Adi Parva: Chapter 56

ಆದಿ ಪರ್ವ: ಅಂಶಾವತರಣ ಪರ್ವ

೫೬

ಜನಮೇಜಯನು ಯುದ್ಧಕ್ಕೆ ಕಾರಣವನ್ನು ಪ್ರಶ್ನಿಸುವುದು (೧-೧೦). ಮಹಾಭಾರತದ ಪ್ರಶಂಸೆ (೧೧-೩೦).

01056001 ಜನಮೇಜಯ ಉವಾಚ

01056001a ಕಥಿತಂ ವೈ ಸಮಾಸೇನ ತ್ವಯಾ ಸರ್ವಂ ದ್ವಿಜೋತ್ತಮ|

01056001c ಮಹಾಭಾರತಮಾಖ್ಯಾನಂ ಕುರೂಣಾಂ ಚರಿತಂ ಮಹತ್||

01056002a ಕಥಾಂ ತ್ವನಘ ಚಿತ್ರಾರ್ಥಾಮಿಮಾಂ ಕಥಯತಿ ತ್ವಯಿ|

01056002c ವಿಸ್ತರಶ್ರವಣೇ ಜಾತಂ ಕೌತೂಹಲಮತೀವ ಮೇ||

ಜನಮೇಜಯನು ಹೇಳಿದನು: “ದ್ವಿಜೋತ್ತಮ! ಕುರುಗಳ ಮಹಾ ಚರಿತ್ರೆ ಮಹಾಭಾರತ ಆಖ್ಯಾನವನ್ನು ಸಂಕ್ಷಿಪ್ತರೂಪದಲ್ಲಿ ನೀನು ಹೇಳಿದ್ದೀಯೆ. ಅನಘ! ಚಿತ್ರಾರ್ಥಗಳನ್ನುಳ್ಳ ಈ ಕಥೆಯನ್ನು ನಿನ್ನಿಂದ ವಿಸ್ತಾರವಾಗಿ ಕೇಳುವ ಅತೀವ ಕುತೂಹಲವು ನನ್ನಲ್ಲಿ ಉಂಟಾಗಿದೆ.

01056003a ಸ ಭವಾನ್ವಿಸ್ತರೇಣೇಮಾಂ ಪುನರಾಖ್ಯಾತುಮರ್ಹತಿ|

01056003c ನ ಹಿ ತೃಪ್ಯಾಮಿ ಪೂರ್ವೇಷಾಂ ಶೃಣ್ವಾನಶ್ಚರಿತಂ ಮಹತ್||

ನೀನು ಪುನಃ ಇದನ್ನು ವಿಸ್ತಾರವಾಗಿ ಹೇಳಬೇಕು. ಈಗ ಹೇಳಿದ ಮಹಾ ಚರಿತ್ರೆಯನ್ನು ಕೇಳಿ ನಾನು ತೃಪ್ತಿ ಹೊಂದಲಿಲ್ಲ.

01056004a ನ ತತ್ಕಾರಣಮಲ್ಪಂ ಹಿ ಧರ್ಮಜ್ಞಾ ಯತ್ರ ಪಾಂಡವಾಃ|

01056004c ಅವಧ್ಯಾನ್ಸರ್ವಶೋ ಜಘ್ನುಃ ಪ್ರಶಸ್ಯಂತೇ ಚ ಮಾನವೈಃ||

ಜನರ ಪ್ರಶಂಸೆಗೆ ಪಾತ್ರರಾಗಿರುವ ಆ ಧರ್ಮಜ್ಞ ಪಾಂಡವರು ವಧೆಗೆ ಅರ್ಹರಲ್ಲದ ಸರ್ವರನ್ನೂ ಸಂಹರಿಸಿದರೆಂದರೆ ಅದರ ಕಾರಣವು ಅಲ್ಪವಾಗಿರಲಿಕ್ಕಿಲ್ಲ.

01056005a ಕಿಮರ್ಥಂ ತೇ ನರವ್ಯಾಘ್ರಾಃ ಶಕ್ತಾಃ ಸಂತೋ ಹ್ಯನಾಗಸಃ|

01056005c ಪ್ರಯುಜ್ಯಮಾನಾನ್ಸಂಕ್ಲೇಶಾನ್ ಕ್ಷಾಂತವಂತೋ ದುರಾತ್ಮನಾಂ||

ಸಂತರೂ, ಶಕ್ತರೂ, ತಪ್ಪಿಲ್ಲದವರೂ ಆದ ಆ ನರವ್ಯಾಘ್ರರು ದುರಾತ್ಮರಿಂದ ತಮಗೊದಗಿದ ಸಂಕ್ಲೇಷಗಳನ್ನು ಏಕೆ ವಿರೋಧಿಸಿದೇ ಸಹಿಸಿದರು?

01056006a ಕಥಂ ನಾಗಾಯುತಪ್ರಾಣೋ ಬಾಹುಶಾಲೀ ವೃಕೋದರಃ|

01056006c ಪರಿಕ್ಲಿಶ್ಯನ್ನಪಿ ಕ್ರೋಧಂ ಧೃತವಾನ್ವೈ ದ್ವಿಜೋತ್ತಮ||

ದ್ವಿಜೋತ್ತಮ! ಆನೆಗಳ ಬಲವುಳ್ಳ ಬಾಹುಶಾಲಿ ವೃಕೋದರನು ಪರಿಕ್ಲಿಷ್ಟಗಳೊದಗಿದರೂ ಹೇಗೆ ತನ್ನ ಕ್ರೋಧವನ್ನು ಸಹಿಸಿಕೊಂಡನು?

01056007a ಕಥಂ ಸಾ ದ್ರೌಪದೀ ಕೃಷ್ಣಾ ಕ್ಲಿಶ್ಯಮಾನಾ ದುರಾತ್ಮಭಿಃ|

01056007c ಶಕ್ತಾ ಸತೀ ಧಾರ್ತರಾಷ್ಟ್ರಾನ್ನಾದಹದ್ಘೋರಚಕ್ಷುಷಾ||

ದುರಾತ್ಮರಿಂದ ಕಷ್ಟಕ್ಕೊಳಗಾದ ದ್ರೌಪದಿ ಕೃಷ್ಣೆಯು ಶಕ್ತಳಾಗಿದ್ದರೂ ಏಕೆ ತನ್ನ ಘೋರ ಕಣ್ಣುಗಳಿಂದ ಆ ಧಾರ್ತರಾಷ್ಟ್ರರನ್ನು ಸುಟ್ಟು ಭಸ್ಮಮಾಡಲಿಲ್ಲ?

01056008a ಕಥಂ ವ್ಯತಿಕ್ರಮನ್ದ್ಯೂತೇ ಪಾರ್ಥೌ ಮಾದ್ರೀಸುತೌ ತಥಾ|

01056008c ಅನುವ್ರಜನ್ನರವ್ಯಾಘ್ರಂ ವಂಚ್ಯಮಾನಂ ದುರಾತ್ಮಭಿಃ||

ಈರ್ವರು ಪಾರ್ಥರು ಮತ್ತು ಈರ್ವರು ಮಾದ್ರೀಸುತರು ದ್ಯೂತದಲ್ಲಿ ದುರಾತ್ಮರಿಂದ ವಂಚನೆಗೊಳಗಾಗುತ್ತಿದ್ದಾಗಲೂ ಆ ನರವ್ಯಾಘ್ರ ಯುಧಿಷ್ಠಿರನನ್ನು ಹೇಗೆ ಅನುಸರಿಸಿದರು?

01056009a ಕಥಂ ಧರ್ಮಭೃತಾಂ ಶ್ರೇಷ್ಠಃ ಸುತೋ ಧರ್ಮಸ್ಯ ಧರ್ಮವಿತ್|

01056009c ಅನರ್ಹಃ ಪರಮಂ ಕ್ಲೇಶಂ ಸೋಢವಾನ್ಸ ಯುಧಿಷ್ಠಿರಃ||

ಧರ್ಮಸುತ ಧರ್ಮಭೃತರಲ್ಲಿ ಶ್ರೇಷ್ಠ ಧರ್ಮವಿತ್ ಯುಧಿಷ್ಠಿರನು ಏಕೆ ಅನರ್ಹನಾಗಿದ್ದರೂ ಆ ಪರಮ ಕ್ಲೇಷವನ್ನು ಅನುಭವಿಸಿದನು?

01056010a ಕಥಂ ಚ ಬಹುಲಾಃ ಸೇನಾಃ ಪಾಂಡವಃ ಕೃಷ್ಣಸಾರಥಿಃ|

01056010c ಅಸ್ಯನ್ನೇಕೋಽನಯತ್ಸರ್ವಾಃ ಪಿತೃಲೋಕಂ ಧನಂಜಯಃ||

ಬಹುಸಂಖ್ಯೆಯಲ್ಲಿ ಸರ್ವ ಸೇನೆಗಳನ್ನೂ ಒಬ್ಬನೇ ಪಿತೃಲೋಕಕ್ಕೆ ಕಳುಹಿಸಬಲ್ಲ ಕೃಷ್ಣಸಾರಥಿ ಪಾಂಡವ ಧನಂಜಯನು ಕೂಡ ಹೇಗೆ ಸಹಿಸಿದನು?

01056011a ಏತದಾಚಕ್ಷ್ವ ಮೇ ಸರ್ವಂ ಯಥಾವೃತ್ತಂ ತಪೋಧನ|

01056011c ಯದ್ಯಚ್ಚ ಕೃತವಂತಸ್ತೇ ತತ್ರ ತತ್ರ ಮಹಾರಥಾಃ||

ತಪೋಧನ! ಇವೆಲ್ಲವನ್ನೂ ಹೇಗೆ ನಡೆಯಿತೋ ಹಾಗೆ ಹೇಳು - ಪ್ರತಿಯೊಂದು ಕ್ಷಣದಲ್ಲೂ ಆ ಮಹಾರಥಿಗಳು ನಿರ್ವಹಿಸಿದ ಕಾರ್ಯಗಳನ್ನು ಹೇಳು.”

01056012 ವೈಶಂಪಾಯನ ಉವಾಚ

[1]01056012a ಮಹರ್ಷೇಃ ಸರ್ವಲೋಕೇಷು ಪೂಜಿತಸ್ಯ ಮಹಾತ್ಮನಃ|

01056012c ಪ್ರವಕ್ಷ್ಯಾಮಿ ಮತಂ ಕೃತ್ಸ್ನಂ ವ್ಯಾಸಸ್ಯಾಮಿತತೇಜಸಃ||

ವೈಶಂಪಾಯನನು ಹೇಳಿದನು: “ಸರ್ವಲೋಕಪೂಜಿತ ಮಹಾತ್ಮ ಅಮಿತತೇಜಸ ಮಹರ್ಷಿ ವ್ಯಾಸನ ಕೃತಿಯನ್ನು ಸಂಪೂರ್ಣವಾಗಿ ಹೇಳುತ್ತೇನೆ.

01056013a ಇದಂ ಶತಸಹಸ್ರಂ ಹಿ ಶ್ಲೋಕಾನಾಂ ಪುಣ್ಯಕರ್ಮಣಾಂ|

01056013c ಸತ್ಯವತ್ಯಾತ್ಮಜೇನೇಹ ವ್ಯಾಖ್ಯಾತಮಮಿತೌಜಸಾ||

ಅಮಿತೌಜಸ ಸತ್ಯವತಿಯ ಆತ್ಮಜನು ಆಖ್ಯಾಯಿಸಿದ ಈ ಪುಣ್ಯಕೃತಿಯು ನೂರುಸಾವಿರ ಶ್ಲೋಕಗಳನ್ನು ಹೊಂದಿದೆ.

01056014a ಯ ಇದಂ ಶ್ರಾವಯೇದ್ವಿದ್ವಾನ್ಯಶ್ಚೇದಂ ಶೃಣುಯಾನ್ನರಃ|

01056014c ತೇ ಬ್ರಹ್ಮಣಃ ಸ್ಥಾನಮೇತ್ಯ ಪ್ರಾಪ್ನುಯುರ್ದೇವತುಲ್ಯತಾಂ||

ಇದನ್ನು ಓದುವ ವಿದ್ವಾಂಸ ಮತ್ತು ಕೇಳುವ ನರನು ದೇವಮಾನ ಬ್ರಹ್ಮಸ್ಥಾನವನ್ನು ಪಡೆಯುತ್ತಾರೆ.

01056015a ಇದಂ ಹಿ ವೇದೈಃ ಸಮಿತಂ ಪವಿತ್ರಮಪಿ ಚೋತ್ತಮಂ|

01056015c ಶ್ರಾವ್ಯಾಣಾಮುತ್ತಮಂ ಚೇದಂ ಪುರಾಣಂ ಋಷಿಸಂಸ್ತುತಂ||

ವೇದಗಳಷ್ಟೇ ಪವಿತ್ರ, ಋಷಿಸಂಸ್ತುತ ಈ ಪುರಾಣವು ಕೇಳಬೇಕಾಗಿದ್ದುದರಲ್ಲೆಲ್ಲಾ ಉತ್ತಮವಾದದ್ದು.

01056016a ಅಸ್ಮಿನ್ನರ್ಥಶ್ಚ ಧರ್ಮಶ್ಚ ನಿಖಿಲೇನೋಪದಿಶ್ಯತೇ|

01056016c ಇತಿಹಾಸೇ ಮಹಾಪುಣ್ಯೇ ಬುದ್ಧಿಶ್ಚ ಪರಿನೈಷ್ಟಿಕೀ||

ಇದರಲ್ಲಿ ಅರ್ಥ-ಧರ್ಮಗಳನ್ನು ಸಂಪೂರ್ಣವಾಗಿ ಉಪದೇಶಿಸಲಾಗಿದೆ ಮತ್ತು ಈ ಮಹಾಪುಣ್ಯಕರ ಇತಿಹಾಸವು ಮೋಕ್ಷವನ್ನು ಬಯಸುವ ಬುದ್ಧಿಯನ್ನು ನೀಡುತ್ತದೆ.

01056017a ಅಕ್ಷುದ್ರಾನ್ದಾನಶೀಲಾಂಶ್ಚ ಸತ್ಯಶೀಲಾನನಾಸ್ತಿಕಾನ್|

01056017c ಕಾರ್ಷ್ಣಂ ವೇದಮಿಮಂ ವಿದ್ವಾಂ ಶ್ರಾವಯಿತ್ವಾರ್ಥಮಶ್ನುತೇ||

ಕೃಷ್ಣನ ಈ ವೇದವನ್ನು ಅಕ್ಷುದ್ರರಿಗೆ, ದಾನಶೀಲರಿಗೆ, ಸತ್ಯಶೀಲರಿಗೆ ಮತ್ತು ಆಸ್ತಿಕರಿಗೆ ಓದಿ ಹೇಳಿದ ವಿದ್ವಾಂಸನು ಸಂಪತ್ತನ್ನು ಪಡೆಯುವನು.

01056018a ಭ್ರೂಣಹತ್ಯಾಕೃತಂ ಚಾಪಿ ಪಾಪಂ ಜಹ್ಯಾದಸಂಶಯಂ|

01056018c ಇತಿಹಾಸಮಿಮಂ ಶ್ರುತ್ವಾ ಪುರುಷೋಽಪಿ ಸುದಾರುಣಃ||

ಈ ಇತಿಹಾಸವನ್ನು ಕೇಳಿ ಪುರುಷನು ಸುದಾರುಣ ಭ್ರೂಣಹತ್ಯಾ ಪಾಪವನ್ನೂ ನಿಸ್ಸಂಶಯವಾಗಿ ಕಳೆದುಕೊಳ್ಳಬಹುದು.

01056019a ಜಯೋ ನಾಮೇತಿಹಾಸೋಽಯಂ ಶ್ರೋತವ್ಯೋ ವಿಜಿಗೀಷುಣಾ|

01056019c ಮಹೀಂ ವಿಜಯತೇ ಸರ್ವಾಂ ಶತ್ರೂಂಶ್ಚಾಪಿ ಪರಾಜಯೇತ್||

ವಿಜಯಾಕಾಂಕ್ಷಿಗಳು ಜಯ ನಾಮದ ಈ ಇತಿಹಾಸವನ್ನು ಕೇಳಬೇಕು; ಅಂಥವನು ಸರ್ವ ಶತ್ರುಗಳನ್ನೂ ಪರಾಜಯಗೊಳಿಸಿ ಮಹಿಯನ್ನೇ ಜಯಿಸಬಹುದು.

01056020a ಇದಂ ಪುಂಸವನಂ ಶ್ರೇಷ್ಠಮಿದಂ ಸ್ವಸ್ತ್ಯಯನಂ ಮಹತ್|

01056020c ಮಹಿಷೀಯುವರಾಜಾಭ್ಯಾಂ ಶ್ರೋತವ್ಯಂ ಬಹುಶಸ್ತಥಾ||

ರಾಣಿ ಯುವರಾಜರೀರ್ವರೂ ಇದನ್ನು ಬಹುಬಾರಿ ಕೇಳಿದರೆ ಶ್ರೇಷ್ಠ ಸಂತಾನವನ್ನು ಪಡೆದು ಮಹತ್ತರ ಕಲ್ಯಾಣವನ್ನು ಹೊಂದುತ್ತಾರೆ.

01056021a ಅರ್ಥಶಾಸ್ತ್ರಮಿದಂ ಪುಣ್ಯಂ ಧರ್ಮಶಾಸ್ತ್ರಮಿದಂ ಪರಂ|

01056021c ಮೋಕ್ಷಶಾಸ್ತ್ರಮಿದಂ ಪ್ರೋಕ್ತಂ ವ್ಯಾಸೇನಾಮಿತಬುದ್ಧಿನಾ||

ಇದು ಪುಣ್ಯಕರ ಅರ್ಥಶಾಸ್ತ್ರ ಮತ್ತು ಶ್ರೇಷ್ಠ ಧರ್ಮಶಾಸ್ತ್ರ. ಅಮಿತಬುದ್ಧಿಶಾಲಿ ವ್ಯಾಸನು ಹೇಳಿದಹಾಗೆ ಇದು ಮೋಕ್ಷಶಾಸ್ತ್ರವೂ ಹೌದು.

01056022a ಸಂಪ್ರತ್ಯಾಚಕ್ಷತೇ ಚೈವ ಆಖ್ಯಾಸ್ಯಂತಿ ತಥಾಪರೇ|

01056022c ಪುತ್ರಾಃ ಶುಶ್ರೂಷವಃ ಸಂತಿ ಪ್ರೇಷ್ಯಾಶ್ಚ ಪ್ರಿಯಕಾರಿಣಃ||

ಈಗ ಇದನ್ನು ಹೇಳಲಾಗುತ್ತಿದೆ ಮತ್ತು ಇದರ ನಂತರವೂ ಕಥಿಸಲಾಗುತ್ತದೆ. ಮಾತನ್ನು ಕೇಳುವ ಪುತ್ರರು ಜನಿಸುತ್ತಾರೆ ಮತ್ತು ಪ್ರಿಯಕಾರ್ಯಗಳನ್ನು ಮಾಡುವ ಸೇವಕರು ದೊರೆಯುತ್ತಾರೆ.

01056023a ಶರೀರೇಣ ಕೃತಂ ಪಾಪಂ ವಾಚಾ ಚ ಮನಸೈವ ಚ|

01056023c ಸರ್ವಂ ತತ್ತ್ಯಜತಿ ಕ್ಷಿಪ್ರಮಿದಂ ಶೃಣ್ವನ್ನರಃ ಸದಾ||

ಇದನ್ನು ಸದಾ ಕೇಳುವ ನರನನ್ನು ಅವನು ವಾಚಾ, ಮನಸಾ ಅಥವಾ ಶರೀರದಿಂದ ಮಾಡಿದ ಪಾಪಗಳೆಲ್ಲವೂ ತಕ್ಷಣವೇ ತ್ಯಜಿಸಿಬಿಡುತ್ತವೆ.

01056024a ಭಾರತಾನಾಂ ಮಹಜ್ಜನ್ಮ ಶೃಣ್ವತಾಮನಸೂಯತಾಂ|

01056024c ನಾಸ್ತಿ ವ್ಯಾಧಿಭಯಂ ತೇಷಾಂ ಪರಲೋಕಭಯಂ ಕುತಃ||

ದೂಷಿಸದೇ ಯಾರು ಭಾರತರ ಮಹಾಜನ್ಮದ ಕುರಿತು ಕೇಳುತ್ತಾರೋ ಅವರಿಗೆ ಯಾವುದೇ ವ್ಯಾಧಿಭಯವೂ ಇರುವುದಿಲ್ಲ. ಪರಲೋಕದ ಭಯವು ಎಲ್ಲಿಂದ?

01056025a ಧನ್ಯಂ ಯಶಸ್ಯಮಾಯುಷ್ಯಂ ಸ್ವರ್ಗ್ಯಂ ಪುಣ್ಯಂ ತಥೈವ ಚ|

01056025c ಕೃಷ್ಣದ್ವೈಪಾಯನೇನೇದಂ ಕೃತಂ ಪುಣ್ಯಚಿಕೀರ್ಷುಣಾ||

01056026a ಕೀರ್ತಿಂ ಪ್ರಥಯತಾ ಲೋಕೇ ಪಾಂಡವಾನಾಂ ಮಹಾತ್ಮನಾಂ|

01056026c ಅನ್ಯೇಷಾಂ ಕ್ಷತ್ರಿಯಾಣಾಂ ಚ ಭೂರಿದ್ರವಿಣತೇಜಸಾಂ[2]||

ಒಳ್ಳೆಯದನ್ನು ಮಾಡಲೋಸುಗ ಕೃಷ್ಣದ್ವೈಪಾಯನನು ಧನ್ಯತೆ, ಯಶಸ್ಸು, ಆಯಸ್ಸು, ಸ್ವರ್ಗ ಮತ್ತು ಪುಣ್ಯಗಳನ್ನು ತರುವಂಥಹ ಇದನ್ನು ರಚಿಸಿ, ಭೂರಿದ್ರವಿಣತೇಜಸ ಮಹಾತ್ಮ ಪಾಂಡವರ ಮತ್ತು ಇನ್ನೂ ಇತರ ಕ್ಷತ್ರಿಯರ ಕೀರ್ತಿಯನ್ನು ಲೋಕಗಳಲ್ಲಿ ಪ್ರಸರಿಸಿದನು.

[3]01056027a ಯಥಾ ಸಮುದ್ರೋ ಭಗವಾನ್ಯಥಾ ಚ ಹಿಮವಾನ್ಗಿರಿಃ|

01056027c ಖ್ಯಾತಾವುಭೌ ರತ್ನನಿಧೀ ತಥಾ ಭಾರತಮುಚ್ಯತೇ|||

ಭಗವಾನ್ ಸಮುದ್ರ ಮತ್ತು ಹಿಮವತ್ಪರ್ವತಗಳು ರತ್ನನಿಧಿಗಳೆಂದು ಹೇಗೆ ಖ್ಯಾತರಾಗಿದ್ದಾರೋ ಹಾಗೆ ಭಾರತವೂ ಖ್ಯಾತಿಗೊಂಡಿದೆ.

01056028a ಯ ಇದಂ ಶ್ರಾವಯೇದ್ವಿದ್ವಾನ್ಬ್ರಾಹ್ಮಣಾನಿಹ ಪರ್ವಸು|

01056028c ಧೂತಪಾಪ್ಮಾ ಜಿತಸ್ವರ್ಗೋ ಬ್ರಹ್ಮಭೂಯಂ ಸ ಗಚ್ಛತಿ||

ಇಲ್ಲಿ ಇದನ್ನು ಹುಣ್ಣಿಮೆಯಲ್ಲಿ ಬ್ರಾಹ್ಮಣರಿಗೆ ಹೇಳಿದ ವಿದ್ವಾಂಸನು ಪರಲೋಕದಲ್ಲಿ ಸ್ವರ್ಗವನ್ನು ಗೆದ್ದು ಬ್ರಹ್ಮಲೋಕವನ್ನು ಸೇರುತ್ತಾನೆ.

[4]01056029a ಯಶ್ಚೇದಂ ಶ್ರಾವಯೇಚ್ಛ್ರಾದ್ಧೇ ಬ್ರಾಹ್ಮಣಾನ್ಪಾದಮಂತತಃ|

01056029c ಅಕ್ಷಯ್ಯಂ ತಸ್ಯ ತಚ್ಛ್ರಾದ್ಧಮುಪತಿಷ್ಠೇತ್ಪಿತೄನಪಿ||

ಶ್ರಾದ್ಧದಲ್ಲಿ ಇದರ ಒಂದು ಶ್ಲೋಕವನ್ನಾದರೂ ಬ್ರಾಹ್ಮಣರಿಗೆ ಕೇಳಿಸುವಂತೆ ಹೇಳಿದರೆ ಅವನ ಶ್ರಾದ್ಧವು ಅಕ್ಷಯವಾಗುತ್ತದೆ ಮತ್ತು ಪಿತೃಗಳೂ ಕೂಡ ಸಂತೃಪ್ತರಾಗುತ್ತಾರೆ.

01056030a ಅಹ್ನಾ ಯದೇನಶ್ಚಾಜ್ಞಾನಾತ್ಪ್ರಕರೋತಿ ನರಶ್ಚರನ್[5]|

01056030c ತನ್ಮಹಾಭಾರತಾಖ್ಯಾನಂ ಶ್ರುತ್ವೈವ ಪ್ರವಿಲೀಯತೇ|||

ಅಜ್ಞಾನದಿಂದ ದಿನದಲ್ಲಿ ನರನು ಮಾಡಿದ ಪಾಪವು ಭಾರತದ ಆಖ್ಯಾನವನ್ನು ಕೇಳುತ್ತಿದ್ದಂತೆ ನಶಿಸಿಹೋಗುತ್ತದೆ.

01056031a ಭಾರತಾನಾಂ ಮಹಜ್ಜನ್ಮ ಮಹಾಭಾರತಮುಚ್ಯತೇ||

01056031c ನಿರುಕ್ತಮಸ್ಯ ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ||

ಭಾರತರ ಮಹಾಜನ್ಮವೇ ಮಹಾಭಾರತವೆಂದು ಕರೆಯಲ್ಪಟ್ಟಿದೆ. ಈ ನಿರುಕ್ತವನ್ನು ತಿಳಿದವನು ಸರ್ವಪಾಪಗಳಿಂದ ವಿಮುಕ್ತನಾಗುತ್ತಾನೆ.

[6]01056032a ತ್ರಿಭಿರ್ವರ್ಷೈಃ ಸದೋತ್ಥಾಯೀ ಕೃಷ್ಣದ್ವೈಪಾಯನೋ ಮುನಿಃ|

01056032c ಮಹಾಭಾರತಮಾಖ್ಯಾನಂ ಕೃತವಾನಿದಮುತ್ತಮಂ||

ಮೂರುವರ್ಷಗಳು ಪ್ರತಿದಿನವೂ ಎದ್ದು ಮುನಿ ಕೃಷ್ಣದ್ವೈಪಾಯನನು ಈ ಅನುತ್ತಮ ಮಹಾಭಾರತ ಆಖ್ಯಾನವನ್ನು ರಚಿಸಿದನು.

01056033a ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ|

01056033c ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್||

ಭರತರ್ಷಭ! ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಕುರಿತು ಇದರಲ್ಲಿ ಏನಿವೆಯೋ ಅವು ಎಲ್ಲೆಡೆಯಲ್ಲಿಯೂ ಇವೆ. ಆದರೆ ಇಲ್ಲಿ ಇಲ್ಲದಿದ್ದದ್ದು ಎಲ್ಲಿಯೂ ಇಲ್ಲ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಅಂಶಾವತರಣಪರ್ವಣಿ ಮಹಾಭಾರತಪ್ರಶಂಸಾಯಾಂ ಷಟ್‌ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಅಂಶಾವತರಣ ಪರ್ವದಲ್ಲಿ ಮಹಾಭಾರತ ಪ್ರಶಂಸೆ ಎನ್ನುವ ಐವತ್ತಾರನೆಯ ಅಧ್ಯಾಯವು.

[1] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾಧಿಕವಿದೆ: ಕ್ಷಣಂ ಕುರು ಮಹಾರಾಜ ವಿಪುಲೋಽಯಮನುಕ್ರಮಃ| ಪುಣ್ಯಾಖ್ಯಾನಸ್ಯ ವಕ್ತವ್ಯಃ ಕೃಷ್ಣದ್ವೈಪಾಯನೇರಿತಃ|| ಅರ್ಥಾತ್: ಇದಕ್ಕೆ ಸ್ವಲ್ಪ ಸಮಯವನ್ನು ಕೊಡು. ಕೃಷ್ಣದ್ವೈಪಾಯನನು ಈ ಪುಣ್ಯ ಆಖ್ಯಾನವನ್ನು ಬಹಳ ವಿಸ್ತಾರವಾಗಿ ಮತ್ತು ಅನುಕ್ರಮವಾಗಿ ಹೇಳಿದ್ದಾನೆ. ಇದನ್ನು ಹೇಳಲು ಸಮಯಬೇಕಾಗುತ್ತದೆ.

[2] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕಗಳಿವೆ: ಸರ್ವವಿದ್ಯಾವದಾತಾನಾಂ ಲೋಕೇ ಪ್ರಥಿತಕರ್ಮಣಾಂ| ಯ ಇದಂ ಮಾನವೋ ಲೋಕೇ ಪುಣ್ಯಾರ್ಥೇ ಬ್ರಾಹ್ಮಣಾನ್ ಶುಚೀನ್|| ಶ್ರಾವಯೇತ ಮಹಾಪುಣ್ಯಂ ತಸ್ಯ ಧರ್ಮಃ ಸನಾತನಃ| ಕುರೂಣಾಂ ಪ್ರಥಿತಂ ವಂಶಂ ಕೀರ್ತಯನ್ ಸತತಂ ಶುಚಿಃ|| ವಂಶಮಾಪ್ನೋತಿ ವಿಪುಲಂ ಲೋಕೇ ಪೂಜ್ಯತಮೋ ಭವೇತ್| ಯೋಽಧೀತೇ ಬಾರತಂ ಪುಣ್ಯಂ ಬ್ರಾಹ್ಮಣೋ ನಿಯತವ್ರತಃ|| ಚತುರೋ ವಾರ್ಷಿಕಾನ್ ಮಾಸಾನ್ ಸರ್ವಪಾಪೈಃ ಪ್ರಮುಚ್ಯತೇ| ವಿಜ್ಞೇಯಃ ಸ ಚ ವೇದಾನಾಂ ಪಾರಗೋ ಭಾರತಂ ಪಠನ್|| ದೇವಾ ರಾಜರ್ಷಯೋ ಹ್ಯತ್ರ ಪುಣ್ಯಾ ಬ್ರಹ್ಮರ್ಷಯಸ್ತಥಾ| ಕೀರ್ತ್ಯಂತೇ ಘೂತಪಾಪ್ಮಾನಃ ಕೀರ್ಯತೇ ಕೇಶವಸ್ತಥಾ|| ಭಗವಾಂಶ್ಚಾಪಿ ದೇವೇಶೋ ಯತ್ರ ದೇವೀ ಚ ಕೀರ್ತ್ಯತೇ| ಅನೇಕಜನನೋ ಯತ್ರ ಕಾರ್ತಿಕೇಯಸ್ಯ ಸಂಭವಃ|| ಬ್ರಾಹ್ಮಣಾನಾಂ ಗವಾಂ ಚೈವ ಮಾಹಾತ್ಮ್ಯಂ ಯತ್ರ ಕೀರ್ತ್ಯತೇ| ಸರ್ವಶೃತಿಸಮೂಹೋಽಯಂ ಶ್ರೋತವ್ಯೋ ಧರ್ಮಬುದ್ಧಿಭಿಃ||

[3] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಭಾರತಾನಾಂ ಯತಶ್ಚಾಯಮಿತಿಹಾಸೋ ಮಹಾದ್ಭುತಃ| ಮಹತೋ ಹ್ಯೇನಸೋ ಮರ್ತ್ಯಾನ್ ಮೋಚಯೇದನುಕೀರ್ತಿತಃ|| ತ್ರಿಭಿರ್ವರ್ಷೈರ್ಲಬ್ಧಕಾಮಃ ಕೃಷ್ಣದ್ವೈಪಾಯನೋ ಮುನಿಃ| ನಿತ್ಯೋತ್ಥಿತಃ ಶುಚಿಃ ಶಕ್ತೋ ಮಹಾಭಾರತಮಾದಿತಃ|| ತಪೋ ನಿಯಮಮಾಸ್ಥಾಯ ಕೃತಮೇತನ್ಮಹರ್ಷಿಣಾ| ತಸ್ಮಾನ್ನಿಯಮಸಂಯುಕ್ತೈಃ ಶ್ರೋತವ್ಯಂ ಬ್ರಾಹ್ಮಣೈರಿದಮ್|| ಕೃಷ್ಣಪ್ರೋಕ್ತಾಮಿಮಾಂ ಪುಣ್ಯಾಂ ಭಾರತೀಮುತ್ತಮಾಂ ಕಥಾಮ್| ಶ್ರಾವಯಿಷ್ಯಂತಿ ಯೇ ವಿಪ್ರಾ ಯೇ ಚ ಶ್ರೋಷ್ಯಂತಿ ಮಾನವಾಃ| ಸರ್ವಥಾ ವರ್ತಮಾನಾ ವೈ ನ ತೇ ಶೋಚ್ಯಾಃ ಕೃತಾಕೃತೈಃ|| ನರೇಣ ಧರ್ಮಕಾಮೇನ ಸರ್ವಂ ಶ್ರೋತವ್ಯ ಇತ್ಯಪಿ| ನಿಖಿಲೇನೇತಿಹಾಸೋಽಯಂ ತತಃ ಸಿದ್ಧಿಮವಾಪ್ನುಯಾತ್|| ನ ತಾಂ ಸ್ವರ್ಗಗತಿಂ ಪ್ರಾಪ್ಯ ತುಷ್ಟಿಂ ಪ್ರಾಪ್ನೋತಿ ಮಾನವಃ| ಯಾಂ ಶ್ರುತೈವ ಮಹಾಪುಣ್ಯಮಿತಿಹಾಸಮುಪಾಶ್ನುತೇ|| ಶ್ರುಣ್ವನ್ ಶ್ರಾದ್ಧಃ ಪುಣ್ಯಶೀಲಃ ಶ್ರಾವಯಂಶ್ಚೇದಮದ್ಭುತಮ್| ನರಃ ಫಲಮವಾಪ್ನೋತಿ ರಾಜಸೂಯಾಶ್ವಮೇಧಯೋಃ||

[4] ಇದಕ್ಕೆ ಮೊದಲು ದಕ್ಷಿಣಾತ್ಯ ಪಾಠದಲ್ಲಿ ಈ ಶ್ಲೋಕಗಳಿವೆ: ಯಸ್ತು ರಾಜಾ ಶೃಣೋತೀದಮಖಿಲಾಮಶ್ನುತೇ ಮಹೀಮ್| ಪ್ರಸೂತೀ ಗರ್ಭಿಣೀ ಪುತ್ರಂ ಕನ್ಯಾ ಚಾಶು ಪ್ರದೀಯತೇ|| ವಣಿಜಃ ಸಿದ್ಧಯಾತ್ರಾಃ ಸ್ಯುರ್ವೀರಾ ವಿಜಯಮಾಶ್ನುಯುಃ| ಆಸ್ತಿಕಾನ್ ಶ್ರಾವಯೇನ್ನಿತ್ಯಂ ಬ್ರಾಹ್ಮಣಾನನಸೂಯಕಾನ್|| ವೇದವಿದ್ಯಾವ್ರತಸ್ನಾತಾನ್ ಕ್ಷತ್ರಿಯಾನ್ ಜಯಮಾಶ್ರಿತಾನ್| ಸ್ವಧರ್ಮನಿತ್ಯಾನ್ ವೈಶ್ಯಾಂಶ್ಚ ಶ್ರಾವಯೇತ್ ಕ್ಷತ್ರಸಂಶ್ರಿತಾನ್|| ಏಷ ಧರ್ಮಃ ಪುರಾ ಧೃಷ್ಟಃ ಸರ್ವಧರ್ಮೇಷು ಭಾರತ| ಬ್ರಾಹ್ಮಣಾನ್ ಶ್ರವಣಂ ರಾಜನ್ ವಿಶೇಷೇಣ ವಿಧೀಯತೇ|| ಭೂಯೋ ವಾ ಯಃ ಪಠೇನ್ನಿತ್ಯಂ ಸ ಗಚ್ಛೇತ್ ಪರಮಾಂ ಗತಿಮ್| ಶ್ಲೋಕಂ ವಾಪ್ಯನು ಗೃಹ್ಣೀತ ತಥಾರ್ಧಶ್ಲೋಕಮೇವ ವಾ|| ಅಪಿ ಪಾದಂ ಪಠೇನ್ನಿತ್ಯಂ ನ ಚ ನಿರ್ಭಾರತೋ ಭವೇತ್| ಇಹ ನೈಕಾಶ್ರಯಂ ಜನ್ಮ ರಾಜರ್ಷೀಣಾಂ ಮಹಾತ್ಮನಾಮ್|| ಇಹ ಮಂತ್ರಪದಂ ಯುಕ್ತಂ ಧರ್ಮಂ ಚಾನೇಕದರ್ಶನಮ್| ಇಹ ಯುದ್ಧಾನಿ ಚಿತ್ರಾಣಿ ರಾಜ್ಞಾಂ ಬುದ್ಧಿರಿಹೈವ ಚ|| ಋಷೀಣಾಂ ಚ ಕಥಾಸ್ತಾತ ಇಹ ಗಂಧರ್ವರಕ್ಷಸಾಂ| ಇಹ ತತ್ತತ್ ಸಮಾಸಾದ್ಯ ವಿಹಿತೋ ವಾಕ್ಯವಿಸ್ತರಃ|| ತೀರ್ಥಾನಾಂ ನಾಮ ಪುಣ್ಯಾನಾಂ ದೇಶಾನಾಂ ಚೈವ ಕೀರ್ತಿತಮ್| ವನಾನಾಂ ಪರ್ವತಾನಾಂ ಚ ನದೀನಾಂ ಸಾಗರಸ್ಯ ಚ|| ದೇಶಾನಾಂ ಚೈವ ಪುಣ್ಯಾನಾಂ ಪುರಾಣಂ ಚೈವ ಕೀರ್ತನಮ್| ಉಪಚಾರಸ್ತಥೈವಾಗ್ರ್ಯೋ ಧೀರ್ಯಮಪ್ಯತಿಮಾನುಷಮ್|| ಇಹ ಸತ್ಕಾರಯೋಗಶ್ಚ ಭಾರತೇ ಪರಮರ್ಷಿಣಾ| ರಥಾಶ್ವವಾರಣೇಂದ್ರಾಣಾಂ ಕಲ್ಪನಾ ಯುದ್ಧಕೌಶಲಮ್|| ವಾಕ್ಯಜಾತಿರನೇಕಾ ಚ ಸರ್ವಮಸ್ಮಿನ್ ಸಮರ್ಪಿತಮ್|

[5] ಇದಕ್ಕೆ ಬದಲಾಗಿ ನೀಲಕಂಠೀಯದಲ್ಲಿ ಈ ಶ್ಲೋಕವಿದೆ: ಅಹ್ನಾ ಯದೇನಃ ಕ್ರಿಯತಂ ಇಂದ್ರಿಯೈರ್ಮನಸಾಪಿ ವಾ| ಜ್ಞಾನಾದಜ್ಞಾನತೋ ವಾಪಿ ಪ್ರಕರೋತಿ ನರಶ್ಚ ಯತ್||

[6] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಇದಂ ಹಿ ವೇದೈಃ ಸಮಿತಂ ಪವಿತ್ರಮಪಿ ಚೋತ್ತಮಮ್| ಶ್ರವ್ಯಂ ಶೃತಿಸುಖಂ ಚೈವ ಪಾವನಂ ಶೀಲವರ್ಧನಮ್|| ಯ ಇದಂ ಭಾರತಂ ರಾಜನ್ ವಾಚಕಾಯ ಪ್ರಯಚ್ಛತಿ| ತೇನ ಸರ್ವಾ ಮಹೀ ದತ್ತಾ ಭವೇತ್ ಸಾಗರಮೇಖಲಾ|| ಪಾರಿಕ್ಷಿತ ಕಥಾಂ ದಿವ್ಯಾಂ ಪುಣ್ಯಾಯ ವಿಜಯಾಯ ಚ| ಕಥ್ಯಮಾನಾಂ ಮಯಾ ಕೃತ್ಸಾಂ ಶೃಣು ಹರ್ಷಕರೀಮಿಮಾಮ್||

Comments are closed.