Anushasana Parva: Chapter 73

ಅನುಶಾಸನ ಪರ್ವ: ದಾನಧರ್ಮ ಪರ್ವ

೭೩

13073001 ಇಂದ್ರ ಉವಾಚ|

13073001a ಜಾನನ್ಯೋ ಗಾಮಪಹರೇದ್ವಿಕ್ರೀಯಾದ್ವಾರ್ಥಕಾರಣಾತ್|

13073001c ಏತದ್ವಿಜ್ಞಾತುಮಿಚ್ಚಾಮಿ ಕಾ ನು ತಸ್ಯ ಗತಿರ್ಭವೇತ್||

ಇಂದ್ರನು ಹೇಳಿದನು: “ತಿಳಿದೂ ಹಣದಾಸೆಯಿಂದ ಇನ್ನೊಬ್ಬನ ಹಸುವನ್ನು ಕತ್ತು ಅದನ್ನು ಬೇರೊಬ್ಬನಿಗೆ ಮಾರುವವನಿಗೆ ಎಂತಹ ಗತಿಯು ಪ್ರಾಪ್ತವಾಗುತ್ತದೆ? ಇದನ್ನು ತಿಳಿದುಕೊಳ್ಳಲು ಇಚ್ಛಿಸುತ್ತೇನೆ.”

13073002 ಬ್ರಹ್ಮೋವಾಚ|

13073002a ಭಕ್ಷಾರ್ಥಂ ವಿಕ್ರಯಾರ್ಥಂ ವಾ ಯೇಽಪಹಾರಂ ಹಿ ಕುರ್ವತೇ|

13073002c ದಾನಾರ್ಥಂ ವಾ ಬ್ರಾಹ್ಮಣಾಯ ತತ್ರೇದಂ ಶ್ರೂಯತಾಂ ಫಲಮ್||

ಬ್ರಹ್ಮನು ಹೇಳಿದನು: “ತಿನ್ನುವುದಕ್ಕಾಗಲೀ, ಮಾರುವುದಕ್ಕಾಗಲೀ, ಬ್ರಾಹ್ಮಣರಿಗೆ ದಾನವನ್ನು ಕೊಡುವುದಕ್ಕಾಗಲೀ ಬೇರೆಯವನ ಹಸುವನ್ನು ಕದ್ದವನಿಗೆ ಪ್ರಾಪ್ತವಾಗುವ ಫಲವನ್ನು ಕೇಳು.

13073003a ವಿಕ್ರಯಾರ್ಥಂ ಹಿ ಯೋ ಹಿಂಸ್ಯಾದ್ಭಕ್ಷಯೇದ್ವಾ ನಿರಂಕುಶಃ|

13073003c ಘಾತಯಾನಂ ಹಿ ಪುರುಷಂ ಯೇಽನುಮನ್ಯೇಯುರರ್ಥಿನಃ||

ಮಾರುವ ಸಲುವಾಗಿ ಗೋವನ್ನು ಹಿಂಸಿಸುವ ಅಥವಾ ತಿನ್ನುವ ಮತ್ತು ಕಟುಕನಿಗೆ ದೊರಕಿಸುವ ನಿರಂಕುಶ ಪುರುಷನು ಮಹಾಪಾಪಕ್ಕೆ ಭಾಗಿಯಾಗುತ್ತಾನೆ.

13073004a ಘಾತಕಃ ಖಾದಕೋ ವಾಪಿ ತಥಾ ಯಶ್ಚಾನುಮನ್ಯತೇ|

13073004c ಯಾವಂತಿ ತಸ್ಯಾ ಲೋಮಾನಿ ತಾವದ್ವರ್ಷಾಣಿ ಮಜ್ಜತಿ||

ಗೋ ಘಾತಕ, ಖಾದಕ ಮತ್ತು ಗೋಹತ್ಯೆಗೆ ಅನುಮತಿಯನ್ನು ನೀಡುವವನು ಆ ಗೋವಿನಲ್ಲಿ ಎಷ್ಟು ರೋಮಗಳಿವೆಯೋ ಅಷ್ಟು ವರ್ಷಗಳ ಕಾಲ ನರಕದಲ್ಲಿ ಮುಳುಗಿರುತ್ತಾನೆ.

13073005a ಯೇ ದೋಷಾ ಯಾದೃಶಾಶ್ಚೈವ ದ್ವಿಜಯಜ್ಞೋಪಘಾತಕೇ|

13073005c ವಿಕ್ರಯೇ ಚಾಪಹಾರೇ ಚ ತೇ ದೋಷಾ ವೈ ಸ್ಮೃತಾಃ ಪ್ರಭೋ||

ದ್ವಿಜನ ಯಜ್ಞವನ್ನು ಹಾಳುಮಾಡುವವನಿಗೆ ದೊರೆಯುವ ದೋಷಗಳು ಅಷ್ಟೇ ಪ್ರಮಾಣದಲ್ಲಿ ಗೋವನ್ನು ಕದಿಯುವವನಿಗೂ ಮತ್ತು ಮಾರುವವನಿಗೂ ಉಂಟಾಗುತ್ತವೆ.

13073006a ಅಪಹೃತ್ಯ ತು ಯೋ ಗಾಂ ವೈ ಬ್ರಾಹ್ಮಣಾಯ ಪ್ರಯಚ್ಚತಿ|

13073006c ಯಾವದ್ದಾನೇ ಫಲಂ ತಸ್ಯಾಸ್ತಾವನ್ನಿರಯಮೃಚ್ಚತಿ||

ಗೋವನ್ನು ಅಪಹರಿಸಿ ಬ್ರಾಹ್ಮಣನಿಗೆ ದಾನಮಾಡುವನು ತಾನೇ ಸಂಪಾದಿಸಿದ ಗೋವನ್ನು ದಾನಮಾಡುವುದರಿಂದ ದೊರಕುವ ಪುಣ್ಯವು ಎಷ್ಟು ವರ್ಷಗಳಿರುವುದೋ ಅಷ್ಟು ವರ್ಷಗಳು ನರಕದಲ್ಲಿಯೇ ಮುಳುಗಿರುತ್ತಾನೆ.

13073007a ಸುವರ್ಣಂ ದಕ್ಷಿಣಾಮಾಹುರ್ಗೋಪ್ರದಾನೇ ಮಹಾದ್ಯುತೇ|

13073007c ಸುವರ್ಣಂ ಪರಮಂ ಹ್ಯುಕ್ತಂ ದಕ್ಷಿಣಾರ್ಥಮಸಂಶಯಮ್||

ಮಹಾದ್ಯುತೇ! ಗೋದಾನದಲ್ಲಿ ಸುವರ್ಣ ದಕ್ಷಿಣೆಯನ್ನು ಸೇರಿಸಿ ಕೊಡಬೇಕೆಂದಿದೆ. ದಕ್ಷಿಣೆಯಾಗಿ ಸುವರ್ಣವೇ ಶ್ರೇಷ್ಠವೆನ್ನುತ್ತಾರೆ. ಅದರಲ್ಲಿ ಸಂಶಯವೇ ಇಲ್ಲ.

13073008a ಗೋಪ್ರದಾನಂ ತಾರಯತೇ ಸಪ್ತ ಪೂರ್ವಾಂಸ್ತಥಾ ಪರಾನ್|

13073008c ಸುವರ್ಣಂ ದಕ್ಷಿಣಾಂ ದತ್ತ್ವಾ ತಾವದ್ದ್ವಿಗುಣಮುಚ್ಯತೇ||

ಗೋದಾನದಿಂದ ಹಿಂದಿನ ಮತ್ತು ಮುಂದಿನ ಏಳು ಪೀಳಿಗೆಗಳ ಉದ್ಧಾರವಾಗುತ್ತದೆ. ಸುವರ್ಣದಕ್ಷಿಣೆಯನ್ನು ನೀಡಿ ಗೋದಾನಮಾಡಿದರೆ ಅದರ ಫಲವು ದ್ವಿಗುಣವಾಗುತದೆ ಎಂದು ಹೇಳುತ್ತಾರೆ.

13073009a ಸುವರ್ಣಂ ಪರಮಂ ದಾನಂ ಸುವರ್ಣಂ ದಕ್ಷಿಣಾ ಪರಾ|

13073009c ಸುವರ್ಣಂ ಪಾವನಂ ಶಕ್ರ ಪಾವನಾನಾಂ ಪರಂ ಸ್ಮೃತಮ್||

ಶಕ್ರ! ಸುವರ್ಣವು ಪರಮ ದಾನವೆಂದೂ, ಸುವರ್ಣವು ಪರಮ ದಕ್ಷಿಣೆಯೆಂದೂ, ಸುವರ್ಣವು ಪಾವನವಾದವುಗಳಿಂತ ಪಾವನವೆಂದೂ ಸ್ಮೃತಿಯಿದೆ.

13073010a ಕುಲಾನಾಂ ಪಾವನಂ ಪ್ರಾಹುರ್ಜಾತರೂಪಂ ಶತಕ್ರತೋ|

13073010c ಏಷಾ ಮೇ ದಕ್ಷಿಣಾ ಪ್ರೋಕ್ತಾ ಸಮಾಸೇನ ಮಹಾದ್ಯುತೇ||

ಶತಕ್ರತೋ! ಸುವರ್ಣವು ಕುಲಗಳನ್ನೇ ಪವಿತ್ರಗೊಳಿಸುತ್ತದೆ ಎಂದು ಹೇಳುತ್ತಾರೆ. ಮಹಾದ್ಯುತೇ! ಹೀಗೆ ನಾನು ನಿನಗೆ ಸುವರ್ಣದಕ್ಷಿಣೆಯ ಕುರಿತು ಸಂಕ್ಷಿಪ್ತವಾಗಿ ಹೇಳಿದ್ದೇನೆ.””

13073011 ಭೀಷ್ಮ ಉವಾಚ|

13073011a ಏತತ್ಪಿತಾಮಹೇನೋಕ್ತಮಿಂದ್ರಾಯ ಭರತರ್ಷಭ|

13073011c ಇಂದ್ರೋ ದಶರಥಾಯಾಹ ರಾಮಾಯಾಹ ಪಿತಾ ತಥಾ||

ಭೀಷ್ಮನು ಹೇಳಿದನು: “ಭರತರ್ಷಭ! ಹೀಗೆ ಇದನ್ನು ಪಿತಾಮಹನು ಇಂದ್ರನಿಗೆ ಹೇಳಿದನು. ಇಂದ್ರನು ದಶರಥನಿಗೆ ಹೇಳಿದನು. ಹಾಗೆಯೇ ತಂದೆಯು ರಾಮನಿಗೆ ಹೇಳಿದನು.

13073012a ರಾಘವೋಽಪಿ ಪ್ರಿಯಭ್ರಾತ್ರೇ ಲಕ್ಷ್ಮಣಾಯ ಯಶಸ್ವಿನೇ|

13073012c ಋಷಿಭ್ಯೋ ಲಕ್ಷ್ಮಣೇನೋಕ್ತಮರಣ್ಯೇ ವಸತಾ ವಿಭೋ||

ರಾಘವನಾದರೋ ಇದನ್ನು ತನ್ನ ಪ್ರಿಯ ಭ್ರಾತಾ ಯಶಸ್ವಿನೀ ಲಕ್ಷ್ಮಣನಿಗೆ ಹೇಳಿದನು. ವಿಭೋ! ಅರಣ್ಯದಲ್ಲಿ ವಾಸಿಸುತ್ತಿರುವಾಗ ಲಕ್ಷ್ಮಣನು ಇದನ್ನು ಋಷಿಗಳಿಗೆ ಹೇಳಿದನು.

13073013a ಪಾರಂಪರ್ಯಾಗತಂ ಚೇದಮೃಷಯಃ ಸಂಶಿತವ್ರತಾಃ|

13073013c ದುರ್ಧರಂ ಧಾರಯಾಮಾಸೂ ರಾಜಾನಶ್ಚೈವ ಧಾರ್ಮಿಕಾಃ|

13073013e ಉಪಾಧ್ಯಾಯೇನ ಗದಿತಂ ಮಮ ಚೇದಂ ಯುಧಿಷ್ಠಿರ||

ಪಾರಂಪರಾಗತವಾಗಿ ಬಂದ ಈ ಕಠೋರ ವ್ರತವನ್ನು ಸಂಶಿತವ್ರತ ಋಷಿಗಳೂ ಮತ್ತು ಧಾರ್ಮಿಕ ರಾಜರೂ ತಮ್ಮದಾಗಿಸಿಕೊಂಡರು.

13073014a ಯ ಇದಂ ಬ್ರಾಹ್ಮಣೋ ನಿತ್ಯಂ ವದೇದ್ಬ್ರಾಹ್ಮಣಸಂಸದಿ|

13073014c ಯಜ್ಞೇಷು ಗೋಪ್ರದಾನೇಷು ದ್ವಯೋರಪಿ ಸಮಾಗಮೇ||

13073015a ತಸ್ಯ ಲೋಕಾಃ ಕಿಲಾಕ್ಷಯ್ಯಾ ದೈವತೈಃ ಸಹ ನಿತ್ಯದಾ|

13073015c ಇತಿ ಬ್ರಹ್ಮಾ ಸ ಭಗವಾನುವಾಚ ಪರಮೇಶ್ವರಃ||

ಇದನ್ನು ನಿತ್ಯವೂ ವಯಜ್ಞಗಳಲ್ಲಿ ಮತ್ತು ಗೋದಾನಗಳಲ್ಲಿ ಬ್ರಾಹ್ಮಣಸಂಸದಿಯಲ್ಲಿ ಮತ್ತು ಇಬ್ಬರ ಸಮಾಗಮವಾದಗಲೂ ಹೇಳುವವನಿಗೆ ಅಕ್ಷಯ ಪುಣ್ಯಲೋಕಗಳು ಲಭಿಸುತ್ತವೆ ಮತ್ತು ಅವನು ಅಲ್ಲಿ ನಿತ್ಯವೂ ದೇವತೆಗಳ ಸಹಿತ ಮೋದಿಸುತ್ತಾನೆ. ಹೀಗೆ ಭಗವಾನ್ ಪರಮೇಶ್ವರ ಬ್ರಹ್ಮನು ಹೇಳಿದನು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ತ್ರಿಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಎಪ್ಪತ್ಮೂರನೇ ಅಧ್ಯಾಯವು.

Pink and yellow frangipani plumeria flower with isolated petals on white  background Image - Stock by Pixlr

Comments are closed.