Ashramavasika Parva: Chapter 43

ಆಶ್ರಮವಾಸಿಕ ಪರ್ವ: ಪುತ್ರದರ್ಶನ ಪರ್ವ

೪೩

ವ್ಯಾಸನು ಜನಮೇಜಯನಿಗೆ ಪರಿಕ್ಷಿತನನ್ನು ತೋರಿಸಿದುದು (೧-೧೮).

15043001 ವೈಶಂಪಾಯನ ಉವಾಚ|

15043001a ಅದೃಷ್ಟ್ವಾ ತು ನೃಪಃ ಪುತ್ರಾನ್ದರ್ಶನಂ ಪ್ರತಿಲಬ್ಧವಾನ್|

15043001c ಋಷಿಪ್ರಸಾದಾತ್ಪುತ್ರಾಣಾಂ ಸ್ವರೂಪಾಣಾಂ ಕುರೂದ್ವಹ||

ವೈಶಂಪಾಯನನು ಹೇಳಿದನು: "ಕುರೂದ್ವಹ! ಈ ಹಿಂದೆ ಎಂದೂ ನೋಡಿರದ ಮಕ್ಕಳನ್ನು ನೃಪ ಧೃತರಾಷ್ಟ್ರನು ಋಷಿಯ ಅನುಗ್ರಹದಿಂದ ದರ್ಶನಮಾಡಿದನು. ಪುತ್ರರ ಸ್ವರೂಪಗಳನ್ನು ಕಂಡನು.

15043002a ಸ ರಾಜಾ ರಾಜಧರ್ಮಾಂಶ್ಚ ಬ್ರಹ್ಮೋಪನಿಷದಂ ತಥಾ|

15043002c ಅವಾಪ್ತವಾನ್ನರಶ್ರೇಷ್ಠೋ ಬುದ್ಧಿನಿಶ್ಚಯಮೇವ ಚ||

ನರಶ್ರೇಷ್ಠ ರಾಜ ಧೃತರಾಷ್ಟ್ರನು ರಾಜಧರ್ಮಗಳನ್ನು, ಬ್ರಹ್ಮೋಪನಿಷದಗಳನ್ನೂ, ಬುದ್ಧಿನಿಶ್ಚಯವನ್ನೂ ಪಡೆದುಕೊಂಡಿದ್ದನು.

15043003a ವಿದುರಶ್ಚ ಮಹಾಪ್ರಾಜ್ಞೋ ಯಯೌ ಸಿದ್ಧಿಂ ತಪೋಬಲಾತ್|

15043003c ಧೃತರಾಷ್ಟ್ರಃ ಸಮಾಸಾದ್ಯ ವ್ಯಾಸಂ ಚಾಪಿ ತಪಸ್ವಿನಮ್||

ಮಹಾಪ್ರಾಜ್ಞ ವಿದುರನು ತಪೋಬಲದಿಂದ ಸಿದ್ಧಿಯನ್ನು ಪಡೆದನು. ಧೃತರಾಷ್ಟ್ರನು ತಪಸ್ವಿ ವ್ಯಾಸನ ಅನುಗ್ರಹದಿಂದ ಸಿದ್ಧಿಯನ್ನು ಪಡೆದನು."

15043004 ಜನಮೇಜಯ ಉವಾಚ|

15043004a ಮಮಾಪಿ ವರದೋ ವ್ಯಾಸೋ ದರ್ಶಯೇತ್ಪಿತರಂ ಯದಿ|

15043004c ತದ್ರೂಪವೇಷವಯಸಂ ಶ್ರದ್ದಧ್ಯಾಂ ಸರ್ವಮೇವ ತೇ||

ಜನಮೇಜಯನು ಹೇಳಿದನು: "ವರದ ವ್ಯಾಸನು ನನಗೂ ನನ್ನ ತಂದೆಯ ರೂಪ-ವೇಷ-ವಯಸ್ಸುಗಳೊಡನೆ ತೋರಿಸಿದ್ದೇ ಆದರೆ ನೀವು ಹೇಳಿರುವ ವಿಷಯಗಳಲ್ಲಿ ನಾನು ವಿಶ್ವಾಸವನ್ನಿಡುತ್ತೇನೆ.

15043005a ಪ್ರಿಯಂ ಮೇ ಸ್ಯಾತ್ಕೃತಾರ್ಥಶ್ಚ ಸ್ಯಾಮಹಂ ಕೃತನಿಶ್ಚಯಃ|

15043005c ಪ್ರಸಾದಾದೃಷಿಪುತ್ರಸ್ಯ ಮಮ ಕಾಮಃ ಸಮೃಧ್ಯತಾಮ್||

ಇದರಿಂದ ನಾನು ಕೃತಾರ್ಥನೂ ಸಂತುಷ್ಟನೂ ಆಗಿ ದೃಢವಾದ ನಿರ್ಣಯಕ್ಕೂ ಬರುತ್ತೇನೆ. ಋಷಿಪುತ್ರನ ಅನುಗ್ರದಿಂದ ನನ್ನ ಈ ಕಾಮನೆಯನು ಪೂರ್ಣಗೊಳ್ಳಲಿ!""

15043006 ಸೂತ ಉವಾಚ|

15043006a ಇತ್ಯುಕ್ತವಚನೇ ತಸ್ಮಿನ್ನೃಪೇ ವ್ಯಾಸಃ ಪ್ರತಾಪವಾನ್|

15043006c ಪ್ರಸಾದಮಕರೋದ್ಧೀಮಾನಾನಯಚ್ಚ ಪರಿಕ್ಷಿತಮ್||

ಸೂತನು ಹೇಳಿದನು: "ಆ ನೃಪನು ಹೀಗೆ ಹೇಳಲು ಪ್ರತಾಪವಾನ್ ಧೀಮಾನ್ ವ್ಯಾಸನು ಪ್ರಸನ್ನನಾಗಿ ಪರಿಕ್ಷಿತನನ್ನು ಕರೆಯಿಸಿದನು.

15043007a ತತಸ್ತದ್ರೂಪವಯಸಮಾಗತಂ ನೃಪತಿಂ ದಿವಃ|

15043007c ಶ್ರೀಮಂತಂ ಪಿತರಂ ರಾಜಾ ದದರ್ಶ ಜನಮೇಜಯಃ||

ಅದೇ ರೂಪ-ವಯಸ್ಸಿನಿಂದ ಕೂಡಿ ಸ್ವರ್ಗದಿಂದ ಆಗಮಿಸಿದ ಶ್ರೀಮಂತ ತಂದೆಯನ್ನು ರಾಜಾ ಜನಮೇಜಯನು ನೋಡಿದನು.

15043008a ಶಮೀಕಂ ಚ ಮಹಾತ್ಮಾನಂ ಪುತ್ರಂ ತಂ ಚಾಸ್ಯ ಶೃಂಗಿಣಮ್|

15043008c ಅಮಾತ್ಯಾ ಯೇ ಬಭೂವುಶ್ಚ ರಾಜ್ಞಸ್ತಾಂಶ್ಚ ದದರ್ಶ ಹ||

ಅವನೊಡನೆ ಮಹಾತ್ಮ ಶಮೀಕನನ್ನೂ, ಅವನ ಮಗ ಶೃಂಗಿಯನ್ನೂ, ಮತ್ತು ರಾಜನೊಡನಿದ್ದ ಮಂತ್ರಿಗಳನ್ನೂ ಅವನು ನೋಡಿದನು.

15043009a ತತಃ ಸೋಽವಭೃಥೇ ರಾಜಾ ಮುದಿತೋ ಜನಮೇಜಯಃ|

15043009c ಪಿತರಂ ಸ್ನಾಪಯಾಮಾಸ ಸ್ವಯಂ ಸಸ್ನೌ ಚ ಪಾರ್ಥಿವಃ||

ಅನಂತರ ಸಂತೋಷಗೊಂಡ ರಾಜಾ ಪಾರ್ಥಿವ ಜನಮೇಜಯನು ಯಜ್ಞದ ಅವಭೃತದಲ್ಲಿ ತಂದೆಗೆ ಸ್ನಾನವನ್ನು ಮಾಡಿಸಿ ಅನಂತರ ತಾನು ಸ್ನಾನಮಾಡಿದನು.

15043010a ಸ್ನಾತ್ವಾ ಚ ಭರತಶ್ರೇಷ್ಠಃ ಸೋಽಸ್ತೀಕಮಿದಮಬ್ರವೀತ್|

15043010c ಯಾಯಾವರಕುಲೋತ್ಪನ್ನಂ ಜರತ್ಕಾರುಸುತಂ ತದಾ||

ಸ್ನಾನಮಾಡಿದ ನಂತರ ಆ ಭರತಶ್ರೇಷ್ಠನು ಯಾಯಾವರಕುಲದಲ್ಲಿ ಹುಟ್ಟಿದ್ದ ಜರತ್ಕಾರುಸುತ ಆಸ್ತೀಕನಿಗೆ ಹೀಗೆ ಹೇಳಿದನು:

15043011a ಆಸ್ತೀಕ ವಿವಿಧಾಶ್ಚರ್ಯೋ ಯಜ್ಞೋಽಯಮಿತಿ ಮೇ ಮತಿಃ|

15043011c ಯದದ್ಯಾಯಂ ಪಿತಾ ಪ್ರಾಪ್ತೋ ಮಮ ಶೋಕಪ್ರಣಾಶನಃ||

"ಆಸ್ತೀಕ! ನನ್ನ ಈ ಯಜ್ಞವು ವಿವಿಧ ಆಶ್ಚರ್ಯಗಳನ್ನು ತೋರಿಸಿಕೊಟ್ಟಿದೆ ಎಂದು ಭಾವಿಸುತ್ತೇನೆ. ಇಂದು ನನ್ನ ತಂದೆಯನ್ನು ಕಂಡು ನನ್ನ ಶೋಕವು ನಾಶವಾಗಿಹೋಯಿತು!"

15043012 ಆಸ್ತೀಕ ಉವಾಚ|

15043012a ಋಷಿರ್ದ್ವೈಪಾಯನೋ ಯತ್ರ ಪುರಾಣಸ್ತಪಸೋ ನಿಧಿಃ|

15043012c ಯಜ್ಞೇ ಕುರುಕುಲಶ್ರೇಷ್ಠ ತಸ್ಯ ಲೋಕಾವುಭೌ ಜಿತೌ||

ಆಸ್ತೀಕನು ಹೇಳಿದನು: "ಕುರುಕುಲಶ್ರೇಷ್ಠ! ಯಾರ ಯಜ್ಞದಲ್ಲಿ ಪುರಾಣ ತಪಸ್ಸಿನ ನಿಧಿಯಾಗಿರುವ ಋಷಿ ದ್ವೈಪಾಯನನು ಇರುವನೋ ಅವನು ಇಹ-ಪರ ಎರಡೂ ಲೋಕಗಳನ್ನೂ ಗೆದ್ದಂತೆಯೇ!

15043013a ಶ್ರುತಂ ವಿಚಿತ್ರಮಾಖ್ಯಾನಂ ತ್ವಯಾ ಪಾಂಡವನಂದನ|

15043013c ಸರ್ಪಾಶ್ಚ ಭಸ್ಮಸಾನ್ನೀತಾ ಗತಾಶ್ಚ ಪದವೀಂ ಪಿತುಃ||

ಪಾಂಡವನಂದನ! ನೀನು ವಿಚಿತ್ರವಾದ ಆಖ್ಯಾನವನ್ನು ಕೇಳಿದೆ. ಭಸ್ಮವಾದ ಸರ್ಪಗಳೂ ಕೂಡ ಪಿತೃಗಳ ಪದವಿಯನ್ನು ಪಡೆದವು.

15043014a ಕಥಂ ಚಿತ್ತಕ್ಷಕೋ ಮುಕ್ತಃ ಸತ್ಯತ್ವಾತ್ತವ ಪಾರ್ಥಿವ|

15043014c ಋಷಯಃ ಪೂಜಿತಾಃ ಸರ್ವೇ ಗತಿಂ ದೃಷ್ಟ್ವಾ ಮಹಾತ್ಮನಃ||

ಪಾರ್ಥಿವ! ನಿನ್ನ ಸತ್ಯದಿಂದಾಗಿ ತಕ್ಷಕನು ಹೇಗೋ ಮುಕ್ತನಾದನು. ಎಲ್ಲ ಋಷಿಗಳನ್ನೂ ಪೂಜಿಸಿರುವ. ಮಹಾತ್ಮ ವ್ಯಾಸನ ತಪೋಗತಿಯನ್ನೂ ಕಂಡೆ.

15043015a ಪ್ರಾಪ್ತಃ ಸುವಿಪುಲೋ ಧರ್ಮಃ ಶ್ರುತ್ವಾ ಪಾಪವಿನಾಶನಮ್|

15043015c ವಿಮುಕ್ತೋ ಹೃದಯಗ್ರಂಥಿರುದಾರಜನದರ್ಶನಾತ್||

ಪಾಪವಿನಾಶಕ ಈ ಮಹಾಭಾರತವನ್ನು ಕೇಳಿ ವಿಪುಲ ಧರ್ಮವನ್ನು ಗಳಿಸಿರುವೆ. ಸತ್ಪುರುಷರ ದರ್ಶನದಿಂದ ನಿನ್ನ ಹೃದಯದಲ್ಲಿದ್ದ ಗಂಟುಗಳು ಬಿಚ್ಚಿಹೋಗಿವೆ.

15043016a ಯೇ ಚ ಪಕ್ಷಧರಾ ಧರ್ಮೇ ಸದ್ವೃತ್ತರುಚಯಶ್ಚ ಯೇ|

15043016c ಯಾನ್ದೃಷ್ಟ್ವಾ ಹೀಯತೇ ಪಾಪಂ ತೇಭ್ಯಃ ಕಾರ್ಯಾ ನಮಸ್ಕ್ರಿಯಾಃ||

ಯಾರು ಧರ್ಮದ ಪಕ್ಷಪಾತಿಗಳೋ, ಸದಾಚಾರದ ಪಾಲನೆಯಲ್ಲಿ ಅಭಿರುಚಿಯುಳ್ಳವರೋ, ಮತ್ತು ಯಾರ ದರ್ಶನಮಾತ್ರದಿಂದ ಪಾಪಗಳೆಲ್ಲವೂ ನಾಶವಾಗುವವೋ ಅಂತಹ ಮಹಾತ್ಮರಿಗೆ ಅನುದಿನವು ನಮಸ್ಕರಿಸಬೇಕು!""

15043017 ಸೂತ ಉವಾಚ|

15043017a ಏತಚ್ಛೃತ್ವಾ ದ್ವಿಜಶ್ರೇಷ್ಠಾತ್ಸ ರಾಜಾ ಜನಮೇಜಯಃ|

15043017c ಪೂಜಯಾಮಾಸ ತಮೃಷಿಮನುಮಾನ್ಯ ಪುನಃ ಪುನಃ||

ಸೂತನು ಹೇಳಿದನು: "ದ್ವಿಜಶ್ರೇಷ್ಠನಿಂದ ಇದನ್ನು ಕೇಳಿದ ರಾಜಾ ಜನಮೇಜಯನು ಆ ಋಷಿ ವ್ಯಾಸನನ್ನು ಪುನಃ ಪುನಃ ಗೌರವಿಸಿ ಪೂಜಿಸಿದನು.

15043018a ಪಪ್ರಚ್ಚ ತಮೃಷಿಂ ಚಾಪಿ ವೈಶಂಪಾಯನಮಚ್ಯುತಮ್|

15043018c ಕಥಾವಶೇಷಂ ಧರ್ಮಜ್ಞೋ ವನವಾಸಸ್ಯ ಸತ್ತಮ||

ಸತ್ತಮ! ಅನಂತರ ಧರ್ಮಜ್ಞ ಜನಮೇಜಯನು ಧೃತರಾಷ್ಟ್ರನ ವನವಾಸದ ಕಥಾವಶೇಷವನ್ನು ಹೇಳುವಂತೆ ಅಚ್ಯುತ ವೈಶಂಪಾಯನನಲ್ಲಿ ಕೇಳಿಕೊಂಡನು.

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಜನಮೇಜಯಯಸ್ಯ ಸ್ವಪಿತೃದರ್ಶನೇ ತ್ರಿಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಜನಮೇಜಯಸ್ಯ ಸ್ವಪಿತೃದರ್ಶನ ಎನ್ನುವ ನಲ್ವತ್ಮೂರನೇ ಅಧ್ಯಾಯವು.

Related image

Comments are closed.