Aranyaka Parva: Chapter 78

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೭೮

ಬೃಹದಶ್ವನ ಗಮನ

ನಲ-ದಮಯಂತಿಯರ ಸುಖದಿನಗಳು (೧-೭). ನಲಚರಿತೆಯ ಫಲಶ್ರುತಿ (೮-೧೩). ಅಕ್ಷಹೃದಯ ವಿದ್ಯೆಯನ್ನು ಯುಧಿಷ್ಠಿರನಿಗಿತ್ತು ಬೃಹದಶ್ವನು ನಿರ್ಗಮಿಸಿದುದು (೧೪-೨೩).

03078001 ಬೃಹದಶ್ವ ಉವಾಚ|

03078001a ಪ್ರಶಾಂತೇ ತು ಪುರೇ ಹೃಷ್ಟೇ ಸಂಪ್ರವೃತ್ತೇ ಮಹೋತ್ಸವೇ|

03078001c ಮಹತ್ಯಾ ಸೇನಯಾ ರಾಜಾ ದಮಯಂತೀಮುಪಾನಯತ್||

ಬೃಹದಶ್ವನು ಹೇಳಿದನು: “ಹೃಷ್ಟ ಪುರಜನರು ಪ್ರಶಾಂತರಾದಂತೆ ಮಹಾ ಉತ್ಸವವು ಪ್ರಾರಂಭವಾಗಿತ್ತು. ರಾಜನು ಮಹತ್ತರ ಸೇನೆಯೊಂದಿಗೆ ದಮಯಂತಿಯನ್ನು ಕರೆತಂದನು.

03078002a ದಮಯಂತೀಮಪಿ ಪಿತಾ ಸತ್ಕೃತ್ಯ ಪರವೀರಹಾ|

03078002c ಪ್ರಸ್ಥಾಪಯದಮೇಯಾತ್ಮಾ ಭೀಮೋ ಭೀಮಪರಾಕ್ರಮಃ||

ದಮಯಂತಿಯನ್ನು ತಂದೆ ಪರಮ ವೀರ ಅದಮೇಯಾತ್ಮ ಭೀಮಪರಾಕ್ರಮಿ ಭೀಮನು ಸತ್ಕರಿಸಿ ಕಳುಹಿಸಿಕೊಟ್ಟನು.

03078003a ಆಗತಾಯಾಂ ತು ವೈದರ್ಭ್ಯಾಂ ಸಪುತ್ರಾಯಾಂ ನಲೋ ನೃಪಃ|

03078003c ವರ್ತಯಾಮಾಸ ಮುದಿತೋ ದೇವರಾಡಿವ ನಂದನೇ||

ಪುತ್ರರೊಡನೆ ಆಗಮಿಸಿದ ವೈದರ್ಭಿಯೊಡನೆ ನೃಪ ನಲನು ನಂದನವನದಲ್ಲಿ ದೇವತೆಗಳಂತೆ ಸಂತೋಷದಿಂದ ಇದ್ದನು.

03078004a ತಥಾ ಪ್ರಕಾಶತಾಂ ಯಾತೋ ಜಂಬೂದ್ವೀಪೇಽಥ ರಾಜಸು|

03078004c ಪುನಃ ಸ್ವೇ ಚಾವಸದ್ರಾಜ್ಯೇ ಪ್ರತ್ಯಾಹೃತ್ಯ ಮಹಾಯಶಾಃ||

ಜಂಬೂದ್ವೀಪದಲ್ಲಿರುವ ರಾಜರುಗಳಲ್ಲೇ ಪ್ರಕಾಶಿಸುತ್ತಾ ಆ ಮಹಾಯಶನು ಮರಳಿ ಗಳಿಸಿದ ರಾಜ್ಯದಲ್ಲಿ ಪುನಃ ವಾಸಿಸಿದನು.

03078005a ಈಜೇ ಚ ವಿವಿಧೈರ್ಯಜ್ಞೈರ್ವಿಧಿವತ್ಸ್ವಾಪ್ತದಕ್ಷಿಣೈಃ|

03078005c ತಥಾ ತ್ವಮಪಿ ರಾಜೇಂದ್ರ ಸಸುಹೃದ್ವಕ್ಷ್ಯಸೇಽಚಿರಾತ್||

ಅವನು ಸಾಕಷ್ಟು ದಕ್ಷಿಣೆಗಳಿಂದ ವಿವಿಧ ಯಜ್ಞಗಳನ್ನು ವಿಧಿವತ್ತಾಗಿ ನೆರವೇರಿಸಿದನು. ರಾಜೇಂದ್ರ! ನೀನೂ ಕೂಡ ಸುಹೃದಯರೊಡಗೂಡಿ ಶೀಘ್ರದಲ್ಲಿಯೇ ಇದರಿಂದ ಹೊರಬರುತ್ತೀಯೆ.

03078006a ದುಃಖಮೇತಾದೃಶಂ ಪ್ರಾಪ್ತೋ ನಲಃ ಪರಪುರಂಜಯಃ|

03078006c ದೇವನೇನ ನರಶ್ರೇಷ್ಠ ಸಭಾರ್ಯೋ ಭರತರ್ಷಭ||

ನರಶ್ರೇಷ್ಠ! ಭರತರ್ಷಭ! ಪರಪುರಂಜಯ ನಲನು ಈ ರೀತಿ ದ್ಯೂತದಿಂದ ಪತ್ನಿಯೊಡನೆ ದುಃಖಗಳನ್ನು ಅನುಭವಿಸಿದನು.

03078007a ಏಕಾಕಿನೈವ ಸುಮಹನ್ನಲೇನ ಪೃಥಿವೀಪತೇ|

03078007c ದುಃಖಮಾಸಾದಿತಂ ಘೋರಂ ಪ್ರಾಪ್ತಶ್ಚಾಭ್ಯುದಯಃ ಪುನಃ||

ಪೃಥವೀಪತೇ! ಏಕಾಕಿಯಾಗಿದ್ದರೂ ನಲನು ಘೋರ ದುಃಖವನ್ನು ಅನುಭವಿಸಿ ಪುನಃ ಅಭ್ಯುದಯವನ್ನು ಹೊಂದಿದನು.

03078008a ತ್ವಂ ಪುನರ್ಭ್ರಾತೃಸಹಿತಃ ಕೃಷ್ಣಯಾ ಚೈವ ಪಾಂಡವ|

03078008c ರಮಸೇಽಸ್ಮಿನ್ಮಹಾರಣ್ಯೇ ಧರ್ಮಮೇವಾನುಚಿಂತಯನ್||

ಪಾಂಡವ! ನೀನಾದರೂ ಬ್ರಾತೃ ಮತ್ತು ಕೃಷ್ಣೆಯ ಸಹಿತ ಇದ್ದೀಯೆ. ಈ ಮಹಾರಣ್ಯದಲ್ಲಿ ಧರ್ಮದ ಕುರಿತು ಮಾತ್ರ ಚಿಂತಿಸುತ್ತಾ ಆನಂದವಾಗಿರು.

03078009a ಬ್ರಾಹ್ಮಣೈಶ್ಚ ಮಹಾಭಾಗೈರ್ವೇದವೇದಾಂಗಪಾರಗೈಃ|

03078009c ನಿತ್ಯಮನ್ವಾಸ್ಯಸೇ ರಾಜಂಸ್ತತ್ರ ಕಾ ಪರಿದೇವನಾ||

ವೇದ-ವೇದಾಂಗ ಪಾರಗರಾದ ಈ ಮಹಾಭಾಗ ಬ್ರಾಹ್ಮಣರೊಡನೆ ನಿತ್ಯವೂ ವಾಸಿಸುತ್ತಿರುವ ರಾಜನಿಗೆ ಪರಿವೇದನೆ ಏನು?

03078010a ಇತಿಹಾಸಮಿಮಂ ಚಾಪಿ ಕಲಿನಾಶನಮುಚ್ಯತೇ|

03078010c ಶಕ್ಯಮಾಶ್ವಾಸಿತುಂ ಶ್ರುತ್ವಾ ತ್ವದ್ವಿಧೇನ ವಿಶಾಂ ಪತೇ||

ಈ ಇತಿಹಾಸವು ಕಲಿಯನ್ನು ನಾಶಮಾಡುತ್ತದೆ ಎನ್ನುತ್ತಾರೆ. ವಿಶಾಂಪತೇ! ಇದನ್ನು ಕೇಳಿದ ನಿನ್ನಂಥವರಿಗೆ ಅಶ್ವಾಸನೆಯನ್ನು ನೀಡಲೂ ಶಕ್ಯವಿದೆ.

03078011a ಅಸ್ಥಿರತ್ವಂ ಚ ಸಂಚಿಂತ್ಯ ಪುರುಷಾರ್ಥಸ್ಯ ನಿತ್ಯದಾ|

03078011c ತಸ್ಯಾಯೇ ಚ ವ್ಯಯೇ ಚೈವ ಸಮಾಶ್ವಸಿಹಿ ಮಾ ಶುಚಃ||

ಮನುಷ್ಯನ ಭಾಗ್ಯದ ಅಸ್ಥಿರತೆಯನ್ನು ನಿತ್ಯವೂ ಸ್ಮರಿಸುತ್ತಾ ಅದರ ಆಗು-ಹೋಗುಗಳನ್ನು ಸಮನಾಗಿ ಕಾಣು. ದುಃಖಿಸಬೇಡ.

03078012a ಯೇ ಚೇದಂ ಕಥಯಿಷ್ಯಂತಿ ನಲಸ್ಯ ಚರಿತಂ ಮಹತ್|

03078012c ಶ್ರೋಷ್ಯಂತಿ ಚಾಪ್ಯಭೀಕ್ಷ್ಣಂ ವೈ ನಾಲಕ್ಷ್ಮೀಸ್ತಾನ್ಭಜಿಷ್ಯತಿ|

ನಲನ ಈ ಮಹತ್ ಚರಿತೆಯನ್ನು ಯಾರು ಕಥನ ಮತ್ತು ಸದಾ ಶ್ರವಣ ಮಾಡುತ್ತಾನೋ ಅವನಿಗೆ ಅಲಕ್ಷ್ಮಿಯಾಗುವುದಿಲ್ಲ.

03078012e ಅರ್ಥಾಸ್ತಸ್ಯೋಪಪತ್ಸ್ಯಂತೇ ಧನ್ಯತಾಂ ಚ ಗಮಿಷ್ಯತಿ||

03078013a ಇತಿಹಾಸಮಿಮಂ ಶ್ರುತ್ವಾ ಪುರಾಣಂ ಶಶ್ವದುತ್ತಮಂ|

03078013c ಪುತ್ರಾನ್ಪೌತ್ರಾನ್ಪಶೂಂಶ್ಚೈವ ವೇತ್ಸ್ಯತೇ ನೃಷು ಚಾಗ್ರ್ಯತಾಂ|

03078013e ಅರೋಗಃ ಪ್ರೀತಿಮಾಂಶ್ಚೈವ ಭವಿಷ್ಯತಿ ನ ಸಂಶಯಃ||

ಸಂಪತ್ತು ಅವನ ಬಳಿಗೆ ಹರಿದು ಬರುತ್ತದೆ ಮತ್ತು ಅವನು ಧನವಂತನಾಗುತ್ತಾನೆ. ಪುರಾತನ ಈ ಉತ್ತಮ ಇತಿಹಾಸವನ್ನು ಕೇಳಿದರೆ, ಪುತ್ರರು, ಪೌತ್ರರು, ಪಶುಗಳು ಮತ್ತು ನರರಲ್ಲಿ ಅಗ್ರಸ್ಥಾನವನ್ನು ಹೊಂದುತ್ತಾರೆ ಮತ್ತು ಆರೋಗ್ಯ-ಪ್ರೀತಿಗಳನ್ನು ಹೊಂದುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

03078014a ಭಯಂ ಪಶ್ಯಸಿ ಯಚ್ಚ ತ್ವಮಾಹ್ವಯಿಷ್ಯತಿ ಮಾಂ ಪುನಃ|

03078014c ಅಕ್ಷಜ್ಞ ಇತಿ ತತ್ತೇಽಹಂ ನಾಶಯಿಷ್ಯಾಮಿ ಪಾರ್ಥಿವ||

ಪಾರ್ಥಿವ! ಅಕ್ಷಜ್ಞನಿಂದ ಪುನಃ ನೀನು ಪರಾಜಯಗೊಳ್ಳುವೆ ಎನ್ನುವ ನಿನ್ನ ಈ ಭಯವನ್ನು ನಾನು ನಿವಾರಿಸುತ್ತೇನೆ.

03078015a ವೇದಾಕ್ಷಹೃದಯಂ ಕೃತ್ಸ್ನಮಹಂ ಸತ್ಯಪರಾಕ್ರಮ|

03078015c ಉಪಪದ್ಯಸ್ವ ಕೌಂತೇಯ ಪ್ರಸನ್ನೋಽಹಂ ಬ್ರವೀಮಿ ತೇ||

ಸತ್ಯಪರಾಕ್ರಮಿ! ನಾನು ಅಕ್ಷಹೃದಯವನ್ನು ಪರಿಪೂರ್ಣವಾಗಿ ತಿಳಿದಿದ್ದೇನೆ. ನನ್ನಿಂದ ತಿಳಿದುಕೊ. ನಿನಗೆ ಹೇಳಲು ನನಗೆ ಸಂತೋಷವಾಗುತ್ತದೆ.””

03078016 ವೈಶಂಪಾಯನ ಉವಾಚ|

03078016a ತತೋ ಹೃಷ್ಟಮನಾ ರಾಜಾ ಬೃಹದಶ್ವಮುವಾಚ ಹ|

03078016c ಭಗವನ್ನಕ್ಷಹೃದಯಂ ಜ್ಞಾತುಮಿಚ್ಚಾಮಿ ತತ್ತ್ವತಃ||

ವೈಶಂಪಾಯನನು ಹೇಳಿದನು: “ನಂತರ ಹೃಷ್ಟಮನಸ್ಕ ರಾಜನು ಬೃಹದಶ್ವನಿಗೆ ಹೇಳಿದನು: “ಭಗವನ್! ನಿನ್ನಿಂದ ಅಕ್ಷಹೃದಯವನ್ನು ತಿಳಿಯಲು ಇಚ್ಛಿಸುತ್ತೇನೆ.”

03078017a ತತೋಽಕ್ಷಹೃದಯಂ ಪ್ರಾದಾತ್ಪಾಂಡವಾಯ ಮಹಾತ್ಮನೇ|

03078017c ದತ್ತ್ವಾ ಚಾಶ್ವಶಿರೋಽಗಚ್ಚದುಪಸ್ಪ್ರಷ್ಟುಂ ಮಹಾತಪಾಃ||

ನಂತರ ಬೃಹದಶ್ವನು ಮಹಾತ್ಮ ಪಾಂಡವನಿಗೆ ಅಕ್ಷಹೃದಯವನ್ನು ಕೊಟ್ಟನು. ಹೀಗೆ ಕೊಟ್ಟು ಆ ಮಹಾತಪನು ಸ್ನಾನಕ್ಕೆಂದು ಅಶ್ವಶಿರಕ್ಕೆ ತೆರಳಿದನು.

03078018a ಬೃಹದಶ್ವೇ ಗತೇ ಪಾರ್ಥಮಶ್ರೌಷೀತ್ಸವ್ಯಸಾಚಿನಂ|

03078018c ವರ್ತಮಾನಂ ತಪಸ್ಯುಗ್ರೇ ವಾಯುಭಕ್ಷಂ ಮನೀಷಿಣಂ||

03078019a ಬ್ರಾಹ್ಮಣೇಭ್ಯಸ್ತಪಸ್ವಿಭ್ಯಃ ಸಂಪತದ್ಭ್ಯಸ್ತತಸ್ತತಃ|

03078019c ತೀರ್ಥಶೈಲವರೇಭ್ಯಶ್ಚ ಸಮೇತೇಭ್ಯೋ ದೃಢವ್ರತಃ||

03078020a ಇತಿ ಪಾರ್ಥೋ ಮಹಾಬಾಹುರ್ದುರಾಪಂ ತಪ ಆಸ್ಥಿತಃ|

03078020c ನ ತಥಾ ದೃಷ್ಟಪೂರ್ವೋಽನ್ಯಃ ಕಶ್ಚಿದುಗ್ರತಪಾ ಇತಿ||

03078021a ಯಥಾ ಧನಂಜಯಃ ಪಾರ್ಥಸ್ತಪಸ್ವೀ ನಿಯತವ್ರತಃ|

03078021c ಮುನಿರೇಕಚರಃ ಶ್ರೀಮಾನ್ಧರ್ಮೋ ವಿಗ್ರಹವಾನಿವ||

ಬೃದದಶ್ವನು ಹೋದ ನಂತರ ದೃಢವೃತ ಪಾರ್ಥನು ಅಲ್ಲಲ್ಲಿ ತೀರ್ಥ-ಶೈಲಗಳಿಂದ ಬಂದು ಸೇರಿದ್ದ ತಪಸ್ವಿ ಬ್ರಾಹ್ಮಣರಿಂದ ಸವ್ಯಸಾಚಿಯು ವರ್ತಮಾನದಲ್ಲಿ ಕೇವಲ ವಾಯುವನ್ನು ಸೇವಿಸುತ್ತಾ ಉಗ್ರ ತಪಸ್ಸಿನಲ್ಲಿ ನಿರತನಾಗಿದ್ದಾನೆ; ಮಹಾಬಾಹು ಪಾರ್ಥನು ಪೂರ್ವದಲ್ಲಿ ಯಾರೂ ನೋಡಿದರದಂಥ ಉಗ್ರತಪಸ್ಸನ್ನು ತಪಿಸುತ್ತಿದ್ದಾನೆ; ಶ್ರಿಮಾನ್ ಧರ್ಮ ವಿಗ್ರಹನಂತೆ ಪಾರ್ಥ ಧನಂಜಯನು ನಿಯತವ್ರತ ತಪಸ್ವಿ ಮತ್ತು ಒಂಟಿ ಮುನಿಯಾಗಿದ್ದಾನೆ ಎಂದು ಕೇಳಿದನು.

03078022a ತಂ ಶ್ರುತ್ವಾ ಪಾಂಡವೋ ರಾಜಂಸ್ತಪ್ಯಮಾನಂ ಮಹಾವನೇ|

03078022c ಅನ್ವಶೋಚತ ಕೌಂತೇಯಃ ಪ್ರಿಯಂ ವೈ ಭ್ರಾತರಂ ಜಯಂ||

ರಾಜ! ಮಹಾರಣ್ಯದಲ್ಲಿ ಪಾಂಡವನು ತಪಸ್ಸುಮಾಡುತ್ತಿರುವುದನ್ನು ಕೇಳಿ ಕೌಂತೇಯನು ತನ್ನ ಪ್ರಿಯ ಭ್ರಾತಾ ಜಯನನ್ನು ಕುರಿತು ಶೋಕಿಸಿದನು.

03078023a ದಹ್ಯಮಾನೇನ ತು ಹೃದಾ ಶರಣಾರ್ಥೀ ಮಹಾವನೇ|

03078023c ಬ್ರಾಹ್ಮಣಾನ್ವಿವಿಧಜ್ಞಾನಾನ್ಪರ್ಯಪೃಚ್ಚದ್ಯುಧಿಷ್ಠಿರಃ||

ಆ ಮಹಾವನದಲ್ಲಿ ದಹಿಸುತ್ತಿದ್ದ ಹೃದಯವಂತ ಶರಣಾರ್ಥಿ ಯುಧಿಷ್ಠಿರನು ವಿವಿಧಜ್ಞಾನಿ ಬ್ರಾಹ್ಮಣರನ್ನು ಈ ರೀತಿ ಪ್ರಶ್ನಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಬೃಹದಶ್ವಗಮನೇ ಅಷ್ಟಸಪ್ತತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಬೃಹದಶ್ವಗಮನ ಎನ್ನುವ ಎಪ್ಪತ್ತೆಂಟನೆಯ ಅಧ್ಯಾಯವು.

Related image

Comments are closed.