14010028a ಏಷ ತ್ವಯಾಹಮಿಹ ರಾಜನ್ಸಮೇತ್ಯ

ಯೇ ಚಾಪ್ಯನ್ಯೇ ತವ ಪೂರ್ವೇ ನರೇಂದ್ರಾಃ|

14010028c ಸರ್ವಾಶ್ಚಾನ್ಯಾ ದೇವತಾಃ ಪ್ರೀಯಮಾಣಾ

ಹವಿಸ್ತುಭ್ಯಂ ಪ್ರತಿಗೃಹ್ಣಂತು ರಾಜನ್||

“ರಾಜನ್! ನಾನು ಇಲ್ಲಿಗೆ ಬಂದು ನಿನ್ನೊಡನಿದ್ದೇನೆ. ಹಾಗೆಯೇ ನಿನ್ನ ಪೂರ್ವಜ ನರೇಂದ್ರರು ಕೂಡ ಇಲ್ಲಿಗೆ ಬಂದಿದ್ದಾರೆ. ರಾಜನ್! ಪ್ರೀತಿಯುಕ್ತರಾದ ಅನ್ಯ ದೇವತೆಗಳಲ್ಲೆರೂ ನೀನಿತ್ತ ಹವಿಸ್ಸನ್ನು ಸ್ವೀಕರಿಸುತ್ತಿದ್ದಾರೆ.

14010029a ಆಗ್ನೇಯಂ ವೈ ಲೋಹಿತಮಾಲಭಂತಾಂ

ವೈಶ್ವದೇವಂ ಬಹುರೂಪಂ ವಿರಾಜನ್|

14010029c ನೀಲಂ ಚೋಕ್ಷಾಣಂ ಮೇಧ್ಯಮಭ್ಯಾಲಭಂತಾಂ

ಚಲಚ್ಚಿಶ್ನಂ ಮತ್ಪ್ರದಿಷ್ಟಂ ದ್ವಿಜೇಂದ್ರಾಃ||

ಅಗ್ನಿಯ ಹವಿಸ್ಸಾಗಿ ಕೆಂಪುಬಣ್ಣದ ಜಿಂಕೆಯನ್ನು ಆಲಂಭಿಸಲಿ. ವಿಶ್ವೇದೇವತೆಗಳಿಗೆ ಬಹುರೂಪದ ಜಿಂಕೆಯನ್ನು ಆಲಂಬಿಸಲಿ. ದ್ವಿಜೇಂದ್ರರು ನನಗಾಗಿ ಯಾಗಕ್ಕೆ ಅರ್ಹವಾದ ನೀಲಿ ಬಣ್ಣದ ಚಂಚಲ ಶಿಶ್ನವುಳ್ಳ ಗೂಳಿಯನ್ನು ಆಲಂಭಿಸಲಿ!”

14010030a ತತೋ ಯಜ್ಞೋ ವವೃಧೇ ತಸ್ಯ ರಾಜ್ಞೋ

ಯತ್ರ ದೇವಾಃ ಸ್ವಯಮನ್ನಾನಿ ಜಹ್ರುಃ|

14010030c ಯಸ್ಮಿನ್ಶಕ್ರೋ ಬ್ರಾಹ್ಮಣೈಃ ಪೂಜ್ಯಮಾನಃ

ಸದಸ್ಯೋಽಭೂದ್ಧರಿಮಾನ್ದೇವರಾಜಃ||

ಆಗ ಆ ರಾಜನ ಯಜ್ಞವು ವೃದ್ಧಿಯಾಯಿತು. ದೇವತೆಗಳು ತಾವಾಗಿಯೇ ಹವಿಸ್ಸುಗಳನ್ನು ಸ್ವೀಕರಿಸಿದರು. ಹರಿದಶ್ವಗಳನ್ನೇರಿ ಬಂದಿದ್ದ ದೇವರಾಜ ಶಕ್ರನು ಬ್ರಾಹ್ಮಣರಿಂದ ಪೂಜಿಸಲ್ಪಟ್ಟು ಯಜ್ಞದ ಸದಸ್ಯನಾದನು.

14010031a ತತಃ ಸಂವರ್ತಶ್ಚಿತ್ಯಗತೋ ಮಹಾತ್ಮಾ

ಯಥಾ ವಹ್ನಿಃ ಪ್ರಜ್ವಲಿತೋ ದ್ವಿತೀಯಃ|

14010031c ಹವೀಂಷ್ಯುಚ್ಚೈರಾಹ್ವಯನ್ದೇವಸಂಘಾನ್

ಜುಹಾವಾಗ್ನೌ ಮಂತ್ರವತ್ಸುಪ್ರತೀತಃ||

ಆಗ ಎರಡನೆಯ ಅಗ್ನಿಯೋ ಎಂಬಂತೆ ಪ್ರಜ್ವಲಿಸುತ್ತಿದ್ದ ಮಹಾತ್ಮ ಸಂವರ್ತನು ಯಜ್ಞೇಶ್ವರನಲ್ಲಿಗೆ ಹೋಗಿ ದೇವಸಂಘಗಳನ್ನು ಆಹ್ವಾನಿಸುತ್ತಾ ಮಂತ್ರಪೂರ್ವಕವಾಗಿ ಹವಿಸ್ಸುಗಳನ್ನು ಅಗ್ನಿಯಲ್ಲಿ ಆಹುತಿಮಾಡಿದನು.

14010032a ತತಃ ಪೀತ್ವಾ ಬಲಭಿತ್ಸೋಮಮಗ್ರ್ಯಂ

ಯೇ ಚಾಪ್ಯನ್ಯೇ ಸೋಮಪಾ ವೈ ದಿವೌಕಸಃ|

14010032c ಸರ್ವೇಽನುಜ್ಞಾತಾಃ ಪ್ರಯಯುಃ ಪಾರ್ಥಿವೇನ

ಯಥಾಜೋಷಂ ತರ್ಪಿತಾಃ ಪ್ರೀತಿಮಂತಃ||

ಬಳಿಕ ಇಂದ್ರನೂ ಮತ್ತು ಸೋಮಪಾನಕ್ಕೆ ಅಧಿಕಾರಿಗಳಾಗಿದ್ದ ಇತರ ದಿವೌಕಸರೂ ಸೋಮಪಾನ ಮಾಡಿದರು. ಅನಂತರ ಎಲ್ಲರೂ ಪಾರ್ಥಿವನ ಅನುಜ್ಞೆಯನ್ನು ಪಡೆದು ಪ್ರಸನ್ನ ಚಿತ್ತರಾಗಿ ತಮ್ಮ ತಮ್ಮ ಸ್ಥಾನಗಳಿಗೆ ಪ್ರಯಾಣಮಾಡಿದರು.

14010033a ತತೋ ರಾಜಾ ಜಾತರೂಪಸ್ಯ ರಾಶೀನ್

ಪದೇ ಪದೇ ಕಾರಯಾಮಾಸ ಹೃಷ್ಟಃ|

14010033c ದ್ವಿಜಾತಿಭ್ಯೋ ವಿಸೃಜನ್ಭೂರಿ ವಿತ್ತಂ

ರರಾಜ ವಿತ್ತೇಶ ಇವಾರಿಹಂತಾ||

ಅನಂತರ ಸಂತೋಷಗೊಂಡ ರಾಜನು ಬಂಗಾರದ ರಾಶಿಗಳನ್ನು ಪುನಃ ಪುನಃ ದ್ವಿಜಾತಿಯವರಿಗೆ ದಾನವನ್ನಾಗಿತ್ತನು. ಆಗ ಸಂಪತ್ತಿನಿಂದ ಕೂಡಿದ್ದ ಆ ಅರಿಹಂತಕನು ವಿತ್ತೇಶ ಕುಬೇರನಂತೆ ರಾರಾಜಿಸಿದನು.

14010034a ತತೋ ವಿತ್ತಂ ವಿವಿಧಂ ಸಂನಿಧಾಯ

ಯಥೋತ್ಸಾಹಂ ಕಾರಯಿತ್ವಾ ಚ ಕೋಶಮ್|

14010034c ಅನುಜ್ಞಾತೋ ಗುರುಣಾ ಸಂನಿವೃತ್ಯ

ಶಶಾಸ ಗಾಮಖಿಲಾಂ ಸಾಗರಾಂತಾಮ್||

ಉತ್ಸಾಹದಿಂದ ವಿವಿಧ ಸಂಪತ್ತನ್ನು ದಾನಮಾಡಿದ ನಂತರ ಅಲ್ಲಿಯೇ ಒಂದು ಕೋಶವನ್ನು ನಿರ್ಮಿಸಿ ಉಳಿದ ಧನವನ್ನು ಕೂಡಿಟ್ಟನು. ಗುರು ಸಂವರ್ತನಿಂದ ಅನುಮತಿಯನ್ನು ಪಡೆದು ಹಿಂದಿರುಗಿ ಅವನು ಅಖಿಲ ಭೂಮಂಡಲವನ್ನು ಆಳಿದನು.

14010035a ಏವಂಗುಣಃ ಸಂಬಭೂವೇಹ ರಾಜಾ

ಯಸ್ಯ ಕ್ರತೌ ತತ್ಸುವರ್ಣಂ ಪ್ರಭೂತಮ್|

14010035c ತತ್ತ್ವಂ ಸಮಾದಾಯ ನರೇಂದ್ರ ವಿತ್ತಂ

ಯಜಸ್ವ ದೇವಾಂಸ್ತರ್ಪಯಾನೋ ವಿಧಾನೈಃ||

ಈ ರೀತಿ ಆ ರಾಜನು ಗುಣಯುಕ್ತನಾಗಿದ್ದನು. ಅವನ ಕ್ರತುವಿನಲ್ಲಿ ಹೇರಳವಾದ ಸುವರ್ಣವಿದ್ದಿತ್ತು. ನರೇಂದ್ರ! ಆ ವಿತ್ತವನ್ನು ನೀನು ಪಡೆದು ಯಜ್ಞಮಾಡಿ ದೇವತೆಗಳನ್ನು ತೃಪ್ತಿಪಡಿಸು.””

14010036 ವೈಶಂಪಾಯನ ಉವಾಚ

14010036a ತತೋ ರಾಜಾ ಪಾಂಡವೋ ಹೃಷ್ಟರೂಪಃ

ಶ್ರುತ್ವಾ ವಾಕ್ಯಂ ಸತ್ಯವತ್ಯಾಃ ಸುತಸ್ಯ|

14010036c ಮನಶ್ಚಕ್ರೇ ತೇನ ವಿತ್ತೇನ ಯಷ್ಟುಂ

ತತೋಽಮಾತ್ಯೈರ್ಮಂತ್ರಯಾಮಾಸ ಭೂಯಃ||

ವೈಶಂಪಾಯನನು ಹೇಳಿದನು: “ಸತ್ಯವತಿಯ ಸುತನ ಮಾತನ್ನು ಕೇಳಿ ರಾಜ ಪಾಂಡವನು ಹೃಷ್ಟರೂಪನಾಗಿ ಆ ವಿತ್ತದಿಂದ ಯಜ್ಞಮಾಡಲು ಮನಸ್ಸು ಮಾಡಿದನು. ಪುನಃ ಅಮಾತ್ಯರೊಂದಿಗೆ ಸಮಾಲೋಚನೆ ನಡೆಸಿದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ದಶಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ಹತ್ತನೇ ಅಧ್ಯಾಯವು.

Comments are closed.