Aranyaka Parva: Chapter 73

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೭೩

ನಲನಿಗೆ ಮಕ್ಕಳ ದರ್ಶನ

ಅವನು ಮಾಡುವುದನ್ನು ನೋಡಿಕೊಂಡು ಬಾ ಎಂದು ದಮಯಂತಿಯು ಕೇಶಿನಿಯನ್ನು ಪುನಃ ಬಾಹುಕನಲ್ಲಿಗೆ ಕಳುಹಿಸುವುದು (೧-೫). ಬಾಹುಕನಲ್ಲಿ ತಾನು ಕಂಡ ವಿಶೇಷ ಗುಣಶಕ್ತಿಗಳನ್ನು ಕೇಶಿನಿಯು ದಮಯಂತಿಗೆ ವರದಿ ಮಾಡಿದುದು (೬-೧೭). ಅವನು ಅಡುಗೆ ಮಾಡಿದ ಮಾಂಸವನ್ನು ಅವನಿಗೆ ತಿಳಿಯದಂತೆ ತೆಗೆದುಕೊಂಡು ಬಾ ಎಂದು ಪುನಃ ಕೇಶಿನಿಯನ್ನು ಕಳುಹಿಸಿ, ಮಾಂಸದ ತುಂಡನ್ನು ತಿಂದು ಬಾಹುಕನು ನಲನೇ ಎಂದು ದಮಯಂತಿಯು ನಿರ್ಧರಿಸಿದುದು (೧೮-೨೨). ತನ್ನ ಮಕ್ಕಳನ್ನು ಕೇಶಿನಿಯೊಡನೆ ಕಳುಹಿಸಲು ಬಾಹುಕನು ಮಕ್ಕಳನ್ನು ಬಿಗಿದಪ್ಪಿ ರೋದಿಸುವುದು (೨೩-೨೮).

03073001 ಬೃಹದಶ್ವ ಉವಾಚ|

03073001a ದಮಯಂತೀ ತು ತಚ್ಛೃತ್ವಾ ಭೃಶಂ ಶೋಕಪರಾಯಣಾ|

03073001c ಶಂಕಮಾನಾ ನಲಂ ತಂ ವೈ ಕೇಶಿನೀಮಿದಮಬ್ರವೀತ್||

ಬೃಹದಶ್ವನು ಹೇಳಿದನು: “ಶೋಕಪರಾಯಣೆ ದಮಯಂತಿಯು ಅದನ್ನು ಕೇಳಿ ಅವನು ನಲನೇ ಇರಬಹುದೆಂದು ಶಂಕಿಸಿ ಕೇಶಿನಿಯಲ್ಲಿ ಹೇಳಿದಳು:

03073002a ಗಚ್ಚ ಕೇಶಿನಿ ಭೂಯಸ್ತ್ವಂ ಪರೀಕ್ಷಾಂ ಕುರು ಬಾಹುಕೇ|

03073002c ಆಬ್ರುವಾಣಾ ಸಮೀಪಸ್ಥಾ ಚರಿತಾನ್ಯಸ್ಯ ಲಕ್ಷಯ||

“ಕೇಶಿನಿ! ಹೋಗು. ಬಾಹುಕನ ಕುರಿತು ಇನ್ನೂ ಪರೀಕ್ಷೆ ಮಾಡು. ಏನನ್ನೂ ಹೇಳಬೇಡ; ಆದರೆ ಅವನ ಹತ್ತಿರವೇ ಇದ್ದು ಅವನು ಮಾಡುವುದನ್ನು ಗಮನಿಸು.

03073003a ಯದಾ ಚ ಕಿಂ ಚಿತ್ಕುರ್ಯಾತ್ಸ ಕಾರಣಂ ತತ್ರ ಭಾಮಿನಿ|

03073003c ತತ್ರ ಸಂಚೇಷ್ಟಮಾನಸ್ಯ ಸಂಲಕ್ಷ್ಯಂ ತೇ ವಿಚೇಷ್ಟಿತಂ||

ಭಾಮಿನಿ! ಅವನು ಏನಾದರೂ ವಿಶಿಷ್ಟವಾದದ್ದನ್ನು ಮಾಡಿದರೆ ಅವನು ಯಾಕೆ ಮತ್ತು ಎಂದು ಹಾಗೆ ಮಾಡಿದ ಎಂದು ಸರಿಯಾಗಿ ಗಮನಿಸು.

03073004a ನ ಚಾಸ್ಯ ಪ್ರತಿಬಂಧೇನ ದೇಯೋಽಗ್ನಿರಪಿ ಭಾಮಿನಿ|

03073004c ಯಾಚತೇ ನ ಜಲಂ ದೇಯಂ ಸಮ್ಯಗತ್ವರಮಾಣಯಾ||

ಭಾಮಿನಿ! ಅವನನ್ನು ಪ್ರತಿಬಂಧಿಸುವುದಕ್ಕಾಗಿ ಅವನಿಗೆ ಅಗ್ನಿಯನ್ನು ಕೂಡ ಕೊಡಬೇಡ; ನೀರನ್ನು ಕೇಳಿದರೆ ಅದನ್ನೂ ಕೊಡಬೇಡ. ನಿಧಾನವಾಗಿ ಇವನ್ನೆಲ್ಲ ಮಾಡು.

03073005a ಏತತ್ಸರ್ವಂ ಸಮೀಕ್ಷ್ಯ ತ್ವಂ ಚರಿತಂ ಮೇ ನಿವೇದಯ|

03073005c ಯಚ್ಚಾನ್ಯದಪಿ ಪಶ್ಯೇಥಾಸ್ತಚ್ಚಾಖ್ಯೇಯಂ ತ್ವಯಾ ಮಮ||

ಅವನು ಮಾಡುವುದೆಲ್ಲವನ್ನೂ ನೋಡಿ ನನ್ನಲ್ಲಿಗೆ ಬಂದು ಹೇಳು. ಮತ್ತಿನ್ನೇನಾದರೂ ನಡೆದರೂ ನನ್ನಲ್ಲಿಗೆ ಬಂದು ಹೇಳು.”

03073006a ದಮಯಂತ್ಯೈವಮುಕ್ತಾ ಸಾ ಜಗಾಮಾಥಾಶು ಕೇಶಿನೀ|

03073006c ನಿಶಾಮ್ಯ ಚ ಹಯಜ್ಞಸ್ಯ ಲಿಂಗಾನಿ ಪುನರಾಗಮತ್||

03073007a ಸಾ ತತ್ಸರ್ವಂ ಯಥಾವೃತ್ತಂ ದಮಯಂತ್ಯೈ ನ್ಯವೇದಯತ್|

03073007c ನಿಮಿತ್ತಂ ಯತ್ತದಾ ದೃಷ್ಟಂ ಬಾಹುಕೇ ದಿವ್ಯಮಾನುಷಂ||

ದಮಯಂತಿಯು ಹೀಗೆ ಹೇಳಿದ ನಂತರ ಕೇಶಿನಿಯು ಬೇಗನೆ ಹೋದಳು ಮತ್ತು ಆ ಹಯಜ್ಞನ ಲಕ್ಷಣಗಳನ್ನೆಲ್ಲಾ ಗಮನಿಸಿ ಮರಳಿ ಬಂದು ಆ ಬಾಹುಕನಲ್ಲಿ ಕಂಡ ದೇವ ಮತ್ತು ಮಾನುಷ ನಿಮಿತ್ತಗಳೆಲ್ಲವನ್ನೂ ಯಥಾವತ್ತಾಗಿ ದಮಯಂತಿಯಲ್ಲಿ ನಿವೇದಿಸಿದಳು.

03073008 ಕೇಶಿನ್ಯುವಾಚ|

03073008a ದೃಢಂ ಶುಚ್ಯುಪಚಾರೋಽಸೌ ನ ಮಯಾ ಮಾನುಷಃ ಕ್ವ ಚಿತ್|

03073008c ದೃಷ್ಟಪೂರ್ವಃ ಶ್ರುತೋ ವಾಪಿ ದಮಯಂತಿ ತಥಾವಿಧಃ||

ಕೇಶಿನಿಯು ಹೇಳಿದಳು: “ದಮಯಂತಿ! ಇಷ್ಟೊಂದು ಧೃಢನಾಗಿರುವ ಮತ್ತು ಉಚ್ಛನಾಗಿರುವ ಬೇರೆ ಯಾವ ಮನುಷ್ಯನನ್ನು ಈ ಹಿಂದೆ ನಾನು ಕೇಳಿರಲಿಲ್ಲ ಮತ್ತು ನೋಡಿಯೂ ಇರಲಿಲ್ಲ.

03073009a ಹ್ರಸ್ವಮಾಸಾದ್ಯ ಸಂಚಾರಂ ನಾಸೌ ವಿನಮತೇ ಕ್ವ ಚಿತ್|

03073009c ತಂ ತು ದೃಷ್ಟ್ವಾ ಯಥಾಸಂಗಮುತ್ಸರ್ಪತಿ ಯಥಾಸುಖಂ|

03073009e ಸಂಕಟೇಽಪ್ಯಸ್ಯ ಸುಮಹದ್ವಿವರಂ ಜಾಯತೇಽಧಿಕಂ||

ಗಿಡ್ಡವಾದ ಬಾಗಿಲಿನಿಂದ ಬಂದರೆ ತನ್ನ ತಲೆಯನ್ನು ಅವನು ತಗ್ಗಿಸುವುದಿಲ್ಲ. ಆದರೆ ಮೇಲ್ಮುಚ್ಚುಗೆಯೇ ಅವನು ಸುಖವಾಗಿ ಹೋಗಲಿ ಎಂದು ಮೇಲೇರುತ್ತದೆ. ಕಿರಿದಾದ ಪ್ರವೇಶದ್ವಾರವು ಅವನಿಗಾಗಿ ತಾನಗಿಯೇ ಅಗಲವಾಗುತ್ತದೆ.

03073010a ಋತುಪರ್ಣಸ್ಯ ಚಾರ್ಥಾಯ ಭೋಜನೀಯಮನೇಕಶಃ|

03073010c ಪ್ರೇಷಿತಂ ತತ್ರ ರಾಜ್ಞಾ ಚ ಮಾಂಸಂ ಸುಬಹು ಪಾಶವಂ||

ರಾಜನು ಋತುಪರ್ಣನಿಗಾಗಿ ಅನೇಕ ಆಹಾರ ಪದಾರ್ಥಗಳನ್ನು ಮತ್ತು ಮಾಂಸಗಳನ್ನು ಕಳುಹಿಸಿದ್ದಾನೆ. ಅವುಗಳನ್ನು ತೊಳೆಯಲು ಅಲ್ಲಿ ಒಂದು ತೊಟ್ಟಿಯೂ ಇದೆ.

03073011a ತಸ್ಯ ಪ್ರಕ್ಷಾಲನಾರ್ಥಾಯ ಕುಂಭಸ್ತತ್ರೋಪಕಲ್ಪಿತಃ|

03073011c ಸ ತೇನಾವೇಕ್ಷಿತಃ ಕುಂಭಃ ಪೂರ್ಣ ಏವಾಭವತ್ತದಾ||

03073012a ತತಃ ಪ್ರಕ್ಷಾಲನಂ ಕೃತ್ವಾ ಸಮಧಿಶ್ರಿತ್ಯ ಬಾಹುಕಃ|

03073012c ತೃಣಮುಷ್ಟಿಂ ಸಮಾದಾಯ ಆವಿಧ್ಯೈನಂ ಸಮಾದಧತ್||

03073013a ಅಥ ಪ್ರಜ್ವಲಿತಸ್ತತ್ರ ಸಹಸಾ ಹವ್ಯವಾಹನಃ|

03073013c ತದದ್ಭುತತಮಂ ದೃಷ್ಟ್ವಾ ವಿಸ್ಮಿತಾಹಮಿಹಾಗತಾ||

ಅವನ ದೃಷ್ಟಿಮಾತ್ರದಿಂದಲೇ ಆ ಕುಂಭವು ನೀರಿನಿಂದ ತುಂಬಿಕೊಂಡಿತು. ಬಾಹುಕನು ಮಾಂಸವನ್ನು ತೊಳೆದಿಟ್ಟು, ಒಂದು ಮುಷ್ಠಿ ಕಟ್ಟಿಗೆಯನ್ನು ಹಿಡಿದು, ತುಂಡುಮಾಡಿ ಗುಂಪಿನಲ್ಲಿ ಇಟ್ಟೊಡನೆಯೇ ಒಮ್ಮಿಂದೊಮ್ಮೆಲೇ ಹವ್ಯವಾಹನನು ಅದರಲ್ಲಿ ಪ್ರಜ್ವಲಿಸಲು ಪ್ರಾರಂಭಿಸಿದನು. ಆ ಅದ್ಭುತವನ್ನು ಕಂಡು ವಿಸ್ಮಿತನಾದ ನಾನು ಇಲ್ಲಿಗೆ ಬಂದಿದ್ದೇನೆ.

03073014a ಅನ್ಯಚ್ಚ ತಸ್ಮಿನ್ಸುಮಹದಾಶ್ಚರ್ಯಂ ಲಕ್ಷಿತಂ ಮಯಾ|

03073014c ಯದಗ್ನಿಮಪಿ ಸಂಸ್ಪೃಶ್ಯ ನೈವ ದಃಯತ್ಯಸೌ ಶುಭೇ||

ಅಲ್ಲಿ ಇನ್ನೊಂದು ಸುಮಹದಾಶ್ಚರ್ಯವನ್ನು ನೋಡಿದೆ: ಶುಭೇ! ಅಗ್ನಿಯನ್ನು ಸ್ಪರ್ಷಮಾಡಿದರೂ ಅವನನ್ನು ಸುಡಲಿಲ್ಲ.

03073015a ಚಂದೇನ ಚೋದಕಂ ತಸ್ಯ ವಹತ್ಯಾವರ್ಜಿತಂ ದ್ರುತಂ|

03073015c ಅತೀವ ಚಾನ್ಯತ್ಸುಮಹದಾಶ್ಚರ್ಯಂ ದೃಷ್ಟವತ್ಯಹಂ||

03073016a ಯತ್ಸ ಪುಷ್ಪಾಣ್ಯುಪಾದಾಯ ಹಸ್ತಾಭ್ಯಾಂ ಮಮೃದೇ ಶನೈಃ|

03073016c ಮೃದ್ಯಮಾನಾನಿ ಪಾಣಿಭ್ಯಾಂ ತೇನ ಪುಷ್ಪಾಣಿ ತಾನ್ಯಥ||

03073017a ಭೂಯ ಏವ ಸುಗಂಧೀನಿ ಹೃಷಿತಾನಿ ಭವಂತಿ ಚ|

03073017c ಏತಾನ್ಯದ್ಭುತಕಲ್ಪಾನಿ ದೃಷ್ಟ್ವಾಹಂ ದ್ರುತಮಾಗತಾ||

ಅವನಿಗೆ ಬೇಕಾದಲಾಗಲೆಲ್ಲಾ ನೀರು ಒಮ್ಮಿಂದೊಮ್ಮೆಲೇ ಹರಿಯುತ್ತದೆ. ಇನ್ನೂ ಒಂದು ಸುಮದಾಶ್ವರ್ಯವನ್ನು ನೋಡಿದೆ: ಪುಷ್ಪಗಳನ್ನು ಕೈಯಲ್ಲಿ ಹಿಡಿದು ತಿಕ್ಕಿದರೂ ಆ ಹೂಗಳು ತಾಜಾ ಮತ್ತು ಸುಗಂಧಿತವಾಗುತ್ತವೆ. ಈ ಅದ್ಭುತಗಳನ್ನು ನೋಡಿದ ನಾನು ಬೇಗನೆ ಇಲ್ಲಿಗೆ ಬಂದೆ.””

03073018 ಬೃಹದಶ್ವ ಉವಾಚ|

03073018a ದಮಯಂತೀ ತು ತಚ್ಛೃತ್ವಾ ಪುಣ್ಯಶ್ಲೋಕಸ್ಯ ಚೇಷ್ಟಿತಂ|

03073018c ಅಮನ್ಯತ ನಲಂ ಪ್ರಾಪ್ತಂ ಕರ್ಮಚೇಷ್ಟಾಭಿಸೂಚಿತಂ||

ಬೃಹದಶ್ವನು ಹೇಳಿದನು: “ಪುಣ್ಯಶ್ಲೋಕನ ಈ ಕೃತ್ಯಗಳನ್ನು ಕೇಳಿದ ದಮಯಂತಿಯು ನಲನು ಪ್ರಾಪ್ತನಾದನೆಂದು ಆ ಕರ್ಮಚೇಷ್ಟೆಗಳು ಸೂಚಿಸುತ್ತವೆ ಎಂದು ತೀರ್ಮಾನಿಸಿದಳು.

03073019a ಸಾ ಶಂಕಮಾನಾ ಭರ್ತಾರಂ ನಲಂ ಬಾಹುಕರೂಪಿಣಂ|

03073019c ಕೇಶಿನೀಂ ಶ್ಲಕ್ಷ್ಣಯಾ ವಾಚಾ ರುದತೀ ಪುನರಬ್ರವೀತ್||

ತನ್ನ ಪತಿ ನಲನೇ ಬಾಹುಕನ ರೂಪಧರಿಸಿದ್ದಾನೆ ಎಂದು ಶಂಕಿಸಿ ರೋದಿಸಿದಳು ಮತ್ತು ಕೇಶಿನಿಗೆ ಮೃದು ವಾಕ್ಯಗಳಲ್ಲಿ ಹೇಳಿದಳು:

03073020a ಪುನರ್ಗಚ್ಚ ಪ್ರಮತ್ತಸ್ಯ ಬಾಹುಕಸ್ಯೋಪಸಂಸ್ಕೃತಂ|

03073020c ಮಹಾನಸಾಚ್ಶೃತಂ ಮಾಂಸಂ ಸಮಾದಾಯೈಹಿ ಭಾಮಿನಿ||

“ಭಾಮಿನಿ! ಪುನಃ ಹೋಗು. ಬಾಹುಕನು ಗಮನಿಸದೇ ಇರುವಾಗ ಅಡುಗೆ ಮನೆಯಿಂದ ಅವನು ತಯಾರಿಸಿದ ಮಾಂಸವನ್ನು ಸ್ವಲ್ಪ ತೆಗೆದುಕೊಂಡು ಇಲ್ಲಿಗೆ ಬಾ!”

03073021a ಸಾ ಗತ್ವಾ ಬಾಹುಕೇ ವ್ಯಗ್ರೇ ತನ್ಮಾಂಸಮಪಕೃಷ್ಯ ಚ|

03073021c ಅತ್ಯುಷ್ಣಮೇವ ತ್ವರಿತಾ ತತ್ಕ್ಷಣಂ ಪ್ರಿಯಕಾರಿಣೀ|

03073021e ದಮಯಂತ್ಯೈ ತತಃ ಪ್ರಾದಾತ್ಕೇಶಿನೀ ಕುರುನಂದನ||

ಕುರುನಂದನ! ಕೇಶಿನಿಯು ಹೋಗಿ, ಬಾಹುಕನು ಯಾವುದರಲ್ಲಿಯೋ ಮಗ್ನನಾಗಿರುವಾಗ ಬಿಸಿಬಿಸಿಯಾದ ಮಾಂಸದ ತುಂಡೊಂದನ್ನು ಪ್ರಿಯಕಾರಿಣಿ ದಮಯಂತಿಗೆಂದು ತೆಗೆದು ತಕ್ಷಣ ತಂದು ಕೊಟ್ಟಳು.

03073022a ಸೋಚಿತಾ ನಲಸಿದ್ಧಸ್ಯ ಮಾಂಸಸ್ಯ ಬಹುಶಃ ಪುರಾ|

03073022c ಪ್ರಾಶ್ಯ ಮತ್ವಾ ನಲಂ ಸೂದಂ ಪ್ರಾಕ್ರೋಶದ್ಭೃಶದುಃಖಿತಾ||

ಹಿಂದೆ ನಲನು ತಯಾರಿಸಿದ ಮಾಂಸದ ರುಚಿಯನ್ನು ಬಹಳಷ್ಟು ಅರಿತಿದ್ದ ಅವಳು ಅದರ ರುಚಿನೋಡಿದ ಕೂಡಲೇ ಇದನ್ನು ತಯಾರಿಸಿದ್ದು ನಲನೇ ಹೌದು ಎಂದು ತಿಳಿದು ಬಹುದುಃಖಿತಳಾದಳು.

03073023a ವೈಕ್ಲವ್ಯಂ ಚ ಪರಂ ಗತ್ವಾ ಪ್ರಕ್ಷಾಲ್ಯ ಚ ಮುಖಂ ತತಃ|

03073023c ಮಿಥುನಂ ಪ್ರೇಷಯಾಮಾಸ ಕೇಶಿನ್ಯಾ ಸಹ ಭಾರತ||

ಭಾರತ! ಬಹಳಷ್ಟು ರೋದಿಸಿದ ನಂತರ ಮುಖವನ್ನು ತೊಳೆದು, ತನ್ನ ಅವಳಿ ಮಕ್ಕಳನ್ನು ಕೇಶಿನಿಯ ಸಂಗಡ ಕಳುಹಿಸಿದಳು.

03073024a ಇಂದ್ರಸೇನಾಂ ಸಹ ಭ್ರಾತ್ರಾ ಸಮಭಿಜ್ಞಾಯ ಬಾಹುಕಃ|

03073024c ಅಭಿದ್ರುತ್ಯ ತತೋ ರಾಜಾ ಪರಿಷ್ವಜ್ಯಾಂಕಮಾನಯತ್||

ಭ್ರಾತನೊಡನೆ ಇಂದ್ರಸೇನೆಯನ್ನು ಬಾಹುಕನು ಗುರುತಿಸಿದನು, ಮತ್ತು ರಾಜನು ಅವರಲ್ಲಿಗೆ ಓಡಿಹೋಗಿ ಬಿಗಿಯಾಗಿ ಅಪ್ಪಿಕೊಂಡನು.

03073025a ಬಾಹುಕಸ್ತು ಸಮಾಸಾದ್ಯ ಸುತೌ ಸುರಸುತೋಪಮೌ|

03073025c ಭೃಶಂ ದುಃಖಪರೀತಾತ್ಮಾ ಸಸ್ವರಂ ಪ್ರರುದೋದ ಹ||

ಸುರಸುತರಂತಿದ್ದ ಮಕ್ಕಳನ್ನು ಸೇರಿದ ಬಾಹುಕನು ದುಃಖಪರಿತಾತ್ಮನಾಗಿ ಜೋರಾಗಿ ರೋದಿಸತೊಡಗಿದನು.

03073026a ನೈಷಧೋ ದರ್ಶಯಿತ್ವಾ ತು ವಿಕಾರಮಸಕೃತ್ತದಾ|

03073026c ಉತ್ಸೃಜ್ಯ ಸಹಸಾ ಪುತ್ರೌ ಕೇಶಿನೀಮಿದಮಬ್ರವೀತ್||

ಈ ರೀತಿ ನೈಷಧನು ತನ್ನ ಭಾವನೆಗಳನ್ನು ಹಲವು ಬಾರಿ ತೋರಿಸುತ್ತಾ, ಒಮ್ಮೆಲೇ ಆ ಪುತ್ರರನ್ನು ಬಿಟ್ಟು ಕೇಶಿನಿಗೆ ಈ ರೀತಿ ಹೇಳಿದನು:

03073027a ಇದಂ ಸುಸದೃಶಂ ಭದ್ರೇ ಮಿಥುನಂ ಮಮ ಪುತ್ರಯೋಃ|

03073027c ತತೋ ದೃಷ್ಟ್ವೈವ ಸಹಸಾ ಬಾಷ್ಪಮುತ್ಸೃಷ್ಟವಾನಹಂ||

“ಭದ್ರೆ! ಈ ಅವಳಿಗಳು ನನ್ನ ಮಕ್ಕಳ ಸುಸದೃಶರಾಗಿದ್ದಾರೆ. ಒಮ್ಮಿಂದೊಮ್ಮೆಲೇ ಅವರನ್ನು ನೋಡಿದಾಗ ಕಣ್ಣೀರುಹರಿಸಿಬಿಟ್ಟೆ!

03073028a ಬಹುಶಃ ಸಂಪತಂತೀಂ ತ್ವಾಂ ಜನಃ ಶಂಕೇತ ದೋಷತಃ|

03073028c ವಯಂ ಚ ದೇಶಾತಿಥಯೋ ಗಚ್ಚ ಭದ್ರೇ ನಮೋಽಸ್ತು ತೇ||

ನೀನು ಇಲ್ಲಿಗೆ ಬಹಳಷ್ಟು ಸಾರಿ ಬರುತ್ತಿದ್ದೇಯೆ. ಜನರು ಕೆಟ್ಟದ್ದಾಗಿ ಯೋಚಿಸಬಹುದು. ನಾವು ಈ ದೇಶದಲ್ಲಿ ಅತಿಥಿಗಳು. ಹೋಗು ಭದ್ರೇ! ನಿನಗೆ ನನ್ನ ನಮನಗಳು.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಕನ್ಯಾಪುತ್ರದರ್ಶನೇ ತ್ರಿಸಪ್ತತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಕನ್ಯಾಪುತ್ರದರ್ಶನ ಎನ್ನುವ ಎಪ್ಪತ್ತ್ಮೂರನೆಯ ಅಧ್ಯಾಯವು.

Related image

Comments are closed.