ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
Contents
Toggle೨೨೦
ಸ್ವಾಹಾಳು ಅಗ್ನಿಯನ್ನು ಸೇರಿದುದು (೧-೭). ಬ್ರಹ್ಮನ ಸೂಚನೆಯಂತೆ ಸ್ಕಂದನು ಶಿವ-ಉಮೆಯರನ್ನು ತಂದೆ ತಾಯಿಯರಂತೆ ಪೂಜಿಸಿದ್ದು (೮-೧೩). ಶ್ವೇತಪರ್ವತದಲ್ಲಿ ಉತ್ಸವ (೧೪-೨೭).
03220001a ಯದಾ ಸ್ಕಂದೇನ ಮಾತೄಣಾಮೇವಮೇತತ್ಪ್ರಿಯಂ ಕೃತಂ|
03220001c ಅಥೈನಮಬ್ರವೀತ್ಸ್ವಾಹಾ ಮಮ ಪುತ್ರಸ್ತ್ವಮೌರಸಃ||
ಮಾರ್ಕಂಡೇಯನು ಹೇಳಿದನು: “ಸ್ಕಂದನು ಈ ರೀತಿ ಮಾತೃಗಳಿಗೆ ಪ್ರಿಯವಾದುದನ್ನು ಮಾಡಲು ಸ್ವಾಹಾಳು ಅವನಿಗೆ ಹೇಳಿದಳು: “ನೀನು ನನ್ನ ಔರಸ ಪುತ್ರ.
03220002a ಇಚ್ಚಾಮ್ಯಹಂ ತ್ವಯಾ ದತ್ತಾಂ ಪ್ರೀತಿಂ ಪರಮದುರ್ಲಭಾಂ|
03220002c ತಾಮಬ್ರವೀತ್ತತಃ ಸ್ಕಂದಃ ಪ್ರೀತಿಮಿಚ್ಚಸಿ ಕೀದೃಶೀಂ||
ನೀನು ನನ್ನ ಪ್ರೀತಿಯ ಪರಮ ದುರ್ಲಭವಾದುದನ್ನು ಕೊಡಬೇಕೆಂದು ಬಯಸುತ್ತೇನೆ.” ಅದಕ್ಕೆ ಸ್ಕಂದನು ಅವಳಿಗೆ ಕೇಳಿದನು: “ನಿನಗೆ ಪ್ರೀತಿಯಾದ ಏನನ್ನು ಬಯಸುತ್ತೀಯೆ?”
03220003 ಸ್ವಾಹೋವಾಚ|
03220003a ದಕ್ಷಸ್ಯಾಹಂ ಪ್ರಿಯಾ ಕನ್ಯಾ ಸ್ವಾಹಾ ನಾಮ ಮಹಾಭುಜ|
03220003c ಬಾಲ್ಯಾತ್ಪ್ರಭೃತಿ ನಿತ್ಯಂ ಚ ಜಾತಕಾಮಾ ಹುತಾಶನೇ||
ಸ್ವಾಹಾಳು ಹೇಳಿದಳು: “ಮಹಾಭುಜ! ನಾನು ದಕ್ಷನ ಪ್ರಿಯ ಕನ್ಯೆ. ಹೆಸರು ಸ್ವಾಹಾ. ಬಾಲ್ಯದಿಂದಲೂ ನಾನು ಸದಾ ಹುತಾಶನನನ್ನು ಕಾಮಿಸಿದ್ದೆ.
03220004a ನ ಚ ಮಾಂ ಕಾಮಿನೀಂ ಪುತ್ರ ಸಮ್ಯಗ್ಜಾನಾತಿ ಪಾವಕಃ|
03220004c ಇಚ್ಚಾಮಿ ಶಾಶ್ವತಂ ವಾಸಂ ವಸ್ತುಂ ಪುತ್ರ ಸಹಾಗ್ನಿನಾ||
ಆದರೆ ಪುತ್ರ! ಪಾವಕನು ಈ ಕಾಮಿನಿಯನ್ನು ಅರ್ಥಮಾಡಿಕೊಂಡಿಲ್ಲ. ಪುತ್ರ! ನಾನು ಅಗ್ನಿಯೊಂದಿಗೆ ಶಾಶ್ವತವಾಗಿ ವಾಸಿಸಲು ಇಚ್ಛಿಸುತ್ತೇನೆ.”
03220005 ಸ್ಕಂದ ಉವಾಚ|
03220005a ಹವ್ಯಂ ಕವ್ಯಂ ಚ ಯತ್ಕಿಂಚಿದ್ದ್ವಿಜಾ ಮಂತ್ರಪುರಸ್ಕೃತಂ|
03220005c ಹೋಷ್ಯಂತ್ಯಗ್ನೌ ಸದಾ ದೇವಿ ಸ್ವಾಹೇತ್ಯುಕ್ತ್ವಾ ಸಮುದ್ಯತಂ||
03220006a ಅದ್ಯ ಪ್ರಭೃತಿ ದಾಸ್ಯಂತಿ ಸುವೃತ್ತಾಃ ಸತ್ಪಥೇ ಸ್ಥಿತಾಃ|
03220006c ಏವಮಗ್ನಿಸ್ತ್ವಯಾ ಸಾರ್ಧಂ ಸದಾ ವತ್ಸ್ಯತಿ ಶೋಭನೇ||
ಸ್ಕಂದನು ಹೇಳಿದನು: “ದೇವಿ! ಇಂದಿನಿಂದ ಒಳ್ಳೆಯ ನಡತೆಯ ಸತ್ಯದ ಮಾರ್ಗದಲ್ಲಿ ನೆಲೆಸಿರುವ ದ್ವಿಜರು ಮಂತ್ರಪುರಸ್ಕೃತವಾದ ಏನು ಹವ್ಯಕವ್ಯಗಳನ್ನು ಮಾಡಿ ಅಗ್ನಿಯಲ್ಲಿ ಹವಿಸ್ಸನ್ನು ಹೋಮಿಸುತ್ತಾರೋ ಆಗ ಸದಾ ಸ್ವಾಹಾ ಎಂದು ಹೇಳಿಯೇ ಹಾಕಲಿ. ಹೀಗೆ ಶೋಭನೇ! ನೀನು ಸದಾ ಅಗ್ನಿಯ ಜೊತೆಯಲ್ಲಿ ವಾಸಿಸಿರುವೆ.””
03220007 ಮಾರ್ಕಂಡೇಯ ಉವಾಚ|
03220007a ಏವಮುಕ್ತಾ ತತಃ ಸ್ವಾಹಾ ತುಷ್ಟಾ ಸ್ಕಂದೇನ ಪೂಜಿತಾ|
03220007c ಪಾವಕೇನ ಸಮಾಯುಕ್ತಾ ಭರ್ತ್ರಾ ಸ್ಕಂದಮಪೂಜಯತ್||
ಮಾರ್ಕಂಡೇಯನು ಹೇಳಿದನು: “ಹೀಗೆ ಸ್ಕಂದನಿಂದ ಪೂಜಿತಳಾಗಿ ತೃಪ್ತಳಾದ ಸ್ವಾಹಾಳು ಪತಿ ಪಾವಕನನ್ನು ಸೇರಿ ಸ್ಕಂದನನ್ನು ಗೌರವಿಸಿದಳು.
03220008a ತತೋ ಬ್ರಹ್ಮಾ ಮಹಾಸೇನಂ ಪ್ರಜಾಪತಿರಥಾಬ್ರವೀತ್|
03220008c ಅಭಿಗಚ್ಚ ಮಹಾದೇವಂ ಪಿತರಂ ತ್ರಿಪುರಾರ್ದನಂ||
ಆಗ ಪ್ರಜಾಪತಿ ಬ್ರಹ್ಮನು ಮಹಾಸೇನನಿಗೆ ಹೇಳಿದನು: “ನಿನ್ನ ತಂದೆ ತ್ರಿಪುರಾರ್ದನ ಮಹಾದೇವನಲ್ಲಿಗೆ ಹೋಗು!
03220009a ರುದ್ರೇಣಾಗ್ನಿಂ ಸಮಾವಿಶ್ಯ ಸ್ವಾಹಾಮಾವಿಶ್ಯ ಚೋಮಯಾ|
03220009c ಹಿತಾರ್ಥಂ ಸರ್ವಲೋಕಾನಾಂ ಜಾತಸ್ತ್ವಮಪರಾಜಿತಃ||
ರುದ್ರನು ಅಗ್ನಿಯನ್ನು ಸಮಾವೇಶಗೊಂಡು ಮತ್ತು ಉಮೆಯು ಸ್ವಾಹಾಗಳನ್ನು ಆವೇಶಗೊಂಡು ಸರ್ವಲೋಕಗಳ ಹಿತಕ್ಕಾಗಿ ಅಪರಾಜಿತನಾದ ನಿನ್ನನ್ನು ಹುಟ್ಟಿಸಿದ್ದಾರೆ.
03220010a ಉಮಾಯೋನ್ಯಾಂ ಚ ರುದ್ರೇಣ ಶುಕ್ರಂ ಸಿಕ್ತಂ ಮಹಾತ್ಮನಾ|
03220010c ಆಸ್ತೇ ಗಿರೌ ನಿಪತಿತಂ ಮಿಂಜಿಕಾಮಿಂಜಿಕಂ ಯತಃ||
ಮಹಾತ್ಮ ರುದ್ರನ ಶುಕ್ರವು ಉಮೆಯ ಯೋನಿಯನ್ನು ಸೇರಿದಾಗ ಅದು ಇಲ್ಲಿ ಬಿದ್ದು ಮಿಂಜಿಕ ಮತ್ತು ಅಮಿಂಜಿಕಗಳೆಂಬ ಎರಡು ಗಿರಿಗಳಾದವು.
03220011a ಸಂಭೂತಂ ಲೋಹಿತೋದೇ ತು ಶುಕ್ರಶೇಷಮವಾಪತತ್|
03220011c ಸೂರ್ಯರಶ್ಮಿಷು ಚಾಪ್ಯನ್ಯದನ್ಯಚ್ಚೈವಾಪತದ್ಭುವಿ|
03220011e ಆಸಕ್ತಮನ್ಯದ್ವೃಕ್ಷೇಷು ತದೇವಂ ಪಂಚಧಾಪತತ್||
ಆ ಶುಕ್ರದ ಒಂದು ಭಾಗವು ಕೆಂಪುಸಮುದ್ರದಲ್ಲಿ ಬಿದ್ದಿತು. ಇನ್ನೊಂದು ಭಾಗವು ಸೂರ್ಯನ ರಶ್ಮಿಗಳಲ್ಲಿ ಮತ್ತು ಇನ್ನೂ ಒಂದು ಭಾಗವು ಭೂಮಿಯ ಮೇಲೆ ಹೀಗೆ ಅದು ಐದು ಭಾಗಗಳಾಗಿ ಹರಡಿ ಚೆಲ್ಲಲ್ಪಟ್ಟಿತು.
03220012a ತ ಏತೇ ವಿವಿಧಾಕಾರಾ ಗಣಾ ಜ್ಞೇಯಾ ಮನೀಷಿಭಿಃ|
03220012c ತವ ಪಾರಿಷದಾ ಘೋರಾ ಯ ಏತೇ ಪಿಶಿತಾಶನಾಃ||
ಮಾಂಸಗಳನ್ನು ತಿನ್ನುವ ವಿವಿಧಾಕಾರಗಳ ಘೋರ ಪಾರಿಷದಾ ಎನ್ನುವ ನಿನ್ನ ಗಣವು ಇವುಗಳಿಂದಲೇ ಹುಟ್ಟಿದವೆಂದು ವಿದ್ವಾಂಸರು ತಿಳಿದಿರುತ್ತಾರೆ.”
03220013a ಏವಮಸ್ತ್ವಿತಿ ಚಾಪ್ಯುಕ್ತ್ವಾ ಮಹಾಸೇನೋ ಮಹೇಶ್ವರಂ|
03220013c ಅಪೂಜಯದಮೇಯಾತ್ಮಾ ಪಿತರಂ ಪಿತೃವತ್ಸಲಃ||
ಹಾಗೆಯೇ ಆಗಲೆಂದು ಪಿತೃವತ್ಸಲ ಮಹಾಸೇನನು ಮಹೇಶ್ವರ, ಅಮೇಯಾತ್ಮ ತಂದೆಯನ್ನು ಪೂಜಿಸಿದನು.
03220014a ಅರ್ಕಪುಷ್ಪೈಸ್ತು ತೇ ಪಂಚ ಗಣಾಃ ಪೂಜ್ಯಾ ಧನಾರ್ಥಿಭಿಃ|
03220014c ವ್ಯಾಧಿಪ್ರಶಮನಾರ್ಥಂ ಚ ತೇಷಾಂ ಪೂಜಾಂ ಸಮಾಚರೇತ್||
ಧನಾರ್ಥಿಗಳು ಈ ಐದು ಗಣಗಳನ್ನು ಅರ್ಕಪುಷ್ಪಗಳಿಂದ ಪೂಜಿಸಬೇಕು. ವ್ಯಾಧಿಪ್ರಶಮನಕ್ಕಾಗಿಯೂ ಇವರ ಪೂಜೆಯನ್ನು ಆಚರಿಸಬೇಕು.
03220015a ಮಿಂಜಿಕಾಮಿಂಜಿಕಂ ಚೈವ ಮಿಥುನಂ ರುದ್ರಸಂಭವಂ|
03220015c ನಮಸ್ಕಾರ್ಯಂ ಸದೈವೇಹ ಬಾಲಾನಾಂ ಹಿತಮಿಚ್ಚತಾ||
ಚಿಕ್ಕ ಬಾಲಕರ ಹಿತವನ್ನು ಬಯಸುವವರು ರುದ್ರಸಂಭವರಾದ ಮಿಂಜಿಕ-ಅಮಿಂಜಿಕರನ್ನು ಸದಾ ನಮಸ್ಕರಿಸಬೇಕು.
03220016a ಸ್ತ್ರಿಯೋ ಮಾನುಷಮಾಂಸಾದಾ ವೃದ್ಧಿಕಾ ನಾಮ ನಾಮತಃ|
03220016c ವೃಕ್ಷೇಷು ಜಾತಾಸ್ತಾ ದೇವ್ಯೋ ನಮಸ್ಕಾರ್ಯಾಃ ಪ್ರಜಾರ್ಥಿಭಿಃ||
ಮಕ್ಕಳನ್ನು ಬಯಸುವವರು ಮನುಷ್ಯರ ಮಾಂಸವನ್ನು ತಿನ್ನುವ ವೃಕ್ಷಗಳಲ್ಲಿ ಹುಟ್ಟುವ ವೃದ್ಧಿಕಾ ಎಂಬ ಹೆಸರಿನ ಹೆಣ್ಣು ದೇವತೆಯನ್ನು ಸಮಸ್ಕರಿಸಬೇಕು.
03220017a ಏವಮೇತೇ ಪಿಶಾಚಾನಾಮಸಂಖ್ಯೇಯಾ ಗಣಾಃ ಸ್ಮೃತಾಃ|
03220017c ಘಂಟಾಯಾಃ ಸಪತಾಕಾಯಾಃ ಶೃಣು ಮೇ ಸಂಭವಂ ನೃಪ||
ಹೀಗೆ ಪಿಶಾಚಿಗಳು ಅಸಂಖ್ಯ ಗುಂಪುಗಳಲ್ಲಿ ವಿಂಗಡಣೆಗೊಂದಿದ್ದಾರೆಂದು ಕೇಳುತ್ತೇವೆ. ನೃಪ! ಈಗ ಸ್ಕಂದನ ಘಂಟೆ ಮತ್ತು ಪತಾಕೆಗಳ ಕುರಿತು ನನ್ನಿಂದ ಕೇಳು.
03220018a ಐರಾವತಸ್ಯ ಘಂಟೇ ದ್ವೇ ವೈಜಯಂತ್ಯಾವಿತಿ ಶ್ರುತೇ|
03220018c ಗುಹಸ್ಯ ತೇ ಸ್ವಯಂ ದತ್ತೇ ಶಕ್ರೇಣಾನಾಯ್ಯ ಧೀಮತಾ||
ಐರಾವತಕ್ಕೆ ವೈಜಂತ ಎನ್ನುವ ಎರಡು ಘಂಟೆಗಳಿವೆಯೆಂದು ಕೇಳಿದ್ದೇವೆ. ಸ್ವಯಂ ಧೀಮಂತ ಶಕ್ರನೇ ಅವುಗಳನ್ನು ತಂದು ಗುಹನಿಗೆ ಕೊಟ್ಟನು.
03220019a ಏಕಾ ತತ್ರ ವಿಶಾಖಸ್ಯ ಘಂಟಾ ಸ್ಕಂದಸ್ಯ ಚಾಪರಾ|
03220019c ಪತಾಕಾ ಕಾರ್ತ್ತಿಕೇಯಸ್ಯ ವಿಶಾಖಸ್ಯ ಚ ಲೋಹಿತಾ||
ಅದರಲ್ಲಿ ಒಂದು ವಿಶಾಖನಿಗೆ ಮತ್ತು ಇನ್ನೊಂದು ಸ್ಕಂದನಿಗಾಯಿತು. ಕಾರ್ತಿಕೇಯ ಮತ್ತು ವಿಶಾಖನ ಪತಾಕೆಗಳು ಕೆಂಪು ಬಣ್ಣದವು.
03220020a ಯಾನಿ ಕ್ರೀಡನಕಾನ್ಯಸ್ಯ ದೇವೈರ್ದತ್ತಾನಿ ವೈ ತದಾ|
03220020c ತೈರೇವ ರಮತೇ ದೇವೋ ಮಹಾಸೇನೋ ಮಹಾಬಲಃ||
ದೇವತೆಗಳು ಕೊಟ್ಟ ಆಟದ ಸಾಮಾನುಗಳಿಂದ ಮಹಾಬಲ ಮಹಾಸೇನ ದೇವನು ಸಂತೋಷಪಟ್ಟನು.
03220021a ಸ ಸಂವೃತಃ ಪಿಶಾಚಾನಾಂ ಗಣೈರ್ದೇವಗಣೈಸ್ತಥಾ|
03220021c ಶುಶುಭೇ ಕಾಂಚನೇ ಶೈಲೇ ದೀಪ್ಯಮಾನಃ ಶ್ರಿಯಾ ವೃತಃ||
ಪಿಶಾಚಿಗಳ ಗಣ ಮತ್ತು ದೇವಗಣಗಳಿಂದ ಸುತ್ತುವರೆಯಲ್ಪಟ್ಟ ಮತ್ತು ಶ್ರೀಯಿಂದ ಆವೃತನಾದ ಅವನು ಆ ಕಾಂಚನಗಿರಿಯಲ್ಲಿ ಬೆಳಗುತ್ತಾ ಶೋಭಾಯಮಾನನಾಗಿ ಕಂಡನು.
03220022a ತೇನ ವೀರೇಣ ಶುಶುಭೇ ಸ ಶೈಲಃ ಶುಭಕಾನನಃ|
03220022c ಆದಿತ್ಯೇನೇವಾಂಶುಮತಾ ಮಂದರಶ್ಚಾರುಕಂದರಃ||
ಕಂದರಗಳಿಂದ ಕೂಡಿದ, ಶುಭಕಾನನಗಳ ಆ ಮಂದರ ಶೈಲವು ಅಂಶುಮತ ಆದಿತ್ಯನಿಂದ ಹೇಗೋ ಹಾಗೆ ವೀರನಿಂದ ಶೋಭಿಸಿತು.
03220023a ಸಂತಾನಕವನೈಃ ಫುಲ್ಲೈಃ ಕರವೀರವನೈರಪಿ|
03220023c ಪಾರಿಜಾತವನೈಶ್ಚೈವ ಜಪಾಶೋಕವನೈಸ್ತಥಾ||
03220024a ಕದಂಬತರುಷಂಡೈಶ್ಚ ದಿವ್ಯೈರ್ಮೃಗಗಣೈರಪಿ|
03220024c ದಿವ್ಯೈಃ ಪಕ್ಷಿಗಣೈಶ್ಚೈವ ಶುಶುಭೇ ಶ್ವೇತಪರ್ವತಃ||
ಹೂಬಿಟ್ಟ ಸಂತಾನಕ ವನಗಳಿಂದ, ಕರವೀರ ವನಗಳಿಂದ, ಪಾರಿಜಾತ ವನಗಳಿಂದ, ಜಪ ಮತ್ತು ಅಶೋಕವನಗಳಿಂದ, ಕದಂಬ ಮರಗಿಡಗಳಿಂದ, ದಿವ್ಯ ಮೃಗಗಣಗಳಿಂದ, ದಿವ್ಯ ಪಕ್ಷಿಗಣಗಳಿಂದ ಶ್ವೇತಪರ್ವತವು ಶೋಭಿಸುತ್ತಿತ್ತು.
03220025a ತತ್ರ ದೇವಗಣಾಃ ಸರ್ವೇ ಸರ್ವೇ ಚೈವ ಮಹರ್ಷಯಃ|
03220025c ಮೇಘತೂರ್ಯರವಾಶ್ಚೈವ ಕ್ಷುಬ್ಧೋದಧಿಸಮಸ್ವನಾಃ||
ಅಲ್ಲಿ ಎಲ್ಲ ದೇವಗಣಗಳೂ ಎಲ್ಲ ಮಹರ್ಷಿಗಳೂ ಇದ್ದರು. ಕ್ಷೋಭೆಗೆ ಸಿಲುಕಿದ ಸಮುದ್ರದ ಭೋರ್ಗರೆಯಂತೆ ಮೋಡಗಳ ಶಬ್ದವು ಕೇಳಿಬರುತ್ತಿತ್ತು.
03220026a ತತ್ರ ದಿವ್ಯಾಶ್ಚ ಗಂಧರ್ವಾ ನೃತ್ಯಂತ್ಯಪ್ಸರಸಸ್ತಥಾ|
03220026c ಹೃಷ್ಟಾನಾಂ ತತ್ರ ಭೂತಾನಾಂ ಶ್ರೂಯತೇ ನಿನದೋ ಮಹಾನ್||
ಅಲ್ಲಿ ದಿವ್ಯ ಗಂಧರ್ವರು ಅಪ್ಸರೆಯರು ನೃತ್ಯಮಾಡುತ್ತಿದ್ದರು. ಅಲ್ಲಿದ್ದ ಭೂತಗಳ ಸಂತೋಷದಿಂದ ಮಹಾ ನಿನಾದವು ಕೇಳಿಬರುತ್ತಿತ್ತು.
03220027a ಏವಂ ಸೇಂದ್ರಂ ಜಗತ್ಸರ್ವಂ ಶ್ವೇತಪರ್ವತಸಂಸ್ಥಿತಂ|
03220027c ಪ್ರಹೃಷ್ಟಂ ಪ್ರೇಕ್ಷತೇ ಸ್ಕಂದಂ ನ ಚ ಗ್ಲಾಯತಿ ದರ್ಶನಾತ್||
ಹೀಗೆ ಇಂದ್ರನೊಂದಿಗೆ ಸರ್ವ ಜಗತ್ತೂ ಶ್ವೇತಪರ್ವದ ಮೇಲಿತ್ತು. ಸ್ಕಂದನನ್ನು ನೋಡುತ್ತಾ ಸಂತೋಷಪಟ್ಟರು ಮತ್ತು ಅವನನ್ನು ನೋಡಿ ಆಯಾಸಪಡಲಿಲ್ಲ.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಇನ್ನೂರಾಇಪ್ಪತ್ತನೆಯ ಅಧ್ಯಾಯವು.

